ಮುನಿಗೆ ದುಬಾರಿಯಾಗಲಿದೆಯಾ..? ದುಸ್ವಪ್ನವಾಗಿ ಕಾಡ್ತಿರೋ BJP  ಕಾರ್ಯಕರ್ತರ ವಿರುದ್ಧದ “ಆ” ದೂರುಗಳು..?.! ದೂರು ವಾಪಸ್ ಪಡೆದಾಕ್ಷಣ ಎಲ್ಲವೂ ಸರಿಹೋಗ್ತದಾ.? ಮುನಿ ವಿರುದ್ದ ನಿಗಿನಿಗಿ ಕೆಂಡವಾಗಿರೋ ಬಿಜೆಪಿ ಕಾರ್ಯಕರ್ತರ ಪ್ರಶ್ನೆ.?!

0

ಬೆಂಗಳೂರು:ಅಖಾಡದಲ್ಲಿದ್ದರೂ ಮುನಿರತ್ನಂಗೆ ಸೋಲಿನ ಬಗ್ಗೆ ಭಯ ಇದ್ದೇ ಇದೆಯಾ…? ಬಿಜೆಪಿ ಸೇರಿದ್ರೂ ಮಗ್ಗಲು ಮುಳ್ಳಾಗಿ ಕಾಡ್ತಿರುವ ಭಿನ್ನಮತದ ಬಿಸಿಗೆ ಅಕ್ಷರಶಃ ತತ್ತರಿಸಿ ಹೋಗಿದ್ದಾರಾ..?.ಬಿಜೆಪಿಯಲ್ಲಿ ತನ್ನ ವಿರುದ್ದ ಬುಗಿಲೆದ್ದಿರುವ ಅಸಮಾಧಾನದ ಆಸ್ಪೋಟವನ್ನು ತಣ್ಣಗಾಗಸಿದ್ದರೆ ಬಿಜೆಪಿ ಮತದಾರರ ಬಳಿಯೆ ತೆರಳಕ್ಕೆ ಆಗೊಲ್ಲ ಎನ್ನೋ ಸತ್ಯ  ಅರಿವಾಗಿದೆಯೇ..? .ಹಾಗಾಗಿನೇ  ಕೈ ಶಾಸಕರಾಗಿ ದ್ದಾಗ ರಾಜಕೀಯ ಹಾಗೂ ವೈಯುಕ್ತಿಕ  ಕಾರಣಗಳಿಗಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಹಾಕಿಸಿದ್ದರೆನ್ನಲಾದ ಎಲ್ಲಾ   ಕೇಸ್ ಗಳನ್ನು ವಾಪಸ್ ಪಡೆಯೊಕ್ಕೆ ನಿರ್ಧರಿಸಿದ್ದಾರೆನ್ನಲಾಗ್ತಿದೆ ಮುನಿರತ್ನಂ ಅವರ ಆಪ್ತ ಮೂಲಗಳು..

ಬಿಜೆಪಿ ಹುರಿಯಾಳಾಗಿ ಕಣದಲ್ಲಿರುವ ಮುನಿರತ್ನಂ ಕೈ ಶಾಸಕರಾಗಿದ್ದಾಗ ಅಭಿವೃದ್ಧಿ ಕೆಲಸ ಮಾಡಿದ್ದಕ್ಕಿಂತ ದ್ವೇಷ ಹಾಗು ಜಿದ್ದಿನ ರಾಜಕಾರಣ ಮಾಡಿ ಕ್ಷೇತ್ರವನ್ನು “ರಿಪಬ್ಲಿಕ್ ಆಫ್ ಆರ್ ಆರ್ ನಗರ” ವನ್ನಾಗಿಸಿಕೊಂಡಿದ್ದೇ ಹೆಚ್ಚೆನ್ನುವ ಮಾತನ್ನು ನಾವಲ್ಲ ಅವರಿಂದ ಕೇಸ್ ಜಡಿಸಿಕೊಂಡು ಇವತ್ತಿಗೂ ಪೊಲೀಸ್ ಠಾಣೆ-ಕೋರ್ಟ್ ಮೆಟ್ಟಿಲನ್ನು ಏರುತ್ತಿರುವ ಬಿಜೆಪಿ ಕಾರ್ಯಕರ್ತರೇ ಮಾಡ್ತಿರುವ ಆರೋಪ.ಮುನಿರತ್ನಂ ಅಧಿಕಾರದಲ್ಲಿದ್ದಾಗ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸ್ ಪವರ್ ನ್ನು ಮಿಸ್ಯೂಸ್ ಮಾಡಿಕೊಂಡು   250ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಿರುವ ಬಗ್ಗೆ ಮಾತುಗಳಿವೆ.ಆದ್ರೆ ಅವೇ ಕೇಸ್ ಗಳು ಇವತ್ತು  ಮುನಿರತ್ನಂ ಗೆಲುವಿಗೆ ಅತ್ಯಗತ್ಯವಾಗಿರುವ ಬಿಜೆಪಿ ಬೆಂಬಲಕ್ಕೆ ತೊಡಕಾಗಿರುವುದು ದುರಾದೃಷ್ಟಕರ.ಹಾಗಾಗಿನೇ ಮುನಿರತ್ನಂ ಒಲ್ಲದ ಮನಸಿನಿಂದ್ಲೇ ಈಗ ಆ ಎಲ್ಲಾ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳುವ ಮಾತನ್ನಾಡುತ್ತಿದ್ದಾರೋ..ಗೊತ್ತಾಗ್ತಿಲ್ಲ ಎಂದು ಹುಬ್ಬೇರಿಸಿ ಪ್ರಶ್ನಿಸ್ತಾರೆ.

ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು ಕೊನೇ ತನಕವರೆಗೂ ಟಫ್ ಫೈಟ್ ಕೊಟ್ಟ ತುಳಸಿ ಮನಿರಾಜು ಗೌಡ ಅವರ ಪ್ರಕಾರವೇ ಅವರ ಹಾಗೂ ಅವರ ಬೆಂಬಲಿಗರ ಮೇಲೆ 20ಕ್ಕು ಹೆಚ್ಚು ದೂರುಗಳನ್ನು ಮುನಿರತ್ನಂ ನೀಡಿಸಿದ್ದರಂತೆ.ದೂರು ಕೊಡ್ಲಿಕ್ಕಂತನೇ ಒಂದು ಪಟಾಲಂ ಸೃಷ್ಟಿಸಿಕೊಟ್ಟು ಕೊಂಡಿದ್ದರೆನ್ನುವ  ಆಪಾದನೆ ಕೂಡ ತುಳಸಿ ಮಾಡ್ತಾರೆ.

ತಾನೊಬ್ಬ ಶಾಸಕನಾಗಿದ್ದರಿಂದ ದೂರು ಕೊಡೋದನ್ನೇ ಕಾಯಕವಾಗಿಸಿಕೊಂಡ್ರೆ ಕ್ಷೇತ್ರದ ಜನ ತಪ್ ತಿಳಿದುಕೊಳ್ತಾರೆನ್ನುವುದು ಮುನಿ ಪ್ಲ್ಯಾನ್ ಆಗಿತ್ತು.ರಾಜ್ಯದಲ್ಲಿ ಅವರದೇ ಕಾಂಗ್ರೆಸ್ ಸರ್ಕಾರ ಇದ್ದುದ್ದರಿಂದ ತನ್ನ ಶಾಸಕ ಸ್ಥಾನವನ್ನು ದುರ್ಬಳಕೆ ಮಾಡ್ಕಂಡು  ಕ್ಷೇತ್ರದ  ಅಭಿವೃದ್ಧಿ ಬಗ್ಗೆ ಪ್ರಶ್ನಿಸಿದ್ರೂ ಅಂಥವ್ರ ವಿರುದ್ದ ಪಟಾಲಂ ಮೂಲಕ ದೂರು ನೀಡಿಸಿ ಕಾನೂನಿನ ಚೌಕಟ್ಟಿನಲ್ಲಿ ಬಾಯಿ ಮುಚ್ಚಿಸುವ ಕೆಲಸವನ್ನು ಮುನಿರತ್ನಂ ಮಾಡುತ್ತಿದ್ದರೆನ್ನುವುದು ತುಳಸಿ ಅವರ ಆರೋಪ.

ತುಳಸಿ ಮುನಿರಾಜು ಅವರ ಹೇಳಿಕೆ  ಮುನಿರತ್ನಂ ವಿರುದ್ಧ ಟಿಕೆಟ್ ಸಿಗಲಿಲ್ಲ ಎನ್ನುವ ಸಿಟ್ಟು-ಬೇಸರದ ಕಾರಣಕ್ಕಿರಬಹುದಾ ಎಂದುಕೊಳ್ಳೋಣ.ಆದ್ರೆ ಒಂದು ಜಮಾನದಲ್ಲಿ ಮುನಿರತ್ನಂ ವಿರುದ್ಧ  ಧ್ವನಿ ಎತ್ತಿದ್ದ ಮಹಿಳಾ ಕಾರ್ಪೊರೇಟರ್ಸ್ ಗಳ ಇತಿಹಾಸವನ್ನೇ ತೆಗೆದುಕೊಂಡ್ರೂ  ಮುನಿರತ್ನಂ ಆಟಾಟೋಪಕ್ಕೆ ಕಿಡಿಕಾರಿದ್ದ ದಿನಗಳು ನೆನಪಾಗ್ತವೆ ಎನ್ನುತ್ತಾರೆ ಒಟ್ಟಾರೆ ಘಟನೆಯನ್ನು  ನೋಡಿರುವ ಪ್ರಜ್ಞಾವಂತರು.

ಮಂಜುಳಾ ನಾರಾಯಣಸ್ವಾಮಿ:ಲಗ್ಗೆರೆ ವಾರ್ಡ್ ನಲ್ಲಿರುವ ಕೈ,ಜೆಡಿಎಸ್ ಮತದಾರರೇ ಒಂದು ಖಾಸಗಿ ಚಾನೆಲ್ ನ ಕಾರ್ಯಕ್ರಮವೊಂದರಲ್ಲಿ ಮುನಿರತ್ನಂ ವಿರುದ್ಧಮಂಜುಳಾ ನಾರಾಯಣಸ್ವಾಮಿ   ಮಾಡಿದ್ದ ಆರೋಪ..ಬಳಸಿದ್ದ ಪದಗಳನ್ನು ಇವತ್ತೂ ನೆನಪಿಸಿಕೊಂಡು  ಆಶ್ಚರ್ಯಪಡುತ್ತಿದ್ದಾರೆ .ಅವತ್ತು ಹಾಗೆಲ್ಲಾ ಗುಡುಗಿದ್ದ ಮಂಜುಳಾ ಮೇಡಮ್ ಇವತ್ತು ಅದೇ ಮುನಿರತ್ನಂ ಪರ ಕ್ಯಾಂಪೇನ್ ಮಾಡುವ ಅಸಹಾಯಕ ಸ್ತಿತಿಯಲ್ಲಿದ್ದಾರೆ.(ಜೆಡಿಎಸ್ ನಲ್ಲಿದ್ದ ಮಂಜುಳಾ ಈಗ ಬಿಜೆಪಿ ಕಾರ್ಯಕರ್ತೆ).ಮುನಿರತ್ನಂ ವಿರುದ್ಧ ಪಾಲಿಕೆ ಸಭೆಗಳಲ್ಲಿ ಕಣ್ಣೀರು ಹಾಕಿ,ಹೊರಗೆ ಪ್ರತಿಭಟನೆ ಮಾಡಿದ್ದ ಆ ದಿನಗಳನ್ನು ಜನ ಇನ್ನೂ ಮರೆತಿಲ್ಲ..

ಕೆಟ್ಟಾಕೊಳಕ  ಬೈಯ್ದು…ಮಾತಿನಲ್ಲೇ ಅವರ ಕಾನ್ ದಾನನ್ನೆಲ್ಲಾ ಕರೆದಿದ್ದ ಮಂಜುಳಾ ಮೇಡಮ್ ಇವತ್ತೂ ನಮ್ಮ ಮುನಿರತ್ನಂ ನಾಯ್ಡು ಅಣ್ಣಂಗೆ ವೋಟ್ ಹಾಕಿ ಎಂದು ಲಗ್ಗೆರೆ ವಾರ್ಡ್ ನಲ್ಲಿ ಕ್ಯಾಂಪೇನ್ ಹೋದಾಗ ಜನ ಅವರನ್ನು ಹೇಗೆ ರಿಸೀವ್ ಮಾಡ್ಕಬೋದು ನೀವೇ ಊಹಿಸಿ. ಎಂದು ಪ್ರಶ್ನಿಸ್ತಾರೆ.ಬಿಜೆಪಿ ಪರ ಕ್ಯಾಂಪೇನ್ ಮಾಡ್ತಿರಬಹುದು.ಅವರಿಗೆ ಮತದಾರ ಮನಸು ಮಾಡಿದ್ರೆ ಏನ್ ಮಾಡ್ಬೋದೆನ್ನುವುದನ್ನು ಪ್ರೂವ್  ಮಾಡಿ ತೋರಿಸ್ತೇವೆ ಎಂದು ಸವಾಲೆಸೆದಿದ್ದಾರೆ.

ಆಶಾ ಸುರೇಶ್: ಹೇಗೆಲ್ಲಾ ಬಣ್ಣ ಬದಲಾಯಿಸ್ಬೋದು ಎನ್ನುವುದಕ್ಕೆ ಈ ಮಹಾತಾಯಿನೇ ಉತ್ತಮ ನಿದರ್ಶನ ಬಿಡಿ ಎನ್ನುತ್ತಾರೆ ಕೈ ಬೆಂಬಲಿಗರು. .ಮಂಜುಳಾ ನಾರಾಯಣಸ್ವಾಮಿ ಮುನಿರತ್ನಂ ವಿರುದ್ದ ಗುಡುಗೊಕ್ಕೆ, ದ್ವೇಷ ಕಾರೊಕ್ಕೆ ಅವ್ರು ಜೆಡಿಎಸ್ ಕಾರ್ಪೊರೇಟರ್ ಆಗಿದ್ರೆನ್ನುವುದೇ ಕಾರಣ ಎಂದಿಟ್ಟುಕೊಳ್ಳೋಣ. ಆದ್ರೆ ಎಚ್ ಎಂಟಿ ವಾರ್ಡ್ ನ ಆಶಾ ಸುರೇಶ್ ಮುನಿ ಅವರದೇ ಕೈ ಕಾರ್ಪೊರೇಟರ್ ಆಗಿದ್ದವರು.

ಮುನಿರತ್ನಂ, ವಾರ್ಡ್ ನಲ್ಲಿ ಕೆಲಸ ಮಾಡ್ಲಿಕ್ಕೆ ಅವಕಾಶ ಕೊಡ್ತಿಲ್ಲ..ಯಾವುದೆ ಕಾರ್ಯಕ್ರಮಕ್ಕೂ ಕರೀತಿಲ್ಲ..ನನ್ನನ್ನು ಅವಮಾನಿಸಲಾಗ್ತಿದೆ.ನನ್ನ ಗಂಡ ಸುರೇಶ್ ಹಾಗೂ ಮೈದುನನ್ನು ಮುಗಿಸಿ ಹಾಕುವ ಮಾತನ್ನಾಡುತ್ತಿದ್ದಾರೆ ಎಂದು ರಂಪಾಟ ಮಾಡಿದ್ರು. ಕೌನ್ಸಿಲ್ ಸಭೆಗಳಲ್ಲಿ ಕಣ್ಣೀರಾಕಿದ್ರು. .ಆಗ ಆಶಾ ಹಾಗೂ ಮುನಿ ನಡುವಿನ ಮುನಿಸನ್ನು ಶಮನ ಮಾಡಿದವ್ರೇ ನಮ್ಮ ಬಾಸ್ ಗಳಾದ  ಡಿಕೆ ಬ್ರದರ್ಸ್. ಇದಕ್ಕೆ ಕಾರಣ,ಆಶಾಗೆ ಟಿಕೆಟ್ ಕೊಡಿಸಿದವ್ರು ಇದೇ ಡಿಕೆ ಬ್ರದರ್ಸ್…

ಆದ್ರೆ ಕಾಲಾನುಕ್ರಮದಲ್ಲಿ ಏನೆಲ್ಲಾ ಆಯ್ತು ನೋಡಿ..ಇವತ್ತು ತನಗೆ ರಾಜಕೀಯ ಭವಿಷ್ಯ ಕೊಟ್ಟ ಡಿಕೆ ಬ್ರದರ್ಸ್ ಆಶಾ ಅವರಿಗೆ ಬೇಕಿಲ್ಲ.ಸದಾ ತನ್ನ ಹಾಗೂ ತನ್ನ ಕುಟುಂಬದ ವಿರುದ್ಧ  ದ್ವೇಷವನ್ನೇ ಕಾರುತ್ತಾ ಬಂದ ಮುನಿರತ್ನಂ ಅವರೇ ಹೆಚ್ಚಾದ್ರು.ಇದಕ್ಕೆಲ್ಲಾ ಉತ್ತರ ನಾವ್ ಬೈ ಎಲೆಕ್ಷನ್ ಮಾತ್ರವಲ್ಲ,ಬಿಬಿಎಂಪಿ ಎಲೆಕ್ಷನ್ ನಲ್ಲೂ ತೋರಿಸ್ತೇವೆ ಎನ್ನುತ್ತಾರೆ  HMT ವಾರ್ಡ್ ಕೈ ಮತದಾರರು.

ಹೀಗೆ ಮುನಿರತ್ನಂಗೆ ಈಗ ಸವಾಲಾಗಿರುವುದು ಬಿಜೆಪಿ ಪಕ್ಷದ ಕಾರ್ಯಕರ್ತರ ವಿರುದ್ದ ದಾಖಲಿಸಿರುವ ದಂಡಿ ದೂರುಗಳು.ರಾಜಕೀಯ ಕಾರಣಗಳಿಗಾಗಿ ಅದನ್ನು ವಾಪಸ್ ಪಡೆಯೊಕ್ಕೆ ಮುಂದಾದ್ರೂ, ಮುನಿರತ್ನಂ ತಮ್ಮ ಪಟಾಲಂ ಮೂಲಕ ದಾಖಲಿಸಲ್ಪಟ್ಟ ದೂರುಗಳಿಂದ ಅನುಭವಿಸಿರಬಹುದಾದ ನೋವು-ಮಾನಸಿಕ ಯಾತನೆ-ಅವಮಾನವನ್ನು ಮರೆಯುತ್ತಾರಾ..ಸ್ವಾಭಿಮಾನಿ ಬಿಜೆಪಿಗರು ಎನ್ನುವ ಮಾತುಗಳೇ ಕ್ಷೇತ್ರಾದ್ಯಂತ ಕೇಳಿಬರುತ್ತಿದೆ.

ಮುನಿಗೆ ದುಬಾರಿಯಾಗಲಿದೆಯಾ..? ದುಸ್ವಪ್ನವಾಗಿ ಕಾಡ್ತಿರೋ BJP  ಕಾರ್ಯಕರ್ತರ ವಿರುದ್ಧದ “ಆ” ದೂರುಗಳು..?.! ದೂರು ವಾಪಸ್ ಪಡೆದಾಕ್ಷಣ ಎಲ್ಲವೂ ಸರಿಹೋಗ್ತದಾ.? ಮುನಿ ವಿರುದ್ದ ನಿಗಿನಿಗಿ ಕೆಂಡವಾಗಿರೋ ಬಿಜೆಪಿ ಕಾರ್ಯಕರ್ತರ ಪ್ರಶ್ನೆ.?!(ಕೃಪೆ-ಬಿ.ಟಿವಿ)

Spread the love
Leave A Reply

Your email address will not be published.

Flash News