BreakingCORONA VIRUSKANNADAFLASHNEWSFIGHTAGAINSTCORONAMoreScrollTop NewsUncategorizedಕ್ರೈಮ್ /ಕೋರ್ಟ್ದೇಶ-ವಿದೇಶವಿಚಿತ್ರ-ವಿಶೇಷಹಣ-ವಾಣಿಜ್ಯ

ಒಂದು ಕಾಲದ ಕುಬೇರ ಅನಿಲ್ ಅಂಬಾನಿಗೆ ಇವತ್ತು  ಕೋರ್ಟ್ ಫೀ ಭರಿಸಲೂ ಕಾಸಿಲ್ವಂತೆ-ನಂಬೊಕ್ಕಾಗುತ್ತಾ..?

ಕುಬೇರ ಯಾವಾಗಲೂ ಬರಿಗೈ ಭಿಕಾರಿಯಾಗಲು ಸಾಧ್ಯವೇ..? ಒಂದು ಕಾಲದ ಆಗರ್ಭ ಶ್ರೀಮಂತರಲ್ಲಿ ಒಬ್ಬರಾಗಿದ್ದ ಅನಿಲ್ ಅಂಬಾನಿಯ ಕತೆ ನೋಡಿದರೆ ಹೀಗೆ ಅನಿಸದೇ ಇರೋಲ್ಲ. ಅನಿಲ್ ಅಂಬಾನಿಯೇ ಹೇಳಿಕೊಂಡಂತೆ ಇದು ಸತ್ಯ. ಲಕ್ಷಾಂತರ ಕೋಟಿಗಳ ಮಾಲೀಕನಾಗಿದ್ದ ಅನಿಲ್ ಅಂಬಾನಿ ಈವೊತ್ತು ಒಂದೇ ಒಂದು ಕಾರಿನ ಒಡೆಯನಂತೆ! ಇದನ್ನು ನಂಬಲಿಕ್ಕೆ ಸಾಧ್ಯವೇ?

ಸಾಲದ ಸುಳಿಯಲ್ಲಿ ಸಿಲುಕಿ ತತ್ತರಿಸಿ ಹೋಗಿರುವ ಉದ್ಯಮಿ ಅನಿಲ್ ಅಂಬಾನಿಯ ಪರಿಸ್ಥಿತಿ ಇವೊತ್ತು ಎಷ್ಟರಮಟ್ಟಿಗೆ ಶೋಚನೀಯವಾಗಿದೆ ಎಂದರೆ ಕೋರ್ಟ್ ಶುಲ್ಕವನ್ನು ಭರಿಸಲು ಆಭರಣಗಳನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿಯಿದೆಯಂತೆ! ಇದೆಲ್ಲಕ್ಕಿಂತ ಇನ್ನೂ ಆಶ್ಚರ್ಯದ ವಿಷಯವೇನೆಂದರೆ ಅಂಬಾನಿಯ ವೆಚ್ಚವನ್ನು ಆತನ ಪತ್ನಿ ಭರಿಸುತ್ತಿದ್ದಾರಂತೆ..!

ಅನಿಲ್ ಅಂಬಾನಿಯೇ ಹೇಳಿಕೊಂಡಂತೆ ತಮ್ಮ ಬಳಿ ಇದ್ದ ಆಭರಣ ಮಾರಿದ್ದರಿಂದಲೇ 9.9  ಕೋಟಿ ರೂ. ಬಂದಿದೆ ಇದನ್ನು ಸಂಪೂರ್ಣವಾಗಿ ಕೋರ್ಟ್‌ನ ಫೀಗಾಗಿ ಭರಿಸಿದ್ದೇನೆ. ನನ್ನ ಬಳಿ ಜನರ ತಿಳಿದುಕೊಂಡಂತೆ ಸಾವಿರಾರು ಕೋಟಿ ಹಣವಿಲ್ಲ. ರೋಲ್ಸ್‌ರಾಯ್ ಕಾರಿಲ್ಲ ಅವೆಲ್ಲವೂ ಕೂಡ ಮುಗಿದ ಅಧ್ಯಾಯ. ಇಂದು ನನ್ನ ಬಳಿ ಕಾಮನ್ ಮಾಡೆಲ್ ಕಾರಿದೆ. ಅದನ್ನು ಬಿಟ್ಟರೆ ಬೇರೇನೂ ಇಲ್ಲ. ಅನಿಲ್ ಅಂಬಾನಿಗೆ ದಾರಿದ್ರ್ಯ ಬಂದಿದೆಯೇ ಎಂಬುದನ್ನು ನಂಬಲಿಕ್ಕೆ ಸಾಧ್ಯವೇ ಎಂದು ಮಾಧ್ಯಮಗಳು ಮಾಡುತ್ತಿರುವ ಪ್ರಶ್ನೆಗೆ ಕೋರ್ಟ್ ವಿಚಾರಣೆ ವೇಳೆಯೇ ಅಂಬಾನಿ ಬೇಸರ ವ್ಯಕ್ತಪಡಿಸಿದ್ದಾರಂತೆ..!

ಚೀನಾದ ಮೂರು ಬ್ಯಾಂಕ್‌ಗಳಿಗೆ ಅಂಬಾನಿ ಪಾವತಿಸಬೇಕಾದ ಮೊತ್ತವೇ 5,281  ಕೋಟಿ. ಆದರೆ ನಿಗಧಿತ ಅವಧಿಯಲ್ಲಿ ಅನಿಲ್ ಅಂಬಾನಿ ಅದನ್ನು ಪಾವತಿಸಲು ಸಾಧ್ಯವಾಗಿಲ್ಲ.

ಈ ಬಗ್ಗೆ ಬ್ಯಾಂಕುಗಳು ಅವರ ಮೇಲೆ ಮೊಕದ್ದಮೆ ಹೂಡಿರುವುದರಿಂದ ವಿಚಾರಣೆಗೆ ಅನಿಲ್ ಹಾಜರಾಗಬೇಕಿತ್ತು. ಈ ವಿಚಾರಣೆ ವೇಳೆ ತಾಯಿಯಿಂದ 500  ಕೋಟಿ, ಮಗನಿಂದ 350  ಕೋಟಿ ಸಾಲವನ್ನು ಪಡೆದಿದ್ದೇನೆ ಅದನ್ನು ಪಾವತಿಸಬೇಕಿದೆ ಎಂದು ಹೇಳಿರುವುದಕ್ಕೆ ಕೋರ್ಟ್ ಕಕ್ಕಾಬಿಕ್ಕಿಯಾಗಿದೆ.

ನಿಜಕ್ಕೂ ಅನಿಲ್ ಅಂಬಾನಿ ಬರ್ಬಾದ್ ಆಗಿದ್ದಾರೆಯೇ ಅಥವಾ ಬ್ಯಾಂಕ್‌ನಿಂದ ದಿವಾಳಿ ಎಂದು ಘೋಷಿಸಿಕೊಂಡರೆ ಹಣ ಕಟ್ಟುವುದು ನಿಂತು ಹೋಗುತ್ತದೆ ಎನ್ನುವ ಐಡಿಯಾದಿಂದ ಈ ರೀತಿಯ ಸುಳ್ಳೊಂದನ್ನು ಹೇಳುತ್ತಿದ್ದಾರೆಯೇ ಎನ್ನುವ ಪ್ರಶ್ನೆಗಳು೮ ಈಗಲೂ ಕಾಡುತ್ತಿವೆ.

Spread the love

Related Articles

Leave a Reply

Your email address will not be published.

Back to top button
Flash News