BreakingCORONA VIRUSKANNADAFLASHNEWSFIGHTAGAINSTCORONAMoreScrollTop NewsUncategorizedದೇಶ-ವಿದೇಶವಿಚಿತ್ರ-ವಿಶೇಷಸಿನೆಮಾ ಹಂಗಾಮ

ಆ ಚಿತ್ರ ಬರದಿದ್ದರೆ ನಾನು ಎಲ್ಲಿರುತ್ತಿದ್ದೆನೇನೋ..ಬಾಲು ಸರ್ ಸದಾ ..ನೆನೆಯುತ್ತಿದ್ದ ಚಿತ್ರವದು..

ಚಿತ್ರಗಳಲ್ಲಿ ಯುಗಳ ಗೀತೆಯನ್ನು ಹಾಡಿ ಚಿತ್ರರಸಿಕರನ್ನು ರಂಜಿಸುತ್ತಿದ್ದ ಎಸ್ ಪಿಬಿ ಅವರಿಗೆ ಒಂದು ಮಹತ್ವದ ಬ್ರೇಕ್ ಬೇಕಿತ್ತು.ಸಾಮರ್ಥ್ಯದ ಮತ್ತೊಂದು ಮಗ್ಗಲನ್ನು ಜಗತ್ತಿಗೆ ತೋರಿಸಿಕೊಡಲು ಅವಕಾಶಕ್ಕಾಗಿಕಾಯುತ್ತಲೇ ಇದ್ದರು..ಆ ಚಿತ್ರ ಅವರ ಆ ನಿರೀಕ್ಷೆಯನ್ನು ಮುಟ್ಟೊಕ್ಕೆ ಕಾರಣವಾಯ್ತು.ಅಂದುಕೊಂಡಿದ್ದನ್ನು ಸಾಧಿಸೊಕ್ಕೆ ಮೆಟ್ಟಿಲಾಯ್ತು..ಆ ಚಿತ್ರವೇ ಶಂಕರಾಭರಣಂ.

ಎಸ್ ಪಿ ಬಾಲ ಸುಬ್ರಮಣ್ಯಂ ಅವರಿಗೆ ಅಂತರಾಷ್ಟ್ರೀಯ ಮನ್ನಣೆ ತಂದುಕೊಟ್ಟ ಚಿತ್ರವೇ ಶಂಕರಾಭರಣಂ.ಶಂಕರಾಭರಣಂ ಎನ್ನುವ ಆ ಚಿತ್ರ ತಮ್ಮ ವೃತ್ತಿಜೀವನದಲ್ಲಿ ಪ್ರವೇಶವಾಗದೇ ಹೋಗಿದಿದ್ದರೆ ನಾನು ಅಲ್ಲಿಯೇ ಉಳಿದುಬಿಡುತ್ತಿದ್ದೆ.ದೊಡ್ಡ ಮಟ್ಟಕ್ಕೆ ಏರೊಕ್ಕೆ ಸಾಧ್ಯವಾಗುತ್ತಲೇ ಇರಲಿಲ್ಲ ಎಂದು ಬಾಲು ಸರ್ ಬಹಳ ವೇದಿಕೆಗಳಲ್ಲಿ ಹೇಳಿಕೊಂಡಿದ್ದುಂಟು.

ಸದಭಿರುಚಿ ಚಿತ್ರಗಳ ನಿರ್ದೇಶಕರೆಂದೇ ಕರೆಯಿಸಿಕೊಂಡಿದ್ದ ಕೆ.ವಿಶ್ವನಾಥ್ 1980 ರಲ್ಲಿ ಶಂಕರಾಭರಣಂ ಎನ್ನುವ ಸಂಗೀತ ಪ್ರಧಾನ ಚಿತ್ರ ನಿರ್ದೇಶಿಸಿದ್ರು.ಕೆ.ವಿ ಮಹಾದೇವನ್ ಅವರ ಅದ್ಬುತ ಸಂಗೀತಾ ನಿರ್ದೇಶನದಲ್ಲಿ ಮೂಡಿದ ಈ ಚಿತ್ರದಲ್ಲಿ ಎಸ್ ಪಿ ಸರ್ ಹಾಡಿದ ಒಂದೊಂದು ಹಾಡುಗಳು ಕೂಡ ಒಂದೊಂದು ದಾಖಲೆಯನ್ನೇ ನಿರ್ಮಿಸಿಬಿಟ್ಟವು.

ಎಸ್ ಪಿ ಸರ್ ಅವರ ಹಾಡುಗಾರಿಕೆಯ ಸಾಮರ್ಥ್ಯವನ್ನು ಓರೆಗೆ ಹಚ್ಚಿ,ಬಾಲಸುಬ್ರಮಣ್ಯಂ ಹೀಗೂ ಹಾಡಬಲ್ಲರಾ ಎನ್ನುವುದನ್ನು ಪ್ರೂವ್ ಮಾಡಿದ ಚಿತ್ರವದು.ಚಿತ್ರದಲ್ಲಿನ ಎಲ್ಲಾ ಹಾಡುಗಳು ಸೂಪರ್ ಹಿಟ್ ಆದವು.ಸಾರ್ವಕಾಲಿಕ ಅದ್ಬುತ ಹಾಡುಗಳಲ್ಲಿ ಶಂಕರಾಭರಣಂ ಚಿತ್ರದ ಹಾಡುಗಳು ನಿಲ್ಲೊಕ್ಕೆ ಕಾರಣವಾದ ಸಂಗತಿಯಲ್ಲಿ ಎಸ್ ಪಿಬಿ ಅವರ ಕಂಠಸಿರಿಯೂ ಒಂದು.ಇವತ್ತಿಗೂ ಈ ಹಾಡುಗಳನ್ನು ಕೇಳುತ್ತಿದ್ದರೆ ತನ್ನಲ್ಲೇ ತಾನು ಮೈಮರೆಯದಿದ್ದರೆ ಕೇಳಿ..

ಸಂಗೀತ ಪ್ರಧಾನವಾದ ಶಂಕರಾಭರಣಂ ಚಿತ್ರ ಯಾವ್ ಮಟ್ಟದಲ್ಲಿ ಸೂಪರ್ ಹಿಟ್ ಆಯ್ತೆಂದ್ರೆ,ರಾತ್ರೋರಾತ್ರಿ ಎಸ್.ಪಿ ಬಾಲು ಸರ್ ಅವರ ಹಾಡುಗಾರಿಕೆ-ಶೈಲಿ-ಲಾಲಿತ್ಯ ಹೀರೋ ಆಯ್ತು.ಎಸ್ ಪಿಬಿ ಅವರ ಗಾಯನ ಶಕ್ತಿಗೆ ವಿಶಿಷ್ಟ ಮೆರುಗು ತಂದ ಕೊಟ್ಟ ಸಿನೆಮಾ ಅದು.

ಬಾಲು ಸರ್ ಅವರನ್ನು ಯಾವುದೋ ಎತ್ತರಕ್ಕೆ ಕೊಂಡೊಯ್ದ ಚಿತ್ರವದು..ಬದುಕಿದ್ದ ಕ್ಷಣದವರೆಗೂ ಅದು ತಂದುಕೊಟ್ಟ ಕೀರ್ತಿಹೆಸರು ಖ್ಯಾತಿ ಗೌರವ ಸಮ್ಮಾನವನ್ನು ಅವರು ಸದಾ ನೆನಪಿಸಿಕೊಳ್ಳುತ್ತಿದ್ದರು.”ಶಂಕರಾ..ನಾದಶರೀರಾಪರಾ” ಎನ್ನುವ ಆ ಹಾಡನ್ನು ತನ್ನ ಸಂಗೀತ ಕಚೇರಿ-ಆರ್ಕೆಸ್ಟ್ರಾಗಳಲ್ಲಿ ಹಾಡದಿದ್ರೆ ಅವರ ಹಾಡುಗಾರಿಕೆಗೇ ಸಾರ್ಥಕತೆ ಹಾಗೂ ಪರಿಪೂರ್ಣತೆ ಸಿಗುತ್ತಿರಲಿಲ್ಲವೇನೋ..

1980 ರ ಸೂಪರ್ ಹಿಟ್ ಚಿತ್ರವಾದ ಶಂಕರಾಭರಣಂನಲ್ಲಿ ಹಾಡುಗಾರಿಕೆಗೆ ಅತ್ಯುತ್ತಮ ಹಿನ್ನಲೆ ಗಾಯನ ವಿಭಾಗದಲ್ಲಿ ರಾಷ್ಟ್ರೀಯ ಪುರಸ್ಕಾರ ದೊರೆಯಿತು.ಮಾರನೇ ವರ್ಷವೇ ತೆರೆ ಕಂಡ ಮತ್ತೊಂದು ಬ್ಲಾಕ್ ಬಸ್ಟರ್ ಚಿತ್ರ ಏಕ್ ದುಜೆ ಕೇಲಿಯೇ ಚಿತ್ರದಲ್ಲಿನ ಹಾಡುಗಾರಿಕೆಗೆ ಮತ್ತೊಂದು ಪ್ರಶಸ್ತಿ ಅವರನ್ನು ಅರಸಿ ಬಂತು. 

Spread the love

Related Articles

Leave a Reply

Your email address will not be published.

Back to top button
Flash News