BreakingCORONA VIRUSKANNADAFLASHNEWSFIGHTAGAINSTCORONAMoreScrollTop NewsUncategorizedವಿಚಿತ್ರ-ವಿಶೇಷಸಿನೆಮಾ ಹಂಗಾಮ

ಎಲ್ಲಾ ನಾಯಕನಟರ ಅತ್ಯಂತ ಫೇವರೀಟ್ ಆಗಿದ್ದ ಬಾಲು ಸರ್..ಅವರೊಂದಿಗೆ ಪೈಪೋಟಿಗೆ ಬೀಳ್ತಿದ್ದ ಹೀರೋಗಳು..

ಹಿನ್ನಲೆ ಗಾಯಕರು ನಾಯಕ ನಟರ ಆತ್ಮವಿದ್ದಂತೆ ಎನ್ನಲಾಗುತ್ತೆ..ಎಸ್ ಪಿಬಿ ವಿಷಯದಲ್ಲಿ ಇದು ಎಷ್ಟು ಸತ್ಯವಾಗಿತ್ತೆಂದರೆ ಯಾವುದೇ ನಾಯಕ ನಟ ತೆರೆ ಮೇಲೆ ಹಾಡನ್ನು ಹಾಡುತ್ತಿದ್ದರೆ ಅವರ ಶರೀರಕ್ಕೆ ತಕ್ಕಂತೆ ಇವರ ಶಾರೀರ ಹೊಂದುತ್ತಿತ್ತು.ಹಾಗಾಗಿಯೇ ಎಲ್ಲಾ ನಟರ ಶರೀರಕ್ಕೂ ಹೊಂದುವ ಏಕೈಕ ಗಾಯಕ ಎನ್ನುವ ಹೆಗ್ಗಳಿಕೆ ಇವರದಾಗಿತ್ತು.

ಉದಾಹರಣೆಗೆ ಕೆಲವು ನಟರಿಗೆ ಕೆಲವು ಗಾಯಕರ ಧ್ವನಿ ಹೊಂದುವುದೇ ಇಲ್ಲ..ತೆರೆ ಮೇಲೆ ಕಲ್ಪಿಸಿಕೊಳ್ಳಲಿಕ್ಕೂ ಪ್ರೇಕ್ಷಕ ಹಾಗೂ ಅಭಿಮಾನಿ ಇಚ್ಛಿಸುವುದಿಲ್ಲ.ಆದರೆ ಬಾಲು ವಿಷಯದಲ್ಲಿ ಅದು ಸಂಪೂರ್ಣ ಅಪವಾದಂತಿತ್ತು.ತೆರೆ ಮೇಲೆ ಯಾವುದೇ ನಟನಿಗೇ ಹಾಡಿದ್ರೂ ಅದನ್ನು ಆ ನಾಯಕನೇ ಹೇಳುತ್ತಿದ್ದಾನೆನ್ನುವ ಆತ್ಮೀಯತೆಯ ಭಾವ ಬರುತ್ತಿತ್ತು.

ತೆಲುಗಿನಲ್ಲಿ ಘಂಟಸಾಲ, ತಮಿಳಿನಲ್ಲಿ ಟಿ ಎಂ ಸೌಂದರ್ ರಾಜನ್, ಕನ್ನಡದಲ್ಲಿ ಪಿ ಬಿ ಶ್ರೀನಿವಾಸ್ ಹೀಗೆ ಒಬ್ಬೊಬ್ಬರೂ

ಒಂದೊಂದು ಭಾಷೆಯ ಚಿತ್ರರಂಗದಲ್ಲಿ ಸಾರ್ವಭೌಮರಾಗಿ ಮೆರೆದಿದ್ದರು.ಆದ್ರೆ . ಬಾಲಸುಬ್ರಮಣ್ಯಂ ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ಇಟ್ಟಿದ್ದು ಭಾಷೆಗಳಿಗೂ ಸಾರ್ವಭೌಮರಾಗಿಬಿಟ್ಟರು.

ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲ,ದಕ್ಷಿಣ ಭಾರತದಲ್ಲಿ ರಜನೀಕಾಂತ್, ಕಮಲಹಾಸನ್, ಚಿರಂಜೀವಿ..ಹಿಂದಿಯ ಸಲ್ಮಾನ್ ಖಾನ್ ..ಹೀಗೆ ಎಲ್ಲರಿಗೂ ಎಸ್ ಪಿ ಸರ್ ಶಾರೀರ ಸಖತ್ತಾಗೇ ಹೊಂದುತ್ತಿತ್ತು.

ಈ ಬೆಳವಣಿಗೆಯನ್ನು ಕನ್ನಡದ ವರನಟ ಡಾ.ರಾಜ್ ಕುಮಾರ್ ಸೇರಿದಂತೆ ಎಂ.ಜಿ. ಆರ್, ಶಿವಾಜಿ ಗಣೇಶನ್, ಎನ್ ಟಿ ರಾಮರಾವ್, ಅಕ್ಕಿನೇನಿ ನಾಗೇಶ್ವರ್ ರಾವ್ ಅವರಂಥ ದಿಗ್ಗಜರು ಮೆಚ್ಚಿದ್ದರು.

Spread the love

Related Articles

Leave a Reply

Your email address will not be published.

Back to top button
Flash News