BreakingCORONA VIRUSKANNADAFLASHNEWSFIGHTAGAINSTCORONAMoreScrollTop NewsUncategorizedವಿಚಿತ್ರ-ವಿಶೇಷಸಿನೆಮಾ ಹಂಗಾಮ

ಸಲ್ಮಾನ್ ಶರೀರ-ಬಾಲು ಸರ್ ಶಾರೀರ-ಬಾಲು ಸರ್ ಇಲ್ಲದಿದ್ದರೆ ನಾನು ಝೀರೋ ಎಂದಿದ್ರು ಸಲ್ಮಾನ್

ಅವು 1989ರ ದಿನಗಳು..ಯಾವ ನಟನಿಗೂ ಇಲ್ಲದಷ್ಟು ಡಿಮ್ಯಾಂಡ್ ಗಿಟ್ಟಿಸಿಕೊಂಡಿದ್ದ ಗಾಯಕರಾಗಿ ಎಸ್ ಪಿಬಿ ಬೆಳೆದುಬಿಟ್ಟಿದ್ರು.ಇವರ ಕಾಲ್ ಶೀಟ್ ಸಿಕ್ರೆ ಸಾಕು ಚಿತ್ರ ಸೂಪರ್ ಹಿಟ್ ಎನ್ನುವ ಸನ್ನಿವೇಶ ಸೃಷ್ಟಿಯಾಗಿತ್ತು.ಅದು ಸತ್ಯವೂ ಕೂಡ ಆಗಿತ್ತು.

ದಕ್ಷಿಣ ಭಾರತ ಚಿತ್ರರಂಗದಲ್ಲಿ ಹಿಟ್ ಗಳ ಮೇಲೆ ಹಿಟ್ ಕೊಡ್ತಾ…ಹಿಂದಿಯಲ್ಲೂ ಏಕ್ ದೂಜೆ ಕೇಲಿಯೇ ಎನ್ನುವಂಥ ಚಿತ್ರಗಳಿಂದ್ಲೂ ಹೆಸರಾಗಿದ್ದ ಬಾಲು ಸರ್ ಮೈನೇ ಪ್ಯಾರ್ ಕಿಯಾ ಚಿತ್ರ ನಿರ್ಮಾಣ ತಂಡದ ಕಣ್ಣಿಗೆ ಬೀಳ್ತಾರೆ.ಅದು ಸಲ್ಮಾನ್ ಖಾನ್ ಬ್ರೇಕ್ ಗಾಗಿ ಪರದಾಡುತ್ತಿದ್ದ ದಿನಗಳು ಬೇರೆ..

ಬ್ಯುಸಿ ಶೆಡ್ಯೂಲ್ ನಡುವೆಯೂ ಹೇಗೋ ಮನವೊಲಿಸಿ ಎಸ್ ಪಿಬಿ ಅವರನ್ನು ಕರೆ ತಂದು ಮೈನೇ ಪ್ಯಾರ್ ಕಿಯಾ ಚಿತ್ರಕ್ಕೆ ಹಾಡಿಸಲಾಗುತ್ತೆ.ಚಿತ್ರ ಯಾವ್ ರೇಂಜ್ಗೆ ಹಿಟ್ ಆಯ್ತೆಂದ್ರೆ ಚಿತ್ರ ಕಥೆಗಿಂತ ಸಂಗೀತ ಹಾಗೂ ಹಾಡುಗಾರಿಕೆ ಮೇಲೆ ಹಿಟ್ ಆಯ್ತೆನ್ನುವ ರೀತಿಯ ಮಾತುಗಳು ಕೂಡ ಹರಿದಾಡಲಾರಂಭಿಸಿದ್ವು.

ಸಲ್ಮಾನ್ ಖಾನ್ ಗೆ ಬೇಕಿದ್ದ ಬ್ರೇಕ್ ನ್ನು ನೀಡಿದ,ಎಸ್ ಪಿಬಿ ಅವರ ವರ್ಚಸ್ಸಿಗೆ ಮತ್ತೊಂದು ಆಯಾಮ ತಂದುಕೊಟ್ಟ ಮೈನೇ ಪ್ಯಾರ್ ಕಿಯಾ ಇವತ್ತಿಗೂ ಸಾರ್ವಕಾಲಿಕ ಹಿಟ್ ಗಳ ಚಿತ್ರದಲ್ಲಿ ನಿಲ್ಲುತ್ತೆ.ಇದಕ್ಕೆ ಕಾರಣ ರಾಮ್ ಲಕ್ಷ್ಮಣ್ ಸಂಗೀತ ನಿರ್ದೇಶಕ ಜೋಡಿಯ ಮೋಡಿ ಹಾಗೂ ಎಸ್ ಪಿಬಿ ಅವರ ಕಂಠಸಿರಿ.

ಈ ಚಿತ್ರದಲ್ಲಿನ ದಿಲ್ ದಿವಾನಾ ಹಾಡಿಗೆ ಫಿಲ್ಮ್ ಫೇರ್ ಅತ್ಯುತ್ತಮ ಗಾಯಕ ಪ್ರಶಸ್ತಿ ಬಾಲು ಸರ್ ಪಾಲಾಗುತ್ತೆ.ಬಾಕ್ದಾಫೀಸ್ ನಲ್ಲಿ ಹಣವನ್ನು ಸೂರೆ ಮಾಡಿದ್ದಷ್ಟೇ ಅಲ್ಲ,ಸಲ್ಮಾನ್ ಖಾನ್ ಇಮೇಜನ್ನೇ ಬದಲಿಸಿಬಿಡ್ತು.

ಈ ಚಿತ್ರದ ಹಿಟ್ ಯಾವ್ ರೀತಿಯ ಸನ್ನಿವೇಶ ಸೃಷ್ಟಿಸ್ತು ಎಂದ್ರೆ ಸಲ್ಮಾನ್ ಖಾನ್ ಶರೀರಕ್ಕೆ ಎಸ್ ಪಿಬಿ ಶಾರೀರವೇ ಸೂಟ್ ಎನ್ನುವಂತಾಯ್ತು.ಮೈನೇ ಪ್ಯಾರ್ ಕಿಯಾದ ನಂತರ ಬಂದ ಹಮ್ ಆಪ್ ಕೆ ಹೈ ಕೌನ್ ಚಿತ್ರದಲ್ಲೂ ಕೂಡ ಇದೇ ಪ್ರೂವ್ ಆಯ್ತು.ಈ ನಡುವೆಯೂ ಸಲ್ಮಾನ್ ಖಾನ್ ಗಾಗಿ ಎಸ್ ;ಪಿಬಿ ಸಾಕಷ್ಟು ಹಾಡುಗಳನ್ನು ಹಾಡಿದ್ರು..ಅವು ಸೂಪರ್ ಹಿಟ್ ಕೂಡ ಆದ್ವು.

ಒಂದ್ ಕಾಲದಲ್ಲಿ ರಾಜೇಶ್ ಖನ್ನಾಗೆ ಕಿಶೋರ್ ಕುಮಾರ್ ಶಾರೀರ ಹೇಗೆ ಎನ್ನಲಾಗ್ತಿತ್ತೋ ಹಾಗೆಯೇ ಸಲ್ಮಾನ್ ಖಾನ್ ಗೆ ಎಸ್ ಪಿಬಿನೇ ಸೂಟ್..ಅವರನ್ನು ಬಿಟ್ಟು ಬೇರೆಯವರನ್ನು ಕಲ್ಪಿಸಿಕೊಳ್ಳುತ್ತಿರಲಿಲ್ಲ ಚಿತ್ರ ತಂಡ.ಸಲ್ಮಾನ್ ಕೂಡ ಇವತ್ತಿಗೂ ಎಸ್ ಪಿಬಿ ಅವರ ಶಾರೀರವನ್ನು ತುಂಬಾ ಗೌರವಿಸುವ ಮೂಲಕ ಹಳೆಯದನ್ನು ಮರೆತಿಲ್ಲ.ಸಲ್ಮಾನ್ ಖಾನ್ ಬೆಳವಣಿಗೆ ಹಾಗೂ ಯಶಸ್ಸಿನಲ್ಲಿ ಎಸ್ ಪಿಬಿ ಅವರ ಪಾತ್ರ ನಿರ್ಣಾಯಕವಾಗಿದೆ.ಅದನ್ನು ಸಲ್ಮಾನ್ ಸಾಕಷ್ಟು ವೇದಿಕೆಗಳಲ್ಲಿಯೂ ಹೇಳಿಕೊಂಡಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News