ಆಸ್ಪತ್ರೆಗಳಾದ್ವು..ಅಂಬುಲೆನ್ಸ್ ಆದ್ವು.. ಈಗ “ಪ್ಲಾಸ್ಮಾ ಏಜೆಂಟ್ಸ್” ದಂಧೆ :ಪ್ಲಾಸ್ಮಾ ಥೆರಪಿ ಹೆಸರಲ್ಲಿ ಮಕ್ಮಲ್ ಟೋಪಿ-ರಾಜಧಾನಿಯಲ್ಲಿ “ಫ್ಲಾಸ್ಮಾ ಫ್ರಾಡ್”ಆಕ್ಟೀವ್

0
ಡಾ.ವಿಶಾಲ್ ರಾವ್,ಅಸೋಸಿಯೇಟ್ ಡೀನ್, ಸೆಂಟರ್ ಫಾರ್ ಅಕಾಡೆಮಿಕ್ ಅಂಡ್ ರೀಸರ್ಚ್ ಸೆಂಟರ್,
ಡಾ.ವಿಶಾಲ್ ರಾವ್,ಅಸೋಸಿಯೇಟ್ ಡೀನ್, ಸೆಂಟರ್ ಫಾರ್ ಅಕಾಡೆಮಿಕ್ ಅಂಡ್ ರೀಸರ್ಚ್ ಸೆಂಟರ್,

ಬೆಂಗಳೂರು: ಕೊರೊನಾ ಸೋಂಕಿನಿಂದ ನೀವು ಬಳಲುತ್ತಿದ್ದು,ನಿಮಗೆ ಪ್ಲಾಸ್ಮಾ ಥೆರಪಿ ಮಾಡಿಸ್ಲಿಕ್ಕೆ ವೈದ್ಯರು ಸಲಹೆ ನೀಡಿ,ಸಹಾಯಹಸ್ತದ ನಿರೀಕ್ಷೆಯಲ್ಲಿದ್ದರೆ ಸ್ವಲ್ಪ ಜಾಗೃತೆ ಇರಲಿ..ನೀವು ಪ್ಲಾಸ್ಮಾ ದಾನ ಪಡೆದುಕೊಳ್ಳುವ ಆತುರದಲ್ಲಿ ನಿಮ್ಮನ್ನು ವಂಚಿಸುವ ಜಾಲ ನಿಮ್ಮ ಮನೆಯಂಗಳಕ್ಕೇನೆ ಬರಬಹುದು..ಪ್ಲಾಸ್ಮಾ ದಾನ ಕೊಡಿ ಸ್ತೇವೆಂದ್ಹೇಳಿ ಹಣ ಪಡೆದು ಹೋಗಬಹುದು…ಆ ನಂತರ ಹಣವೂ ಇಲ್ಲ..ಪ್ಲಾಸ್ಮಾನೂ ಇಲ್ಲದೇ ಹೋಗ ಬಹುದು..ಏಕೆಂದ್ರೆ ಅಂತದ್ದೊಂದು ವಂಚಕರ ಜಾಲ ಸಿಕ್ಕಾಪಟ್ಟೆ ಅಲರ್ಟ್ ಆಗಿದೆಯಂತೆ.ಸೋಂಕಿತರನ್ನು ಬುಟ್ಟಿಗೆ ಹಾಕಿಕೊಳ್ಳೊಕ್ಕೆ ದುರ್ಬೀನ್ ಹಿಡಿದು ಅಡ್ಡಾಡುತ್ತಿದೆಯಂತೆ.

ಹೌದು..ಇದು  ಸುಳ್ಳಲ್ಲ..ನಿಜ. ಪ್ಲಾಸ್ಮಾದಾನವನ್ನೇ ದಂಧೆಯಾಗಿಸಿಕೊಂಡಿರುವ ಟೀಮ್ ಗಳು ರಾಜಧಾನಿಯಲ್ಲಿ ಆಕ್ಟೀವ್ ಆಗಿದೆ. ನಿಮ್ಮ ಮನೆಯಲ್ಲಿ ಕೊರೊನಾ ಸೋಂಕಿತರಿದ್ದಾರಾ..ಅವರಿಗೆ ಪ್ಲಾಸ್ಮಾ ಥೆರಪಿ ಅವಶ್ಯಕತೆ ಇದೆಯಾ..ಪ್ಲಾಸ್ಮಾ ಥೆರಪಿ ನಾವ್ ಮಾಡಿಸ್ತೇವೆ ಎಂದು ಕೇಳಿಕೊಂಡು ಮನೆ ಬಾಗಿಲಿಗೆ ಬರುವ ಆ ಗುಂಪು,..ಹಣ ಹಣ ಪಡೆದು ಗಾಯಬ್ ಆಗ್ತಿವೆ.ಕಾಲ್ ಮಾಡಿದ್ರೆ ನಾಟ್ ರೀಚಬಲ್- ಸ್ವಿಚಾಫ್ ಎಂಬ ಮೆಸೇಜ್ ಬರುತ್ತಿದೆ. ನಮ್ಮ ನಡುವೆ ಕೊರೊನಾ ಸಂಕಷ್ಟದ ಸಮಯದಲ್ಲಿ ಎಂತೆಂಥಾ ಅಕ್ರಮ-ಹಗರಣಗಳು ನಡೆದೋದ್ವು. .ನಡೆಯುತ್ತಿವೆ. ಸೋಂಕಿತರು ಹಾಗೂ ಸಂಪರ್ಕಿತರನ್ನು ಸುಲಿಗೆ ಮಾಡುವ ವ್ಯವಸ್ಥಿತ ದಂಧೆ ನಾನಾ ರೀತಿ ನಡೆಯುತ್ತಿರುವ ಬೆನ್ನಲ್ಲೇ ಮತ್ತೊಂದು ಹೊಸ ದಂಧೆ ಆಕ್ಟೀವ್ ಆಗ್ಬಿಟ್ಟಿದೆ..ಅದೇ ಪ್ಲಾಸ್ಮಾ ಫ್ರಾಡ್.

ಕೊರೊನಾ ಸೋಂಕಿನಿಂದ ಗುಣಮುಖವಾದವರ ರಕ್ತದಲ್ಲಿನ ಪ್ಲಾಸ್ಮಾವನ್ನು ಸೋಂಕಲಿತರಿಗೆ ನೀಡುವುದರಿಂದ ಬೇಗ ಗುಣಮುಖವಾಗ್ತಾರೆನ್ನುವುದು ಈಗಾಗಲೇ ಸಾಬೀತಾಗಿದೆ.ಆ ರಕ್ತ ಕಣದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತೆ ಎನ್ನುವ ಕಾರಣಕ್ಕೇ ಸೋಂಕಿನಿಂದ ಗುಣಮುಖವಾದವರ ರಕ್ತಕ್ಕೆ ಹೆಚ್ಚಿನ ಡಿಮ್ಯಾಂಡ್ ಸೃಷ್ಟಿಯಾಗಿತ್ತು.ಸೋಂಕಿನಿಂದು ಗುಣಮುಖವಾದ ಕೆಲವ್ರು ಸ್ವಯಂಪ್ರೇರಿತವಾಗಿ ಪ್ಲಾಸ್ಮಾ ದಾನಕ್ಕೆ ಮುಂದಾದ್ರು.ಆದ್ರೆ ಇನ್ನು ಕೆಲವರು ಕೊರೊನಾ ಸಹವಾಸವೇ ಬೇಡ ಎಂದು ಅದರ ತಂಟೆಗೇನೆ ಹೋಗಲಿಲ್ಲ..ಹೀಗೆ ಮಾಡಿದವ್ರ ಪ್ರಮಾಣವೇ ಹೆಚ್ಚಾಗಿತ್ತು.

ಪ್ಲಾಸ್ಮಾ ದಾನ ಕಾನ್ಸೆಪ್ಟನ್ನು ಜಾರಿಗೊಳಿಸಿ ಅದಕ್ಕೆ ಹೆಚ್ಚೆಚ್ಚು ಪ್ರಚಾರ ನೀಡಿದ್ದೇ,ಸೋಂಕಿನಿಂದ ಗುಣಮುಖವಾದವರು ಸೋಂಕಿನಿಂದ ಬಳಲುತ್ತಿರುವವವರ ನೆರವಿಗೆ ಸ್ವಯಂಪ್ರೇರಿತವಾಗಿ ಮುಂದೆ ಬರಲಿ ಎಂದು..ಆದ್ರೆ ಈ ಅಭಿಯಾನಕ್ಕೆ ನಿರೀಕ್ಷಿತ ರೆಸ್ಪಾನ್ಸ್ ಬರಲಿಲ್ಲವಾದ್ದರಿಂದ ಕೊನೆಗೆ ಸರ್ಕಾರ ಯಾವ್ ಮಟ್ಟಕ್ಕೆ ಬಂದ್ ಬಿಟ್ಟಿತೆಂದ್ರೆ, ಪ್ಲಾಸ್ಮಾ ದಾನ ಮಾಡಿದವರಿಗೆ ಹಣ ಕೊಡ್ತೇವೆನ್ನುವ ಘೋಷಣೆ ಮಾಡ್ತುಆಗ ಕೆಲವರು ಹಣದ ಆಸೆಗೆ ಮುಂದ್ ಬಂದ್ರು.ಇನ್ನು ಕೆಲವ್ರು ನಿರ್ಲಿಪ್ತತೆ ಮುಂದುವರೆಸಿದ್ರು.

ಬೆಂಗಳೂರಿನಲ್ಲಿ ಕೆಲವು ಕಿಡಿಗೇಡಿಗಳ ಗುಂಪಿನಿಂದ  ಪ್ಲಾಸ್ಮಾ ದಾನವನ್ನೇ ದಂದೆ ಮಾಡಿಕೊಳ್ಳಲಾಗಿದೆ ಎಂಬ ಅಘಾತಕಾರಿ ಸಂಗತಿ ಹೊರಬಿದ್ದಿದೆ. ಪ್ಲಾಸ್ಮಾ ದಾನ ಅಭಿಯಾನದ ಉಸ್ತುವಾರಿ ಡಾ.ವಿಶಾಲ್ ಅವರೇ ಇಂತದ್ದೊಂದು ಆತಂಕ ವ್ಯಕ್ತಪಡಿಸಿದ್ದಾರೆ.ಪ್ಲಾಸ್ಮಾ ದಾನದ ನೆವದಲ್ಲಿ ನಡೆಯುತ್ತಿರುವ ದಂಧೆಯ ಬಗ್ಗೆಯೂ ಕೊರೊನಾ ಕಾರ್ಯಪಡೆಯ ಗಮನ ಸೆಳೆದಿದ್ದಾರೆ.ಪೊಲೀಸ್ ಇಲಾಖೆ ಇದರ ಮೇಲೆ ನಿಗಾ ಇಡುವಂತೆಯೂ ಮನವಿ ಮಾಡಿದ್ದಾರೆ. ಕೊರೊನಾ ಸೋಂಕಿಗೆ ಒಳಗಾದವರ ಸಂಪರ್ಕ ಸಂಖ್ಯೆಯನ್ನು ಪಡೆಯುವ ಈ ಕಿಡಿಗೇಡಿಗಳು ಅವರನ್ನು ಸಂಪರ್ಕಿಸಿ,ಪ್ಲಾಸ್ಮಾ ಚಿಕಿತ್ಸೆಯನ್ನು ರಿಯಾಯತಿ ದರದಲ್ಲಿ ಕೊಡಿಸುವ ಭರವಸೆ ಕೊಡ್ತಿವೆಯಂತೆ.ಕೊರೊನಾದ ಬಗ್ಗೆ ಭಯ ಮೂಡಿಸುವ ಈ ಗುಂಪುಗಳು ಪ್ಲಾಸ್ಮಾ ಚಿಕಿತ್ಸೆಯನ್ನು ಪಡೆದುಕೊಳ್ಳುವಂತ ಅನಿವಾರ್ಯ ಸ್ಥಿತಿಗೆ ಸೋಂಕಿತರನ್ನು ತಂದುನಿಲ್ಲಿಸುತ್ತವೆ.ಜೀವ ಉಳಿದರೆ ಸಾಕೆನ್ನುವ ಮನಸ್ಥಿತಿಗೆ ತಲುಪೋ ಸೋಂಕಿತರು ಅದಕ್ಕಾಗಿ ಹಣ ಖರ್ಚು ಮಾಡುವ ನಿರ್ದಾರಕ್ಕೆ ಬರುತ್ತಾರೆ.ಅವರಿಂದ ಅಡ್ವಾನ್ಸಾಗಿ ಹಣ ಪಡೆದು ತೆರಳುತ್ತಾರಂತೆ.

ಹಾಗೆ ಅಡ್ವಾನ್ಸಾಗಿ ಹಣ ಪಡೆದು ಹೋದವರು ಒಂದೆರೆಡು ದಿನ ಮಾತ್ರ ಕಾಂಟ್ಯಾಕ್ಟ್ ನಲ್ಲಿರುವಂತೆ ವರ್ತಿಸುತ್ತಾರೆ.ನಂಬಿಕೆ ಉಳಿಸಿಕೊಳ್ಳುವ ರೀತಿಯ ನಾಟಕವಾಡ್ತಾರೆ.ಆದ್ರೆ ಆಮೇಲೆ ಆ ನಂಬರ್ಸ್ ನಾಟ್ ರೀಚಬಲ್ ಅಥ್ವಾ ಸ್ವಿಚಾಫ್..ಹಣ ಕೊಟ್ಟವರು ಮೂರ್ಖರಾಗ್ತಿದ್ದಾರೆ.ಹಣ ಪಡೆದು ಗಾಯಬ್ ಆದವ್ರು ಇಂತದ್ದೇ ಮತ್ತಷ್ಟು ಸೋಂಕಿತರ ಬೇಟೆಗೆ ಸಿದ್ಧವಾಗ್ತಿದ್ದಾರಂತೆ ಎನ್ನುತ್ತಾರೆ. ಸ್ಮಾ ದಾನದ ದಂಧೆಗಿಳಿದವರು ಸಾಮಾನ್ಯವಾಗಿ ಹಣವಂತರನ್ನೇ ಟಾರ್ಗೆಟ್ ಮಾಡ್ತಾರಂತೆ.ಬಡ ಹಾಗು ಮದ್ಯಮ ವರ್ಗದ ಸೋಂಕಿತರಿಂದ ಲಾಭ ಕಡ್ಮೆ.ಅಲ್ಲದೇ ಪ್ರಶ್ನೆ ಮಾಡುವುದು ಹೆಚ್ಚೆನ್ನುವ ಕಾರಣಕ್ಕೆ ಹಣ ಹೋದ್ರೂ ಪರ್ವಾಗಿಲ್ಲ,ಜೀವ ಉಳಿದರೇ ಸಾಕಪ್ಪ ಎಂದು ಆಲೋಚಿಸುವ ಶ್ರೀಮಂತರನ್ನೇ ಗುರಿಯಾಗಿಸಿಕೊಂಡು ದಂಧೆ ನಡೆಸುತ್ತಿದ್ದಾರೆನ್ನುವುದು ಡಾ.ವಿಶಾಲ ರಾವ್ ಆರೋಪ.

ಪ್ಲಾಸ್ಮಾ ದಾನದ ಕನ್ವಲ್ಸೆಂಟ್ ಪ್ಲಾಸ್ಮಾ ಥೆರಪಿ(CPT) ಹೆಚ್ಚೆಚ್ಚು ಪ್ರಚುರಕ್ಕೆ ಬರುತ್ತಿದ್ದಂತೆ,ಹೆಚ್ಚು ಎಫೆಕ್ಟಿವ್ ಚಿಕಿತ್ಸಾ ವಿಧಾನ  ಎನ್ನುವುದು ಮೆಡಿಕಲಿ ಪ್ರೂವ್ ಆದ್ಮೇಲಂತೂ ಇದನ್ನೇ ಲಾಭದ ಗುರಿಯಾಗಿಸಿಕೊಂಡು ಸೋಂಕಿತರನನ್ನು ಟಾರ್ಗೆಟ್ ಮಾಡ್ಕಂಡು ಹಣ ಸುಲಿಗೆ ಮಾಡೋದನ್ನು ಅನೇಕರು ಕರಗತ ಮಾಡಿಕೊಂಡಿದ್ದಾರಂತೆ. ಬಿಬಿಎಂಪಿ ಅಥವಾ ಆಸ್ಪತ್ರೆಗಳವರ ಸೂಚನೆ ಮೇರೆಗೆ ಬಂದಿದ್ದೇವೆ ಎಂದು ಮನೆ ಬಾಗಿಲಿಗೆ ಬಂದು ಮಾತಿನ ಮೋಡಿಯಲ್ಲಿ ನಂಬಿಸಿ ಮೋಸ ಮಾಡುವವರ ಬಗ್ಗೆ ಬಿಬಿಎಂಪಿಯೂ ಗಮನ ಹರಿಸಬೇಕಿದೆ.ಇಲ್ಲವಾದಲ್ಲಿ ದಂಧೆಕೋರರ ಕೈಗೆ ಸಿಲುಕಿ ಹಣ ಕಳೆದುಕೊಳ್ಳೋರ ಸಂಖ್ಯೆ ಹೆಎಚ್ಚಾಗುತ್ತೆ.ಇದು ಎಲ್ಲಿಗೆ ಹೋಗಿ ತಲುಪುತ್ತೆ ಎಂದ್ರೆ ಪ್ಲಾಸ್ಮಾ ಥೆರಪಿಯ ಮೇಲೂ ಮಾರಕ ಪರಿಣಾಮ ಬೀರುತ್ತೆ.ಪ್ಲಾಸ್ಮಾ ಥೆರಪಿ ಬಗ್ಗೆ ವೈದ್ಯರು-ಬಿಬಿಎಂಪಿ ಮನವೊಲಿಸಿದ್ರೂ ಬೇಡ ಎನ್ನುವ ಸನ್ನಿವೇಶವನ್ನೂ ಸೃಷ್ಟಿಸಬಹುದು..ಇದಕ್ಕೆ  ಪೊಲೀಸ್ ಇಲಾಖೆ ಅವಕಾಶ ಕೊಡಬಾರದು ಅಷ್ಟೇ.. 

Spread the love
Leave A Reply

Your email address will not be published.

Flash News