BreakingCORONA VIRUSKANNADAFLASHNEWSFIGHTAGAINSTCORONAMoreTop NewsUncategorizedವಿಚಿತ್ರ-ವಿಶೇಷಸಿನೆಮಾ ಹಂಗಾಮ

ಬಾಲು ಸರ್ ಎಂದ್ರೇನೆ “ನಾ ಭೂತೋ ನಾ ಭವಿಷ್ಯತಿ”-ಅವರಿಗೆ ಅವರೇ ಸಾಟಿ..

ದಕ್ಷಿಣ ಭಾರತದಲ್ಲಷ್ಟೇ ಅಲ್ಲ ಇಡೀ ಭಾರತದಲ್ಲಿ ಎಸ್ ಪಿ ಬಾಲಸುಬ್ರಮಣ್ಯಂ ಅವರ ಸ್ಥಾನವನ್ನು ಯಾವೊಬ್ಬ ಗಾಯಕನೂ ತುಂಬಲಿಕ್ಕೆ ಸಾಧ್ಯವಿಲ್ಲ ಎಂದ್ರೂ ತಪ್ಪಾಗಲಿ ಕ್ಕಿಲ್ಲ.ಅಂಥ ವೈಶಿಷ್ಟ್ಯಪೂರ್ಣ ಸವ್ಯಸಾಚಿ ಗಾಯಕ ಬಾಲು ಸರ್.ವ್ಯಕ್ತಿ ಮಾತನಾಡಬಾರದು ಅವನ ಸಾಧನೆಗಳು ಮಾತ್ನಾಡಬೇಕು ಎನ್ನುವ ಗಾಧೆಯಿದೆ.ಬಾಲು ಸರ್ ಅವರ ವಿಷಯದಲ್ಲಿ ಈ ಮಾತು ಸರಿಯಾಗೇ ಅನ್ವಯಿಸುತ್ತದೆ. ಅವರು ಹಾಡಿದ ಭಾಷೆಗಳು,ಹಾಡುಗಳು ಒಂದಾ ಎರಡಾ..ಭಾರತದ 16 ಭಾಷೆಗಳು..40 ಸಾವಿರ ಹಾಡುಗಳು.ಬಾಲು ಸಾಮರ್ಥ್ಯವನ್ನು ಸಾರಿ ಹೇಳುತ್ತವೆ.ಈ ಸಾಧನೆ ಅವರನ್ನು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗುವಂತೆ ಮಾಡಿದೆ.ಈ ದಾಖಲೆಯನ್ನು ಹಿಂದೆಯೂ ಯಾರೊಬ್ಬರೂ ಮುರಿದಿಲ್ಲ..ಮುಂದೆಯೂ ಮುರಿಯುವ ಸಾಧ್ಯತೆಗಳೇ ಇಲ್ಲ ಬಿಡಿ..

ಕನ್ನಡದ ನಂಟು:ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಕರ್ನಾಟಕದ ನಂಟು ಬಹುದೊಡ್ಡದು.ಕನ್ನಡವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಬಾಲು ಸ್ವಚ್ಛವಾಗಿ ಕನ್ನಡದಲ್ಲಿ ಮಾತನಾಡುತ್ತಿದ್ದುದ್ದಕ್ಕೆ ವಿದ್ವಾಂಸರೇ ತಲೆಬಾಗಿದ್ದುಂಟು.ಸ್ಪುಟವಾದ ಕನ್ನಡ ಎಂಥಾ ಕನ್ನಡಿಗರನ್ನೂ ನಾಚಿಸುತ್ತಿತ್ತು. ಆಂಧ್ರದಲ್ಲಿ ಹುಟ್ಟಿ ಬೆಳೆದರೂ, ನಾನು ಹಿನ್ನೆಲೆ ಗಾಯಕನಾಗಿ ಹಾಡಿದ ಎರಡನೇ ಹಾಡೇ ಕನ್ನಡದಲ್ಲಿ. ಅಲ್ಲಿಂದ ಪ್ರಾರಂಭವಾದ ಈ ಪಯಣ ಇಲ್ಲಿವರೆಗೂ ಬಂದಿದೆ. ಕನ್ನಡಿಗರು ನೀಡಿದ ಪ್ರೀತಿ, ವಾತ್ಸಲ್ಯ ನನಗೆ ಬೇರೆ ಯಾರಿಂದಲೂ ಸಿಕ್ಕಿಲ್ಲ. ಮುಂದಿನ ಜನ್ಮದಲ್ಲಿ ನಾನು ಕನ್ನಡ ನಾಡಿನಲ್ಲಿ ಹುಟ್ಟಲು ಇಷ್ಟಪಡುತ್ತೇನೆ’ ಎಂದು ಅವರು ಈ ಹಿಂದೆಯೇ ಹೇಳಿದ್ದರು.

ಎಸ್ಪಿಬಿ ಕೈ ಆಡಿಸದ ಕ್ಷೇತ್ರಗಳಿಲ್ಲ..ಎಲ್ಲಕ್ಕೂ ಜೈ ಎಂದುಕೊಂಡು ಎಲ್ಲರಿಂದ್ಲೂ ಸೈ ಎನಿಸಿಕೊಂಡವರು:ಎಸ್.ಪಿ.ಬಾಲ ಸುಬ್ರಹ್ಮಣ್ಯಂ( ಶ್ರೀಪತಿ ಪಂಡಿತಾರಾಧ್ಯ ಬಾಲಸುಬ್ರಮಣ್ಯಂ) ಹುಟ್ಟಿದ್ದು 1946ರ ಜೂನ್ 4.ನಟ-ನಿರ್ಮಾಪಕ-ನಿರ್ದೇಶಕ-ಡಬ್ಬಿಂಗ್ ಕಲಾವಿದ..ಹಾಡುಗಾರ..ಸಂಗೀತ ನಿರ್ದೇಶಕ-ಸಾಹಿತಿ..ಹೀಗೆ ಎಲ್ಲಾ ಪ್ರಾಕಾರಗಳಲ್ಲೂ ಸೈ ಎನಿಸಿಕೊಂಡಿದ್ರು.

ಆಂದ್ರಪ್ರದೇಶದ ನೆಲ್ಲೂರು ಎಸ್ ಪಿಬಿ ಅವರ ಹುಟ್ಟೂರು.ತಂದೆ ಪಿ.ಸಾಂಬಮೂರ್ತಿ ವೃತ್ತಿಯಲ್ಲಿ ಹರಿಕಥಾ ವಿದ್ವಾಂಸರು.ತಾಯಿ ಶಾಕುಂತಲಮ್ಮ.ಖ್ಯಾತ ಗಾಯಕಿ ಎಸ್.ಪಿ ಶೈಲಜಾ ಸೇರಿದಂತೆ ಇಬ್ಬರು ಸಹೋದರರು ಹಾಗೂ ಐವರು ಸಹೋದರಿಯರ ತುಂಬು ಕುಟುಂಬ ಅವರದು.ಮನೆಯ ವಾತಾವರಣವೇ ಸಂಗೀತದಿಂದ ಕೂಡಿದ್ರಿಂದ ಬಾಲು ಅವರು ಸಂಗೀತದತ್ತ ಒಲವು ತೋರಿದ್ರು.ಅನಂತಪುರದ ಜೆಎಸ್ ಟಿಯು ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿಗೆ ಸೇರಿದರಾದ್ರೂ ಅನಾರೋಗ್ಯದ ಕಾರಣಕ್ಕೆ ಶಿಕ್ಷಣವನ್ನು ಮೊಟಕುಗೊಳಿಸ್ತಾರೆ.ನಂತರ ಜೀವನೋಪಾಯಕ್ಕೆ ಚೆನ್ನೈಗೆ ಬಂದು ಅಲ್ಲಿ ಇಂಡಿಯನ್ ಇನ್ಸಿಟ್ಯೂಷನ್ ಆಫ್ ಎಂಜಿನಿಯರಿಂಗ್ ಸಂಘಕ್ಕೆ ಸಹಾಯಕ ಸದಸ್ಯನಾಗಿ ಸೇರಿಕೊಳ್ತಾರೆ.

ಚೆನ್ನೈಗೆ ಬಂದ ಮೇಲೆಯೇ ಎಸ್ ಪಿಬಿ ಒಳಗೆ ಇದ್ದ ಸಂಗೀತಾಸಕ್ತಿ ಜಾಗೃತವಾಗುತ್ತೆ.ಸ್ಥಳೀಯ ಕಾರ್ಯಕ್ರಮ ಗಳಲ್ಲಿ ಹಾಡುತ್ತಲೇ ಎಲ್ಲರ ಮನಸೂರೆಗೊಂಡು ಪ್ರಶಸ್ತಿಗಳನ್ನು ಗೆಲ್ಲುತ್ತಾ ಹೋಗ್ತಾರೆ. ಇಳಯರಾಜ,ಗಂಗೈ ಅಮರನ್,ಭಾಸ್ಕರ್ ಅವರನ್ನೊಲಗೊಂಡ ಮೂಸಿಕ್ ಗ್ರೂಪ್ ಮೂಲಕ ಹೆಸರಾಗಿದ್ದ ಬಾಲು ಸರ್, ಸಂಗೀತ ನಿರ್ದೇಶಕ ಎಸ್,ಪಿ ಕೋದಂಡಪಾಣಿ ಹಾಗೂ ಘಂಟಸಾಲರು ಮುಖ್ಯ ಅತಿಥಿಗಳಾಗಿ ಬಂದಿದ್ ಕಾರ್ಯಕ್ರಮವೊಂದರಲ್ಲಿ ಅದ್ಭುತವಾಗಿ ಹಾಡಿ ಅವರಿಂದ ಭೇಷ್ ಎನಿಸಿಕೊಂಡ್ರು.ನಿಲಾವೆ ಎನ್ನಿದಮ್ ನೆರುಂಗಾದೆ ಅಭಿಜಾತ ಗಾಯಕ ಪಿ.ಬಿ ಶ್ರೀನಿವಾಸ್ ಗಾಯನದ ನಿಲಾವೆ ಎನ್ನಿದಮ್ ನೆರುಂಗಾದೆ ಹಾಡೇ ಎಸ್ ಪಿ ಬಾಲು ಅವರ ಸಂಗೀತ ಜೀವನಕ್ಕೆ ಟರ್ನಿಂಗ್ ಪಾಯಿಂಟ್ ಆಗೋಯ್ತು.ಆ ಹಾಡಿನ ಮೂಲಕ ಗುರುತಿಸಲ್ಪಟ್ಟ ಬಾಲು ಸರ್ ನಂತರ ತಿರುಗಿ ನೋಡಲೇ ಇಲ್ಲ.

1966-15ನೇ ಡಿಸೆಂಬರ್:ಈ ದಿನವನ್ನು ಎಸ್ ಪಿ ಬಾಲಸುಬ್ರಮಣ್ಯಂ ಮರೆಯುವಂಗೇ ಇಲ್ಲ..ಹಾಗೆಯೇ ಚಿತ್ರರಸಿಕರು ಕೂಡ.ಏಕೆಂದ್ರೆ ಈ ದಿನವೇ ಎಸ್ ಪಿ ಸರ್ ತನ್ನ ವೃತ್ತಿಜೀವನದ ಮೊಟ್ಟ ಮೊದಲ ಹಾಡನ್ನು ಹಾಡಿದ್ರು.ಶ್ರೀ ಶ್ರೀ ಮರ್ಯಾದಾ ರಾಮಣ್ಣ ಎನ್ನುವ ಚಿತ್ರಕ್ಕೆ ಹಾಡಿದ ಹಾಡಿದು.ಹಾಡನ್ನು ಹಾಡಿಸಿದವರು ಅವರ ಚಿತ್ರೋಧ್ಯಮದ ಗುರು ಎಸ್.ಪಿ ಕೋದಂಡಪಾಣಿ. ತೆಲುಗು ಹಾಡನ್ನು ಹಾಡಿದ ಎಂಟೇ ದಿನಗಳ ನಂತರ ಎಸ್ ಪಿ ಸರ್ ಅವರನ್ನು ಕನ್ನಡದಲ್ಲಿ ಹಾಡಿಸಲಾಯ್ತು.ಹಾಸ್ಯ ಕಲಾವಿದ ನರಸಿಂಹರಾಜು ಅಭಿನಯದ ನಕ್ಕರೆ ಅದೇ ಸ್ವರ್ಗ ಎನ್ನುವ ಚಿತ್ರದಲ್ಲಿ ಬಾಲು ಸರ್ ಹಾಡಿದ್ರು.ಅಂದ್ಹಾಗೆ ಅವರು ಹಾಡಿದ ಕನ್ನಡದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಗೆ ನಕ್ಕರೆ ಅದೇ ಸ್ವರ್ಗ ಚಿತ್ರ ಪಾತ್ರವಾಯ್ತು.

ಹಾಗೆಯೇ ಅವರಿಗೆ ಕನ್ನಡ-ತೆಲುಗಿನಷ್ಟೇ ಹೆಚ್ಚು ಅವಕಾಶಗಳನ್ನು ಕೊಟ್ಟ ತಮಿಳು ಚಿತ್ರರಂಗದಲ್ಲಿ ಹಾಡಿದ ಮೊದಲ ಚಿತ್ರ “ಹೊಟೇಲ್ ರಂಭಾ”.ಎಲ್.ಆರ್ ಈಶ್ವರಿ ಜೊತೆಯ ಡ್ಯುಯೆಟ್ ಹಾಡದು.ಸಗೀತ ನಿರ್ದೇಶಕರು ಎಂ.ಎಸ್ .ವಿಶ್ವನಾಥನ್.”ಅತ್ತ ನೋಡು ಇಪ್ಪುದಿ ಇರುಂದು ಎತ್ತನೈ ನಾಲಾಚು”ಆದ್ರೆ ಆ ಚಿತ್ರ ಬಿಡುಗಡೆ ಆಗಲೇ ಇಲ್ಲ.ಜೆಮಿನಿ ಗಣೇಶನ್ ಅಭಿನಯದ ಶಾಂತಿನಿಲಯಂ ಹಾಗೂ ಎಂಜಿಆರ್ ನಟನೆಯದ ಅಡಿಮೈಪ್ಪೆಂ ಚಿತ್ರದಲ್ಲಿ ಪಿ.ಸುಶೀಲಾ ಜತೆ ಹಾಡಿದ್ರು.

ಅವರ ವೃತ್ತಿಜೀವನದಲ್ಲಿ ಅತ್ಯಂತ ಯಶಸ್ವಿ ಗಾಯಕ ಜೋಡಿ ಎಂದು ಕರೆಯಿಸಿಕೊಳ್ಳೊಕ್ಕೆ ಕಾರಣವಾಗಿದ್ದು ಗಾಯಕಿ ಎಸ್.ಜಾನಕಿ ಅವರ ಸಾಥ್.ಅಂದ್ಹಾಗೆ ಎಸ್.ಜಾನಕಿ ಜೊತೆ ಹಾಡಿದ ಮೊದಲ ಹಾಡು “ಕನ್ನಿಪೆನ್” ಚಿತ್ರದಲ್ಲಿನ ಪೌರ್ಣಮಿ ನಿಲವೈ ಪನಿ ವಿಜು ಇರವಿಲ್ ಎನ್ನುವ ಹಾಡು..ಆ ನಂತರದಲ್ಲಿ ಜಾನಕಿ ಜೊತೆಗೇನೆ ಎಸ್ ಸಿ ಬಿ ಸಾವಿರಾರು ಹಾಡು ಹಾಡಿದ್ರು..ಅದರಲ್ಲಿ ಅವಿಸ್ಮರಣೀಯ ಎನ್ನುವಂಥ ಹಾಡುಗಳು ಇವತ್ತಿಗೂ ಚಿತ್ರರಸಿಕರ ಕಿವಿಯಲ್ಲಿ ಗುನುಗುತ್ತಲೇ ಇವೆ.

ತೆಲುಗು,ಕನ್ನಡ,ತಮಿಳಿನಲ್ಲಿ ಒಂದೆರೆಡು ಹಾಡನ್ನು ಹಾಡುತ್ತಿದ್ದಂತೆ ಎಸ್ ಪಿಬಿ ಅವರ ಕಂಠಸಿರಿಯ ವಿಷಯ ಮಲಯಾಳಂ ಚಿತ್ರರಂಗಕ್ಕೂ ವ್ಯಾಪಿಸಿತ್ತು. ಗೊತ್ತಾಗಿತ್ತು. ಕಾದಲ್ ಪಾಲಂ ಚಿತ್ರದಲ್ಲಿ ಎಸ್ ಪಿ ಅವರನ್ನು ಪರಿಚಯಿಸಿ ಹಾಡಿಸಿದ್ದು ಸಂಗೀತ ನಿರ್ದೇಶಕ ಜಿ.ದೇವರಾಜನ್. ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದ ಎಸ್ ಪಿಬಿ ಅವರಿಗೆ ಸಾವಿತ್ರಿ ಎನ್ನುವ ಮುದ್ದಾದ ಮಡದಿ ಇದ್ದಾರೆ.ಎಸ್ ಪಿಬಿ ಅವರ ವೃತ್ತಿಜೀವನದ ಏರುಪೇರುಗಳಿಗೆ ಸಾಕ್ಷಿಪ್ರಜ್ಞೆಯಾದ ಜೀವ ಅದು.ಈ ದಂಪತಿಗೆ ಪಲ್ಲವಿ ಹಾಗೂ ಚರಣ್ ಎನ್ನುವ ಮಕ್ಕಳಿದ್ದಾರೆ.ಒಬ್ಬ ಅತ್ಯುತ್ತಮ ಗಾಯಕನನ್ನಾಗಿ ಮಾಬೇಕೆನ್ನುವ ಕನಸು ಮಗನ ವಿಷಯದಲ್ಲಿ ಹುಸಿಯಾದ ಬಗ್ಗೆ ಎಸ್ ಪಿಬಿ ಅವರಿಗೆ ಜೀವಮಾನದ ಕೊರಗಿತ್ತು.ಅದನ್ನು ಅನೇಕರ ಬಳಿ ಹೇಳಿಕೊಂಡಿದ್ದೂ ಉಂಟು.ಬಾರದ ಲೋಕಕ್ಕೆ ತೆರಳುವ ಮೂಲಕ ಕುಟುಂಬ-ಬಂಧುಬಳಗ-ಚಿತ್ರರಂಗದ ಆತ್ಮೀಯರು ಹಾಗೂ ಕೋಟ್ಯಾಂತರ ಅಭಿಮಾನಿಗಳನ್ನು ಅನಾಥಗೊಳಿಸಿ ಹೋಗಿದ್ದಾರೆ ಎಸ್ ಪಿ ಬಾಲಸುಬ್ರಹ್ಮಣ್ಯಂ.

40 ಸಾವಿರ ಹಾಡುಗಳನ್ನು 16 ಭಾಷೆಗಳಲ್ಲಿ ಹಾಡಿದ ಹೆಗ್ಗಳಿಕೆ ಅವರದು.ಇವತ್ತಿಗೂ ಅವರ ಹೆಸರು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ.6 ರಾಷ್ಟ್ರೀಯ ಪುರಸ್ಕಾರ,25 ವಿವಿಧ ರಾಜ್ಯಪ್ರಶಸ್ತಿಗಳು,ನಂದಿ ಪ್ರಶಸ್ತಿ,ಬಾಲಿವುಡ್ ಫಿಲ್ಮ್ ಫೇರ್ ಅವಾರ್ಡ್,ದಕ್ಷಿಣ ಭಾರತ ಚಿತ್ರರಂಗದ 6 ಫಿಲ್ಮ್ ಫೇರ್ ಪ್ರಶಸ್ತಿಗಳು,ಎನ್ ಟಿ ಆರ್ ರಾಷ್ಟ್ರೀಯ ಪುರಸ್ಕಾರ,ಇಂಡಿಯನ್ ಫಿಲ್ಮ್ ಪರ್ಸನಾಲಿಟಿ ಆಫ್ ದಿ ಇಯರ್ ಪ್ರಶಸ್ತಿ ಲಭಿಸಿವೆ.ಇದೆಲ್ಲಕ್ಕಿಂತೆ ಹೆಚ್ಚಾಗಿ ಚಲನಚಿತ್ರ ರಂಗಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಬಾಲು ಸರ್ ಅವರಿಗೆ ಅತ್ಯುನ್ನತ ನಾಗರಿಕ ಸಮ್ಮಾನಗಳಾದ ಪದ್ಮಶ್ರೀ(2001) ಹಾಗೂ ಪದ್ಮಭೂಷಣ(2011) ಪ್ರಶಸ್ತಿಗಳಿಂದ ಸನ್ಮಾನಿಸಿದೆ.

Spread the love

Related Articles

Leave a Reply

Your email address will not be published.

Back to top button
Flash News