ಪತ್ರಕರ್ತರೇನು ಕೊರೊನಾ ಯೋಧರಲ್ವಾ..? ಅವರ ಸಾವುಗಳಿಗೆ ಬೆಲೆಯಿಲ್ವಾ..?ಅವರೇಗಿಲ್ಲ 30 ಲಕ್ಷ ಪರಿಹಾರ.? 6 ತಿಂಗಳಲ್ಲಿ 20ಕ್ಕೂ ಹೆಚ್ಚು ಸುದ್ದಿಮಿತ್ರರ ಸಾವು..!

0

ಬೆಂಗಳೂರು:ಕೊರೊನಾತಂಕ ಹಾಗೂ ಅದರ ಸಾವುಗಳ ಬಗ್ಗೆ ನಿರಂತರ ಸುದ್ದಿ ಮಾಡೋ ಸುದ್ದಿಮಿತ್ರರಿಗೆ ಸಂಬಂಧಿಸಿದ ಸುದ್ದಿ ಇದು.ಅವರ ಆರೋಗ್ಯದ ಬಗ್ಗೆ ಸೃಷ್ಟಿಯಾಗಿರುವ ನೂರಾರು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿರುವ ಸನ್ನಿವೇಶವಿದು.ಕೊರೊನಾ ಸುದ್ದಿಗಾಗಿ ಅವರ ಹಿತವನ್ನು ಕಡೆಗಣಿಸಿ ಫೀಲ್ಡ್ ಗೆ ಬಿಟ್ಟು EXCLUSIVE ಗಳ ಹಿಂದೆ ಬೀಳುವಂತೆ ಮಾಡುತ್ತಿರುವ ಸುದ್ದಿಸಂಸ್ಥೆಗಳ

ಮುಖ್ಯಸ್ಥರು ಆತ್ಮಾವಲೋಕನ ಮಾಡಿಕೊಳ್ಳಬೇಕಿರುವ ಸುದ್ದಿ ಇದು.ಹಾಗೆಯೇ ಮ್ಯಾನೇಜ್ಮೆಂಟ್ ಗಳ ಮಾತಿಗೆ ತಲೆಯಲ್ಲಾಡಿಸಿ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸಿಕೊಳ್ತಿರುವ ಸುದ್ದಿಮಿತ್ರರು ತನ್ನ ಅತ್ಯಮೂಲ್ಯ ಜೀವ-ಜೀವನಗಳ ಬಗ್ಗೆ ತಲೆಕೆಡಿಸಿಕೊಳ್ಳಲೇಬೇಕಿರುವ ಮುಖ್ಯ-ಗಂಭೀರ ನ್ಯೂಸ್ ಇದು..ಇಂತದ್ದೊಂದು ಸುದ್ದಿ ಮಾಡುವ ಮೂಲಕ ಕನ್ನಡ ಫ್ಲಾಶ್ ನ್ಯೂಸ್ ತನ್ನ ಬದ್ಧತೆ-ಕಾಳಜಿಯನ್ನು ಎತ್ತಿ ಹಿಡಿಯುತ್ತಿದೆ ಎನ್ನುವ ಸಮಾಧಾನ ನಮ್ಮದು.

ಪತ್ರಕರ್ತರೇನು ಕೊರೊನಾ ಯೋಧರಲ್ವಾ..ಅವರದೇನು ಬದುಕುಗಳಲ್ವಾ..ಅವರನ್ನು ನೆಚ್ಚಿಕೊಂಡು ಕುಟುಂಬಗ ಳಿಲ್ವೇ.. ಕೊರೊನಾ ಕಾರಣಕ್ಕೆ ಸತ್ತಾಕ್ಷಣ ಸಹಾನುಭೂತಿಗೋ..ಆತಂಕಕ್ಕೋ..5 ಲಕ್ಷ ಹಣ ಕೊಟ್ಟು ಕೈ ತೊಳೆದುಕೊಳ್ಳುವ ಸರ್ಕಾರಕ್ಕೆ ಇವತ್ತು ಸಂಸಾರಗಳ ದಿಕ್ಕು.. ಕುಟುಂಬದ ಆಸರೆ ಕಳಕೊಂಡವ್ರು ಪ್ರಶ್ನಿಸ್ತಿರೋ ರೀತಿ ಇದು..ಕೊರೊನಾ ವಾರಿಯ ರ್ಸ್ ಗಳಾಗಿ ಕೆಲಸ ಮಾಡ್ತಿರೋರು ಸತ್ತಾಗ ಅವರ ಬಗ್ಗೆ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುವ ಪತ್ರಕರ್ತರೇ ಇವತ್ತು ಕೊರೊನಾಕ್ಕೆ ತುತ್ತಾಗ್ತಿರುವಾಗ  ಇಂತದ್ದೊಂದು ಪ್ರಶ್ನೆಯನ್ನು ಒಂದು ಜವಾಬ್ದಾರಿಯುತ ಮಾದ್ಯಮವಾಗಿ ಕನ್ನಡ ಫ್ಲಾಶ್ ನ್ಯೂಸ್  ಸರ್ಕಾರದ ಮುಂಡಿಡುತ್ತಿದೆ.ಪತ್ರಕರ್ತರಿಗೂ 30 ಲಕ್ಷ ಪರಿಹಾರ ಘೋಷಿಸುವ ಮೂಲಕ ತನ್ನ ನೈತಿಕತೆ-ಬದ್ಧತೆ ಯನ್ನು ಸರ್ಕಾರ ಪ್ರದರ್ಶಿಸಬೇಕಿದೆ.

ಸುದ್ದಿಜಗತ್ತಿನಲ್ಲಿ ಕೆಲಸ ಮಾಡುತ್ತಿರುವ ಮಾದ್ಯಮ ಸ್ನೇಹಿತರೂ,ಕೊರೊನಾ ಸಾವುಗಳಿಂದ  ಹೊರತಾಗುಳಿದಿಲ್ಲ.. ಕೊರೊನಾ ಸೇವಾವಧಿಯಲ್ಲಿ ಹದಿನೈದಕ್ಕೂ ಹೆಚ್ಚು ಸುದ್ದಿಮಿತ್ರರು ಸಾವನ್ನಪ್ಪಿದ್ದಾರೆ.ಅವರಿಗೆಲ್ಲಾ ಸಿಎಂ ಫಂಡ್ ನಿಂದ 5 ಲಕ್ಷದವರೆಗು ಪರಿಹಾರ ಸಿಕ್ಕಿದೆ.ಒಂದಷ್ಟು ಸಾಂತ್ವನದ ಮಾತುಗಳು,ಸಹಾನುಭೂತಿಯ ಸ್ಟೇಟಸ್..ಭಾವಪೂರ್ಣ ಶೃದ್ಧಾಂಜಲಿಯ ಹೇಳಿಕೆಗಳು..ಅಷ್ಟಕ್ಕೆ ಅವರ ಸಾವುಗಳು ನೇಪಥ್ಯಕ್ಕೆ ಸರಿದೋಗ್ತಿವೆ.ಒಂದೆರೆಡು ದಿನ ಸುದ್ದಿಯಾಗಿ ನಂತ್ರ ಅದೇ ಮಾದ್ಯಮ ಸಂಸ್ಥೆಗಳೇ ಅವನ್ನು ಮರೆತುಬಿಡ್ತಿವೆ.ಎಂಥಾ ದುರಂತ ಅಲ್ವೇ.ಹಾಗಾದ್ರೆ ಆಗಬೇಕಿರುವುದೇನು…ಮಾದ್ಯಮ ಕ್ಷೇತ್ರದ ಒಂದಷ್ಟು ಹಿರಿಜೀವಿಗಳು-ಅನುಭವಿಗಳನ್ನು ಮಾತ್ನಾಡಿಸಿ ಜಯಕಿರಣ ಒಂದಷ್ಟು ಅಭಿಪ್ರಾಯ ಕ್ರೋಢೀಕರಿಸಿದೆ.

ಕೊರೊನಾ ಶುರುವಾದಾಗಿನಿಂದ್ಲೂ ಎಲ್ಲರಂತೆ ಹೊಣೆಗಾರಿಕೆಯಿಂದ ಅಹಿರ್ನಿಷಿ ಕೆಲಸ ಮಾಡುತ್ತಿವೆ ಮಾದ್ಯಮಗಳು.ಮಾಲೀಕರೆನಿಸಿಕೊಂಡವ್ರ ಹಾಯಾಗಿ ಎಸಿ ಚೇಂಬರ್ ಗಳಲ್ಲಿ ಕುತ್ಕೊಂಡು ಸುದ್ದಿಮಿತ್ರರನ್ನು ಪತ್ರಿಕೆ-ಚಾನೆಲ್ ಕಚೇರಿಯೊಳಗೆ ಬಾರದಂತೆ ನಿರ್ಬಂಧ ವಿಧಿಸಿ ಅವರನ್ನು ದುಡಿಸಿಕೊಳ್ಳುತ್ತಿರುವುದು ಗುಟ್ಟಾಗೇನು ಉಳಿದಿಲ್ಲ.ಕೊರೊನಾದಿಂದ ದೂರವಿರಲು ಜನ್ರು ಹೀಗ್ಹೇಗ್ಹೇನೆ ಮಾಡ್ಬೇಕೆಂದು ಕಂಠಶೋಷಣೆ ಮಾಡಿಕೊಳ್ಳುವ ಸುದ್ದಿಮನೆಗಳು ಅವರದೇ ಸಂಸ್ಥೆಗಳ ಸುದ್ದಿಮಿತ್ರರನ್ನು ಅವರಿಗೆ ಕೊರೊನಾ ಬಂದ್ರೂ ಅದನ್ನು ಮುಚ್ಚಿಟ್ಟಿಸಿ ಕೆಲಸ ಮಾಡಿರುವ ದರಿದ್ರ ಉದಾಹರಣೆಗಳಿವೆ, ಓದುಗರೇ ನೀವು ನಂಬ್ಲಿಕ್ಕಿಲ್ಲ..ದೊಡ್ಡ ದೊಡ್ಡ ಸುದ್ದಿಸಂಸ್ಥೆಗಳ ಮಹಾನ್ ಮೇಧಾವಿ ಮುಖ್ಯಸ್ಥರೆನಿಸಿಕೊಂಡವರೇ ತಮ್ಮ ಸಂಸ್ಥೆಗಳ ಉದ್ಯೋಗಿಗಳಿಗೆ ಕೊರೊನಾ ಟೆಸ್ಟನ್ನೇ ಮಾಡಿಸಲಿಲ್ಲ..ಮಾಡಿಸಿದ್ರೆ ಅದರಲ್ಲಿ ಪಾಸಿಟಿವ್ ಬಂದವರಿಂದ ತಾತ್ಕಾಲಿಕವಾಗಿ ಇಡೀ ಸಂಸ್ಥೆಯನ್ನೇ ಮುಚ್ಚಬೇಕಾಗ್ತದೆ ಎನ್ನುವುದೇ ಇದಕ್ಕೆ  ಕಾರಣ ಎನ್ನುವುದು ಅದೇ ಸುದ್ದಿಸಂಸ್ಥೆಗಳ ಸುದ್ದಿಮಿತ್ರರಿಂದ ಕೇಳಿಬಂದ ಶಾಕಿಂಗ್ ನ್ಯೂಸ್..

ಹೇಳೋದು ವೇದಾಂತ ತಿನ್ನೋದು ಮಾತ್ರ ಬದನೆ ಎನ್ನುವಂತೆ ರಾಜ್ಯದ ಜನತೆಗೆಲ್ಲಾ ಬುದ್ದಿ ಹೇಳಿದ ಮುಖ್ಯಸ್ಥರೇ ತಮ್ಮ ಸುದ್ದಿಸಂಸ್ಥೆಗಳ  ಸಿಬ್ಬಂದಿಯನ್ನು ನಡೆಸಿಕೊಂಡ ರೀತಿ ಇದೆಯೆಲ್ಲಾ ಅದು ಅಮಾನವೀಯ.ಕೊರೊನಾ ಸೋಂಕಿನ ಲಕ್ಷಣ ಕಂಡುಬಂದ್ರೆ ಮನೆಯೊಳಗೇ ಐಸೋಲೇಷನ್ ನಲ್ಲಿ ಇರಿಸಿ ಮಾಹಿತಿಯನ್ನು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯಿಂದ ಮುಚ್ಚಿಡಿಸಿದ ಬಗ್ಗೆಯೂ ಮಾಹಿತಿ ಇದೆ.ಇದೆಲ್ಲಾ ಹೋಗ್ಲಿ,ಅದೆಷ್ಟೋ ಸುದ್ದಿಮಿತ್ರರು ಹಾಗೂ ಸಿಬ್ಬಂದಿ ಕೊರೊನಾ ಸೋಂಕಿನ ವೇಳೆ ಐಸೋಲೇಷನ್ ನಲ್ಲಿದ್ದಾಗ ಸಂಬಳವಿಲ್ಲದೆ ಕಷ್ಟಪಟ್ಟ ಉದಾಹರಣೆಗಳಿವೆ.ಅಷ್ಟೇ ಅಲ್ಲ,ಸಂಬಳ ಕೊಡಲಿಕ್ಕಾಗೊಲ್ಲ ಎನ್ನುವ ಕಾರಣಕ್ಕೂ ಕೆಲ ಸುದ್ದಿಸಂಸ್ಥೆಗಳು ಸಿಬ್ಬಂದಿಯನ್ನು ಸಕಾರಣನೀಡದೆ ಕೆಲಸದಿಂದ ತೆಗೆದ ಬಗ್ಗೆಯೂ ಮಾತುಗಳಿವೆ.

ಕೊರೊನಾ ವೇಳೆ ಸುದ್ದಿಸಂಸ್ಥೆಗಳು ಸುದ್ದಿಮಿತ್ರರನ್ನು ಇವತ್ತಿಗೂ ತುಂಬಾನೇ ಅಮಾನವೀಯವಾಗಿ ನಡೆಸಿಕೊಳ್ತಿವೆ. ಎಕ್ಸ್ ಕ್ಲ್ಯೂಸಿವ್ ಸುದ್ದಿಗಳ ಬೆನ್ನಿಗೆ ಬಿದ್ದು ಸಿಬ್ಬಂದಿಯನ್ನು ಪ್ರೆಷರ್ ನಲ್ಲಿ ಗ್ರೈಂಡ್ ಮಾಡುತ್ತಲೇ ಇದ್ದಾರೆ.ಕೊರೊನಾ ಸೋಂಕಿನ ಪ್ರದೇಶಕ್ಕೆ ನುಗ್ಗುವಂತೆ ಅಸಹಾಯಕರನ್ನಾಗಿಸುತ್ತಿವೆ.ಉದ್ಯೋಗ ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಸುದ್ದಿಮಿತ್ರರು ಇಷ್ಟವಿಲ್ಲದಿದ್ದರೂ ಸಂಕಷ್ಟ ತಂದುಕೊಳ್ಳುತ್ತಿದ್ದಾರೆ. ಸೋಂಕಿಗೆ ತುತ್ತಾದ್ರೆ ಟ್ರೀಟ್ಮೆಂಟ್..ಸಂಬಳ ಮಾತ್ರ ಕಟಾಫ್ ಆಗ್ತಿದೆ..ಇದೆಂಥಾ ನ್ಯಾಯ..

ಬೇರೆಲ್ಲಾ ಕ್ಷೇತ್ರಗಳು ತಮ್ಮ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಡಿಕ್ಲೇರ್ ಮಾಡಿ,ಸೇವಾವಧಿ ವೇಳೆ ಸಾವನ್ನಪ್ಪಿದ್ರೆ 30 ಲಕ್ಷ ಪರಿಹಾರ ಕೊಡಿಸ್ಬೇಕೆಂದು ಸರ್ಕಾರದ ಮೇಲೆ ಒತ್ತಡ ತಂದು ಹೋರಾಟದ ಮೂಲಕ ತಮ್ಮ ಹಿತಾಸಕ್ತಿಯನ್ನು ಈಡೇರಿಸಿಕೊಂಡಿದ್ದಾರೆ.ಕೊರೊನಾ ವೇಳೆ ಸಾವನ್ನಪ್ಪಿದ ಅದೆಷ್ಟೋ ಸಿಬ್ಬಂದಿಗೆ 30 ಲಕ್ಷ ಪರಿಹಾರವನ್ನೂ ಕೊಡಿಸಿಕೊಟ್ಟಿದ್ದಾರೆ.

ಆದ್ರೆ ಅಂತದ್ದ್ಯಾವುದೇ ಪ್ರಯತ್ನ ಸುದ್ದಿಮಾದ್ಯಮ ಕ್ಷೇತ್ರದಲ್ಲಿ ಆಗಿಯೇ ಇಲ್ಲ.ಬೇಡದ ಕಾರಣಕ್ಕೆ ರಾಜ ಕೀಯ ಮಾಡ್ಕಂಡು ರಾಜಕಾರಣಿಗಳ ಬಕೆಟ್ ಹಿಡ್ಕೊಂಡು ಅಡ್ಡಾಡೋದಕ್ಕೇನೆ ಟೈಮ್ ಇರದ ಸಂಘ-ಸಂಘಟನೆಗಳು ಸುದ್ದಿಮಿತ್ರರನ್ನು ಕೊರೊನಾ ವಾರಿಯರ್ಸ್ ಎಂದು ಘೋಷಿಸಿ ಸತ್ತರೆ ಅವರ ಕುಟುಂಬಕ್ಕೆ 30 ಲಕ್ಷ ಪರಿಹಾರ ಕೊಡಿಸ್ಬೇಕೆ ನ್ನುವ ನಿಟ್ಟಿನಲ್ಲಿ ಹೋರಾಟ ನಡೆಸಿದ್ದಾರಾ..ಇಲ್ಲವೇ..ಎಲ್ಲಿವರೆಗೆ ಇಂತದ್ದೊಂದು ಪ್ರಯತ್ನಗಳು ಗಂಭೀರವಾಗಿ ಆಗೋ ದಿಲ್ವೋ..ಅಲ್ಲಿವರೆಗೆ ಗೌರಿಪುರ ಚಂದ್ರು..,ಪಾಂಡು..ಪವನ್ ಹೆತ್ತೂರ್,ಸೋಮಶೇಖರ್ ಯಲವಟ್ಟಿ,ಯಂಥ ಸುದ್ದಿಮಿತ್ರರುದಿನಕ್ಕೊಂದರಂತೆ ಸಾಯುತ್ತಲೇ ಇರುತ್ತಾರೆ.ಅವರಿಗೊಂಡು ಭಾವಪೂರ್ಣ ಶೃದ್ಧಾಂಜಲಿ,..ಸಂತಾಪ..ನುಡಿನಮನ ..ಇವೆಲ್ಲಾ ಮಾಮೂಲಾಗಿಬಿಡ್ತವೆ..ಅಷ್ಟೇ.. ಸರ್ಕಾರ 30 ಲಕ್ಷ ಪರಿಹಾರ ಘೋಷಿಸುವ ಮೂಲಕ ತನ್ನ ಹೊಣೆಗಾರಿಕೆ ಪ್ರದರ್ಶಿಸಬೇಕಿದೆಯಾದ್ರೆ ಮಾದ್ಯಮ ಸಂಸ್ಥೆಗಳ ಮುಖ್ಯಸ್ಥರು  ತಮ್ಮ ಸಿಬ್ಬಂದಿ ಆರೋಗ್ಯದ ಬಗ್ಗೆ ಕಾಳಜಿ ತೋರಬೇಕಿದೆ..

Spread the love
Leave A Reply

Your email address will not be published.

Flash News