ಬಾಲು ಸರ್ ಹಾಡೊಕ್ಕೂ ಸೈ…ಡಬ್ಬಿಂಗ್ ಗೂ ಜೈ..ತನ್ನ ಶರೀರಕ್ಕೆ ಬಾಲುನೇ ಶಾರೀರವಾಗಬೇಕೆಂದಿದ್ರು ಆ ಮಹಾನ್ ನಟ..

0

ಗಾಯಕನಾಗಷ್ಟೇ ಜನರಿಗೆ ಪರಿಚಿತವಾಗಿದ್ದ ಬಾಲು ಸರ್ ಅವರಲ್ಲಿ ಒಬ್ಬ ಅತ್ಯದ್ಭುತ ಕಂಠದಾನ ಕಲಾವಿದನೂ ಇದ್ದನೆನ್ನುವದು ತಿಳಿದಿರಲಿಕ್ಕಿಲ್ಲ.. ಎಸ್ ಪಿ ಸರ್ ಒಬ್ಬ ಅತ್ಯದ್ಭುತ ಕಂಠದಾನ ಕಲಾವಿದರೂ ಹೌದು..

ಅನೇಕ ನಾಯಕ ನಟರಿಗೆ ಇವರು ಧ್ವನಿಯಾಗಿದ್ದಾರೆ. ಪುರುಸೊತ್ತಿದ್ದಾಗ ನಟರಿಗೆ ಕಂಠದಾನ ಮಾಡಿಯೂ ಯಶಸ್ವಿಯೂ ಆಗಿದ್ದಾರೆ.ಕೆ.ಬಾಲಚಂದರ್ ಅವರ ಮನ್ಮಥ ಲೀಲಾ ಚಿತ್ರದಲ್ಲಿ ಕಮಲ್ ಹಾಸನ್ ಗೆ ಧ್ವನಿ ಯಾಗಿದ್ದರು.

ಅಷ್ಟೇ ಅಲ್ಲ, ರಜನಿಕಾಂತ್(ಕಥಾನಾಯಕಡು), ವಿಷ್ಣುವರ್ಧನ್, ಸಲ್ಮಾನ್ ಖಾನ್,ಗಿರೀಶ್ ಕಾರ್ನಾಡ್(ಆನಂದ ಭೈರವಿ), ಜೆಮಿನಿ ಗಣೇಶನ್(ರುದ್ರವೀಣಾ), ಅರ್ಜುನ್ ಸರ್ಜಾ(ಶ್ರೀ ಆಂಜನೇಯಮ್), ನಾಗೇಶ್ ಕಾರ್ತಿಕ್,ರಘುವೀರನ್..ಅನಿಲ್ ಕಪೂರ್(ಸ್ಲಂ ಡಾಗ್ ಮಿಲೇನಿಯರ್) ಹೀಗೆ ಕಲಾವಿದರ ದೊಡ್ಡ ಪಟ್ಟಿಯೇ ಬೆಳೆಯುತ್ತೆ.

ದಶಾವತಾರಂ ಚಿತ್ರದಲ್ಲಿ ಕಮಲ್ ಹಾಸನ್ ಅವರ ರೂಪಾಂತರ ಪಾತ್ರಗಳಿಗೆ ಧ್ವನಿಯನ್ನು ಏರಿಳಿತಗೊಳಿಸಿಕೊಂಡು ಕಂಠದಾನ ಮಾಡಿ ಎಲ್ಲರಿಂದ್ಲೂ ಶಹಬ್ಬಾಸ್ ಗಿರಿ ಪಡೆದುಕೊಂಡಿದ್ರು.

ನಾಗಾರ್ಜುನ ನಟನೆಯ ಸೂಪರ್ ಹಿಟ್ ಸಿನೆಮಾ ಅನ್ನಮಯ್ಯ ಚಿತ್ರದಲ್ಲಿನ ಕಂಠದಾನಕ್ಕಾಗಿ ಅತ್ಯುತ್ತಮ ಕಂಠದಾನ ಕಲಾವಿದ ನಂದಿ ಪ್ರಶಸ್ತಿಯು ಮುಡಿಗೇರಿತ್ತು.ನಂದಮೂರಿ ಬಾಲಕೃಷ್ಣರಿಗೆ ಡಬ್ಬಿಂಗ್ ಮಾಡಿದ್ದರು. ಕೇವಲ ಹಾಡುಗಾರಿಕೆ ಅಲ್ಲ ಕಂಠದಾನಕ್ಕೂ ನಾನು ಸೈ ಎನ್ನುವುದನ್ನು ಈ ಮೂಲಕ ಪ್ರೂವ್ ಮಾಡಿದ್ರು ಎಸ್ ಪಿ ಬಾಲಸುಬ್ತಮಣ್ಯಂ. 

Spread the love
Leave A Reply

Your email address will not be published.

Flash News