BreakingCORONA VIRUSKANNADAFLASHNEWSFIGHTAGAINSTCORONAMoreScrollTop NewsUncategorizedಕ್ರೈಮ್ /ಕೋರ್ಟ್ದೇಶ-ವಿದೇಶರಾಜಕೀಯವಿಚಿತ್ರ-ವಿಶೇಷ

ಬಾಬ್ರಿ ಮಸೀದಿ ದ್ವಂಸ ಪೂರ್ವನಿಯೋಜಿತವಲ್ಲ-ಅನಿರೀಕ್ಷಿತ, ಅಸಂಭವ:ಅಡ್ವಾಣಿ,ಜೋಷಿ,ಸಿಂಗ್ ಉಮಾ,ಸಾಕ್ಷಿ ಖುಲಾಸೆ:ಪ್ರಚೋದನೆ ನೀಡದೆ ಕರಸೇವಕರನ್ನು ತಡೆದಿದ್ರು-ಹೆಚ್ಚಿನ ಅನಾಹುತ ತಪ್ಪಿಸಿದ್ರು 

ಉತ್ತರ ಪ್ರದೇಶ/ ಲಕ್ನೋ “ದೇಶಿಯ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಪ್ರಕರಣ ಬಾಬ್ರಿ ಮಸೀದಿ ಧ್ವಂಸ.ಹತ್ತಲವು ವರ್ಷಗಳವರೆಗೆ ನಡೆದ ವಾದ-ಪ್ರತಿವಾದವನ್ನು ಆಲಿಸಿ ಕಾಯ್ದಿರಿಸಿದ  ತೀರ್ಪನ್ನು   ಸಿಬಿಐ  ವಿಶೇಷ ನ್ಯಾಯಾಲಯ ಪ್ರಕಟಿಸಿದೆ.

ಈ ಕೇಸ್‌ನ ಪ್ರಮುಖ ಆರೋಪಿಗಳಾಗಿರುವ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ,ಮಾಜಿ ಕೇಂದ್ರ ಸಚಿವರಾದ , ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾ ಭಾರತಿ, ಸತೀಶ್ ಪ್ರಧಾನ್ ಮತ್ತು ಮಹಂತ್ ನೃತ್ಯ ಗೋಪಾಲ್ ದಾಸ್ ಸೇರಿ ಎಲ್ಲಾ 32 ಆರೋಪಿಗಳನ್ನು ನಿರ್ದೋಷಿಗಳೆಂದು ತೀರ್ಪಿತ್ತಿದೆ.

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಸ್‌.ಕೆ.ಯಾದವ್‌  2,300 ಪುಟಗಳ ತೀರ್ಪು  ಓದಿ ಹೇಳಿದರು. ಇನ್ನು ಘಟನೆ ನಡೆದಿರುವುದು ಪೂರ್ವ ನಿಯೋಜಿತ ಕೃತ್ಯದಿಂದ ಅಲ್ಲ ಬದಲಾಗಿ, ಅದೊಂದು ಆಕಸ್ಮಿಕವಾಗಿ ಸಂಭವಿಸಿದ ಅಸಂಭವ   ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಅಲ್ಲದೆ ಸ್ಥಳದಲ್ಲಿದ್ದ ಅಡ್ವಾಣಿ ಹಾಗೂ ಮುರಳಿ ಮನೋಹರ್‌ ಜೋಶಿ ಬಾಬ್ರಿ ಮಸೀದಿ ಧ್ವಂಸದ ವೇಳೆ ಕರಸೇವಕರನ್ನು ತಡೆದಿದ್ದರು.ಹಾಗಾಗಿ ಅವರನ್ನು ಘಟನೆಗೆ ಪ್ರಚೋದಿಸಿದರು ಎಂದು ಒಪ್ಪಲಾಗದು  ಎಂದೂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಘಟನೆಯ ವಿವರ: ಅಂದ್ಹಾಗೆ 1992ರಲ್ಲಿ ವಿವಿಧ ರಾಜ್ಯಗಳಿಂದ ಅಯೋಧ್ಯೆಗೆ ಆಗಮಿಸಿದ್ದ ಕರಸೇವಕರು ರಾಮ ಮಂದಿರವಿದ್ದ ಜಾಗದಲ್ಲಿ ಬಾಬರಿ ಮಸೀದಿ  ನಿರ್ಮಿಸಲಾಗಿದೆ ಎಂದು ಪ್ರತಿಪಾದಿಸಿದ್ದರು.ಇದರಿಂದ ವ್ಯಗ್ರಗೊಂಡಿದ್ದ ಅವರೆಲ್ಲರೂ ಡಿಸೆಂಬರ್‌ 6ರಂದು ಸ್ಥಳಕ್ಕೆ ಆಗಮಿಸಿ  ಮಸೀದಿಯನ್ನು ಧ್ವಂಸಗೊಳಿಸಿದರು ಎನ್ನಲಾಗಿದೆ.ಉತ್ತರ ಪ್ರದೇಶದ ಮುಖ್ಯಮಂತ್ರಿ ಬಿಜೆಪಿಯ ಕಲ್ಯಾಣ್‌ ಸಿಂಗ್ ಆಗಿದ್ದರಿಂದ ಇದಕ್ಕೆ ಅವರ ಸರ್ಕಾರ ಪ್ರಚೋದನೆ ನೀಡಿತ್ತೆನ್ನುವ ಆರೋಪವಿತ್ತು.

ಉತ್ತರ ಪ್ರದೇಶದ ಲಖನೌ ಮತ್ತು ರಾಯಬರೇಲಿಯಲ್ಲಿ ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಪಟ್ಟಂತೆ ಎರಡು ಪ್ರತ್ಯೇಕ ದೂರುಗಳು ದಾಖಲಾಗಿದ್ದವು. ಕರಸೇವಕರ ವಿರುದ್ಧ ಹಾಗೂ ಅಡ್ವಾಣಿ, ಜೋಶಿ ಹೀಗೆ ಪ್ರಮುಖ ನಾಯಕರ ವಿರುದ್ಧದ ಪ್ರತ್ಯೆಕ ದೂರುಗಳು ಅವಾಗಿದ್ದವು.

2017ರಲ್ಲಿ ಸುಪ್ರೀಂ ಕೋರ್ಟ್‌ ಈ ಎರಡೂ ದೂರುಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸುವಂತೆ ಆದೇಶಿಸಿತ್ತು. ಬಿಜೆಪಿ ನಾಯಕರ ವಿರುದ್ಧದ ಆರೋಪ ಕೈಬಿಡುವಂತೆ 2010ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನೂ ಸುಪ್ರೀಂ ಕೋರ್ಟ್‌ ಅಂದು ರದ್ದುಪಡಿಸಿತ್ತೆನ್ನುವುದು ಗಮನಿಸತಕ್ಕ ಸಂಗತಿ.

ಮೇಲ್ಕಂಡ ಎರಡು  ದೂರುಗಳ ಅನ್ವಯ ಸಿಬಿಐ 351 ಸಾಕ್ಷ್ಯ ಮತ್ತು 600 ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಿತ್ತು.ಪ್ರಕರಣದಲ್ಲಿ  48 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌‌ ಸಲ್ಲಿಸಲಾಗಿತ್ತು. 

17 ಮಂದಿ ವಿಚಾರಣೆ ಅವಧಿಯಲ್ಲಿಯೇ ನಿಧನ ಹೊಂದಿದ್ರು. 32 ಮಂದಿ ಮಾತ್ರ  ಉಳಿದಿದ್ದರು(ಎಲ್‌.ಕೆ.ಆಡ್ವಾಣಿ, ಡಾ.ಮುರಳಿ ಮನೋಹರ ಜೋಶಿ, ಉಮಾ ಭಾರತಿ, ಕಲ್ಯಾಣ್‌ ಸಿಂಗ್‌, ನೃತ್ಯ ಗೋಪಾಲ ದಾಸ್‌, ಸತೀಶ್‌ ಪ್ರಧಾನ್‌, ವಿನಯ್‌ ಕಟಿಯಾರ್‌, ಚಂಪತ್‌ ರಾಯ್‌, ಸಾಕ್ಷಿ ಮಹಾರಾಜ್‌, ಸಾಧ್ವಿ ರಿತಂಬರಾ, ಆಚಾರ್ಯ ಧರ್ಮೇಂದ್ರ ದೇವ್‌, ಜೈ ಭಗವಾನ್‌ ಗೋಯಲ್ ಈ ಕೇಸ್‌ನ ಪ್ರಮುಖರಾಗಿದ್ದಾರೆ.)48 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲಾಗಿತ್ತು.  

ಮೊದಲು ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ 2001ರಲ್ಲಿ ಗಂಭೀರ ಅಪರಾಧ ಪಿತೂರಿ ಆರೋಪವನ್ನು ಕೈಬಿಟ್ಟಿತ್ತು. 2010ರಲ್ಲಿಅಲಹಾಬಾದ್‌ ಹೈಕೋರ್ಟ್‌ ಕೂಡ ಈ ತೀರ್ಪನ್ನು ಎತ್ತಿಹಿಡಿದಿತ್ತು. ಆದರೆ ಕೆಲವು ಮಹತ್ವದ ಬೆಳವಣಿಗೆಯಲ್ಲಿ  2017ರಲ್ಲಿ ಸುಪ್ರೀಂ ಕೋರ್ಟ್‌ ಅವರ ವಿರುದ್ಧದ ಪಿತೂರಿ

ಆರೋಪವನ್ನು ಮರುಸ್ಥಾಪಿಸಿ ವಿಚಾರಣೆ ನಡೆಸುವಂತೆ ಆದೇಶಿಸಿತು.

ಆರೋಪಿಗಳು ಮಸೀದಿಯನ್ನು ಧ್ವಂಸಗೊಳಿಸಲು ಪಿತೂರಿ ನಡೆಸಿ, ಕರಸೇವಕರಿಗೆ ಪ್ರಚೋದಿಸಿದ್ದರು ಎಂದು ಸಿಬಿಐ ವಾದ ಮಂಡಿಸಿತ್ತು. ಈ ಆರೋಪವನ್ನು ತಳ್ಳಿ ಹಾಕಿದ್ದ ಆರೋಪಿಗಳು, ತಮ್ಮ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳಿಲ್ಲ. ತಮ್ಮ ವಿರುದ್ಧದ ದೋಷಾರೋಪಣೆ ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರ್ಕಾರದ ರಾಜಕೀಯ ಒಳಸಂಚು ಎಂದು ಪ್ರತಿವಾದ ಮಂಡಿಸಿದ್ದರಿಂದ ಪ್ರಕರಣದ ವಿಚಾರಣೆ ಮತ್ತೊಂದು ರೋಚಕ ತಿರುವು ಪಡೆದಿತ್ತು. 

ಬಹು ನಿರೀಕ್ಷಿತ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಹೊರಬೀಳುತ್ತಿದ್ದಂತೆ ಕೋರ್ಟ್ ನ ಹೊರಗೆ ಸಂಭ್ರಮದ ವಾತಾವರಣ ಮನೆ ಮಾಡಿತ್ತು.ವಿಜಯೋತ್ಸವ ಆಚರಿಸಲಾಯ್ತು.ವೃದ್ಧಾಪ್ಯದಲ್ಲೂ ಕೋರ್ಟ್ ಗೆ ಅಲೆಯಬೇಕಾದ ಸ್ಥಿತಿಯಲ್ಲಿದ್ದ  ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಸೇರಿ ಪ್ರಮುಖರು ತೀರ್ಪು ಹೊರಬೀಳುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಟ್ರು. ಧರ್ಮ ಸೂಕ್ಷ್ಮ ವಿಷಯವಾಗಿದ್ರಿಂದ ನ್ಯಾಯಾಲಯದ ಹೊರಗೆ ವಿಶೇಷ ಭದ್ರತೆ ಕಲ್ಪಿಸಲಾಗಿತ್ತು. 

Spread the love

Related Articles

Leave a Reply

Your email address will not be published.

Back to top button
Flash News