BreakingCORONA VIRUSKANNADAFLASHNEWSFIGHTAGAINSTCORONAMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆರಾಜಕೀಯರಾಜ್ಯ-ರಾಜಧಾನಿ

ಶಿಸ್ತಿನ ಬಿಜೆಪಿ ಪಕ್ಷದಲ್ಲಿ ಕಿಡ್ನ್ಯಾಪರ್ಸ್..ನಿವೃತ್ತ ತಹಸೀಲ್ದಾರ್ ಪುತ್ರನ ಕಿಡ್ನ್ಯಾಪ್  ಕೇಸ್ ನಲ್ಲಿ  MLA ವಿಶ್ವನಾಥ್ ಬೆಂಬಲಿಗ ಮೋಹನ್ ಅರೆಸ್ಟ್.. 

ಬೆಂಗಳೂರು:ನಮ್ಮದು  ಶಿಸ್ತುಬದ್ಧ ಹಾಗೂ ಸಿದ್ಧಾಂತವಾದಿ ಪಕ್ಷ ಎಂದು ಘೋಷಿಸಿಕೊಳ್ಳುತ್ತೆ  ಬಿಜೆಪಿ.ಅಕ್ರಮ ಹಾಗೂ ಕಾನೂನುಬಾಹೀರ ಕೃತ್ಯಗಳಿಗಾಗ್ಲಿ,ಅದನ್ನು ಎಸಗುವಂಥವರಿಗಾಗಲಿ  ತಮ್ಮ ಪಕ್ಷದಲ್ಲಿ ಜಾಗವೇ ಇಲ್ಲ ಎಂದು ಘಂಟಾಘೋಷವಾಗಿ ಘೋಷಿಸಿಕೊಳ್ಳುತ್ತೆ.ಆದ್ರೆ ಕೆಲವೊಂದು ಸನ್ನಿವೇಶಗಳು ಪಕ್ಷದ ಮುಖಂಡರನ್ನು ಯಾವ್ ಮಟ್ಟದಲ್ಲಿ ಮುಜುಗರಕ್ಕೀಡುಮಾಡ್ತವೆ ಎಂದ್ರೆ ವಿರೋಧಿಸ್ಲಿಕ್ಕೂ ಆಗದೆ,ಸಮರ್ಥಿಸಿಕೊಳ್ಳಕ್ಕೂ ಆಗದೆ ಬಿಸಿ ತುಪ್ಪದಂತಾಗುತ್ತೆ.ಇದೀಗ ಬಿಜೆಪಿ ಮುಖಂಡರಿಗೆ ಅಂತದ್ದೇ ಸಂದರ್ಭ-ಸನ್ನಿವೇಶ ಸೃಷ್ಟಿಯಾಗಿದೆ.ಅಂದ್ಹಾಗೆ ಅಂತದ್ದೊಂದು ಇಕ್ಕಟ್ಟಿಗೆ ಸಿಲುಕಿರೋದು ಯಲಹಂಕದ ಬಿಜೆಪಿ ಶಾಸಕ ಎಸ್.ಆರ್,ವಿಶ್ವನಾಥ್.

ಬಿಜೆಪಿ ಕೊಂಚ,ತನ್ನ ಕಾರ್ಯಕರ್ತರು ಹಾಗೂ ಮುಖಂಡರೆಂದು ಹೇಳಿಕೊಂಡು ಫೋಜ್ ಕೊಡುವ  ಕೆಲ ನಟೋರಿಯಸ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.ಇಲ್ಲವಾದಲ್ಲಿ ಅಂಥವ್ರಿಂದ್ಲೇ ದೊಡ್ಡಮಟ್ಟದ ಮುಜುಗರಕ್ಕೆ ಸಿಲುಕಬೇಕಾದೀತು.. ಏಕೆಂದರೆ  ಅಂತಹದೊಂದು ಸನ್ನಿವೇಶ ಬಿಜೆಪಿಗೆ ಸೃಷ್ಟಿಯಾಗಿದೆ.

ಯಲಹಂಕದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಬೆಂಬಲಿಗ ಎಂದು ಹೇಳಿಕೊಂಡು ಅವರ ಜೊತೆ ನಾನಾ ಭಂಗಿಗಳಲ್ಲಿ  ತುಂಬಾ ಆತ್ಮೀಯನಂತೆ ಫೋಜು ಕೊಟ್ಟುಕೊಂಡಿದ್ದ ಯುವ ಮುಖಂಡನೊಬ್ಬ ಇವತ್ತು ಕಿಡ್‌ನ್ಯಾಪ್ ಕೇಸಿನಲ್ಲಿ ಗ್ಯಾಂಗ್ ಸಮೇತ  ಅಂದರ್ ಆಗಿದ್ದಾನೆ! ಅಂದ್ಹಾಗೆ ಆತನೇ ಘೋಷಿಸಿಕೊಂಡಂತೆ ಆತ ಬಿಜೆಪಿ ಯುವಮುಖಂಡ.

ನಿವೃತ್ತ ತಹಸೀಲ್ದಾರ್ ನಾಗರಾಜ್ ಎನ್ನುವವರ ಮಗ ನವೀನ್ ಎಂಬಾತನನ್ನು ಕಳೆದ ನಾಲ್ಕು ದಿನಗಳ ಹಿಂದೆ ತಿಲಕ್‌ನಗರದ ಪೆಟ್ರೋಲ್ ಬಂಕ್ ಹತ್ತಿರ ಕರೆಸಿಕೊಂಡು ಮೋಹನ್ ಅಲಿಯಾಸ್ 23 ಅಲಿಯಾಸ್ ಕರಿಯಾ ಕಿಡ್ನ್ಯಾಪ್ ಮಾಡಿತ್ತು. ಇವನ ಕೃತ್ಯಕ್ಕೆ ನವ್ಯಂತ್, ಜೋಸೆಫ್, ಭರತ್, ರವಿಕಿರಣ್ ಹಾಗೂ ರಾಜು ಎನ್ನೋ ನಟೋರಿಯಸ್  ಗಳು ಸಾಥ್ ಕೊಟ್ಟಿದ್ರು.ಈ ನಟೋರಿಯಸ್ ಕಿಡ್‌ನ್ಯಾಪರ್ಸ್ ವಿರುದ್ಧ ನಾಗರಾಜ್ ಅವರು ಕೊಟ್ಟ ದೂರಿನ ಅನ್ವಯ ತಿಲಕನಗರ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿತ್ತು.

ನಿವೃತ್ತ ತಹಸೀಲ್ದಾರ್ ನಾಗರಾಜ್ ಅವರ ಮಗ ನವೀನ್‌ನನ್ನ ಕಿಡ್‌ನ್ಯಾಪ್ ಮಾಡಿ ಮಂಡ್ಯದ ನಾಗಮಂಗಲ ವ್ಯಾಪ್ತಿಗೆ ಹೊತ್ತೊಯ್ದು ಅಲ್ಲಿನ ನಿಶಾಚರ ಪ್ರದೇಶವೊಂದರ ಔಟ್ ಹೌಸ್ ನಲ್ಲಿ  ಅಡಗಿಸಿಟ್ಟಿದ್ದ ಮೋಹನ್ ಅಲಿಯಾಸ್ 23 ಅಲಿಯಾಸ್ ಕರಿಯಾ ಅಂಡ್ ಗ್ಯಾಂಗ್ ನವೀನ್ ಮೂಲಕ ತಂದೆಗೆ ಫೋನಾಯಿಸಿ 30  ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿತ್ತಂತೆ. ಇದಕ್ಕೆ ಬೆದರಿದ ತಂದೆ ಅಡ್ವಾನ್ಸ್ ರೂಪದಲ್ಲಿ 2-3  ಲಕ್ಷ ಹಣವನ್ನು ಗೂಗಲ್ ಪೇ ಮಾಡಿದ್ದರಂತೆ. ಅಷ್ಟು ಹಣವನ್ನು ಕುಡಿದು, ತಿಂದು ಖರ್ಚು ಮಾಡಿದ ಮಹೇಶ್ ಅಂಡ್ ಗ್ಯಾಂಗ್ ಉಳಿದ ಹಣಕ್ಕೆ ಮಗನ ಮೂಲಕ ಮತ್ತೆ ಡಿಮ್ಯಾಂಡ್ ಇಟ್ಟಿದೆ.ಇಲ್ಲವಾದ್ರೆ ಮಗನನ್ನು ಮುಗಿಸುವುದಾಗಿ ಎಚ್ಚರಿಸಿತ್ತಂತೆ.

ಮಗನ ಜೀವಕ್ಕಾಗಿ ಕಿಡ್‌ನ್ಯಾಪರ್ಸ್‌ಗೆ ಹೆದರಿದ ತಂದೆ ಶೀಘ್ರವೇ ಹಣವನ್ನು ಕಳುಹಿಸಿಕೊಡುವುದಾಗಿ ತಿಳಿಸಿ ಮತ್ತೆ ಒಂದಷ್ಟು ಹಣವನ್ನು ಮೊಬೈಲ್‌ನಲ್ಲಿ ವರ್ಗಾಯಿಸಿದ್ದಾರೆ. ಈ ಹಣದಲ್ಲಿ ಮತ್ತೆ ಪಾರ್ಟಿ ಮಾಡಿ ಚಿತ್ತಾಗಿದೆ ತಂಡ. ಇದೇ ಸಂದರ್ಭವನ್ನು ನೋಡಿಕೊಂಡು ಅಲ್ಲಿಂದ ಎಸ್ಕೇಪ್ ಆದ ನವೀನ್ ಸ್ವಲ್ಪ ದೂರಕ್ಕೆ ಬಂದು ತಂದೆಗೆ ಫೋನಾಯಿಸಿದ್ದಾನೆ. ತಿಲಕ್‌ನಗರ ಪೊಲೀಸರನ್ನು ಕಾಂಟ್ಯಾಕ್ಟ್ ಮಾಡಿ ಅಲ್ಲಿಂದ ನಾಗಮಂಗಲ ಪೊಲೀಸರ ಜೊತೆ ಸಂಪರ್ಕ ಪಡೆದ ನಂತರ ಕಿಡ್‌ನ್ಯಾಪರ್ಸ್‌ಗಳ ಅರೆಸ್ಟ್‌ಗೆ ತಂಡ ರಚಿಸಲಾಗಿದೆ.

ಕಿಡ್‌ನ್ಯಾಪ್ ಆದ ನವೀನ್ ಕೊಟ್ಟ ಸುಳಿವಿನ ಮೇರೆಗೆ ಪಿಎಸ್‌ಐ ರವಿಕಿರಣ್ ನೇತೃತ್ವದ ತಂಡ ಕಿಡ್‌ನ್ಯಾಪರ್ಸ್‌ಗಳು ಉಳಿದುಕೊಂಡಿದ್ದ ಎಸ್‌ಎಲ್‌ಎನ್ ವಸತಿಗೃಹದ ಮೇಲೆ ದಾಳಿ ಮಾಡಿ ಮೋಹನ್ ಸೇರಿದಂತೆ ಆತನ ಇಡೀ ತಂಡವನ್ನು ಬಂಧಿಸಿ ಜೈಲಿಗಟ್ಟಿದೆ.

ಅಂದ ಹಾಗೆ ಬಂಧಿತನಾದ ಮೋಹನ್ ಅಲಿಯಾಸ್ 23 ಅಲಿಯಾಸ್ ಕರಿಯಾ  ಬಿಜೆಪಿಯ ಯುವ ಮುಖಂಡ ಎಂದು ಫೋಸ್ ಕೊಡುತ್ತಾ ಅಡ್ಡಾಡುತ್ತಿದ್ದ. ಶಾಸಕ ವಿಶ್ವನಾಥ್ ಬಲಗೈ ಭಂಟ ಎಂದು ಬಿಂಬಿಸಿಕೊಂಡು ಅದನ್ನೇ ಟ್ರಂಪ್ ಕಾರ್ಡ್ ಆಗಿ ಬಳಸಿಕೊಂಡು ಅವರಿವರನ್ನು ಬೆದರಿಸಿ ಹಣ ಮಾಡುತ್ತಿದ್ದ ಎನ್ನುವ ಆರೋಪಗಳಿವೆ. ಇದು ಶಾಸಕ ವಿಶ್ವನಾಥ್ ಅವರಿಗೆ ಗೊತ್ತಿತ್ತೋ, ಅಥವಾ ಗೊತ್ತಿದ್ದರೂ ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲವೋ ಗೊತ್ತಿಲ್ಲ. ಆದರೆ, ಕಿಡ್‌ನ್ಯಾಪ್ ಪ್ರಕರಣದ ಸಂದರ್ಭದಲ್ಲಿ ಆತನಿಂದ ವಶಪಡಿಸಿಕೊಂಡ ಮೊಬೈಲ್ ತುಂಬಾ ವಿಶ್ವನಾಥ್ ಜೊತೆ ತುಂಬಾ ಆತ್ಮೀಯ ಹಾಗೂ ಸಲುಗೆಯಲ್ಲಿರುವ ಸಾಕಷ್ಟು ಫೋಟೋಗಳು ಲಭ್ಯವಾಗಿವೆ.

ಇದಕ್ಕೆ ವಿಶ್ವನಾಥ್ ಏನೆನ್ನುತ್ತಾರೆ ಎನ್ನುವುದು ಎಷ್ಟು ಕುತೂಹಲ ಮೂಡಿಸಿದೆಯೋ, ಹಾಗೆಯೇ ಪ್ರಕರಣವನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎನ್ನುವುದೂ ಕೂಡ ಅಷ್ಟೇ ಅಚ್ಚರಿ ಮೂಡಿಸಿದೆ. ಇದನ್ನೆಲ್ಲಾ ಕೇಳಿದ ಮೇಲೆ ಪಕ್ಷದ ಮುಖಂಡರು ಹಾಗೂ ಶಾಸಕ ವಿಶ್ಚನಾಥ್ ಅವ್ರೇ ಮೋಹನ್ ನಂಥಹ ಕ್ರಿಮಿನಲ್ ಹಿನ್ನೆಲೆಯ ಯುವ ನಾಯಕರು ನಿಜಕ್ಕೂ ಅಗತ್ಯವಿದೆಯೇ ಎನ್ನುವುದನ್ನು ಹೇಳಬೇಕು..

Spread the love

Related Articles

Leave a Reply

Your email address will not be published.

Back to top button
Flash News