2008 ರಲ್ಲಿ MS ಪದವಿ, 2010 ರಲ್ಲಿBE ಪದವಿ…ಇದ್ಹೇಗೆ ಸಾಧ್ಯ ಕುಸುಮಾ ಮೇಡಮ್.. ವಿವಾದದ ಕೇಂದ್ರವಾದ RR ನಗರ ಕೈ ಅಭ್ಯರ್ಥಿಯ “ವಿದ್ಯಾರ್ಹತೆ..?!

0

ಬೆಂಗಳೂರು: 2008 ರಲ್ಲಿ ಎಂಎಸ್ ಪದವಿ( ತಾಂತ್ರಿಕ ಶಿಕ್ಷಣದ ಪರಿಭಾಷೆಯಲ್ಲಿ ಸ್ನಾತಕೋತ್ತರ ಪದವಿ ಎಂದೂ ಹೇಳಲಾಗುತ್ತೆ)..2010 ರಲ್ಲಿ ಪದವಿ..ಸಹಜವಾಗಿ ಪದವಿ ಆದ ಮೇಲೆ ಸ್ನಾತಕೋತ್ತರ ಪದವಿ ಪಡೆಯುವುದು ಶೈಕ್ಷನಿಕ ವಾಡಿಕೆ..

ಆದ್ರೆ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ನಲ್ಲಿ ಸಾಕಷ್ಟು ವಿರೋಧಗಳ ನಡುವೆಯೇ  ಟಿಕೆಟ್ ಪಡೆದ ಕೈ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ( ದಿವಂಗತ ಪತಿ ಡಿ.ಕೆ ರವಿ ಹೆಸರನ್ನು ಬಳಸಿಕೊಳ್ಳಬಾರದು ಎನ್ನುವ ಅತ್ತೆಯ ಸೂಚನೆ ಮೇರೆಗೆ ತನ್ನ ಹೆಸರ ಮುಂದೆ ಇದ್ದ ರವಿ ಹೆಸರನ್ನು ತೆಗೆದು ತಂದೆ ಹನುಮಂತರಾಯಪ್ಪ ಅವರ ಹೆಸರನ್ನು ಸೇರಿಸಿಕೊಂಡಿದ್ದಾರೆ ಕುಸುಮಾ) ವಿಷಯದಲ್ಲಿ ಇದು ಉಲ್ಟಾ ಆಗಿದೆ.

ಅವರೇ ಹೇಳಿಕೊಂಡಿದ್ದಾರೆನ್ನುವ ಮಾಹಿತಿ ನೋಡಿದ್ರೆ ಮೊದಲು ಅವರು ಸ್ನಾತಕೋತ್ತರ ಪದವಿ ಪಡೆದು ನಂತರ ಪದವಿ ಗಿಟ್ಟಿಸಿದ್ದಾರೆ.ಶೈಕ್ಷಣಿಕವಾಗಿ ತೀವ್ರ ವಿರೋದಾಭಾಸದ ಈ ಸಂಗತಿ ಈಗ ರಾಜಕೀಯ ಅಖಾಡದಲ್ಲಿ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿದೆ.ಕೈ ನಾಯಕರನ್ನು ತೀವ್ರ ಮುಜುಗರಕ್ಕೀಡುಮಾಡಿದೆ.

ಚುನಾವಣೆ ಹೊಸ್ತಿಲಲ್ಲೆ ಆರ್ ಆರ್ ನಗರದ ಕೈ ಅಭ್ದರ್ಥಿ ಕುಸುಮಾ  ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.ವಿದ್ಯಾರ್ಹತೆ ವಿಷಯದಲ್ಲಿ ಕುಸುಮಾ ಸುಳ್ಳನ್ನು ಹೇಳಿಕೊಂಡಿದ್ದಾರೆನ್ನುವುದು ಅವರ ಮೇಲಿರುವ ಆರೋಪ.ತಮ್ಮ ಎಂಎಸ್ ಪದವಿಯನ್ನು 2008 ರಲ್ಲಿ ಬೋಸ್ಟನ್ ನ ಮ್ಯಾಸುಚೆಸ್ಟ್ಸ್ ವಿವಿಯಲ್ಲಿ ಪಡೆದಿರುವುದಾಗಿ ಹೇಳಿಕೊಂಡಿರುವ ಅವರು 2010 ರಲ್ಲಿ ತಮ್ಮ ಬಿಇ ಪದವಿಯನ್ನು ಬೆಂಗಳೂರಿನ ಡಾ.ಅಂಬೇಡ್ಕರ್ ಕಾಲೇಜಿನಲ್ಲಿ ಪಡೆದಿದ್ದಾರಂತೆ.ಸಾಮಾನ್ಯವಾಗಿ ಎಲ್ಲರೂ ಪದವಿ ಮುಗಿಸಿದ ಮೇಲೆ ಸ್ನಾತಕೋತ್ತರ ಪದಿ ಪಡೆಯುವುದು ವಾಡಿಕೆ.ಆದ್ರೆ 2008ರಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು 2010 ರಲ್ಲಿ ಪದವಿಯನ್ನೇಗೆ ಪಡೆಯೊಕ್ಕೆ ಸಾಧ್ಯ ಎಂದು ಬಿಜೆಪಿ ವರಸೆ ಶುರುವಿಟ್ಟುಕೊಂಡಿದೆ.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ.ಒಂದ್ವೇಳೆ ಇದು ನಿಜವಾಗಿದ್ದೇ ಆದಲ್ಲಿ ಇದು ದೊಡ್ಡ ರಾಜಕೀಯ ಕೋಲಾಹಲವನ್ನೆ ಸೃಷ್ಟಿಸಬಹುದು ಎನ್ನಲಾಗ್ತಿದೆ.ಆದ್ರೆ ಕುಸುಮಾ ಇದೆಲ್ಲಾ ರಾಜಕೀಯ ಪಿತೂರಿ ಎಂದು ಆರೋಪಿಸುತ್ತಿದ್ದಾರಂತೆ.

ಬಿಜೆಪಿ ಸಚಿವ ಮಾದುಸ್ವಾಮಿ ಅವರ ಬೆಂಬಲಿಗರು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಕುಸುಮಾ ಅವರ ಶೈಕ್ಷಣಿಕ ವಿರೋದಾಭಾಸದ ಸಂಗತಿಯ ಪೋಸ್ಟ್ ಗಳನ್ನು ಹಾಕಿ ಅದನ್ನು ವೈರಲ್ ಮಾಡಿದ್ದಾರೆ.ಬಿಜೆಪಿ ಕೂಡ  ಕೈ ಪಕ್ಷದ ನೈತಿಕತೆ ಹಾಗು ಸಿದ್ಧಾಂತವನ್ನು ಪ್ರಶ್ನಿಸ್ಲಿಕ್ಕೆ ಇದು ಪ್ರಬಲ ಅಸ್ತ್ರವಾಗುವ ಸಾಧ್ಯತೆಗಳಿವೆ.ಇನ್ನೊಂದೆಡೆ ಮುನಿರತ್ನ ಕೂಡ ಇದನ್ನು ತಮ್ಮ ರಾಜಕೀಯ ಹಿತಾಸಕ್ತಿಗೆ ಬಳಸಿಕೊಳ್ಳುವ ಸಾಧ್ಯತೆಗಳಿವೆ.

ಇಷ್ಟೆಲ್ಲಾ ಆದರೂ ಕುಸುಮಾ ಈ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ.ಅವರೇ ಈ ಸಂಗತಿಗಳನ್ನು ಹೇಳಿಕೊಂಡಿದ್ದಾರೆನ್ನುವ ಸಂಗತಿಗಳು ವಿರೋಧಿಗಳು ಸೃಷ್ಟಿಸಿರುವಂತದ್ದಾ..ಅವರ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ಹೀಗೆ ಹಾಕಲಾಗಿದೆಯೇ..ಗೊತ್ತಾಗ್ತಿಲ್ಲ.ಕುಸುಮಾ ಇದಕಕ್ಕೆ ಪ್ರತಿಕ್ರಿಯಿಸುವವರೆಗೂ ಯಾವುದಕ್ಕೂ ಸ್ಪಷ್ಟತೆ ಸಿಗೊಲ್ಲ..

ಆದ್ರೆ ಒಂದ್ವೇಳೆ ಕುಸುಮಾ ತಮ್ಮ ಶಿಕ್ಷಣದ ವಿಚಾರದಲ್ಲಿ ಸುಳ್ಳು ಹೇಳಿದ್ದೇ ಆದಲ್ಲಿ,ಅದು ಕೈ ಪಕ್ಷಕ್ಕೆ ದೊಡ್ಡ ಸಂಕಷ್ಟವನ್ನೇ ತಂದೊಡ್ಡಬಹುದು.ಇದನ್ನು ಪ್ರಶ್ನಿಸ್ಲಿಕ್ಕೆ ಈಗಾಗ್ಲೇ ಬಿಜೆಪಿ ಹಾಗು ಜೆಡಿಎಸ್ ವೇದಿಕೆಯನ್ನು ಸಜ್ಜುಮಾಡಿಕೊಂಡಿವೆಯಂತೆ..ಆದ್ರೆ ಕುಸುಮಾ ಇದಕ್ಕೆ ಪ್ರತಿಕ್ರಿಯಿಸುವವರೆಗು ಆಪಾದನೆ..ಕೇವಲ ಆಪಾದನೆ ಅಷ್ಟೇ..   

2008 ರಲ್ಲಿ MS ಪದವಿ, 2010 ರಲ್ಲಿBE ಪದವಿ…ಇದ್ಹೇಗೆ ಸಾಧ್ಯ ಕುಸುಮಾ ಮೇಡಮ್.. ವಿವಾದದ ಕೇಂದ್ರವಾದ RR ನಗರ ಕೈ ಅಭ್ಯರ್ಥಿಯ “ವಿದ್ಯಾರ್ಹತೆ..?!

Spread the love
Leave A Reply

Your email address will not be published.

Flash News