BreakingCORONA VIRUSKANNADAFLASHNEWSFIGHTAGAINSTCORONAMoreScrollTop NewsUncategorizedದೇಶ-ವಿದೇಶಫೋಟೋ ಗ್ಯಾಲರಿವಿಚಿತ್ರ-ವಿಶೇಷ

ಸ್ಪೋಟಕ-ನೆಲಬಾಂಬ್ ಪತ್ತೆಗೆ ಸಹಕರಿಸಿದ  “ಮೂಷಿಕ” ಮಾಗ್ವಾಗೆ ಸ್ವರ್ಣ ಪಾರಿತೋಷಕ..

ಹೀಗೂ ನಡೆಯಬಹುದೇ? ಜಗತ್ತಿನಲ್ಲಿ ಇಂತಹ ವಿಚಿತ್ರಗಳೂ ಘಟಿಸಬಹುದೇ? ಎನ್ನುವ ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿದೆ. ಈ ಮೂಷಕನಿಗೆ ದೊರೆತಿರುವ ಅತ್ಯುನ್ನತ ಪಾರಿತೋಷಕ. ಅದೂ ಕೂಡ ಯಾವ ಕಾರಣಕ್ಕೆ ಎಂದು ಕೇಳಿದರೆ ನೀವು ಆಶ್ಚರ್ಯಪಟ್ಟೀರಿ!

ಕಾಂಬೋಡಿಯಾದ ವ್ಯಾಪ್ತಿಯಲ್ಲಿ ಸ್ಫೋಟಕಗಳ ಪತ್ತೆ ಮಾಡಿ ಜೀವಗಳನ್ನು ರಕ್ಷಿಸಿದ್ದು ಆ ದೇಶದ ಯೋಧರಲ್ಲ. ಬದಲಿಗೆ ಒಂದು ಸಾಮಾನ್ಯ ಇಲಿ ಎಂದರೆ ನೀವು ಆಶ್ಚರ್ಯಪಡಬಹುದು!

ಆದರೆ, ಅಂತಹದ್ದೊಂದು ಅಪರೂಪದ ಹಾಗೂ ಅವಿಸ್ಮರಣೀಯ ಕಾರ್ಯವನ್ನು ಮಾಡಿದಕ್ಕೆ ಆ ದೇಶದ ಪ್ರತಿಷ್ಠಿತ ಸಂಸ್ಥೆ ಗೌರವದ ರೂಪದಲ್ಲಿ ಚಿನ್ನದ ಪದಕವನ್ನು ನೀಡಿ ಗೌರವಿಸಿದೆಯೆಂದು ಸುದ್ದಿಯಾಗಿದೆ. ಆಫ್ರಿಕನ್ ಮೂಲಕ ಆ ದೈತ್ಯ ಇಲಿಯ ಹೆಸರೇ ಮಾಗವಾ.

ಕಳೆದ ಏಳು ವರ್ಷಗಳಿಂದ ರಕ್ಷಣಾ ಕ್ಷೇತ್ರದಲ್ಲಿ ಈ ಮಾಗವಾ ಕಾರ್ಯ ನಿರ್ವಹಿಸುತ್ತಿದೆ. ಅದಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ತರಬೇತಿಯನ್ನು ರಕ್ಷಣಾ ಇಲಾಖೆ ನೀಡುತ್ತಿದೆ. ಇದರ ಕೆಲಸ ಭೂಮಿಯೊಳಗೆ ಹುದುಗಿರುವ ಸ್ಫೋಟಕ ಹಾಗೂ ನೆಲಬಾಂಬ್‌ಗಳನ್ನು ಪತ್ತೆ ಮಾಡುವುದು. ಅಂದಹಾಗೆ ಈ ಮಾಗವಾ ಈವರೆಗೂ 39 ನೆಲಬಾಂಬ್ ಹಾಗೂ 28  ಸ್ಫೋಟಕ ವಸ್ತುಗಳನ್ನು ಪತ್ತೆ ಮಾಡಿದೆ. ಅತ್ಯಂತ ಕಡಿಮೆ ವಯಸ್ಸಿನಲ್ಲಿ ಸ್ಫೋಟಕಗಳ ವಾಸನೆ ಪತ್ತೆ ಮಾಡುವ ತರಬೇತಿಯನ್ನು ಪಡೆದು ಕಾರ್‍ಯರೂಪದಲ್ಲಿ ಯಶಸ್ವಿಯಾಗಿಸಿರುವ ಇಲಿಗೆ ಬ್ರಿಟಿಷ್ ಪಶುವೈದ್ಯಕೀಯ ದತ್ತಿ ಸಂಸ್ಥೆ ಪಿಡಿಎಸ್‌ಎ ಚಿನ್ನದ ಪದಕ ನೀಡಿ ಗೌರವಿಸಿದೆ.

ಕಳೆದ ಎಪ್ಪತ್ತೇಳು ವರ್ಷಗಳಲ್ಲಿ ಇಂತಹದ್ದೊಂದು ಪಾರಿತೋಷಕದ ಗೌರವಕ್ಕೆ ಭಾಜನವಾದ ಮೊದಲ ಇಲಿ ಮಾಗವಾ. ಈ ಕಾರ್‍ಯದಲ್ಲಿ ಈವರೆಗೂ ೨೮ ಶ್ವಾನಗಳಿಗೆ ಈ ಪ್ರತಿಷ್ಠಿತ ಗೌರವವನ್ನು ನೀಡಿ ಗೌರವಿಸಲಾಗಿದೆ.

ಅಂದ ಹಾಗೆ, ಸ್ಫೋಟಕಗಳ ವಾಸನೆ ಪತ್ತೆ ಮಾಡುವ ವಿಷಯದಲ್ಲಿ ಇಲಿ, ಮನುಷ್ಯ, ನಾಯಿಗೆ ಇರುವ ವ್ಯತ್ಯಾಸ ಏನು ಗೊತ್ತೆ? ಸ್ಫೋಟಕ ಪತ್ತೆಗೆ ಮನುಷ್ಯ ನಾಲ್ಕು ದಿನ ತೆಗೆದುಕೊಂಡರೆ, ಇಲಿಗೆ ಬೇಕಿರುವುದು ಕೇವಲ ೩೦ ನಿಮಿಷ. ನಾಯಿಗಿಂತಲೂ ವೇಗವಾಗಿ ಇಲಿಗಳು ವಾಸನೆ ಪತ್ತೆ ಮಾಡುವ ಸಾಮರ್ಥ್ಯ ಹೊಂದಿವೆಯಂತೆ!

Spread the love

Related Articles

Leave a Reply

Your email address will not be published.

Back to top button
Flash News