BreakingCORONA VIRUSKANNADAFLASHNEWSFIGHTAGAINSTCORONAMoreScrollTop NewsUncategorizedಜಿಲ್ಲೆಸಿನೆಮಾ ಹಂಗಾಮ

ಆರು ತಿಂಗಳ ಬಳಿಕ ಥಿಯೇಟರ‍್ಸ್ ಓಪನ್..! ಯಾವ ಯಾವ ಚಿತ್ರಗಳು ರಿಲೀಸ್‌ಗೆ ರೆಡಿ..? ಸಂಕಷ್ಟದಿಂದ ಹೊರ ಬರುತ್ತಾ ಚಂದನವನ..? ಸೆಂಚುರಿ ಸ್ಟಾರ್ ಶಿವಣ್ಣ ಹೇಳಿದ್ದೇನು..?

ಕೇಂದ್ರ ಸರ್ಕಾರ ಸಿನಿ ಪ್ರೇಕ್ಷಕರ ಪಾಲಿಗೆ ಸಂತಸದ ಸುದ್ದಿಯೊಂದನ್ನ ನೀಡಿದೆ. ಕರೋನಾ ಕಾರಣದಿಂದ ಕಳೆದ ಆರು ತಿಂಗಳಿನಿಂದ ಕ್ಲೋಸ್ ಆಗಿರುವ ಚಿತ್ರಮಂದಿರಗಳು ಇದೇ ತಿಂಗಳ 15 ರಿಂದ ಓಪನ್ ಆಗಲಿವೆ. ಹೀಗಾಗಿ ತನ್ನ ನೆಚ್ಚಿನ ನಟ ನಟಿಯರ ಚಿತ್ರಗಳನ್ನು ಶೀಘ್ರದಲ್ಲೇ ಪ್ರೇಕ್ಷಕರು ಚಿತ್ರಮಂದಿರದಲ್ಲಿ ನೋಡಿ ಎಂಜಾಯ್ ಮಾಡಬುದಾಗಿದೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಚಿತ್ರಗಳು ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಿದ್ಧವಾಗಿವೆ.

ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳು ಯಾವ್ ಗೊತ್ತಾ..?

 

ರಾಬರ್ಟ್
ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡು ತೆರೆಗೆ ಬರಲು ಸಜ್ಜಾಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ರೆ ಕಳೆದ ಏಪ್ರಿಲ್ ನಲ್ಲೇ ರಾಬರ್ಟ್ ರಿಲೀಸ್ ಆಗ್ಬೇಕಿತ್ತು. ಆದ್ರೆ ಕರೋನಾ ಕಾರಣ ಥಿಯೇಟರ‍್ಸ್ ಕ್ಲೋಸ್ ಆಗಿದ್ರಿಂದ ರಾಬರ್ಟ್‌ಗೆ ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ. ಇದೀಗ ಥಿಯೇಟರ್ ಓಪನ್ ಆಗಲು ಅನುಮತಿ ಸಿಕ್ಕಿರೋದ್ರಿಂದ ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಮೇಲೆ ಪ್ರೇಕ್ಷಕರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಕೋಟಿಗೊಬ್ಬ-3
ರಾಬರ್ಟ್ ಚಿತ್ರದಂತೆ ಸ್ಯಾಂಡಲ್ ವುಡ್ ನಲ್ಲಿ ತೀವ್ರ ನಿರೀಕ್ಷೆ ಹುಟ್ಟಿಸಿರೋ ಮತ್ತೊಂದು ಸಿನ್ಮಾ ಕೋಟಿಗೊಬ್ಬ ೩ … ಅಭಿನವ ಭಾರ್ಗವ ಸುದೀಪ್ ಅಭಿನಯದ ಈ ಚಿತ್ರದ ಶೂಟಿಂಗ್ ಮುಗಿದು ಈಗಾಗಲೇ ಸಾಕಷ್ಟು ದಿನಗಳು ಕಳೆದಿವೆ. ಲಾಕ್ ಡೌನ್ ಗೂ ಮುನ್ನ ಥಿಯೇಟರ್ ಗೆ ಬರಲು ಸಜ್ಜಾಗಿದ್ದ ಕೋಟಿಗೊಬ್ಬ ೩ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ..

ಸಲಗ
ನಟ ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಟಿಸಿ ನಿರ್ದೇಶಿಸಿರುವ ಸಲಗ ಕೂಡ ತೆರೆಗೆ ಬರಲು ಸಜ್ಜಾಗಿದೆ. ಇತ್ತೀಚಿಗಷ್ಟೇ ಸಾಂಗ್ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ನಟ ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ್ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಯುವರತ್ನ..
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಕೂಡ ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟಿಸಿರುವ ಚಿತ್ರಗಳ ಪೈಕಿ ಅಗ್ರಸ್ಥಾನ ಪಡೆದಿದೆ. ಸದ್ಯ ಈ ಚಿತ್ರದ ಸಾಂಗ್ ಶೂಟಿಂಗ್ ನಡೆಯುತ್ತಿದ್ದು , ಶೀಘ್ರದಲ್ಲೇ ಯುವರತ್ನ ತೆರೆಮೇಲೆ ತರಲು ಚಿತ್ರತಂಡ ರೆಡಿಮಾಡಿಕೊಳ್ಳುತ್ತಿದೆ.

ಪೊಗರು..
ಧ್ರುವ ಸರ್ಜಾ ನಟನೆಯ ಪೊಗರು ಕಳೆದ ಎರಡು ವರ್ಷಗಳಿಂದ ಸಿನಿ ಪ್ರಿಯರಲ್ಲಿ ಅದರಲ್ಲೂ ಮಾಸ್ ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಈ ಚಿತ್ರದ ಶೂಟಿಂಗ್ ಕೂಡ ಮುಗಿದಿದ್ದು, ಈಗಾಗಲೇ ಚಿತ್ರದ ಹಾಡುಗಳ ಸೂಪರ್ ಹಿಟ್ ಆಗಿವೆ.

ಅವತಾರ ಪುರುಷ..
ನಟ ಶರಣ್ ಅಭಿನಯದ ಅವತಾರ ಪುರಷ ಕೂಡ ರೀಲಿಸ್ ರೇಸ್ ನಲ್ಲಿದೆ. ಕೊನೆಯ ಹಂತದಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಶೀಘ್ರದಲ್ಲೇ ಚಿತ್ರ ತೆರೆಮೇಲೆ ಬರಲಿದೆ.

ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ..!:ಕರೋನಾ ಇನ್ನೂ ಕೊನೆಗಾಣದ ಹಿನ್ನೆಲೆಯಲ್ಲಿ ಥಿಯೇಟರ್ ಗಳಲ್ಲಿ ಶೇ.೫೦ ರಷ್ಟು ಸಿಬ್ಬಂದಿ ಹಾಗೂ ಪ್ರೇಕ್ಷಕರೊಂದಿಗೆ ಕಾರ್ಯನಿರ್ವಹಿಸಲು ಕೇಂದ್ರ ಸರ್ಕಾರ ಷರತ್ತು ವಿಧಿಸಿರುವುದು ಚಿತ್ರ ನಿರ್ಮಾಪಕರ ಪಾಲಿಗೆ ಭಾರಿ ಸವಾಲಾಗಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸಿನಿಮಾ ಮಾಡಿದ ಪ್ರತಿಯೊಬ್ಬ ನಿರ್ಮಾಪಕರಿಗೂ ತನ್ನ ಚಿತ್ರ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣಬೇಕು ಅನ್ನೋ ಕನಸು ಇರುತ್ತದೆ. ಆದರೆ ಅರ್ಧ ಪ್ರೇಕ್ಷಕರಿಗೆ ಚಿತ್ರ ಬಿಡುಗಡೆ ಮಾಡಿದ್ರೆ ನಷ್ಟ ಖಂಡಿತಾ ಅಂತ ಗಾಂಧಿನಗರದಲ್ಲಿ ಸಕ್ರೀಯವಾಗಿ ತೊಡಗಿರುವ ನಿರ್ಮಾಪಕ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಲಗ ಚಿತ್ರದ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಥಿಯೇಟರ‍್ಸ್ ಓಪನ್ ಆಗ್ತಿರೋದು ಒಳ್ಳೆಯ ಬೆಳವಣಿಗೆ ಆದರೆ, ಅರ್ಧ ಪ್ರೇಕ್ಷಕರಿಗೆ ಅವಕಾಶ ನೀಡಿರೋದಕ್ಕೆ ಅಸಮಧಾನ ಇದೆ ಎಂದಿದ್ದಾರೆ. ಅಲ್ಲದೇ ಅರ್ಧ ಪ್ರೇಕ್ಷಕರಿಗೆ ಚಿತ್ರ ನೋಡಲು ಅವಕಾಶ ನೀಡಿದ್ರೆ ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿರುವ ನಮಗೆ ನಷ್ಟ ಆಗಲಿದೆ. ಹೀಗಾಗಿ ಸಂಪೂರ್ಣವಾಗಿ ಪೂರ್ಣ ಪ್ರಮಾಣದಲ್ಲಿ ಥೀಯೇಟರ್ ಆರಂಭ ಆದ್ಮೇಲೆ ಸಲಗ ಪ್ರೇಕ್ಷಕರ ಎದುರಿಗೆ ಬರಲಿದೆ ಅಂತ ಹೇಳಿದ್ದಾರೆ. ಇನ್ನೂ ಈ ಸಂಬಂಧ ಪ್ರೋಡ್ಯೂಸರ್ ಟೀಂ ಸಭೆ ಸೇರಲಿದೆ. ಈ ಬಗ್ಗೆ ಎಲ್ಲರೂ ಚರ್ಚೆ ನಡೆಸಿ ಯಾವ ಚಿತ್ರ ಬಿಡುಗಡೆ ಮಾಡ್ಬೇಕು ಅನ್ನೋದನ್ನ ನಿರ್ಧರಿಸ್ತೀವಿ ಅಂತ ತಿಳಿಸಿದ್ದಾರೆ.

ಸರ್ಕಾರದ ಮೇಲೆ ನಂಬಿಕೆ ಇದೆ..!:ನಟ ಶಿವರಾಜ್ ಕುಮಾರ್, ಕನ್ನಡ ಚಿತ್ರರಂಗ ಲಾಕ್ ಡೌನ್ ನಿಂದ ಸಾಕಷ್ಟು ನಷ್ಟ ಅನುಭವಿಸಿದೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಎಲ್ಲವನ್ನು ತಿಳಿಸಿದ್ದೇವೆ. ಸಂಕಷ್ಟದಲ್ಲಿರುವ ಚಿತ್ರರಂಗಕ್ಕೆ ಸರ್ಕಾರ ಸರ್ಕಾರ ನೆರವಾಗುವ ಭರವಸೆ ನೀಡಿದೆ. ನಟನಾಗಿ ನಾನು ನಟನೆ ಮಾಡ್ಬಹುದು, ಆದ್ರೆ ಚಿತ್ರ ಪ್ರದರ್ಶನ, ಬಿಡುಗಡೆ ಬಗ್ಗೆ ನಾನೇನು ಹೇಳೋದಕ್ಕೆ ಆಗೋದಿಲ್ಲ.

ಅದಕ್ಕೆ ಅಂತ ನಿರ್ಮಾಪಕರಿದ್ದಾರೆ. ನಾನು ಪ್ರೇಕ್ಷಕರಿಗೆ ಸಿನ್ಮಾ ನೋಡಲು ಬನ್ನಿ ಎಂದು ಅಂರ ಕರೆಯುತ್ತೇನೆ. ಆದ್ರೆ ಯಾರಿಗೂ ಒತ್ತಾಯ ಮಾಡಿ ರಿಸ್ಕ್ ತೆಗೆದುಕೊಂಡು ಸಿನ್ಮಾ ನೋಡಿ ಅಂತ ನಾನು ಹೇಳೋದಿಲ್ಲ, ಪ್ರೇಕ್ಷಕರ ಸರಕ್ಷತೆ ಮುಖ್ಯ ಎಂದಿದ್ದಾರೆ.

ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರ್ತಾರಾ..?:ಕರೋನಾ ಆತಂಕ ಇನ್ನೂ ಜನರಿಂದ ದೂರವಾಗಿಲ್ಲ.. ಸಾಕಷ್ಟು ಜನ ಮೆಟ್ರೋ ರೈಲಿನಲ್ಲಿ ಓಡಾಡಲು ಹಿಂಜರಿಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಿನ್ಮಾ ಕಡೆ ಜನರು ಮುಖ ಮಾಡ್ತಾರಾ ಅನ್ನೊ ಪ್ರಶ್ನೆ ಕೂಡ ಈಗ ಉದ್ಭವಿಸಿದೆ. ಕರೋನಾ ಭೀತಿಯ ನಡುವೆ ಎಷ್ಟು ಜನ ಥಿಯೇಟರ‍್ಸ್ ಗೆ ಬರುತ್ತಾರೆ ಅನ್ನೋದು ಸದ್ಯದ ಕುತೂಹಲವಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News