ಸಾರ್ವಜನಿಕರ ವ್ಯಾಪಕ ಆಕ್ರೋಶ-ವಿರೋಧಕ್ಕೆ ಮಣಿದ ಸರ್ಕಾರ- ಮಾಸ್ಕ್ ದಂಡ ಇಳಿಕೆ-ನಗರದಲ್ಲಿ 250 ರೂ,ಹಳ್ಳಿಯಲ್ಲಿ 100 ರೂ ದಂಡ

0

ಬೆಂಗಳೂರು:ಸರ್ಕಾರ ಕೊನೆಗೂ  ಸಾರ್ವಜನಿಕರ ಆಕ್ರೋಶವ-ವಿರೋಧಕ್ಕೆ ಮಣಿದಿದೆ. ಮಾಸ್ಕ್ ಧರಿಸದ ಕಾರಣಕ್ಕೆ ನಗರದಲ್ಲಿ 1,000 ರೂ. ದಂಡ ಪ್ರಯೋಗವನ್ನು ಕಡ್ಮೆ ಮಾಡಿ ಅದನ್ನು ಇದೀಗ 250  ರೂ.ಗೆ ಇಳಿಸಿದೆ. ಹಳ್ಳಿಗಳಲ್ಲಿ ದಂಡದ ಪ್ರಮಾಣವನ್ನು 100 ರೂಗೆ ಇಳಿಕೆ ಮಾಡಿದೆ.

ಮಾಸ್ಕ್ ದಂಡವನ್ನೇ ಅಸ್ತ್ರವಾಗಿಸಿಕೊಂಡು ನಡೆಸಲಾಗುತ್ತಿದ್ದ ಸುಲಿಗೆ ಬಗ್ಗೆ ಕನ್ನಡ ಫ್ಲಾಶ್ ನ್ಯೂಸ್ ನಿರಂತರ ವರದಿ ಮಾಡಿತ್ತು.ಇದು  ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಕೊರೋನಾ ಬಂದ ನಂತರ ಹೆಲ್ಮೆಟ್ ದಂಡ ವಿಧಿಸುವುದಿರಲಿ, ಸವಾರರ ಬಳಿಗೆ ಹೋಗಲು ಸಂಚಾರಿ ಪೊಲೀಸರು ಹೆದರುತ್ತಿದ್ದರು. ಆದರೆ ಅರೆಕಾಲಿಕ ಸೇವೆಯ ಮೇಲೆ ಮಾಸ್ಕ್ ದಂಡ ವಿಧಿಸಲು ನಿಯೋಜಿಸಿರುವ ಮಾರ್ಷಲ್‌ಗಳು ಕೊರೋನಾವನ್ನೂ ಲೆಕ್ಕಿಸದೆ ಮಾಸ್ಕ್ ಧರಿಸದ ತಲೆಗೆ 1,000 ರೂ. ದಂಡವನ್ನು ವಸೂಲಿ ಮಾಡುತ್ತಿದ್ದರ ಮೇಲೂ ಬೆಳಕು ಚೆಲ್ಲಿತ್ತು.

ನಗರದಂತೆಯೇ  ಗ್ರಾಮೀಣ ಭಾಗದಲ್ಲಿ 500 ರೂ. ದಂಡವನ್ನು ವಿಧಿಸಿದ್ದರ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿತ್ತು.ಈ  ಬೆನ್ನಲ್ಲೇ ಸಾರ್ವಜನಿಕರು ರೊಚ್ಚಿಗೆದ್ದರು. ಕೊರೋನಾ ಮಾರಿಯಿಂದ ಉದ್ಯಮಗಳು, ಉದ್ಯೋಗಗಳು ನೆಗೆದುಬಿದ್ದು ತಿಂದು ಉಣ್ಣಲು ಹಣವಿಲ್ಲದೆ ಜನ ರಸ್ತೆಗೆ ಬಾರದೆ ಇಡೀ ವ್ಯವಸ್ಥೆಯೇ ವಿವಸ್ತ್ರವಾಗಿತ್ತು.

ಸರ್ಕಾರದ ಮಾಸ್ಕ್  ಸುಲಿಗೆ ಧೋರಣೆ ಖಂಡಿಸಿ ರಸ್ತೆಗಿಳಿದ ಸಾರ್ವಜನಿಕರನ್ನು ಈ ರೀತಿಯ ದುಪ್ಪಟ್ಟು ದಂಡ ವಿಧಿಸಿದ್ದು ಸಾರ್ವಜನಿಕರನ್ನು ರೊಚ್ಚಿಗೆಬ್ಬಿಸಿತ್ತು. ಪರಿಣಾಮ ಮಾರ್ಷಲ್‌ಗಳಿಗೆ ಲಾತಾ ಬಿದ್ದವು. ಸಂಚಾರಿ ಪೊಲೀಸರು ಸೈಡಿಗೆ ಸರಿದರು. ಸರ್ಕಾರ ಎಚ್ಚೆತ್ತು ಇದೀಗ ದರವನ್ನು ಪರಿಷ್ಕರಿಸಿ ನಿಟ್ಟುಸಿರು ಬಿಟ್ಟಿದೆ. ಅಂದರೆ ಸರ್ಕಾರ ಮಾಡಿದ ಯಾವುದೇ ಕಾನೂನನ್ನು ಜನ ತೊಡೆತಟ್ಟಿ ವಾಚಾಮಗೋಚರ ಉಗಿದು, ಬೈದು ರಸ್ತೆಗಿಳಿಯದಿದ್ದರೆ ಸರ್ಕಾರ ಮಣಿಯುವುದಿಲ್ಲ ಅಂದಾಯ್ತು.ಇದು ಪ್ರಜಾಪ್ರಭುತ್ವ ಎನ್ನೋದು ಕೂಡ ಪ್ರೂವ್ ಆಗಿದೆ.

Spread the love
Leave A Reply

Your email address will not be published.

Flash News