ಆಗುಂಬೆಯ ಆ ಮನಮೋಹಕ ಮಳೆಯ ದೃಶ್ಯಕಾವ್ಯ ಇನ್ನೇನಿದ್ರೂ ನೆನಪಾ.. ದಕ್ಷಿಣ ಚಿರಾಪುಂಜಿಯಲ್ಲಿ ವಾಡಿಕೆಯ  ಮಳೆಯಲ್ಲೇ ಕುಸಿತ

0

ಶಿವಮೊಗ್ಗ:ಮಳೆಯ ಅತ್ಯದ್ಭುತ ದೃಶ್ಯಕಾವ್ಯವನ್ನು ಕಣ್ತುಂಬಿಕೊಳ್ಳೊಕ್ಕೆ ಹೇಳಿಮಾಡಿಸಿದ ತಾಣ ಆಗುಂಬೆ.ಕೇವಲ ಸೂರ್ಯಾಸ್ತಕ್ಕಷ್ಟೇ ಅಲ್ಲ,ಮಳೆಯ ಝಡಿಯನ್ನು ನೋಡೊಕ್ಕೋ ಬೆಸ್ಟ್ ಡೆಸ್ಟಿನಿ ಎಂದೇ ಕರೆಯಿಸಿಕೊಳ್ಳುತ್ತೆ..ಆದ್ರೆ ಅಂಥಾ ಆಗುಂಬೆಯಂಥ ಆಗುಂಬೆಗೇ ಗರ ಬಡಿದು ಹೋಗಿದೆ.ಇದಕ್ಕೆಲ್ಲಾ ಕಾರಣವೇ ಕುಸಿಯುತ್ತಾ ಬಂದಿರುವ ವಾಡಿಕೆ ಮಳೆಯ ಪ್ರಮಾಣ..ಅದರಲ್ಲೂ ಈ ಬಾರಿ ವಾಡಿಕೆ ಮಳೆಯಲ್ಲೇ ಶೇಕಡಾ 50 ರಷ್ಟು ಕುಸಿತವಾಗಿರೋದು ಆತಂಕವನ್ನು ಇಮ್ಮಡಿಗೊಳಿಸಿದೆ.

ಆಗುಂಬೆಗೆ ದಕ್ಷಿಣ ಭಾರತದ ಚಿರಾಪುಂಜಿ ಎನ್ನುವ ಖ್ಯಾತಿಯಿದೆ.ಆದರೆ ಅದೇ  ಆಗುಂಬೆಯಲ್ಲಿ ಈ ಬಾರಿ ವಾಡಿಕೆಯ ಮಳೆಯೂ ಆಗಿಲ್ಲ. ವಾಡಿಕೆ ಮಳೆ ಪೈಕಿ ಅರ್ಧದಷ್ಟೂ ಮಳೆಯಾಗದಿರುವುದು ಆಗುಂಬೆಗಿದ್ದ ಖ್ಯಾತಿ-ಹೆಗ್ಗಳಿಕೆ ದೂರವಾಗೊಕ್ಕೆ ಕಾರಣವಾಗ್ತಿದೆಯೇ ಎನ್ನುವ ಶಂಕೆ ಮೂಡುತ್ತೆ.ಪರಿಸ್ತಿತಿ ಹೀಗೆಯೇ ಮುಂದುವರುದ್ರೆ ಮಳೆಗಾಲದ ಮಳೆಯ ದೃಶ್ಯಕಾವ್ಯ ಕೇವಲ ಬಣ್ಣನೆಗೆ ಅಥವಾ ಪಠ್ಯಕ್ಕೆ ಸೀಮಿತವಾಗಲಿದೆಯೇ ಎಂದು ಭಾಸವಾಗುತ್ತೆ.,

ಮಲೆನಾಡಿಗರ ದೌರ್ಭಾಗ್ಯವೋ ಏನೋ..ಗೊತ್ತಿಲ್ಲ.. ಆಗುಂಬೆಯಲ್ಲಿ ಅದೇಕೋ  ವರ್ಷದಿಂದ ವರ್ಷಕ್ಕೆ ಮಳೆ ಕೊರತೆ ಕಾಡುತ್ತಿದೆ.ತಜ್ಞರು ಅಂದಾಜಿಸಿರುವಂತೆ  ಈ ವರ್ಷ ಶೇ.53 ರಷ್ಟು ಮಳೆ ಕೊರತೆ ಎದುರಾಗಿದೆಯಂತೆ.  ಭಾರತದ ಅತೀ ಹೆಚ್ಚು ಮಳೆ ಬೀಳುವ  ಆಗುಂಬೆಯಲ್ಲಿ ದಟ್ಟವಾದ ಅರಣ್ಯವಿದೆ.200 ರಿಂದ 300 ಅಡಿ ಗಳಷ್ಟು ಬೃಹತ್  ಮರಗಳಿವೆ. ಭಾರತದ ಏಕೈಕ ಶಾಶ್ವತ ಹರಿದ್ವರ್ಣವನ ಸಂಶೋಧನಾ ಕೇಂದ್ರ ಇರುವುದು ಇಲ್ಲಿಯೇ.ಹಾಗೆಯೇ ಹೆಸರಾಂತ ಉರಗ ತಜ್ಞ ರೊಮುಲಸ್ ವಿಟೆಕರ್ ಆಗುಂಬೆಯನ್ನು ಕಾಳಿಂಗ ಸರ್ಪಗಳ ರಾಜಧಾನಿ ಎಂದು ಕರೆದಿದ್ದಾರೆ.ಅವರ ಶಿಷ್ಯ ಗೌರಿಶಂಕರ್ ಕಾಳಿಂಗ ಸರ್ಪಗಳ ಅಧ್ಯಯನಕ್ಕಾಗಿ  ಮಳೆಕಾಡು ಸಂಶೋಧನಾ ಕೇಂದ್ರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಇದೆಲ್ಲಕ್ಕಿಂತಯ ಮಲೆನಾಡು ಹಾಗೂ ಕರಾವಳಿಯನ್ನು ಬೆಸೆಯುವ ಇಷ್ಟೆಲ್ಲ ವೈಶಿಷ್ಯಗಳನ್ನು ಹೊಂದಿರುವ ಆಗುಂಬೆ ಕಳೆಗುಂದುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ.ಪ್ರತಿ ವರ್ಷ ಮುಂಗಾರು ಅವಧಿಯಲ್ಲಿ ಅತಿ ಹೆಚ್ಚು ಮಳೆಯಾಗುವುದು ಇಲ್ಲಿನ ವಾಡಿಕೆ. ಆದರೆ ಈ ಬಾರಿ ಅದಕ್ಕೂ ಕೊರತೆ ಬಂದಿದೆ.

ವರ್ಷದಿಂದ ವರ್ಷಕ್ಕೆ ಹೇಗೆ ಕುಸಿದಿದೆ ನೋಡಿ ವಾಡಿಕೆ ಮಳೆಯ ಪ್ರಮಾಣ:ಮುಂಗಾರು ಅವಧಿಯಲ್ಲಿ 6984  ಮಿ.ಮೀ.ಮಳೆಯಾಗೋದು ಇಲ್ಲಿನ ವಾಡಿಕೆ.ಆದರೆ  ಈ ಬಾರಿ 3,310 ಮಿ.ಮೀ. ಮಳೆಯಾಗಿದೆ.ಅಂದ್ರೆ ಶೇಕಡಾ 53 ರಷ್ಟು ಮಳೆಯ ಕೊರತೆ ಕಂಡುಬಂದಿದೆ.2019ರಲ್ಲಿ (ಪೂರ್ಣ ವರ್ಷ)6774.2 ಮಿಮೀ ಮಳೆಯಾಗಿದ್ದರೆ,2018 ರಲ್ಲಿ  8233  ಮಿಮೀ, 2017ರಲ್ಲಿ  6312 ಮಿಮೀ, 2016 ರಲ್ಲಿ  6453 ಮಿಮೀ, 2015 ರಲ್ಲಿ  5524 ಮಿಮೀ, 2014 ರಲ್ಲಿ 7917  ಮಿಮೀ, 2013 ರಲ್ಲಿ  7485  ಮಿಮೀ ಮಳೆಯಾಗಿತ್ತು.ಇನ್ನು 2012 ರಲ್ಲಿ  6934 ಮಿಮೀ, 2011 ರಲ್ಲಿ  7920 ಮಿಮೀ, 2011 ರಲ್ಲಿ  6924 ಮಿಮೀ ಮಳೆಯಾಗಿತ್ತೆನ್ನುತ್ತಾರೆ ಹವಾಮಾನ ತಜ್ಞರು.

ಇತಿಹಾಸವನ್ನು ಗಮನಿಸಿದ್ರೆ ಆಗುಂಬೆಯಲ್ಲಿ ಸಾಧಾರಣ ಮಳೆ ಇದ್ದಾಗಲೂ ವಾಡಿಕೆ ಮಳೆಗೆ ಮೋಸವಾಗಿಲ್ಲ. ಇತ್ತೀಚೆಗೆ ವಾತಾವರಣದಲ್ಲಿನ ಬದಲಾವಣೆಯಿಂದ ವಾರದಲ್ಲಿ ಆಗಬೇಕಾದ ಮಳೆ ಒಂದೇ ದಿನ ಸುರಿಯುತ್ತಿದೆ. ನದಿ, ಕೆರೆ, ಕಟ್ಟೆ ಅಣೆಕಟ್ಟುಗಳು ಭರ್ತಿಯಾಗಿದ್ದರೂ ಅತಿ ಹೆಚ್ಚು ಮಳೆ ಬೀಳುವ ಆಗುಂಬೆ ಸನಿಹನಲ್ಲೇ ಇರುವ ತೀರ್ಥಹಳ್ಳಿಯಲ್ಲಿ ಮಳೆ ಕೊರತೆಯಾಗಿದೆ. ಅದೇನೆ ಆದ್ರೂ ಆಗುಂಬೆಯಲ್ಲಿನ ಮಳೆ ನೀರನ್ನು ನಂಬಿ ಶಿವಮೊಗ್ಗದ ತುಂಗೆ, ಮಾಲತಿ, ವರಾಹಿ ನದಿಗಳು ಬದುಕುತ್ತಿವೆ,ಇದೇ ಕೃಷಿ, ವಿದ್ಯುತ್‌ಗೆ ವರದಾನವಾಗಿದೆ.ಆಗುಂಬೆಯಲ್ಲಿನ ಮಳೆ ಕೊರತೆ ಮಲೆನಾಡಿಗರನ್ನು ಆತಂಕಕ್ಕೀಡು ಮಾಡಿರುವುದಂತು ಸತ್ಯ.ಇದಕ್ಕೆ ಪ್ರಕೃತಿಯೇ ಉತ್ತರ..ಪ್ರಕೃತಿಯೇ ಮದ್ದು..ಅಷ್ಟೇ..

Spread the love
Leave A Reply

Your email address will not be published.

Flash News