BreakingCORONA VIRUSKANNADAFLASHNEWSFIGHTAGAINSTCORONAMoreScrollTop NewsUncategorizedಕ್ರೈಮ್ /ಕೋರ್ಟ್ದೇಶ-ವಿದೇಶಮಾಹಿತಿ/ತಂತ್ರಜ್ಞಾನವಿಚಿತ್ರ-ವಿಶೇಷ

ನೀವು,ಬಳಸ್ತಿರೋ ಕಾಂಡೋಮ್,ಯಾರೋ ಬಳಸಿ ಬಿಸಾಡಿರೋದು ಇರಬಹುದಾ.. ಹೀಗೆ ಗಾಬರಿಯಾಗಲಿಕ್ಕೂ ಇಲ್ಲಿದೆ ನೋಡಿ ಆ ರೀಸನ್…..

ಒಮ್ಮೆ ಹಾಕಿಬಿಟ್ಟ ಬಟ್ಟೆಯನ್ನು ಮತ್ತೆ ಧರಿಸಲಿಕ್ಕೆ ಮುಜುಗರಪಡುವ ಇಂದಿನ ಪರಿಸ್ಥಿತಿಯಲ್ಲಿ ಒಮ್ಮೆ ಬಳಸಿದ ಕಾಂಡೋಮ್ ಅನ್ನು ಮತ್ತೆ ಮರುಬಳಕೆ ಮಾಡಲು ಸಾಧ್ಯವಾ..? ಛೇ, ಛೇ, ಛೇ. ಇದು ಕೂಡಾ ಕಲ್ಪಿಸಿಕೊಳ್ಳುವ ವಿಷಯವಾ? ಹೀಗೆ ಮೂಗು ಮುರಿಯುವವರಿಗೆ ವಿಯೆಟ್ನಾಂನ ನಿರ್ಧಾರ ಅಚ್ಚರಿ ಹಾಗೂ ಗಾಬರಿ ಮೂಡಿಸಬಹುದು.

ಒಂದಲ್ಲಾ, ಎರಡಲ್ಲಾ ಬರೋಬ್ಬರಿ ಮೂರು ಲಕ್ಷ ಬಳಕೆಯಾದ ಕಾಂಡೋಮ್‌ಗಳನ್ನು ಕ್ಲೀನ್ ಮಾಡಿ ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಲು ವಿಯೆಟ್ನಾಂನ ಜಾಲವೊಂದು ಸಿದ್ಧತೆ ನಡೆಸಿರುವಾಗ ಸಿಕ್ಕಿಬಿದ್ದಿದೆ. ಬಳಕೆಯಾದ ಕಾಂಡೋಮ್‌ಗಳನ್ನು ಸ್ವಚ್ಛಗೊಳಿಸಿ, ಮಿರಮಿರ ಮಿನುಗುವಂತೆ ಅದಕ್ಕೆ ಪಾಲಿಷ್ ಹಾಕಿ ಹೊಸ ಕಾಂಡೋಮ್‌ಗಳಂತೆ ಪ್ಯಾಕ್ ಮಾಡಿ ಬಿಡುಗಡೆ ಮಾಡುವ ಸನ್ನಾಹದಲ್ಲಿದ್ದ ಜಾಲವೊಂದನ್ನು ಪೊಲೀಸ್ ಬಂಧಿಸಿದ್ದಾರೆ.

ವಿಶೇಷವೆಂದರೆ ಈ ಜಾಲದ ಕಿಂಗ್‌ಪಿನ್ 34  ವರ್ಷದ ಮಹಿಳೆಯೆನ್ನಲಾಗಿದೆ. ಆಕೆ ಕೆಲವರನ್ನು ಸೇರಿಸಿಕೊಂಡು ಇಂತಹುದೊಂದು ಜಾಲವನ್ನು ನಡೆಸುತ್ತಿದ್ದಳು ಎನ್ನಲಾಗಿದೆ. ಬಳಕೆ ಮಾಡಿ ಬಿಸಾಡಲ್ಪಟ್ಟ ಕಾಂಡೋಮ್‌ಗಳನ್ನು ಕುದಿಸಿ, ಒಣಗಿಸಿ ಅದಕ್ಕೆ ವ್ಯಾಕ್ಸ್‌ಗಳನ್ನು ಮೆತ್ತಿ ಈಗಾಗಲೇ ಲಕ್ಷಾಂತರ ಕಾಂಡೋಮ್‌ಗಳನ್ನು ಮಾರಾಟ ಮಾಡಿರುವ ಸಾಧ್ಯತೆಗಳೂ ಕೂಡ ತನಿಖೆ ವೇಳೆ ಬಯಲಾಗಿದೆ.

ಈ ಜಾಲದಿಂದ ಖರೀದಿಸಲ್ಪಟ್ಟ ಅದೆಷ್ಟೋ ಕಾಂಡೋಮ್‌ಗಳನ್ನು ಬಳಕೆ ಮಾಡಿರುವವರಿಗೆ ಲೈಂಗಿಕ ರೋಗಗಳು ಹಾಗೂ ಹೆಚ್‌ಐವಿ ಸೋಂಕು ಬಂದಿರಬಹುದಾದಂತ ಸಾಧ್ಯತೆಗಳನ್ನು ಕೂಡ ಪೊಲೀಸರು ಹೊರಹಾಕಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News