ಎಸ್ ಪಿ ಬಾಲು ಸರ್ ಅವರ ಈ ದಾಖಲೆಯನ್ನು ಇವತ್ತಿಗೂ ಮುರಿದಿಲ್ಲ…ಮುರಿಯೋ ಸಾಹಸಕ್ಕೂ ಕೈ ಹಾಕ್ಲಿಕ್ಕಿಲ್ಲವೇನೋ..

0

ಈ ದಾಖಲೆ ಇವತ್ತಿಗೂ ಯಾವೊಬ್ಬ ಗಾಯಕ ಕೂಡ ಮುರಿದಿರೊಕ್ಕೆ ಸಾಧ್ಯವಿಲ್ಲ..ಮುಂದೆಯೂ ಆಗೊಲ್ಲ.ಏಕೆಂದ್ರೆ ಆ ಕೆಪಾಸಿಟಿ ಇದ್ದುದ್ದು ಎಸ್ ಪಿ ಬಿ ಸರ್ ಅವರಿಗೆ ಮಾತ್ರ..ಹಾಗಾಗಿಯೇ ಅವರನ್ನು ಸಾರ್ವಕಾಲಿಕ ಅಭಿಜಾತ ಗಾಯಕ ಎನ್ನೋದು..ಅಂದ್ಹಾಗೆ ಆ ದಾಖಲೆಯೇ ಒಂದೇ ದಿನದಲ್ಲಿ ಹೆಚ್ಚು ಹಾಡುಗಳನ್ನು ನಿರ್ಭಿಡೆಯಿಲ್ಲದೆ ಹಾಡಿದ ಏಕಮೇವಾದ್ವಿತೀಯ ಗಾಯಕ ಎನ್ನೋದು.

ಹೌದು..ಒಬ್ಬ ಗಾಯಕ ಒಂದ್ ದಿನದಲ್ಲಿ ಎಷ್ಟು ಹಾಡುಗಳನ್ನು ಹಾಡಬಲ್ಲ..10,15..ಹೋಗ್ಲಿ 20..ಆದ್ರೆ ನಮ್ ಎಸ್ ಪಿ ಸರ್ ಒಂದ್ ಹೆಜ್ಜೆ ಮುಂದ್ಹೋಗಿ ಎಷ್ಟು ಹಾಡುಗಳನ್ನು ಹಾಡಿದ್ದಾರೆ ಗೊತ್ತಾ..ಬರೋಬ್ಬರಿ 21.ಇದು ಇವತ್ತಿಗೂ ಅವರದೇ ಹೆಸರಿನಲ್ಲಿ ಉಳಿದಿರುವ ದಾಖಲೆ.ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಯಾವೊಬ್ಬ ಗಾಯಕ ಕೂಡ ಇಂತದ್ದೊಂದು ಸಾಧನೆ ಮಾಡಿಲ್ಲ..ಸಾಹಸಕ್ಕೂ ಕೈ ಹಾಕಲಿಲ್ಲ..ಹೊಸತನಗಳಿಗೆ ಸದಾ ತುಡಿಯುವ ಮನಸ್ಥಿತಿ ಇದ್ದುದ್ದರಿಂದ್ಲೇ ಎಸ್ ಪಿ ಬಾಲಸುಬ್ರಮಣ್ಯಂ ಅವರು ಸಾಧನೆಗಳ ಮೇಲೆ ಸಾಧನೆ..ವಿಕ್ರಮಗಳ ಮೇಲೆ ವಿಕ್ರಮ ಸಾಧಿಸಿದ್ರು.ಅದಕ್ಕೆ ತಕ್ಕನಾದ ಫಲ ಕೂಡ ಅವರಿಗೆ ಸಿಗ್ತು.ಚಿತ್ರರಸಿಕರಿಗೂ ಅವರ ಕಂಠಸಿರಿಯಲ್ಲಿ ಒಂದಷ್ಟು ಉತ್ತಮ ಹಾಡುಗಳನ್ನು ಕೇಳುವ ಅವಕಾಶ ಕೂಡ ಸಿಗ್ತು.

ಅಂದ್ಹಾಗೆ ಎಸ್ ಪಿ ಬಾಲಸುಬ್ರಮಣ್ಯಂ ಈ ಸಾಧನೆಯನ್ನು ಕನ್ನಡ ಚಿತ್ರರಂಗದಲ್ಲಿಯೇ ಮಾಡಿದ್ರೆನ್ನುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ.ಅದು 1981 ಫೆಬ್ರವರಿ 8 ರಂದು.ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್ ಅವರ ಸಂಗೀತ ನಿರ್ದೇಶನದ ಚಿತ್ರಗಳಿಗೆ ಬೆಳಗ್ಗೆ 9 ರಿಂದ ಆರಂಭವಾಗಿ ರಾತ್ರಿ 9 ರವರೆಗಿನ ಅವಧಿಯಲ್ಲಿ 21 ಹಾಡುಗಳನ್ನು ಹಾಡಿ ಮುಗಿಸಿದ್ರು ಎನ್ನೋದು ಕಡ್ಮೆ ಸಾಧನೆನಾ..
ಕೇವಲ ಕನ್ನಡ ಮಾತ್ರವಲ್ಲ ತಮಿಳಿನಲ್ಲೂ ಒಂದೇ ದಿನ 19 ಹಾಡುಗಳನ್ನು ಹಾಡಿ ಸಾಧನೆ ಮಾಡಿದ್ದಾರೆ.ಹಿಂದಿ ಚಿತ್ರರಂಗದಲ್ಲೂ ಮನೆ ಮಾತಾಗಿದ್ದ ಎಸ್.ಪಿ ಸರ್ ಅಲ್ಲಿಯೂ ಒಂದೇ ದಿನ 16 ಹಾಡುಗಳನ್ನು ಹಾಡಿತಮ್ಮ ಕೆಪಾಸಿಟಿಯನ್ನು ಪ್ರೂವ್ ಮಾಡಿದ್ರು.ಯಾವ್ದೇ ಗಾಯಕ ಇವತ್ತಿನವರೆಗೂ ಇಂತದ್ದೊಂದು ಸಾಧನೆ-ಸಾಹಸ ಮಾಡಿಲ್ಲ..ಎಸ್ ಪಿ ಬಾಲು ಸರ್ ಅವರ ಹೆಸರಿನಲ್ಲಿ ಈ ಸಾರ್ವಕಾಲಿಕ ದಾಖಲೆ ಇದೆ.

Spread the love
Leave A Reply

Your email address will not be published.

Flash News