ಮಾಸ್ಕ್-ಯೂನಿಫಾರ್ಮ್ ರೂಲ್ಸ್ ಇರೋದು ಡ್ರೈವರ್ಸ್-ಕಂಡಕ್ಟರ್ಸ್ ಗಾ..ಅಧಿಕಾರಿಗಳಿಗೆ ಇದ್ಯಾವ್ದು ಅಪ್ಲೈ ಆಗೊಲ್ವಾ..

0

ರೂಲ್ಸ್ ಗಳಿರುವುದು ಕೇವಲ ಡ್ರೈವರ್ಸ್-ಕಂಡಕ್ಟರ್ಸ್ ಗಾ…ಅವ್ರು ಮಾತ್ರ ಡ್ಯೂಟಿ ಮಾಡುವಾಗ ಮಾಸ್ಕ್ ಧರಿಸ್ಬೇಕು.. ಸ್ಯಾನಿಟೈಸರ್ ಬಳಸ್ಬೇಕಾ..ಅಧಿಕಾರಿಗಳಿಗೆ ಇದ್ಯಾವ ರೂಲ್ಸ್ ಗಳು ಕೂಡ ಅಪ್ಲೈ ಆಗೋದೇ ಇಲ್ವಾ..ಅವರಿಗೆ ನೊಟೀಸ್..ಸಸ್ಪೆಂಡ್..ಇದ್ಯಾವ ಶಿಕ್ಷೆಯೂ ಇಲ್ವೇ..ಇದನ್ನು ಕೇಳೊಕ್ಕೆ ಕಾರಣವೂ ಇದೆ..

KSRTC ಬಸ್ ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಲೈನ್ ಚೆಕ್ಕಿಂಗ್ ಮಾಡುವ ತನಿಖಾಧಿಕಾರಿಗಳು ಕಂಡಕ್ಟರ್ಸ್ ಗಳ ಕೈಯಲ್ಲಿರುವ ಇಟಿಎಂಗಳನ್ನು ಕಸಿದುಕೊಂಡು ಕ್ರಾಸ್ ಚೆಕ್ ಮಾಡ್ತಾರೆ..ಮಾಡ್ಲಿ..ಅದು ಅವರ ಡ್ಯೂಟಿ..ಆದ್ರೆ ಹಾಗೆ ಮಾಡೋರಿಗೆ ಯೂನಿಫಾರ್ಮ್-ಮಾಸ್ಕ್ ಧರಿಸಬಾರದೆನ್ನುವ ರೂಲ್ಸ್ ಏನಾದ್ರೂ ಇದೆಯೇ..

ಅವ್ರು ಡಿಪಾರ್ಟ್ಮೆಂಟ್ ನವ್ರು ಎಂದು ಹೇಗೆ ನಂಬೋದು..ಇದನ್ನು ಕೇಳಿದ್ರೆ ಕಂಡಕ್ಟರ್ಸ್ ಗಳ ಮೇಲೆ ಹರಿಹಾಯ್ದು..ದುರ್ವರ್ತನೆ ಎಂದು ಮತ್ತೊಂದು ನೊಟೀಸ್ ಕೊಡ್ತಾರೆ..ಕನ್ನಡ ಫ್ಲಾಶ್ ನ್ಯೂಸ್ ಇಂತದ್ದೇ ಒಂದು ದೃಶ್ಯವನ್ನು ತೋರಿಸ್ತಿದೆ..ಮೇಲಾಧಿಕಾರಿಗಳು ಸೂಕ್ಷ್ಮವಾಗಿ ಇದನ್ನು ಗಮನಿಸಲಿ..ಸಣ್ಣ ತಪ್ಪು ಮಾಡಿದ್ರೂ ನಿರ್ದಾಕ್ಷಿಣ್ಯವಾಗಿ ಡ್ರೈವರ್ಸ್-ಕಂಡಕ್ಟರ್ಸ್ ನ್ನು ಶಿಕ್ಷೆಗೊಳಪಡಿಸುವ ನೀವು,ಅಧಿಕಾರಿಗಳು ಮಾಡೋ ತಪ್ಪಿಗೆ ಏನ್ ಶಿಕ್ಷೆ ಕೊಡ್ತೀರಿ ನೀವೇ ಹೇಳಿ..ನಿಮ್ಮ ಉತ್ತರ ಹಾಗು ಕ್ರಮವನ್ನು ನಾವೂ ಎದುರು ನೋಡುತ್ತಿರುತ್ತೇವೆ..

ಮಾಸ್ಕ್-ಯೂನಿಫಾರ್ಮ್ ರೂಲ್ಸ್ ಇರೋದು ಡ್ರೈವರ್ಸ್-ಕಂಡಕ್ಟರ್ಸ್ ಗಾ..ಅಧಿಕಾರಿಗಳಿಗೆ ಇದ್ಯಾವ್ದು ಅಪ್ಲೈ ಆಗೊಲ್ವಾ..

Spread the love
Leave A Reply

Your email address will not be published.

Flash News