ಎಂಜಿಲುಕಾಸಿಗೆ ನಾಲಿಗೆಯೊಡ್ಡುವ ಟ್ರಾಫಿಕ್ ಕಂಟ್ರೋಲರ್ಸ್. .?! ಹೆಚ್ಚಿನ ಕಲೆಕ್ಷನ್ ಆಗೋ ರೂಟ್ ಟೈಮಿಂಗ್ ಫಿಕ್ಸ್ ಮಾಡ್ಲಿಕ್ಕೂ ಲಂಚ..!

0

ಶಿವಮೊಗ್ಗ: ಕೆಎಸ್ ಆರ್ ಟಿಸಿಯಲ್ಲಿ ಲಂಚಾವತಾರ ತಾಂಡವವಾಡುತ್ತಿರುವ ವಿಷಯ ಹೊಸದೇನಲ್ಲ.ಅದರ ಬಗ್ಗೆ ಕನ್ನಡ ಫ್ಲಾಶ್ ನ್ಯೂಸ್ ಕೂಡ ನಿರಂತರವಾಗಿ ಸುದ್ದಿ ಮಾಡುತ್ತಲೇ ಬಂದಿದೆ.ಅದನ್ನು ಸಹಿಸದ ಕೆಲವು ಹಿತಾಸಕ್ತಿಗಳು ಸುಳ್ಳು ಆರೋಪಗಳನ್ನು ಮುಂದಿಟ್ಟುಕೊಂಡು ಕನ್ನಡ ಫ್ಲಾಶ್ ನ್ಯೂಸ್ ನ ಗಟ್ಟಿಧ್ವನಿಯನ್ನು ಧಮನ ಮಾಡುವ ಹುನ್ನಾರ ನಡೆಸುತ್ತಲೇ ಇದೆ.ಆದ್ರೆ ಅನ್ಯಾಯವನ್ನು ಖಂಡಿಸಿ,ಪ್ರತಿಭಟಿಸಿ ಸುದ್ದಿಮಾಡುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾವೊಂದು ಶಕ್ತಿಗಳು ಕಸಿದುಕೊಳ್ಳೊಕ್ಕಾಗೊಲ್ಲ ಎನ್ನೋದನ್ನು ಕನ್ನಡ ಫ್ಲಾಶ್ ನ್ಯೂಸ್ ಸಂಪಾದಕೀಯ ಮಂಡಳಿ ಮತ್ತೆ ಸ್ಪಷ್ಟಪಡಿಸುತ್ತೆ.

ಕನ್ನಡ ಫ್ಲಾಶ್ ನ್ಯೂಸ್ ಕೆಎಸ್ ಆರ್ ಟಿಸಿಯಲ್ಲಿ ನಡೆಯುತ್ತಿರುವ ಅಂತದ್ದೇ ಮತ್ತೊಂದು ಅಕ್ರಮವನ್ನು ಸಾಕ್ಷ್ಯ ಸಮೇತ ಬಿಚ್ಚಿಡಲು ಮುಂದಾಗಿದೆ.ಟ್ರಾಫಿಕ್ ಕಂಟ್ರೋಲರ್ಸ್ ಎನಿಸಿಕೊಂಡವ್ರು,ಕಂಡಕ್ಟರ್ಸ್ ಗಳಿಂದ ಹಣ ವಸೂಲಿ ಮಾಡುತ್ತಿರುವಂತದ್ದೇ ಆ ಅಕ್ರಮ.ಅಂದ್ಹಾಗೆ  ಈ ದಂಧೆ ಹಳೇದು ಎನ್ನೋದು ಎಲ್ಲರಿಗು ಗೊತ್ತಿದೆ.ಹಾಗಂತ ವಸೂಲಿಕೋರರ ವಿರುದ್ಧ ಕ್ರಮವೇನಾದ್ರೂ ಕೈಗೊಂಡಿದ್ದಾರಾ..ಮೇಲಾಧಿಕಾರಿಗಳು..ಖಂಡಿತಾ ಇಲ್ಲ.ಶಿವಮೊಗ್ಗದಲ್ಲಿ ಆಗ್ತಿರೋದು ಕೂಡ ಅದೇ..ಕಂಡಕ್ಟರ್ಸ್ ಗಳಿಂದ ಹಣ ಪಡೆದು ರೂಟ್ ಕೊಡ್ತಿರುವ ಫೋಟೋಗಳು ಕನ್ನಡ ಫ್ಲಾಶ್ ನ್ಯೂಸ್ ಗೆ ಲಭ್ಯವಾಗಿದೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ಕೆಎಸ್ ಆರ್ ಟಿಸಿ ನಿಲ್ದಾಣದ ಮುಖೇನ  ರಾಜ್ಯದ ನಾನಾ ಕಡೆ ಆಪರೇಟ್ ಆಗುವ ಕೆಎಸ್ ಆರ್ ಟಿಸಿ ಬಸ್ ಗಳಿಗೆ ಹೆಚ್ಚು ಪ್ರಯಾಣಿಕರು ಸಂಚರಿಸುವ ಟೈಮ್ ಗೆ ರೂಟ್ ಕೊಡಲು ಬಸ್ ನಿಲ್ದಾಣಗಳಲ್ಲಿ ಕೆಲಸ ಮಾಡುವ  ಟ್ರಾಫಿಕ್ ಕಂಟ್ರೋಲರ್ಸ್, ಕಂಡಕ್ಟರ್ಸ್ ಗಳಿಂದ 5 ರೂನಿಂದ 10 ರೂವರೆಗೆ ಲಂಚ ಸ್ವೀಕರಿಸುತ್ತಿದ್ದಾರೆನ್ನುವ ದೂರುಗಳಿವೆ.ಅದರಲ್ಲೂ ಬಸ್ ಫುಲ್ ಆಗುವ ಟೈಮ್ ನ  ರೂಟ್ ಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವುದನ್ನು ಪರಿಗಣಿಸಿ ಅಂಥಾ ಬಸ್ ಗಳ ಕಂಡಕ್ಟರ್ಸ್ ಗಳಿಂದ ಹಣ ವಸೂಲಿ ಮಾಡೋದು ಮಾಮೂಲಾಗಿದೆ.ಅಂತದ್ದೊಂದು ಅಕ್ರಮ ಕನ್ನಡ ಫ್ಲಾಶ್ ನ್ಯೂಸ್ ಗೆ ವಿತ್ ಎವಿಡೆನ್ಸ್ ಲಭ್ಯವಾಗಿದೆ.

ದಿನನಿತ್ಯ ಸಾವಿರಾರು ಬಸ್ ಗಳು ಶಿವಮೊಗ್ಗ  ವಿಭಾಗದ ಭದ್ರಾವತಿ ಬಸ್ ನಿಲ್ದಾಣದಿಂದ ಹೊರಡುವ ಹಾಗೂ ಇಲ್ಲಿಗೆ ಬಂದು ಬೇರೆಡೆ ತೆರಳುವ ಕೆಲಸ ಮಾಡುತ್ತಿವೆ.ಈ ಪ್ರತಿಯೊಂದು ಬಸ್ ನಿಂದಲೂ ಕನಿಷ್ಠ 5 ಗರಿಷ್ಠ 10 ರೂ ವಸೂಲಿ ಮಾಡುವುದನ್ನೇ ದಂಧೆಯನ್ನಾಗಿಸಿ ಕೊಂಡಿರುವ ಟ್ರಾಫಿಕ್ ಕಂಟ್ರೋಲರ್ಸ್ ಗಳ ನಿತ್ಯದ ದುಡಿಮೆಯೇ ಹತ್ತಿರತ್ತಿರ 5 ಸಾವಿರದಿಂದ 10 ಸಾವಿರ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಡಿಪೋ ವ್ಯವಸ್ಥೆ ನೋಡಿಕೊಳ್ಳುವ “ದೊಡ್ಡ”?! ವರಿಗೂ ಪಾಲು ಹೋಗ್ತದೆನ್ನುವ ದೂರಿದೆ.

ಕಂಡಕ್ಟರ್ಸ್ ಹಣ ಕೊಟ್ರೆ ಒಳ್ಳೆಯ ಟೈಮಿಂಗ್ಸ್  ಕೊಟ್ಟು ಕಳುಹಿಸಲಾಗುತ್ತೆ.ಹಣ ಕೊಡದಿದ್ರೆ ಪ್ರಯಾಣಿಕರಿಲ್ಲದೆ ಭಣಗುಡುವ ಸಮಯದಲ್ಲಿನ ರೂಟ್ ಕೊಟ್ಟು ಅವರ ಹೊಟ್ಟೆ ಮೇಲೆ ಕಲ್ಲಾಕುವ ಹೀನಕೆಲಸ ಮಾಡ್ತಾರೆನ್ನುವ ನೋವನ್ನು ಹೆಸರು ಹೇಳಲಿಚ್ಛಿಸದ ಅನೇಕ ಕಂಡಕ್ಟರ್ಸ್  ಕನ್ನಡ ಫ್ಲಾಶ್ ನ್ಯೂಸ್ ನೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ದುರಂತ  ಏನ್ ಗೊತ್ತಾ..ಶಿವಮೊಗ್ಗ-ಭದ್ರಾವತಿ ಡಿಪೋದ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಅವರಿಗೆ ಈ ಮಾಹಿತಿ ಇಲ್ಲವೆಂದೇನಲ್ಲ.ಆದ್ರೂ ಈ ದಂಧೆಗೆ ಕಡಿವಾಣ ಹಾಕುವ ಕೆಲಸ ಮಾಡಿಲ್ಲ..ಮಾಡುವ ಧೈರ್ಯ-ಉತ್ಸಾಹ ಹಾಗೂ ಮನಸು ಮಾಡ್ತಿಲ್ಲ ಎಂದ್ರೆ ಅದರ ಹಿಂದಿನ ಮರ್ಮ ಹಾಗು ಉದ್ದೇಶವೇನು ಎನ್ನುವ ಪ್ರಶ್ನೆ ಮೂಡುತ್ತದೆ..ನಮ್ಮಲ್ಲಿ ಹಾಗೆಲ್ಲಾ ನಡೆಯುವುದೇ ಇಲ್ಲ ಎನ್ನೋದು ನವೀನ್ ಅವರ ವಾದವಾದ್ರೇ ಕನ್ನಡ ಫ್ಲಾಶ್ ನ್ಯೂಸ್ ಅದಕ್ಕೆ ಪೂರಕವಾದ ಸಾಕ್ಷ್ಯ ಒದಗಿಸುತ್ತಿದೆ..ಈಗಲಾದ್ರು ಆ ಧೈರ್ಯ ಮಾಡಿ,,ಕಂಡಕ್ಟರ್ಸ್ ಗಳಿಂದ ಸುಲಿಗೆ ಮಾಡುತ್ತಿರುವ ಸಿಬ್ಬಂದಿಯ ಹೆಡೆಮುರಿಕಟ್ಟೋ ಕೆಲಸ ಮಾಡಿ ಎಂದು ಕನ್ನಡ ಫ್ಲಾಶ್ ನ್ಯೂಸ್ ಈ ಮೂಲಕ ಹೇಳಲು ಇಚ್ಛಿಸುತ್ತೆ. 

ಎಂಜಿಲುಕಾಸಿಗೆ ನಾಲಿಗೆಯೊಡ್ಡುವ ಟ್ರಾಫಿಕ್ ಕಂಟ್ರೋಲರ್ಸ್. .?! ಹೆಚ್ಚಿನ ಕಲೆಕ್ಷನ್ ಆಗೋ ರೂಟ್ ಟೈಮಿಂಗ್ ಫಿಕ್ಸ್ ಮಾಡ್ಲಿಕ್ಕೂ ಲಂಚ..!

Spread the love
Leave A Reply

Your email address will not be published.

Flash News