BreakingCORONA VIRUSKANNADAFLASHNEWSFIGHTAGAINSTCORONAMoreScrollTop NewsUncategorizedಫೋಟೋ ಗ್ಯಾಲರಿವಿಚಿತ್ರ-ವಿಶೇಷಸಿನೆಮಾ ಹಂಗಾಮ

ಸಿನಿರಸಿಕರು ಮರೆಯೊಕ್ಕಾಗುತ್ತಾ ಬಾಲು ಜೊತೆಗಿನ ಈ ಜೋಡಿಯನ್ನು..ಸಾಧ್ಯವೇ ಇಲ್ಲ..

ಬಹುಷಃ ಈ ಜೋಡಿಯನ್ನು ಮರೆಯೊಕ್ಕೆ ಸಾಧ್ಯವೇ ಇಲ್ಲ..ಅಂತದೊಂದಷ್ಟು ಅದ್ಭುತ ಕೊಡುಗೆಯನ್ನು ನೀಡಿದೆ ಈ ಜೋಡಿ..ಈ ಜೋಡಿ ಇದ್ದರೆ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಎನ್ನುವ ಮಾತು ಆ ಕಾಲಕ್ಕೆ ಜನಜನಿತವಾಗಿತ್ತು..ಅದನ್ನು ಈ ಜೋಡಿ ಪ್ರೂವ್ ಮಾಡಿತು ಕೂಡ..ಆ ಜೋಡಿಯೇ ಎಸ್,ಪಿ.ಬಾಲಸುಬ್ರಹ್ಮಣ್ಯಂ..ಎಸ್ ಜಾನಕಿ ಹಾಗೂ ಇಳಯರಾಜ..

ಹಾಗೇ ನೋಡಿದ್ರೆ ಇಳಯರಾಜ ಹಾಗೂ ಎಸ್ ಪಿ ಬಾಲಸುಬ್ರಮಣ್ಯಂ ಸ್ನೇಹಿತರು..ಬಾಲು ಸರ್ ಹಾಡುವಾಗ ಇಳಯರಾಜ ವಾದ್ಯ ನುಡಿಸುತ್ತಿದ್ದರು.ಬಾಲು ಸರ್ ಬೆಳೆದ ಮೇಲೂ..ಅವಕಾಶ ಸಿಕ್ಕ ಮೇಲೆಯೂ ತಮ್ಮ ಕಷ್ಟದ ದಿನಗಳನ್ನು ಮರೆಯಲಿಲ್ಲ..ಜತೆಗಿದ್ದು ಸಾಥ್ ಕೊಟ್ಟವರನ್ನು ದೂರ ಮಾಡಲಿಲ್ಲ..ಇದಕ್ಕೆ ಅದ್ಭುತ ಉದಾಹರಣೆಯೇ ಇಳಯರಾಜ ಹಾಗೂ ಬಾಲು ಸರ್..

ಉಚ್ಛ್ರಾಯ ಸ್ಥಿತಿಯಲ್ಲಿರುವಾಗ ಒಂದಾದ ಎಸ್ ಪಿಬಿ ಹಾಗೂ ಇಳಯರಾಜ ಹತ್ತಿರತ್ತಿರ ಒಂದು ದಶಕ ತಮಿಳು ಚಿತ್ರರಂಗವನ್ನು ಸಾರ್ವಭೌಮರಾಗಿ ಆಳಿದ್ರು.ಇಳಯರಾಜ ಸಂಗೀತ ಚಿತ್ರಕ್ಕಿದೆ ಎಂದ್ರೆ ಅಲ್ಲಿ ಬಾಲು ಸರ್ ಹಾಡಿರಲೇಬೇಕು..ಬಾಲು ಹಾಡುವ ಹಾಡುಗಳಿಗೆ ಇಳಯರಾಜ ಅವರ ನಿರ್ದೇಶನವೇ ಇರಬೇಕು ಎನ್ನುವುದು ಆ ಕಾಲಕ್ಕೆ ಜನಜನಿತವಾಗಿತ್ತು.

1970 ರಿಂದ 1980 ವರೆಗೆ ಇಳಯರಾಜ ಹಾಗೂ ಎಸ್ ಪಿ ಬಿ ಅವರ ಸಾರ್ವಕಾಲಿಕ ಹಿಟ್ ಜೋಡಿಗೆ ಸಾಥ್ ಕೊಟ್ಟಿದ್ದು ಮತ್ತೋರ್ವ ಅತ್ಯದ್ಭುತ ಗಾಯಕಿ ಎಸ್.ಜಾನಕಿ. ಎಸ್ ಪಿಬಿ-ಇಳಯರಾಜ-ಜಾನಕಮ್ಮ ಅವರ ಜೋಡಿ ಇದೆ ಎಂದ್ರೆ ಆ ಚಿತ್ರ ಮ್ಯೂಸಿಕಲ್ ಬ್ಲಾಕ್ ಬಸ್ಟರ್ ಎಂದೇ ಜನ ಮಾತ್ನಾಡಿಕೊಳ್ಳುವಂತಾಗಿತ್ತು.ಅಷ್ಟೇ ಅತ್ಯದ್ಭುತ ಹಾಡುಗಳನ್ನು-ಸಂಗೀತವನ್ನು ಈ ಜೋಡಿ ನೀಡಿದ್ದು ಸುಳ್ಳಲ್ಲ..
ಶಂಕರಾಭರಣಂ ನಂತೆ ಮತ್ತೊದು ಮ್ಯೂಸಿಕಲ್ ಹಿಟ್ ಚಿತ್ರವಾಗಿ 1983 ರಲ್ಲಿ ಬಂದಿದ್ದೇ ಸಾಗರ ಸಂಗಮಂ.ಈ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದು ಇಳಯರಾಜ..ಎಸ್ ಪಿಬಿ ಜೊತೆ ಹಾಡಿದ್ದು ಜಾನಕಿ.ಈ ಮಹತ್ಸಾಧನೆಗೆ ಇಳಯರಾಜ ಮತ್ತು ಎಸ್‌ಪಿಬಿ ಇಬ್ಬರೂ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಗೆ ಭಾಜನರಾದ್ರು.

ಅದರ ಬೆನ್ನಲ್ಲೇ ಬಂದ ಸ್ವಾತಿ ಮುತ್ಯಂ (1986) ಮತ್ತು ರುದ್ರವೀಣಾ (1988),ಮತ್ತೊಮ್ಮೆ ಇಳಯರಾಜ ಮತ್ತು ಬಾಲಸುಬ್ರಹ್ಮಣ್ಯಂ ಜೋಡಿಗೆ ರಾಷ್ಟ್ರೀಯ ಪ್ರಶಸ್ತಿ ತಂದು ಕೊಟ್ಟವು.ಯಾವುದೇ ಜೋಡಿ ಇಳಯರಾಜ-ಎಸ್ ಪಿಬಿ ಯಷ್ಟು ಹಿಟ್ ಆಗಲಿಲ್ಲ..ಹಾಗೆಯೇ ಅಷ್ಟು ವರ್ಷ ಉಳಿಯಲೂ ಇಲ್ಲ.ಇದನ್ನು ಇಳಯರಾಜ ಅವರೂ ಹೇಳಿಕೊಂಡಿದ್ದಾರೆ..ಬಾಲು ಸರ್ ಕೂಡ ಪದೇ ಪದೇ ಸ್ಮರಿಸಿಕೊಳ್ಳುತ್ತಿದ್ದರು..ಬಾಲು-ಇಳಯರಾಜ ಜೋಡಿಯ ಗುಣಗಾನವನ್ನು ಜಾನಕಮ್ಮ ಕೂಡ ಮಾಡದ ದಿನಗಳೇ ಇರಲಿಲ್ಲ ಬಿಡಿ..ಅಂ ಎರಡು ದೇಹ ಒಂದೇ ಆತ್ಮ ಎನ್ನುವಂಥ ಅಪರೂಪ ಹಾಗೂ ಅಪೂರ್ವವಾದ ಜೋಡಿ ಅವರದು.

Spread the love

Related Articles

Leave a Reply

Your email address will not be published.

Back to top button
Flash News