BreakingCORONA VIRUSKANNADAFLASHNEWSFIGHTAGAINSTCORONAMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ಮಾಹಿತಿ/ತಂತ್ರಜ್ಞಾನರಾಜಕೀಯರಾಜ್ಯ-ರಾಜಧಾನಿ

ನೈಜ ಪತ್ರಿಕೋದ್ಯಮದ ಸಾಕ್ಷಿಪ್ರಜ್ಞೆ ಲಂಕೇಶ್ “ಆಪ್” ಬಿಡುಗಡೆ-ದಾರಿತಪ್ಪಿರುವ ಪತ್ರಿಕೋದ್ಯಮಕ್ಕೆ ಲಂಕೇಶ್ ಲಾಟೀನೆಂದ ಜ್ಞಾನಪೀಠಿ ಚಂದ್ರಶೇಖರ ಕಂಬಾರ

ಬೆಂಗಳೂರು: ಲಂಕೇಶ್ ಎನ್ನೋದು ಕೇವಲ ಒಂದು ಹೆಸ್ರಲ್ಲ..ಅದೊಂದು ಶಕ್ತಿ-ನೈಜ ಪತ್ರಿಕೋದ್ಯಮದ ಸಾಕ್ಷಿಪ್ರಜ್ಞೆ..ವ್ಯವಸ್ಥೆಯನ್ನು ತಮ್ಮ ಹರಿತವಾದ ಲೇಖನಿ ಮೂಲಕ ತಿವಿಯುತ್ತಿದ್ದ ಅವರ ಬರವಣಿಗೆಗಳು ಸರ್ಕಾರವನ್ನೇ ಅಲುಗಾಡಿಸಿದ್ದಿದೆ..ಬದಲಿಸಿದ್ದಿದೆ.

ಲಂಕೇಶ್ ಮಾರುಕಟ್ಟೆಗೆ ಬರುತ್ತೆಂದ್ರೆ ಸಾಕು ಈ ಬಾರಿ ಯಾರ ಬುಡ ಕಾಯಿಸಿದ್ದಾರೋ ಎಂದು ಕ್ಯೂನಲ್ಲಿ ಕಾದಿದ್ದು ಪತ್ರಿಕೆ ಖರೀದಿಸುವ ಆ ಒಂದು ಜಮಾನ ಇತ್ತು. ಆದ್ರೆ ಇಂದು  ಪತ್ರಿಕೋದ್ಯಮ ಆ ನೈಜತೆಯ ಚಾರ್ಮನ್ನೂ ಉಳಿಸಿಕೊಂಡಿಲ್ಲ.. ಪತ್ರಿಕಾಸಂಪಾದಕರೆನಿಸಿಕೊಂಡವರಿಗೆ ಆ ಬದ್ಧತೆಯೂ ಇಲ್ಲವಾಗಿದೆ ಬಿಡಿ..

ಎಷ್ಟೇ ದಶಕ ಕಳುದ್ರೂ ಇವತ್ತಿಗೂ ಲಂಕೇಶ್ ಪ್ರಸ್ತುತವಾಗ್ತಾರೆ..ಇದಕ್ಕೆ ಅವರು ಬರೆದ ಬರವಣಿಗಗಳೇ ಸಾಕ್ಷಿ.ಭಾಷೆ ಪತ್ರಿಕೋದ್ಯಮದ್ದಿರಲಿ,ಕಾದಂಬರಿದ್ದಾಗಿರಲಿ,ಕವನ-ಚುಟುಕು..ಹೀಗೆ ಅವುಗಳದ್ದೇ ಲಾಲಿತ್ಯದ ಚೌಕಟ್ಟಿನಲ್ಲಿ ಭಾಷೆಯನ್ನು ವಿಜೃಂಭಿಸಿದವರು..ಓದುಗರು ಸಂಭ್ರಮಿಸುವಂತೆ ಮಾಡಿದ ಧೀಶಕ್ತಿ ಲಂಕೇಶ್.ಸಾರ್ವಕಾಲಿಕಕ್ಕೂ ಸಲ್ಲುವ ಲಂಕೇಶ್ ಅವರನ್ನು ಈ ಸನ್ನಿವೇಶದಲ್ಲೂ ಓದಿಕೊಳ್ಳುವ-ಪುನರ್ನಮನನ ಮಾಡಿಕೊಳ್ಳುವ,ಅವರನ್ನು ನೆನಪಸಿಕೊಳ್ಳುವಂತೆ ಮಾಡುವ ಒಂದು ಅತ್ಯದ್ಭುತ ಕೆಲಸವನ್ನು ಅವರ ಮಗ ಇಂದ್ರಜಿತ್ ಮಾಡಿದ್ದಾರೆ.ಅದು ಲಂಕೇಶ್ ಆಪ್ ಮೂಲಕ.

ಲಂಕೇಶ್ ಬದುಕಿರುವವರೆಗೂ ಬರೆದುದ್ದನ್ನೆಲ್ಲಾ ಈ ಆಪ್ ನಲ್ಲಿ ಅಡಕಗೊಳಿಸಲಾಗಿದೆ.ಬರವಣಿಗೆ ಮಾತ್ರವಲ್ಲ,ಮಾತಿನ ಮೂಲಕವೂ ನೆನಪಿಸಿಕೊಳ್ಳುವ ಒಂದು ಅತ್ಯದ್ಭುತ ಅವಕಾಶವನ್ನೂ ಕಲ್ಪಿಸಲಾಗಿದೆ.ಲಂಕೇಶ್ ನಾನಾ ಸನ್ನಿವೇಶಗಳಲ್ಲಿ,ವಿವಿಧ ವೇದಿಕೆಗಳಲ್ಲಿ ಆಡಿರುವ ಮಾತುಗಳನ್ನು.ಭಾಷಣವನ್ನು,ಸಂಭಾಷಣೆಯನ್ನು ಇಂದ್ರಜಿತ್ ಕ್ರೋಢೀಕರಿಸಿ ಆಪ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಇವತ್ತಿಗೂ ಲಂಕೇಶ್ ಅವರಂಥ ಅತ್ಯದ್ಭುತ ಹಾಗೂ ವರ್ಣರಂಜಿತ ವ್ಯಕ್ತಿ-ವ್ಯಕ್ತಿತ್ವ ನಮಗೆ ದಕ್ಕಬೇಕು ಎನ್ನುವ ದೂರದೃಷ್ಟಿ ಯಲ್ಲಿ ಸಿದ್ಧಪಡಿಸಿರುವ ಈ ಆಪ್ ನ್ನು ಬೆಂಗಳೂರಿನಲ್ಲಿ ಲೋಕಾರ್ಪಣೆ ಮಾಡಲಾಯಿತು,ಜ್ಞಾನಪೀಠ ಪುರಸ್ಕ್ರತ ಸಾಹಿತಿ ಚಂದ್ರಶೇಖರ ಕಂಬಾರ ಲಂಕೇಶ್ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದ್ರು.ಹಾಗೆಯೇ ವೇದಿಕೆಯಲ್ಲಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಆದಿಚುಂಚನಗಿರಿ ನಿರ್ಮಲಾನಂದ ಶ್ರೀ, ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಕೂಡ ವೇದಿಕೆಯಲ್ಲಿದ್ದು ಮಾರ್ಗದರ್ಶಕರು ಹಾಗೂ ಹಿತೈಷಿಗಳಿಲ್ಲದೆ ಹಳಿ ತಪ್ಪುತ್ತಿರುವ ಇಂದಿನ ಪತ್ರಿಕೋದ್ಯಮಕ್ಕೆ  ಲಂಕೇಶ್ ಅವರ ಪ್ರಸ್ತುತತೆ-ಅಗತ್ಯತೆಯನ್ನು ನೆನಪಿಸಿಕೊಂಡರು.

ಕಳೆದ ೪೧ ವರ್ಷಗಳಿಂದ ಲಂಕೇಶ್ ಪತ್ರಿಕೆ ಸಾಮಾಜಿಕ ಜವಾಬ್ದಾರಿಯಿಂದ ಪತ್ರಿಕೋದ್ಯಮದಲ್ಲಿ ವೃತ್ತಿಧರ್ಮವನ್ನು ನಿಭಾಯಿಸುತ್ತಾ ಬಂದಿದೆ. ಇಂದು ಪತ್ರಿಕೆ ಹಲವು ಆಯಾಮಗಳಲ್ಲಿ ತಿರುವು ಪಡೆದುಕೊಂಡು ತನ್ನ ಹಿರಿತನಕ್ಕೆ ತಕ್ಕಂತೆ ಲಂಕೇಶ್ ಆಪ್ ಅನ್ನು ಬಿಡುಗಡೆ ಮಾಡುವ ಮೂಲಕ ತಂತ್ರಜ್ಞಾನದ ಸ್ಪರ್ಶವನ್ನು ನೀಡಿದೆ. ಮಾಹಿತಿ ತಂತ್ರಜ್ಞಾನದ ಮೂಲಕ ಪ್ರತಿದಿನ ಹೊಸ ಆವಿಷ್ಕಾರವನ್ನು ಅಳವಡಿಸಿಕೊಳ್ಳುತ್ತಿದ್ದು, ಈ ಕಾಲಮಾನದಲ್ಲಿ ಪತ್ರಿಕೆಯನ್ನು ಎಲ್ಲರ ಬೆರಳ ತುದಿಗೆ ಕೊಂಡೊಯ್ಯುವ ನಿಟ್ಟಿಲ್ಲಿ ಸಹಕಾರಿಯಾಗಲಿದೆ. ಇದರಲ್ಲಿ ಲಂಕೇಶ್ ಅವರ ಬರಹಗಳು, ಹೇಳಿಕೆಗಳು, ಭಾಷಣಗಳು ಹಾಗೂ ಲೇಖನಗಳ ಧ್ವನಿ ಮುದ್ರಿಕೆಗಳು ಲಭ್ಯವಿದ್ದು, ಇಂದಿನ ಯುವಪೀಳಿಗೆಗೆ ಅನುಕೂಲವಾಗುವಂತೆ ಸರಳೀಕರಣಗೊಳಿಸಲಾಗಿದೆ.

ನೈಜ ಪತ್ರಿಕೋದ್ಯಮದ ಸಾಕ್ಷಿಪ್ರಜ್ಞೆ ಲಂಕೇಶ್ ಆಪ್ ಬಿಡುಗಡೆ-ದಾರಿತಪ್ಪಿರುವ ಪತ್ರಿಕೋದ್ಯಮಕ್ಕೆ ಲಂಕೇಶ್ ಲಾಟೀನೆಂದ ಜ್ಞಾನಪೀಠಿ ಚಂದ್ರಶೇಖರ ಕಂಬಾರ

Spread the love

Related Articles

Leave a Reply

Your email address will not be published.

Back to top button
Flash News