ಮಾರ್ಗಮಧ್ಯೆಯೇ ಹೆರಿಗೆ ಮಾಡಿಸಿ ಮನುಷ್ಯತ್ವ ಮೆರೆದ ಅಂಬುಲೆನ್ಸ್ ನಲ್ಲಿ ಸಿಬ್ಬಂದಿ:ತಾಯಿ-ಮಗು ಸೇಫ್:ಸಿಬ್ಬಂದಿ ಕೆಲಸಕ್ಕೆ ಶ್ಲಾಘನೆ..

0

ಚಿಕ್ಕಬಳ್ಳಾಪುರ: ಕೊರೊನಾ ವೇಳೆಯಲ್ಲಿ ಏನೇನ್ ನೋಡಬಾರದಾಗಿತ್ತೋ..ಏನೆಲ್ಲಾ ಕೇಳಬಾರದೆನಿಸಿತ್ತೋ ಆ ಅಸಂಭವಗಳೆಲ್ಲಾ ನಡೆದೋಗಿದೆ ನೋಡಿ..ಅದಕ್ಕೊಂದು ಉದಾಹರಣೆ ಚಿಕ್ಕಬಳ್ಳಾಪುರದಲ್ಲಿ ನಡೆದಿರುವ ಈ ಘಟನೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೇಮರಿ ಗ್ರಾಮದಲ್ಲಿ ತುಂಬಿದ ಗರ್ಭಿಣಿಯೊಬ್ಬರು ಅಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

ಕನ್ನಂಪಲ್ಲಿ ಗ್ರಾಮದ ಜ್ಯೋತಿ   ಆಂಬ್ಯುಲನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ..ಘಟನೆ ಇಂದು ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ನಡೆದಿದೆ. ಪ್ರಸವದ ವೇದನೆ ಹೆಚ್ಚಾದ ಹಿನ್ನೆಲೆಯಲ್ಲಿ ಆಕೆಯ ಮನವೆಯವ್ರು ಆಂಬ್ಯುಲನ್ಸ್ ನಲ್ಲಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು.ಆಗ ಪ್ರಸವವೇದನೆ ಹೆಚ್ಚಾಗಿದೆ.ಆಸ್ಪತ್ರೆಗೆ ಕೊಂಡೊಯ್ಯಲು ಸಾಧ್ಯವಾಗದಷ್ಟು ನೋವು ಹೆಚ್ಚಿದ್ದರಿಂದ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲದ ಅಂಬುಲೆನ್ಸ್ ಸಿಬ್ಬಂದಿ ವಾಹನವನ್ನು ಮಧ್ಯೆಯೇ ನಿಲ್ಲಿಸಿ ಡೆಲಿವರಿ ಮಾಡಿಸಿದ್ದಾರೆ.

ಸಮಯ ಪ್ರಜ್ಞೆ ಮೆರೆಯುವ ಮೂಲಕ ಮಹಿಳೆಯ ಡೆಲಿವರಿ ಮಾಡಿಸಿ ಆಕೆಯ ಪ್ರಾಣ ಉಳಿಸಿದ ಆಂಬ್ಯುಲನ್ಸ್ ಸಿಬ್ಬಂದಿ ಮುರಳಿ ಹಾಗೂ ಸೀನಪ್ಪ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.ಡೆಲಿವರಿ ನಂತರ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆದಾಖಲಿಸಲಾಗಿದೆ. ಆಂಬ್ಯುಲನ್ಸ್ ಸಿಬ್ಬಂದಿಗೆ   ಜ್ಯೋತಿ ಹಾಗೂ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.ಅಂಬುಲೆನ್ಸ್ ಸಿಬ್ಬಂದಿ ಕೆಲಸಕ್ಕೆ ರಾಜ್ಯಾದ್ಯಂತ ಹರ್ಷ ವ್ಯಕ್ತವಾಗ್ತಿದೆ. 

ಮಾರ್ಗಮಧ್ಯೆಯೇ ಹೆರಿಗೆ ಮಾಡಿಸಿ ಮನುಷ್ಯತ್ವ ಮೆರೆದ ಅಂಬುಲೆನ್ಸ್ ನಲ್ಲಿ ಸಿಬ್ಬಂದಿ:ತಾಯಿ-ಮಗು ಸೇಫ್:ಸಿಬ್ಬಂದಿ ಕೆಲಸಕ್ಕೆ ಶ್ಲಾಘನೆ..

Spread the love
Leave A Reply

Your email address will not be published.

Flash News