MoreScrollTop NewsUncategorizedವಿಚಿತ್ರ-ವಿಶೇಷಸಿನೆಮಾ ಹಂಗಾಮ

ಅವತ್ತು 1990 ರ ಸೆಪ್ಟೆಂಬರ್ 29 ರ ರಾತ್ರಿ-ಮುಂಜಾನೆ ನಾಲ್ಕರ ಸಮಯ,ಇನ್ನೂ ಮುಸುಕು ಕತ್ತಲು. -ಆ ಘಟನೆ ನಡೆದು ಇವತ್ತಿಗೆ ಬರೋಬ್ಬರಿ 29 ವರ್ಷಗಳು…

ಇವತ್ತು ಬೆಳಿಗ್ಗೆ ಏಳ್ತಾನೇ ಅದೇನೋ ವಿಷಾದ !

ನಿಜ, ಇನ್ನಿಲ್ಲದಂತೆ ಕಾಡುತ್ತಿರೋ ಶಂಕರ್ ನಾಗ್’ರ ನೆನಪು.
ಆ ಮಿಂಚಿನನಟ ನಮ್ಮನ್ನಗಲಿ ಇವತ್ತಿಗೆ ಬರೋಬ್ಬರಿ 29
ವರ್ಷಗಳು.

ಅವತ್ತು 1990 ರ ಸೆಪ್ಟೆಂಬರ್ 29 ರ ರಾತ್ರಿ.

ಮಾರನೇ ದಿನ ತಮ್ಮದೇ ಹೋಂ ಬ್ಯಾನರಿನ ಹೊಸ ಸಿನೆಮಾ
‘ಜೋಕುಮಾರಸ್ವಾಮಿ’ಯ ಮುಹೂರ್ತವು ಬಾಗಲಕೋಟೆ
ಬಳಿ ಲೋಕಾಪುರದಲ್ಲಿತ್ತು, ಶಂಕರ್ ನಾಗ್ ಅರ್ಧರಾತ್ರಿಯಲ್ಲಿ
ಪತ್ನಿ ಅರುಂಧತಿಯವರನ್ನು ಎಬ್ಬಿಸಿಕೊಂಡು ಮಗಳು ಕಾವ್ಯ
ಜೊತೆ ಬೆಂಗಳೂರಿನಿಂದ ಕಾರಿನಲ್ಲಿ ಹೊರಟೇಬಿಟ್ಟರು,ಕಾರಿಗೆ
ಸಾರಥಿಯಾಗಿ ಡ್ರೈವರ್ ಲಿಂಗಯ್ಯ ಜೊತೆಗಿದ್ದರು.
ಕಾರಿನಲ್ಲಿ ಮುಂದೆ ಶಂಕರ್ & ಚಾಲಕ ಲಿಂಗಯ್ಯ,‌ ಹಿಂದೆ
ಅರುಂದತಿ ಮತ್ತು ಮಗಳು ಕಾವ್ಯ ಇದ್ದರು.

ಮುಂಜಾನೆ ನಾಲ್ಕರ ಸಮಯ – ಇನ್ನೂ ಮುಸುಕು ಕತ್ತಲು.
‘ಲಿಂಗಯ್ಯ, ಹೀಗೆ ಹೋದರೆ ಲೇಟಾಗುತ್ತೆ,ಬಿಡಿ ನಾನೇ Drive
ಮಾಡ್ತೀನಿ ಅಂತ ಶಂಕರ್ ನಾಗ್ ತಾವೇ ಕಾರಿನ ಸ್ಟೇರಿಂಗ್
ಕೈಗೆತ್ತಿಕೊಂಡು ಕಾರಿನ ವೇಗ ಹೆಚ್ಚಿಸಿದರು.

Light Visibility.ತುಂಬಾ ಕಡಿಮೆಯಿತ್ತು.ದಾವಣಗೆರೆ ಬಳಿ ಆನಗೋಡು ಬಳಿ
ಎರಡು ದಿನಗಳಿಂದ ಕೆಟ್ಟುನಿಂತಿದ್ದ ಲಾರಿಯು ತೀರಾ ಹತ್ತಿರಕ್ಕೆ
ಬರೋವರೆಗೂ ಕಾಣಿಸಲಿಲ್ಲ, ಅದಕ್ಕೆ ಗುದ್ದುವುದನ್ನು
ತಪ್ಪಿಸಲು ಶಂಕರ್ ಕಾರನ್ನು ಬಲಕ್ಕೆ ತಿರುಗಿಸಿದರು, ಎದುರಿಗೆ
ವೇಗವಾಗಿ ಬಂದ ಇನ್ನೊಂದು ಲಾರಿ ಕಾರಿಗೆ ಅಪ್ಪಳಿಸಿತು.

ಅಪ್ಪಳಿಸಿದ ವೇಗ ಎಷ್ಟಿತ್ತೆಂದರೆ – ಶಂಕರ್ ನಾಗ್’ರ ತಲೆಯು
ಕತ್ತರಿಸಲ್ಪಟ್ಟಿತ್ತು. ಶಂಕರ್ ಮತ್ತು ಲಿಂಗಯ್ಯ ಸ್ಥಳದಲ್ಲೇ
ಸತ್ತರೆ ಪತ್ನಿ ಅರುಂದತಿಗೆ ಮೈತುಂಬಾ ಗಾಯಗಳಾಗಿ ಪ್ರಜ್ಞೆ
ಕಳೆದುಕೊಂಡರು, ಆಶ್ಚರ್ಯವೆಂದರೆ ಪವಾಡ ಸದೃಶ್ಯವಾಗಿ
ಪುಟ್ಟ ಗಾಯದೊಂದಿಗೆ ಪಾರಾಗಿಬಿಟ್ಟ ಮಗಳು ಕಾವ್ಯಳೇ
ಅಲ್ಲಿ ಸೇರಿಕೊಂಡ ಜನರಿಗೆ ಹೇಳಿದ್ದು – ಇದು ನಮ್ಮಪ್ಪ
ಶಂಕರ್ ನಾಗ್, ಇದು ಅಮ್ಮ ಅರುಂದತಿ, ಇದು ಲಿಂಗಯ್ಯ
ಅಂಕಲ್ ಅಂತ.

ಈ ಸುದ್ಧಿಯನ್ನು ಕೇಳಿ ಇಡೀ ಕರ್ನಾಟಕಕ್ಕೆ
ಕರ್ನಾಟಕವೇ ಕಣ್ಣೀರಿಟ್ಟಿತ್ತು. ನಾವೆಲ್ಲಾ ಒಬ್ಬ ಹೃದಯವಂತ
ಕಲಾವಿದನನ್ನು ಕಳೆದುಕೊಂಡೆವು. ಅಭಿಮಾನಿಗಳು ಒಬ್ಬ
ಮಿಂಚಿನ ನಟನನ್ನು ಕಳೆದುಕೊಂಡರು.ಅನಂತ್ ತಮ್ಮನನ್ನು
ಕಳೆದುಕೊಂಡರು, ಅರುಂದತಿ ಪತಿಯನ್ನು ಕಳೆದುಕೊಂಡರು
ಪುಟ್ಟ ಮಗಳು ಕಾವ್ಯಳಿಗೆ ಪಪ್ಪ ಮಿಸ್ಸಾಗಿದ್ದರು. ಕನಸಿನ
ಜೋಕುಮಾರಸ್ವಾಮಿ ಅನಾಥನಾಗಿದ್ದ !

ಬೆಳ್ಳಂಬೆಳಗ್ಗೆ ಅನಂತ್ ನಾಗ್ ಮನೆ ಫೋನ್ ರಿಂಗಣಿಸಿತು
‘ಸಾರ್, ನಿಮ್ ತಮ್ಮ ಶಂಕರ್ ನಾಗ್ ಹೋಗಿಬಿಟ್ರು’
‘ಬೋಳಿ ಮಗನೆ, ಬೆಳ್ -ಬೆಳಿಗ್ಗೆ ನಿಂಗೆ ತಮಾಷೆ ಮಾಡಲು
ಬೇರೆ ಯಾರು ಸಿಗಲಿಲ್ವಾ ಇಡು ಫೋನು’ಆದರೆ ಸತ್ಯ ತಿಳಿದು

ಜೀರ್ಣಿಸಿಕೊಳ್ಳಲಾಗದೆ ಅನಂತ್ ನಾಗ್
ಎದೆಯೊಡೆದುಕೊಂಡು ಅತ್ತರು.

ನಾನು ಅವನನ್ನು ಮುಂಬಯಿಂದ ಕರೆದುಕೊಂಡು ಬರಲಿಲ್ಲ
ಅಂದಿದ್ದರೆ ಬಹುಶಃ ಅಲ್ಲಿಯೇ ಬದುಕಿರುತ್ತಿದ್ದನೇನೋ ?
ಅಂತ ಗಿರೀಶ್ ಕಾರ್ನಾಡ್ ಬಿಕ್ಕಿ ಬಿಕ್ಕಿ ಅತ್ತರು.ಮರಣೋತ್ತರ
ಪರೀಕ್ಷೆ ಮುಗಿಸಿ ಶರೀರ ಬೆಂಗಳೂರಿಗೆ ಬಂದಾಗ ಮದ್ಯಾಹ್ನ.
ಡಾ.ರಾಜ್ ಕುಮಾರ್, ಅಂಬಿ, ವಿಷ್ಣು ಸೇರಿದಂತೆ ಚಿತ್ರರಂಗದ
ಎಲ್ಲ ಗಣ್ಯರು,ರಾಜಕಾರಣಿಗಳು,ಲಕ್ಷಾಂತರ ಅಭಿಮಾನಿಗಳು
ಶಂಕರ್ ನಾಗ್’ರ ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟರು.
ಮೆರವಣಿಗೆಯಲ್ಲಿ ಹರಿಶ್ಚಂದ್ರ ಘಾಟಿವರೆಗೆ ಸಾಗಿದ ಶಂಕರನ
ಚಿತೆಗೆ ಅಣ್ಣ ಅನಂತ್ ಅಗ್ನಿ ಸ್ಪರ್ಶ ಮಾಡುತ್ತಿದ್ದಂತೆ ನಮ್ಮೆಲ್ಲರ
ಮಿಂಚಿನ ನಟ ಪಂಚಭೂತಗಳಲ್ಲಿ ಲೀನವಾದರು.

ಆದರೆ ಶಂಕರ್ ಸಾಂಗ್ಲಿಯಾನನಾಗಿ, ಸಿ.ಬಿ.ಐ ಶಂಕರ್’ನಾಗಿ,
ಆಟೋರಾಜನಾಗಿ ಇವತ್ತಿಗೂನಮ್ಮೆದುರು ಕಾಣಿಸಿಕೊಳ್ತಾನೇ
ಇರ್ತಾರೆ, ಸಾವಿರಾರು ಆಟೋಗಳ ಹಿಂದೆ ನಗ್ತಾನೇ ಇರ್ತಾರೆ.
ಅವರ ಹಾಡು ಕೇಳ್ತಾನೇ ಇರುತ್ತೆ – ಕೇಳದೆ ನಿಮಗೀಗಾ..!!   

ಗೊರೂರು ನಾಗ

Spread the love

Related Articles

Leave a Reply

Your email address will not be published.

Back to top button
Flash News