BreakingCORONA VIRUSKANNADAFLASHNEWSFIGHTAGAINSTCORONAMoreScrollTop NewsUncategorizedಫೋಟೋ ಗ್ಯಾಲರಿಸಿನೆಮಾ ಹಂಗಾಮ

ಗಾನ ಗಾರುಡಿಗನ ಒಂದೂವರೆ ತಿಂಗಳ ಜೀವನ್ಮರಣ ಹೋರಾಟ ಹೇಗಿತ್ತು ಗೊತ್ತಾ…

ಸ್ವರ ಸಾಮ್ರಾಜ್ಞ,ಗಾನಕೋಗಿಲೆ,,ಎಸ್ ಪಿ ಬಾಲಸುಬ್ರಹ್ಮಣ್ಯಂ ನಮ್ಮನ್ನಗಲಿ ಹೋಗಿದ್ದಾರೆ.ಬರೋಬ್ಬರಿ ಒಂದೂವರೆ ತಿಂಗಳ ಸುಧೀರ್ಘ ಜೀವನ್ಮರಣಗಳ ಹೋರಾಟದಲ್ಲಿ ಸಾವಿನ ಮುಂದೆ ಮಂಡಿಯೂರಿದ್ದಾರೆ.ಆಸ್ಪತ್ರೆಯಲ್ಲಿ ಕೊರೊನಾ ಕಾರಣಕ್ಕೆ ದಾಖಲಾದ ದಿನದಿಂದ್ಲೂ ಸಾವಿನ ಮನೆಯ ಅತಿಥಿಯಾಗುವವರೆಗಿನ ಅವರ ಪಯಣ ಯಾವ್ ರೀತಿ ಇತ್ತು ಎನ್ನುವುದಕ್ಕೆ ಇಲ್ಲಿದೆ ಅದರ ಕಂಪ್ಲೀಟ್ ಡೀಟೈಲ್..

ಆಸ್ಪತ್ರೆಯಿಂದ ಸಾವಿನವರೆಗೂ ಟೈಮ್ ಲೈನ್:
ಆಗಸ್ಟ್4: ತೀವ್ರ ಜ್ವರದಿಂದ ಬಳಲಾರಂಭಿಸಿದ 74ರ ಹರೆಯದ ಗಾಯಕ ಎಸ್,ಪಿ ಬಾಲಸುಬ್ರಹ್ಮಣ್ಯಂ
ಆಗಸ್ಟ್5:ವೈದ್ಯರನ್ನು ಕರೆಯಿಸಿ ತೋರಿಸಿ ಒಂದಷ್ಟು ಔಷದೋಪಚಾರ ಮಾಡಿಸಿದ್ರೂ ಕಂಟ್ರೋಲ್ ಗೆ ಬಾರದ ಜ್ವರ-ತಕ್ಷಣಕ್ಕೆ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲು.
ಆಗಸ್ಟ್.5:ಗಾಯಕ ಎಸ್ ಪಿ ಬಿ ಗೆ ಕೊರೊನಾ ದೃಢ
ಆಗಸ್ಟ್ 13:ನುರಿತ ವೈದ್ಯರು ನೀಡುತ್ತಿದ್ದ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಆರೋಗ್ಯದಲ್ಲಿ ಏರುಪೇರು
ಆಗಸ್ಟ್ 15: ವೀಡಿಯೋ ಮಾಡಿ ತಾನು ಆರೋಗ್ಯದಿಂದಿದ್ದೇನೆ ಎಂದು ಅಭಿಮಾನಿಗಳಿಗೆ ರವಾನೆ
ಆಗಸ್ಟ್ 14:ಚಿಂತಾಜನಕಗೊಂಡಿದ್ರಿಂದ ಐಸಿಯುಗೆ ದಾಖಲು-
ಆಗಸ್ಟ್ 21:ವಾರವಾದ್ರೂ ಸುಧಾರಣೆ ಕಾಣದ ಎಸ್ ಪಿಬಿ ಆರೋಗ್ಯ.
ಆಗಸ್ಟ್ 22:ಶ್ವಾಸಕೋಶ-ದೇಹದ ಅಂಗಾಂಗಳು ತೀವ್ರ ದುರ್ಬಲವಾಗಿವೆ ಎಂದ ವೈದ್ಯರು.ದೇಹಕ್ಕೆ ಅಗತ್ಯವಿರುವ ಬಿಳಿ ರಕ್ತಕಣಗಳ ಪೂರೈಕೆ.ಆದ್ರೂ ಸುಧಾರಣೆ ಕಾಣದ ಆರೋಗ್ಯ.
ಆಗಸ್ಟ್ 25:ಮಗ ಚರಣ್ ಅಪ್ಪನ ಆರೋಗ್ಯ ದೃಡವಾಗಿದೆ ಎಂದು ಹೇಳಿಕೆ
ಆಗಸ್ಟ್ 25-ಸೆಪ್ಟೆಂಬರ್ 20 ರವರೆಗೆ ಸ್ಥಿರವಾಗಿದ್ದ ಆರೋಗ್ಯ,ವೆಂಟಿಲೇಟರ್ ನಲ್ಲೇ ಚಿಕಿತ್ಸೆ
ಸೆಪ್ಟೆಂಬರ್ 21 ಆರೋಗ್ಯದಲ್ಲಿ ಏರುಪೇರು
ಸೆಪ್ಟೆಂಬರ್ 24 ಆರೋಗ್ಯ ತೀವ್ರ ಕ್ಷೀಣ,ಕೈಚೆಲ್ಲಿದ ವೈದ್ಯರು
ಸೆಪ್ಟೆಂಬರ್ 25- ತಿಂಗಳುಗಳ ಕಾಲ ಕಾಲನೊಂದಿಗೆ ಸೆಣೆಸಾಡಿದ ಕೋಗಿಲೆ ಗಾನೈಕ್ಯ

 

 

 

Spread the love

Related Articles

Leave a Reply

Your email address will not be published.

Back to top button
Flash News