BreakingCORONA VIRUSKANNADAFLASHNEWSFIGHTAGAINSTCORONAMoreScrollTop NewsUncategorizedದೇಶ-ವಿದೇಶಮಾಹಿತಿ/ತಂತ್ರಜ್ಞಾನ

ಲಸಿಕೆ ಪತ್ತೆಯಾಗೋವರೆಗೂ ಕೊರೊನಾಕ್ಕೆ 20 ಲಕ್ಷ ಸಾಯ್ತಾರೆ..ವಿಶ್ವ ಆರೋಗ್ಯ ಸಂಸ್ಥೆ ಅಘಾತಕಾರಿ ಭವಿಷ್ಯ

ಕೊರೋನಾಗೆ ಲಸಿಕೆ ಸಿಗುತ್ತೋ ಇಲ್ಲವೋ ಎನ್ನುವ ಪ್ರಶ್ನೆ ಇಡೀ ವಿಶ್ವವನ್ನು ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಫ್ರಾನ್ಸ್, ಅಮೆರಿಕಾ, ಜರ್ಮನಿ, ರಷ್ಯಾ ಹೀಗೆ ಅನೇಕ ದೇಶಗಳು ಕೊರೋನಾ ಲಸಿಕೆ ಪತ್ತೆಗೆ ಸಾಕಷ್ಟು ಪ್ರಯತ್ನ ಮಾಡಿದರೂ ಸಿಕ್ಕ ಫಲ ಅಷ್ಟಕ್ಕಷ್ಟೆ!

ಭಾರತದಲ್ಲೂ ಬಾಬಾ ರಾಂದೇವ್ ಸೇರಿದಂತೆ ಅನೇಕ ಆಯುರ್ವೇದ ಸಂಸ್ಥೆಗಳು, ಆಲೋಪತಿಕ್ ಕೇಂದ್ರಗಳು ಈ ಪ್ರಯತ್ನ ಮಾಡಿದರೂ ಫಲ ಮಾತ್ರ ದೊರೆಯದಿರುವುದು ಕೊರೋನಾದ ಬಗ್ಗೆ ಜನ ದಿನೇದಿನೇ ಹೆಚ್ಚೆಚ್ಚು ಆತಂಕ ಪಡಲು ಕಾರಣವಾಗಿದೆ. ಇದೆಲ್ಲದರ ನಡುವೆ ಆತಂಕ ಹುಟ್ಟಿಸುವ ಮತ್ತೊಂದು ಸಂಗತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಹೊರಹಾಕಿದೆ.

ಲಸಿಕೆ ಸಂಶೋಧನೆ ತ್ವರಿತಗತಿಯಲ್ಲಿ ನಡೆಯುತ್ತಿದ್ದರೆ ಇನ್ನೊಂದೆಡೆ ಸಾವಿನ ಸಂಖ್ಯೆ ಲಕ್ಷದ ಗಡುವು ಮೀರುತ್ತಿದೆ. ಇದು ಯಾವ ಮಟ್ಟಕ್ಕೆ ಹೋಗಿ ತಲುಪುತ್ತದೋ ಎನ್ನುವ ಅಂದಾಜು ಆರೋಗ್ಯ ಸಂಸ್ಥೆಗೂ ಇಲ್ಲ. ಆ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಎಲ್ಲಾ ದೇಶಗಳಿಗೂ ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತಲೇ ಇದೆ. ಕೊರೋನಾ ನಿರ್ಲಕ್ಷಿಸಬೇಡಿ, ಸುರಕ್ಷಿತತೆಗೆ ಆದ್ಯತೆ ಕೊಡಿ ಎಂದು ಪದೇ ಪದೇ ಮನವಿ ಮಾಡಿಕೊಳ್ಳುತ್ತಿದೆ.

ಆದರೂ ನಮ್ಮ ನಿರ್ಲಕ್ಷ್ಯ ತಪ್ಪಿಲ್ಲ. ಇದು ಯಾವ ಮಟ್ಟದ ಆತಂಕವನ್ನು ಸೃಷ್ಟಿಸಿದೆ ಎಂದರೆ ವಿಶ್ವ ಆರೋಗ್ಯ ಸಂಸ್ಥೆಯೇ ಹೇಳುವಂತೆ ಕೊರೋನಾಕ್ಕೆ ಲಸಿಕೆ ಸಿಗುವ ಹೊತ್ತಿಗೆ ವಿಶ್ವದಾದ್ಯಂತ ಸಾಯುತ್ತಿರುವವರ ಸಂಖ್ಯೆ ೨೦ ಲಕ್ಷಕ್ಕೆ ತಲುಪಬಹುದಂತೆ! ಪ್ರಸ್ತುತ ಕೊರೋನಾದಿಂದ ಈವರೆಗೆ ಹತ್ತು ಲಕ್ಷ ಸೋಂಕಿತರು ಸಾವನ್ನಪ್ಪಿದ್ದಾರೆ ಎನ್ನುವ ಆಘಾತಕಾರಿ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಯೋಜನಾ ಮುಖ್ಯಸ್ಥ ಮೈಕ್ ರ್‍ಯಾಮ್.

ಭಾರತದಲ್ಲೂ ಕೊರೋನಾ ಸೋಂಕು ಹಾಗೂ ಸಾವಿನ ಸಂಖ್ಯೆ ಸಮಾಧಾನ ಪಡುವ ಮಟ್ಟದಲ್ಲಿ ಇಲ್ಲ. ಕೇವಲ ಶುಕ್ರವಾರದಿಂದ ಶನಿವಾರ ಅಂದರೆ ಇಪ್ಪತ್ತನಾಲ್ಕು ಗಂಟೆಯ ಅವಧಿಯಲ್ಲೇ ೮೫,೩೬೨ ಮಂದಿ ಸೋಂಕಿಗೆ ತುತ್ತಾಗಿದ್ದರೆ ೧,೦೮೯ ಸೋಂಕಿತರು ಸಾವನ್ನಿಪ್ಪಿದ್ದಾರೆ. ಚೇತರಿಕೆಯ ಪ್ರಮಾಣ ಆಶಾದಾಯಕವಾಗಿದ್ದರೂ ಸೋಂಕಿನ ಪ್ರಮಾಣ ಕಡಿಮೆಯಾಗಿಲ್ಲದಿರುವುದು ಆತಂಕ ಪಡುವ ವಿಷಯವೇ.ಹಾಗಾಗಿ ವಿಶ್ವ ಆರೋಗ್ಯ ಸಂಸ್ಥೆ ದೇಶವನ್ನು ಎಚ್ಚರಿಸುವ ಕೆಲಸವನ್ನು ಮಾಡುವುದರ ಜೊತೆಗೆ ಕೊರೋನಾ ಸೋಂಕಿನಿಂದ ಮುಕ್ತವಾಗುವವರೆಗೂ ಒಂದಷ್ಟು ಎಚ್ಚರಿಕೆಯಿಂದ ಇರುವ ತಿಳಿವಳಿಕೆಯನ್ನು ಮೂಡಿಸುವ ಕೆಲಸವನ್ನು ಮಾಡಿದೆ.

Spread the love

Related Articles

Leave a Reply

Your email address will not be published.

Back to top button
Flash News