BreakingCORONA VIRUSKANNADAFLASHNEWSFIGHTAGAINSTCORONAMoreScrollTop NewsUncategorizedದೇಶ-ವಿದೇಶಮಾಹಿತಿ/ತಂತ್ರಜ್ಞಾನರಾಜಕೀಯ

ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ,ಸೋಂಕಿತರ ಸಾವುಗಳಿನ್ನೂ ನಿಂತಿಲ್ಲ,ಮಹಾರಾಷ್ಟ್ರದಲ್ಲಿ ಕೊರೊನಾ ಸಾವಿನ ಧಾರುಣತೆಗೆ ಕಣ್ಣೀರಿಟ್ಟ ಮಹಾರಾಷ್ಟ್ರ ವೈದ್ಯಕೀಯ ಮುಖ್ಯಸ್ಥರ ಮಾತು ಕೇಳ್ನೋಡಿ…

ಕೊರೊನಾ ನಿಜಕ್ಕೂ ಕಂಟ್ರೋಲ್ ನಲ್ಲಿದೆಯೇ…ಕೊರೊನಾಕ್ಕೆ ಬಲಿಯಾಗ್ತಿರುವವರ ಸಂಖ್ಯೆ ಕಡ್ಮೆ ಇದೆಯಾ..ಲಾಕ್ ಡೌನ್ ಸಡಿಲಿಕೆ ಆದಮೇಲೆ ಕೊರೊನಾ ಸಾಂಕ್ರಾಮಿಕತೆ ಕಡ್ಮೆಯಾಗಿದೆಯಾ…ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಬಿಂಬಿಸುವಂತೆ ಕೆಲವೇ ದಿನಗಳಲ್ಲಿ ಭಾರತ ಸಂಪೂರ್ಣ ಕೊರೊನಾಮುಕ್ತವಾಗಲಿದೆಯೇ..ಜನ ಕೊರೊನಾ ಜತೆ ಬದುಕುವುದನ್ನು ಕಲಿತಿದ್ದಿರಾ…

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಖಂಡಿತಾ ಕೊರೊನಾ ಕಡ್ಮೆಯಾಗಿಲ್ಲ..ಕೊರೊನಾದಿಂದ ಸಾಯುತ್ತಿರುವವರ ಸಂಖ್ಯೆಯೂ ಕುಗ್ಗಿಲ್ಲ..ಜನ ಕೊರೊನಾ ಜತೆ ಬದುಕುತ್ತಾ..ಬದುಕುತ್ತಾ ಅದರೊಂದಿಗೆ ಏಗಲಿಕ್ಕೆ ಆಗದೆ ಸಾವನ್ನಪ್ಪುತ್ತಿದ್ದಾರೆ ಎನ್ನೋದು ದೇಶದ ನಾನಾ ಕಡೆ ಕೊರೊನಾದ ಬಗ್ಗೆ ಕೇಳಿಬರುತ್ತಿರುವ ಅಘಾತಕಾರಿ ಮಾಹಿತಿಗಳೇ ಸಾಬೀತುಪಡಿಸುತ್ತಿವೆ.

ಮಹಾರಾಷ್ಟ್ರದಲ್ಲಿ ಇನ್ನೂ ಕೊರೊನಾ ಕಡ್ಮೆಯಾಗಿಲ್ಲ..ದಿನೇ ದಿನೇ ಸೋಂಕಿತರು ಹಾಗೂ ಸಾಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ.ಅಂತದ್ದೊಂದಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿಗಳ ವೈದ್ಯಕೀಯ ಕೋಶದ ಮುಖ್ಯಸ್ಥರು ಕಣ್ಣೀರಿಡುತ್ತಾ ಹೇಳಿರುವ ಸ್ಪೋಟಕ ಮಾಹಿತಿಯೇ ಸಾಕ್ಷಿಯಾಗಬಲ್ಲದು.ಓಂ ಪ್ರಕಾಶ್ ಶೇಟ್ ಅವರು ಮಾದ್ಯಮಗಳ ಜೊತೆ ಮಾತನಾಡುತ್ತಾ ಕೊರೊನಾ ಸೋಂಕಿನ ಬರ್ಭರತೆ ಹಾಗೂ ದಾರುಣತೆಗೆ ಕಣ್ಣೀರಾಗಿದ್ದಾರೆ.ಕೊರೊನಾ ನಿಜಕ್ಕೂ ಕಂಟ್ರೋಲ್ ನಲ್ಲಿದೆಯಾ..ಜನ ಸಾಯೋದು ಕಡ್ಮೆಯಾಗಿದೆಯೇ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಭಾವುಕರಾಗಿದ್ದಾರೆ ಶೇಟ್.ಕೊರೊನಾಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ.ಚಿಕಿತ್ಸೆ ಪಡೆಯಲಿಕ್ಕಾಗದೆ ಸಾಯುತ್ತಿದ್ದಾರೆ.ಜನಸಾಮಾನ್ಯರು ಸಾಯುತ್ತಿರುವುದನ್ನು ಕಂಡ್ರೆ ಕಣ್ಣೀರು ಬರುತ್ತೆ ಎಂದು ಕಂಬನಿ ಸುರಿಸಿದ್ದಾರೆ.

ಶೇಟ್ ಅವರ ಈ ಭಾವುಕ ನುಡಿಗಳು ಹಾಗೂ ಕಣ್ಣೀರಿನ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ಅಷ್ಟೇ ಅಲ್ಲ,ಕೊರೊನಾದ ವಿದ್ವಂಸಕತೆ ಕಡಿಮೆಯಾಗಿದಿರುವುದಕ್ಕೆ ಆತಂಕ ವ್ಯಕ್ತಪಡಿಸುವಂತಾಗಿದೆ. ಕೊರೊನಾ ನಿಯಂತ್ರಣ ಹಾಗೂ ನಿರ್ಮೂಲನೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ಯೋಜನೆಯಾಗಲಿ,ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಕೊರೊನಾ ಹೆಸರಲ್ಲಿ ನಡೆಯುತ್ತಿರುವ ಲೂಟಿ ಬಗ್ಗೆ ಜನ ಭಯಗ್ರಸ್ಥರಾಗುವಂತೆ ಮಾಡಿದೆ.ಎಲ್ಲಕ್ಕಿಂತ ಹೆಚ್ಚಾಗಿ ಲಾಕ್ ಡೌನ್ ಸಡಿಲಿಕೆ ಆಗುತ್ತಿದ್ದಂತೆ ಜನ ಸುರಕ್ಷತಾ ಕ್ರಮಗಳನ್ನೆಲ್ಲಾ ಗಾಳಿಗೆ ತೂರುತ್ತಿರುವುದನ್ನು ನಿಲ್ಲಿಸಬೇಕು ಎಂದು ಸೇಟ್ ಮನವಿ ,ಮಾಡಿಕೊಂಡಿದ್ದಾರೆ.ಮೊದಲು ಜನರ ಬಗ್ಗೆ ಅವರ ಜೀವಗಳ ಬಗ್ಗೆ ಸರ್ಕಾರಗಳು ತೋರುತ್ತಿದ್ದ ಲಕ್ಷ್ಯ ಹಾಗೂ ಕಾಳಜಿಯನ್ನು ಭ್ರಷ್ಟಾಚಾರಕ್ಕಾಗಿ ನಿರ್ಲಕ್ಷ್ಯಿಸಿರುವುದಕ್ಕೆ ಸೇಟ್ ವ್ಯಕ್ತಪಡಿಸಿದ್ದಾರೆ.ಒಟ್ಟಿನಲ್ಲಿ  ಸೇಟ್ ಅವರ ದುಃಖದ ನುಡಿಗಳು ಹಾಗೂ ಕಣ್ಣೀರು ಕೇವಲ ಮಹಾರಾಷ್ಟ್ರದ ಕೊರೊನಾ ವಿದ್ವಂಸಕತೆಗೆ ದ್ಯೋತಕವಾಗಿಲ್ಲ..ಇಡೀ ದೇಶದಲ್ಲಿ ಅದರ ತಾಂಡವತೆಯನ್ನು ಬಿಂಬಿಸುವಂತಿದೆ ಎನ್ನೋದು ಮಾತ್ರ ಸತ್ಯ.

ಸರ್ಕಾರಗಳು ಕೊರೊನಾ ಇಶ್ಯೂವನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ.ಹಾಗಾಗಿ ತನಗೆ ನಂಬಿಕೆ ಇರೋದು ನ್ಯಾಯಾಂಗದ ಮೇಲೆ.ಹಾಗಾಗಿ ಕೋರ್ಟ್ ಮೊರೆ ಹೋಗಿದ್ದೇನೆ..ಕೊರೊನಾದಿಂದ ಜಗತ್ತನ್ನು ಹಾಗೂ ಜನರನ್ನು ರಕ್ಷಿಸಬಹುದು ಎನ್ನುವುದಿದ್ದರೆ ಅದು ಕೇವಲ ಕೋರ್ಟ್ ನಿಂದ ಮಾತ್ರ ಎಂದು ಸೇಟ್ ಅವರು ತಮ್ಮ ಜನಪರ ಕಾಳಜಿಯನ್ನು ಮೆರೆದಿದ್ದಾರೆ.ಅವರ ಕಾರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ಹಾಗೂ ಸರ್ಕಾರಗಳ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.

ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ,ಸೋಂಕಿತರ ಸಾವುಗಳಿನ್ನೂ ನಿಂತಿಲ್ಲ,ಮಹಾರಾಷ್ಟ್ರದಲ್ಲಿ ಕೊರೊನಾ ಸಾವಿನ ಧಾರುಣತೆಗೆ ಕಣ್ಣೀರಿಟ್ಟ ಮಹಾರಾಷ್ಟ್ರ ವೈದ್ಯಕೀಯ ಮುಖ್ಯಸ್ಥರ ಮಾತು ಕೇಳ್ನೋಡಿ…

 

 

Spread the love

Related Articles

Leave a Reply

Your email address will not be published.

Back to top button
Flash News