BreakingCORONA VIRUSKANNADAFLASHNEWSFIGHTAGAINSTCORONAMoreScrollTop NewsUncategorizedರಾಜಕೀಯರಾಜ್ಯ-ರಾಜಧಾನಿ

“ದಸರಾ” ಹೊಸ್ತಿಲಲ್ಲೇ “ಚಾಮುಂಡಿ”ದೇವಿ ಪ್ರತಿರೂಪದಂತೆ “ಖಡಕ್” IAS  ರೋಹಿಣಿ ಸಿಂಧೂರಿ ಮೈಸೂರಿಗೆ ಎಂಟ್ರಿ..

ಮೈಸೂರು: ಕೆಲವು ಅಧಿಕಾರಿಗಳು ಕುಲಗೆಟ್ಟು ಹೋಗಿರುವ ಸಮಾಜಕ್ಕೆ ಬೇಕೇ ಬೇಕು..ಅಂಥವರನ್ನು ನೆಚ್ಚಿಕೊಳ್ಳುವುದರಿಂದ ಬದಲಾವಣೆ-ಬೆಳವಣಿಗೆ ಎಲ್ಲವೂ ಸಾಧ್ಯ.

ಅಧಿಕಾರಕ್ಕಾಗಿ ರಾಜಿ ಮಾಡಿಕೊಳ್ಳದೆ ಅಂದುಕೊಂಡಿದ್ದನ್ನು ಸಾಧಿಸಿಯೇ ತೀರುವ,ಆ ಪ್ರಯತ್ನಕ್ಕೆ ತಡೆಯಾಗುವಂಥ ತೊಡಕುಗಳನ್ನೆಲ್ಲಾ ಹಿಮ್ಮೆಟ್ಟಿ ಸಾಗಿ ಗುರಿ ಕ್ರಮಿಸುವಂಥ ಕೆಲವೇ ಕೆಲವು ಖಡಕ್ IAS  ಗಳಲ್ಲಿ ರೋಹಿಣಿ ಸಿಂಧೂರಿ ಕೂಡ ಒಬ್ಬರು.ಕರ್ನಾಟಕ ಕಂಡ ಕೆಲವೇ ಕೆಲವು ದಕ್ಷ-ಪ್ರಾಮಾಣಿಕ ಎಲ್ಲಕ್ಕಿಂತ ಹೆಚ್ಚಾಗಿ ಸ್ಪುರದ್ರೂಪಿ ಅಧಿಕಾರಿಗಳಲ್ಲಿ ರೋಹಿಣಿ ಸಿಂಧೂರಿ ಮಂಚೂಣಿಯಲ್ಲಿ ನಿಲ್ಲುತ್ತಾರೆ.

ಇಂದಿನ ಮಂಗಳವಾರ,ದಸರಾದ ಹೊಸ್ತಿಲಲ್ಲಿರುವ ಮೈಸೂರಿಗೆ ಒಂದ್ರೀತಿ ಸಂಭ್ರಮದ ಹಾಗೂ ಸ್ಮರಣೀಯ ಸಂದರ್ಭ.ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಖ್ಯಾತಿಗಳಿಸಿರುವ ಐಎಸ್ ಅಧಿಕಾರಿಣಿ ರೋಹಿಣಿ ಸಿಂಧೂರಿ  ನಾಡದೇವತೆ ಚಾಮುಂಡೇಶ್ವರಿ ತಾಯಿ ನೆನೆದು ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.ಚಾಮುಂಡಿ ತಾಯಿಯ ಪ್ರತಿರೂಪ ಎನ್ನುವಂತೆ ಮೈಸೂರಿನಲ್ಲಿ ಪ್ರತಿಷ್ಟಾಪಿತರಾಗಿದ್ದಾರೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ಕೇವಲ ಒಂದು ತಿಂಗಳ ಹಿಂದೆಯಷ್ಟೇ ಶರತ್ ಮೈಸೂರು ಡಿಸಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಆದರೆ ಸಾಂಸ್ಕೃತಿಕ ನಗರಿಯಲ್ಲಿ ಕಳೆದ ಒಂದು ತಿಂಗಳಿನಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಲೆ ಇದೆ. ಈ ಹಿನ್ನೆಲೆಯಲ್ಲಿ ರೋಹಿಣಿ ಸಿಂಧೂರಿ ಸಾಂಸ್ಕೃತಿಕ ನಗರಿಯಲ್ಲಿ ಕರೋನಾ ಕಟ್ಟಿಹಾಕಲು ಪಣ ತೊಟ್ಟಿದ್ದಾರೆ.

ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವಿಯ ಆರ್ಶೀವಾದ ಪಡೆದ ರೋಹಿಣಿ ಸಿಂಧೂರಿ, ಮೈಸೂರು ನನಗೆ ಹೊಸದಲ್ಲ. ಮೈಸೂರಿನಲ್ಲೇ ಆಡಳಿತ ತರಬೇತಿ ಪಡೆದಿದ್ದೇನೆ ಎಂದರು.  ಮೊದಲಿಗೆ ನಮ್ಮ ಮುಂದೆ ಎರಡು ಗಂಭೀರ ವಿಚಾರಗಳಿವೆ. ಮೊದಲಿಗೆ ಬೆಂಗಳೂರು ನಂತರ ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.ಇದನ್ನೇ ಸವಾಲಾಗಿ ಸ್ವೀಕರಿಸಿ ಕೆಲಸ ಮಾಡುವುದಾಗಿ ರೋಹಿಣಿ ಹೇಳಿದ್ರು. 

ಈ ಹಿನ್ನೆಲೆಯಲ್ಲಿ ಮೈಸೂರಲ್ಲಿ ಕೊರೊನಾ ಟೆಸ್ಟಿಂಗ್ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ.  ಕರೋನಾ ಟೆಸ್ಟಿಂಗ್ ಹೆಚ್ಚಿಸುವ ಅಗತ್ಯವಿದೆ. ಇದಕ್ಕೆ ಮೈಸೂರಿನ  ಜನತೆ ಸಹಕಾರ ಬೇಕು. ಕೊರೊನಾ ಲಕ್ಷಣ ಕಂಡುಬಂದಲ್ಲಿ ತಕ್ಷಣವೇ ಟೆಸ್ಟಿಂಗ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡರು.

ಇನ್ನೂ ನಾಡ ಹಬ್ಬ ದಸರಾಗೆ ಈಗಾಗಲೇ ಸಿದ್ಧತೆ ಆರಂಭವಾಗಿದೆ. ಈ ಮೊದಲು ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ನಡೆದಾಗ ನಾನು ಹಾಸನ ಜಿಲ್ಲಾಧಿಕಾರಿಯಾಗಿದ್ದೆ. ಅಲ್ಲಿ  20-25  ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಆದರೆ ಇದು ನಾಡಹಬ್ಬ, ಅದರಲ್ಲೂ ಕರೋನಾ ವೇಳೆ ಸೂಕ್ಷ್ಮವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಈ ಎರಡು ವಿಚಾರದ ಬಗ್ಗೆ ಹೆಚ್ಚು ಗಮನಹರಿಸುತ್ತೇನೆ. ತುರ್ತಾಗಿ ಅಧಿಕಾರಿಗಳ ಸಭೆ ನಡೆಸುತ್ತೇನೆ ಎಂದರು.ರೋಹಿಣಿ ಸಿಂಧೂರಿ ಅವರ ವಿಷಯದಲ್ಲಿ ಅವರು ಕೊಟ್ಟ ಭರವಸೆಗಳನ್ನು ನಂಬಬಹುದು..ಇದಕ್ಕೆ  ಅವರು ಕೆಲಸ ಮಾಡಿದ ಜಿಲ್ಲೆ ಹಾಗು ಇಲಾಖೆಗಳಲ್ಲಿ ಕಾರ್ಯರೂಪಕ್ಕೆ ತಂದ ಪರಿಣಾಮಕಾರಿ ಕಾರ್ಯಯೋಜನೆಗಳೇ ಸಾಕ್ಷಿ.

ರೋಹಿಣಿ ಸಿಂಧೂರಿ ಹಿನ್ನಲೆ ಹಾಗೂ  ಸಾಧನೆ ಮೇಲೊಂದು ಝಲಕ್..!: ರೋಹಿಣಿ ಸಿಂಧೂರಿ, ಮೂಲತಃ ತೆಲಂಗಾಣದವರು. .ಮೈಸೂರು ಜಿಲ್ಲಾಧಿಕಾರಿಯಾಗುವುದಕ್ಕೂ ಮುನ್ನ ಬೆಂಗಳೂರು ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತೆಯಾಗಿ ಕಾರ್ಯ ನಿರ್ವಹಿಸಿದ್ದರು. ಹಾಸನ ಜಿಲ್ಲಾಧಿಕಾರಿಯಾಗಿಯೂ ಸೇವೆ ಸಲ್ಲಿಸಿರುವ ಇವರು,  ಜಗತ್ ಪ್ರಸಿದ್ಧ ಶ್ರವಣ ಬೆಳಗೊಳದ ಗೊಮಟೇಶ್ವರ ಮಹಾಮಸ್ತಕಾಭಿಷೇಕ ಯಶಸ್ವಿಯಾಗಿ ನಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೆಚ್.ಡಿ.ದೇವೇಗೌಡ ಕುಟುಂಬವನ್ನ ಎದುರುಹಾಕಿಕೊಂಡು ದಕ್ಷತೆ ಮೆರೆದಿದ್ದರು.

2011 ರಿಂದ 2012 ರವರೆಗೂ ತುಮಕೂರಿನ ಎಸಿಯಾಗಿ ಕರ್ತವ್ಯನಿರ್ವಹಿಸಿ, ನಗರಾಭಿವೃದ್ಧಿ ಇಲಾಖೆಯಲ್ಲಿಯೂ ಕಾರ್ಯನಿರ್ವಸಿದ್ದ ನಿರ್ವಹಣೆಯ ಅನುಭವ ಹೊಂದಿರುವ ರೋಹಿಣಿ ಸಿಂಧೂರಿ, ಅಜ್ಜನಗೊಂಡನಹಳ್ಳಿಯ 42 ಎಕರೆ ಕಾರ್ಪೊರೇಷನ್ ಜಾಗದಲ್ಲಿ ಗಣಕೀಕೃತ ತೆರಿಗೆ ಸಂಗ್ರಹ ಪದ್ಧತಿಯನ್ನು ಪರಿಚಯಿಸಿ ಶಬ್ಬಾಶ್ ಎನಿಸಿಕೊಂಡಿದ್ದರು.2015  ರಲ್ಲಿ ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ವೇಳೆ ಜಿಲ್ಲೆಯಲ್ಲಿ 1  ಲಕ್ಷ ಶೌಚಾಲಯ ನಿರ್ಮಿಸುವ ರೂವಾರಿಯಾಗುವ ಮೂಲಕ ರಾಜ್ಯದ ಮೊದಲ ಬಯಲು ಮುಕ್ತ ಶೌಚ ಜಿಲ್ಲೆ ಎಂಬ ಖ್ಯಾತಿಯನ್ನ ಸಕ್ಕರೆ ನಾಡಿಗೆ ತಂದುಕೊಟ್ಟಿದ್ದರು. 

ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನ ಕಂಡಿರುವ ರೋಹಿಣಿ ಸಿಂಧೂರಿ ಅವರನ್ನ ಡಮ್ಮಿ ಮಾಡಲು ಈಗಾಗಲೇ ಸಾಕಷ್ಟು ಪ್ರಯತ್ನಗಳು ನಡೆದಿದ್ವು. ಎಲ್ಲಾ ಪ್ರಯತ್ನಗಳನ್ನ ಮೆಟ್ಟಿ ಇದೀಗ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ರೋಹಿಣಿ ಸಿಂಧೂರಿ ಆಗಮಿಸಿರುವುದು ಹಲವು ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ನಡುಕ ಹುಟ್ಟಿಸಿದೆ. 

Spread the love

Related Articles

Leave a Reply

Your email address will not be published.

Back to top button
Flash News