ಕೌರವ ಪಾಟೀಲ್ ವಿರುದ್ದ “ಟ್ರಾನ್ಸ್ ಫರ್”ಡೀಲ್ ಆರೋಪ. ಅಧಿಕಾರಿಗಳನ್ನು ಡೀಲ್ ಗೆ ಬಳಸಿಕೊಂಡ್ರ ಸಚಿವ ಪಾಟೀಲ್  

0

ಬೆಂಗಳೂರು:ರಾಜ್ಯದ ಕೆಲವೇ ಕೆಲವು ಉತ್ಸಾಹಿ ಹಾಗೂ ದಕ್ಷ-ಸಮರ್ಥ ಸಚಿವರಲ್ಲಿ ಒಬ್ಬರೆನಿಸಿಕೊಳ್ಳೋರು ಕೌರವ ಬಿ.ಸಿ ಪಾಟೀಲ್.ಅಧಿಕಾರ ಸಿಕ್ಕ ದಿನದಿಂದ್ಲೂ ರಾಜ್ಯವನ್ನೆಲ್ಲಾ ಸುತ್ತಿ ತಮ್ಮ ಇಲಾಖೆಯನ್ನು ಪುನಶ್ಚೇತನಗೊಳಿಸಿ ಅದಕ್ಕೊಂದು ಹೊಸ ರೂಪ ಕೊಟ್ಟ ಖ್ಯಾತಿಯೂ ಪಾಟೀಲ್ ಗೆ ಸಲ್ಲುತ್ತೆ..ಆದ್ರೆ ಇದೆಲ್ಲದರ ನಡುವೆ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.ಅದು ಕೂಡ ಅಂತಿಂಥ ಆರೋಪವಲ್ಲ.ಡೀಲ್..ಡೀಲ್..ಕೋಟ್ಯಾಂತರ ಡೀಲ್ ಆರೋಪ..ಈ ದೂರು ಮುಖ್ಯಮಂತ್ರಿಗಳವರೆಗೂ ತಲುಪಿಬಿಟ್ಟಿದೆ.

ಕೃಷಿ ಸಚಿವ ಬಿ.ಸಿ ಪಾಟೀಲ್ ನಿಜಕ್ಕು ಹೀಗೆ ಮಾಡಿದ್ರಾ.?.ಹೀಗೆ ಮಾಡುವ ದರ್ದು-ಹಕೀಕತ್ತು ನಿಜಕ್ಕೂ ಅವರಿಗಿತ್ತಾ..? ಅಧಿಕಾರ ಸಿಗ್ತಿದ್ದಂಗೆ ಹಣ ಮಾಡುವ ದುರಾಸೆಗೆ ಅವ್ರೇನಾದ್ರೂ ಬಲಿಯಾದ್ರಾ..? ಅವರ ವಿರುದ್ಧ ಕೇಳಿಬಂದಿರುವ ಆರೋಪ ನಿಜನಾ..ಅಥವಾ ರಾಜಕೀಯ ದುರುದ್ದೇಶಕ್ಕೆ ಮಾಡಲಾದ ಷ ಡ್ಯಂತ್ರನಾ..? ಸಾರ್ವಜನಿಕವಾಗಿ ಕೆಲವೊಂದು ಪ್ರಶ್ನೆಗಳು ಹೀಗೆ ಕಾಡಲಾರಂಭಿಸಿವೆ..

ಹೌದು… ಕೃಷಿ ಸಚಿವ ಬಿ.ಸಿ ಪಾಟೀಲ್ ತಮ್ಮ ಇಲಾಖೆಯ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸೇರಿ ಡೀಲ್ ನಡೆಸಿದ್ದಾರೆನ್ನುವ ಆರೋಪ ಕೇಳಿಬಂದಿದೆ.ಅದೇನೇ ಇರಲಿ, ದಶಕಗಳ ಕಾಲ ರಾಜಕೀಯ ದಲ್ಲಿದ್ದರೂ ಹಗರಣಗಳಲ್ಲಿ ಹೆಸರು ಹಾಳು ಮಾಡಿಕೊಂಡವ್ರಲ್ಲ ಬಿ.ಸಿ ಪಾಟೀಲ್.ಉಳಿದವರಂತೆ ನೀಯತ್ತನ್ನೂ ಖರಾಬ್ ಗೊಳಿಸಿಕೊಂಡವರಲ್ಲ..ಹಾಗಿರುವಾಗ ಕೃಷಿ ಸಚಿವ ಸ್ಥಾನ ಸಿಗ್ತಿದ್ದಂಗೆ..ಇಲಾಖೆಯಲ್ಲಿ ಒಂದಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದಾರೆನ್ನುವ ಮಾತು ಕೇಳಿಬರುತ್ತಿರುವಾಗ್ಲೇ..ವರ್ಗಾವಣೆ ದಂಧೆ   ನಡೆಸಿದ್ದಾರೆನ್ನುವ ಮಾಹಿತಿ ಇದೀಗ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆ,ಸಚಿವ ಸ್ಥಾನಕ್ಕೆ ಕುತ್ತು ತರುವಷ್ಟು ಗಂಭೀರವಾದ ವಿಚಾರದ ಸ್ವರೂಪ ಪಡೆದುಕೊಂಡಿದೆ.

ಅಂದ್ಹಾಗೆ ವಿನೋದ್ ಎನ್ನುವವರು ನೀಡಿದ್ದಾರೆನ್ನುವ ದೂರಿನ ಪ್ರಕಾರ,ಕೃಷಿ ಇಲಾಖೆಯಲ್ಲಿ ಗ್ರೂಪ್ ಎ,ಬಿ ಮತ್ತು ಸಿ ಗ್ರೂಪ್ ಅಧಿಕಾರಿ,ನೌಕರರ ವರ್ಗಾವಣೆಗಾಗಿ ಕೃಷಿ ಸಚಿವ ಬಿ.ಸಿ ಪಾಟೀಲ್ ಡೀಲ್ ನಡೆಸಿದ್ದಾರಂತೆ.ಇದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ನೌಕರರು ಸಂಗ್ರಹಿಸಿಟ್ಟುಕೊಂಡಿದ್ದಾರಂತೆ. ಡೀಲ್ ನಲ್ಲಿ ಕೋಟ್ಯಾಂತರ ವಹಿವಾಟು ನಡೆದಿದೆ.ಮೊಬೈಲ್ ಕರೆಗಳು,ಸ್ಟಿಂಗ್ ಆಪರೇಷನ್ ಮಾಡಿರುವ ಸಾಕಷ್ಟು ಸಾಕ್ಷ್ಯಗಳನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನೀಡಿರುವ ದೂರಿನ ಜೊತೆಗೆ ನೊಂದ ನೌಕರರು ನೀಡಿದ್ದಾರಂತೆ.

2020ರ  ಜುಲೈ 1 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ   ವಿನೋದ್ ಕೃಷಿ ಇಲಾಖೆಯಲ್ಲಿ ನಡೆದಿದೆ ಎನ್ನಲಾ ಗುತ್ತಿರುವ ಡೀಲ್ ಬಗ್ಗೆ ಪತ್ರವೊಂದನ್ನು ಬರೆದಿದ್ದರು.ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಕೃಷಿ ಸಚಿವರು ತಮ್ಮ ಇಲಾಖೆಯ ಅಧಿಕಾರಿ ಸಿಬ್ಬಂದಿಯನ್ನು ಬಳಸಿಕೊಂಡಿರುವುದನ್ನೂ ಉಲ್ಲೇಖಿಸಿ ಅದಕ್ಕೆ ಪೂರಕವಾದ ಸಾಕ್ಷ್ಗಗಳನ್ನೂ ಒದಗಿಸಿದ್ದರು.

ಬಿ.ಸಿ ಪಾಟೀಲ್ ನೇರವಾಗಿ ಈ ಡೀಲ್ ನಲ್ಲಿ ಭಾಗಿಯಾಗದಿದ್ದರೂ, ತಮ್ಮ ಆಪ್ತ ಕಾರ್ಯದರ್ಶಿ  ಸಿಎಲ್ ಶಿವಕುಮಾರ್,ಮಂಜುನಾಥ್,ದಯಾನಂದ್ ಹಾಗೂ ನಟರಾಜ್ ಅವರ ಮೂಲಕ ವರ್ಗಾವಣೆಗೆ ಆಸಕ್ತರಿರುವ ನೌಕರರಿಗೆ ವಾಟ್ಸಪ್ ಕರೆ ಮಾಡಿ ಹುದ್ದೆಗೆ ತಕ್ಕಂತೆ ಹಣ ಡಿಮ್ಯಾಂಡ್ ಮಾಡಿದ್ದಾರೆನ್ನುವುದು ಕೃಷಿ ಇಲಾಖೆ ನೌಕರ ವಿನೋದ್ ಎನ್ನುವವರ ಆರೋಪ.ಹುದ್ದೆಗೆ ಲಕ್ಷದಿಂದ ಕೋಟಿವರೆಗೂ ವ್ಯವಹಾರ ನಡೆದಿದೆ.ಕೆಲವು ನೌಕರರು ಹಣ ಕೊಟ್ಟಿದ್ದಾರೆ.ಇನ್ನು ಕೆಲವರು ಅಡ್ವಾನ್ಸ್ ಕೊಟ್ಟು ಇನ್ನೊಂದಷ್ಟನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ದೂರಿರುವ ವಿನೋದ್,ಮುಖ್ಯಮಂತ್ರಿಗಳಿಗೆ ಡೀಲ್ ಹಾಗೂ ವ್ಯವಹಾರದ ಮೊತ್ತದ  ಪಟ್ಟಿ ಎನ್ನಲಾಗುತ್ತಿರುವ ದಾಖಲೆಯೊಂದನ್ನು ಕೂಡ ರವಾನಿಸಿದ್ದಾರೆ.ರಾಜ್ಯಪಾಲರು,ಕರ್ನಾಟಕ ವಿಧಾನಸಭೆ ವಿಪಕ್ಷ ನಾಯಕರು,ಮಾನ್ಯ ವಿರೋಧ ಪಕ್ಷದ ನಾಯಕರು,ಕರ್ನಾಟಕ ಉಚ್ಛ ನ್ಯಾಯಾಲಯದ ರಿಜಿಸ್ಟ್ರಾರ್ ಹಾಗೂ ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷರಿಗೂ ಕೂಡ ದೂರಿನ ಪ್ರತಿಗಳನ್ನು ರವಾನಿಸಲಾಗಿದೆ.ಈ ಪತ್ರದ ಹಿಂದಿರುವ ಸತ್ಯಾಸತ್ಯತೆಯನ್ನು ಅವಲೋಕಿಸುವ ಕೆಲಸ ನಡೆಯಬೇಕಿದೆ.

ಈ ಬಗ್ಗೆ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಷಡಕ್ಷರಿ,ದೂರಿನ ಬಗ್ಗೆ ಮಾಹಿತಿ ಇದೆ.ಇದರ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಕನ್ನಡ ಫ್ಲಾಶ್ ನ್ಯೂಸ್ ಗೆ ತಿಳಿಸಿದ್ದಾರೆ.ಒಂದ್ವೇಳೆ ಬಿ.ಸಿ ಪಾಟೀಲ್ ಹಣದ ದುರಾಸೆಗೆ ಬಿದ್ದು ಈ ಮೆಗಾ ಟ್ರಾನ್ಸ ಫರ್ ಡೀಲನ್ನು ಅಧಿಕಾರಿಗಳ ಮೂಲಕ ನಡೆಸಿದ್ದಾರೆನ್ನುವುದು ಸಾಕ್ಷ್ಯಧಾರಗಳ ಸಮೇತ ಪ್ರೂವ್ ಆಗಿದ್ದೇ ಆದಲ್ಲಿ,ಅದು ನೌಕರರಿಗಷ್ಟೇ ಅಲ್ಲ,ಸಚಿವ  ಬಿ.ಸಿ ಪಾಟೀಲ್ ಗೂ ಬಹುದೊಡ್ಡ ಸಂಕಷ್ಟ ತಂದೊಡ್ಡುವುದಂತೂ ಸತ್ಯ..ಅಷ್ಟೇ ಅಲ್ಲ,ಬಿ.ಸಿ ಪಾಟೀಲ್ ಅವರ ರಾಜಕೀಯ ಭವಿಷ್ಯವನ್ನೇ ಅಂತ್ಯಗೊಳಿಸಬಹುದು.ಇದಕ್ಕೆ ವ್ಯತಿರಿಕ್ತವಾಗಿ ಇದೊಂದು ಷಡ್ಯಂತ್ರ ಎನ್ನೋದೇನಾದ್ರೂ ಪ್ರೂವ್ ಆದ್ರೆ ದೂರು ಕೊಟ್ಟವರ ಗ್ರಹಚಾರ ಬಿಟ್ಟೋಗೋದಂತೂ ಗ್ಯಾರಂಟಿ..

Spread the love
Leave A Reply

Your email address will not be published.

Flash News