ಮೇಲ್ಮನೆ 4 ಸ್ಥಾನಗಳಿಗೆ ಚುನಾವಣೆ ಫಿಕ್ಸ್- ಸಭಾಪತಿ ಸ್ಥಾನ ನಿರ್ಧರಿಸಲಿರುವ ಎಲೆಕ್ಷನ್…

0

ಬೆಂಗಳೂರು: ಚೌಡರೆಡ್ಡಿ ತೂಪಲ್ಲಿ, ಸಂಕನೂರು, ಶರಣಪ್ಪ ಮಟ್ಟೂರು ಹಾಗೂ ಪುಟ್ಟಣ್ಣನವರಿಂದ ತೆರವಾಗಿದ್ದ ಕ್ಷೇತ್ರಗಳಿಗೆ ವಿಧಾನಪರಿಷತ್ ಚುನಾವಣೆ ಘೋಷಣೆಯಾಗಿದೆ.ಪಶ್ಚಿಮ, ಆಗ್ನೇಯ ಪದವೀಧರ ಕ್ಷೇತ್ರ, ಬೆಂಗಳೂರು, ಈಶಾನ್ಯ ಶಿಕ್ಷಕರ ಕ್ಷೇತ್ರಗಳಿಗೆ  ನವೆಂಬರ್‌ ನಲ್ಲಿ ಚುನಾವಣೆ ನಡೆಯಲಿದೆ.

ಬಹು ನಿರೀಕ್ಷಿತ ವಿಧೇಯಕಗಳು ವಿಧಾನಸಭೆಯಲ್ಲಿ ಬಹುಮತದಿಂದ ಅನುಮೋದನೆಗೊಂಡರೂ, ವಿಧಾನ ಪರಿಷತ್‌ನಲ್ಲಿ ಸರ್ಕಾರಕ್ಕೆ ಬಹುಮತವಿಲ್ಲದೆ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಮೈತ್ರಿಬಳಗ ಪ್ರಮುಖ ವಿಧೇಯಕಗಳಿಗೆ ತಡೆಯೊಡ್ಡುತ್ತಿವೆ. ಅದಕ್ಕೊಂದು ಜ್ವಲಂತ ಉದಾಹರಣೆ, ಇತ್ತೀಚಿಗಷ್ಟೆ ಮುಗಿದ ಅಧಿವೇಶನದಲ್ಲಿ ಭೂ ಸುಧಾರಣೆ ಕಾಯಿದೆ ವಿಧೇಯಕ ಹಾಗೂ APMC.

ಕಾಯಿದೆ ವಿಧೇಯಕಕ್ಕೆ ತಡೆಯೊಡ್ಡಿ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಮುಖಭಂಗವಾಗಿದೆ. ಹಾಗಾಗಿ ಬಿಜೆಪಿ ಪಕ್ಷವು ಮೇಲ್ಮನೆ ಸಭಾಪತಿ ಪ್ರತಾಪ್‌ಕುಮಾರ್ ಶೆಟ್ಟಿಯವರನ್ನು ಅಧಿಕಾರದಿಂದ ಕೆಳಗಿಳಿಸಿ, ಜೆಡಿಎಸ್‌ ಮನವೊಲಿಸಿ ಬೇಕಾದರೆ ಜೆಡಿಎಸ್‌ಗೆ ಸಭಾಪತಿ ಸ್ಥಾನ ನೀಡಿ ತಾವು ಉಪಸಭಾಪತಿ ಸ್ಥಾನಕ್ಕೆ ತೃಪ್ತಿಪಟ್ಟು, ಪ್ರಮುಖ ವಿಧೇಯಕಗಳಿಗೆ ಅಸ್ತು ಎನ್ನಲು ಅಣಿಯಾಗುತ್ತಿದೆ.ಸದ್ಯದ ಪರಿಸ್ಥಿತಿಯು ಇದಕ್ಕೆ ಅನುಗುಣವಾಗಿದೆ.

ಜೆಡಿಎಸ್ ಬಹುತೇಕ ಬಿಜೆಪಿ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದು, ಕೇವಲ ಅವಕಾಶ ಮತ್ತು ಅಧಿಕಾರದಲ್ಲಿ ಪಾಲುದಾರನಾಗಲು ಹವಣಿಸುತ್ತಿದೆ. ಅಳೆದು ಸುರಿದು ನೋಡಿದರೂ ಮತ್ತೊಂದು ದಶಕದ ವರೆಗೆ ಜೆಡಿಎಸ್ ಸ್ವಂತ ಶಕ್ತಿಯಲ್ಲಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಮೇಲ್ಮನೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಕಷ್ಟ. ಹಾಗಾಗಿ, ಬಿಜೆಪಿ ಜೊತೆ ಕೈಜೋಡಿಸಿದರೆ ಸುಲಭವಾಗಿ ಸಭಾಪತಿ ಸ್ಥಾನ ದೊರಕುತ್ತದೆ.

2006 ರಲ್ಲಿ ಕೇವಲ 58  ಸ್ಥಾನ ಬಲದಿಂದ ಬಿಜೆಪಿಯೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿದ್ದು 2018 ರಲ್ಲಿ ಕೇವಲ 38  ಸ್ಥಾನ ಪಡೆದು ಕಾಂಗ್ರೆಸ್‌ನೊಂದಿಗೆ ಮುಖ್ಯಮಂತ್ರಿ ಗಾದಿ ಹಂಚಿಕೊಂಡಿದ್ದು ಜ್ವಲಂತ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ. ಇದರ ಜೊತೆ ಜೊತೆಗೆ ಕರ್ನಾಟಕದ 4 ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಕೋವಿಡ್-19ರ ಕಾರಣದಿಂದ ಮುಂದೂಡಲ್ಪಟ್ಟಿತ್ತು.

ಸದಸ್ಯರಾದ ಚೌಡರೆಡ್ಡಿ ತೂಪಲ್ಲಿ, ಸಂಕನೂರು, ಶರಣಪ್ಪ ಮಟ್ಟೂರು ಹಾಗೂ ಪುಟ್ಟಣ್ಣನವರಿಂದ ತೆರವಾಗಿದ್ದ ಕ್ಷೇತ್ರಗಳಿಗೆ ನಾಲ್ಕು ತಿಂಗಳ ಅವಧಿಯ ನಂತರ ಇದೀಗ ನವೆಂಬರ್‌ನಲ್ಲಿ ನಡೆಯಲಿರುವ ಪಶ್ಚಿಮ, ಆಗ್ನೇಯ ಪದವೀಧರ ಕ್ಷೇತ್ರ, ಬೆಂಗಳೂರು, ಈಶಾನ್ಯ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಿಗಧಿಯಾಗಿದ್ದು ಬಹುತೇಕ ಆಡಳಿತ ಪಕ್ಷವೇ ಅಧಿಕಾರದ ಗದ್ದುಗೆ ಹಿಡಿದಲ್ಲಿ ಮೇಲ್ಮನೆಯ ಬಹುಮತದಲ್ಲೂ ವ್ಯತ್ಯಯವಾಗುತ್ತದೆ.

ಒಟ್ಟಿನಲ್ಲಿ ಅಳೆದು ಸುರಿದು ಈ ಚುನಾವಣಾ ಫಲಿತಾಂಶದ ಬೆನ್ನಲ್ಲೇ ನಾಯಕತ್ವದ ಬದಲಾವಣೆಯಾಗುವುದು ಖಂಡಿತ. ಅದಕ್ಕಾಗಿ ಮುಂದಿನ ತಿಂಗಳ ನಾಲ್ಕು ಕ್ಷೇತ್ರಗಳ ಚುನಾವಣಾ ಫಲಿತಾಂಶವೇ ಸಾಕ್ಷಿಯಾಗಲಿದೆ.ಈ ಚುನಾವಣೆ ವಿಧಾನಪರಿಷತ್ ಸಭಾಪತಿ ಸ್ಥಾನದ ಆಯ್ಕೆಯಲ್ಲೂ ನಿರ್ಣಾಯಕ ಪಾತ್ರ ವಹಿಸೋದು ಮಾತ್ರ ಸತ್ಯ. 

Spread the love
Leave A Reply

Your email address will not be published.

Flash News