ಗಂಡೋ…ಹೆಣ್ಣೋ..ಅವಳಿನೋ..ಮೇಘನಾ ಜನ್ಮ ನೀಡುವ “ಆ” ಮಗುವಿನ ಬಗ್ಗೆ ಶುರುವಾಗಿದೆ ಲೆಕ್ಕಾಚಾರ..-ಇಂಥಾ ಸನ್ನಿವೇಶದಲ್ಲೂ ಇಂತದ್ದೊಂದು ಊಹೆ-ಅಂದಾಜು ನಿಜಕ್ಕೂ ಬೇಕಾ..?! 

0

ಬೆಂಗಳೂರು:ಬಹುಷಃ, ಚಿರು ಸರ್ಜಾ ಧರ್ಮಪತ್ನಿ ಮೇಘನಾರಾಜ್ ಅವರ ಕುಟುಂಬಕ್ಕೇನೆ,ಕೆಲ ಕ್ಷಣಗಳಲ್ಲಿ  ಆಗಮಿಸಲಿರುವ “ಆ” ಹೊಸ ಅತಿಥಿಯ ಬಗ್ಗೆ ಅಷ್ಟ್  ಕುತೂಹಲ ಇದೆಯೋ ಇಲ್ಲವೋ ಗೊತ್ತಿಲ್ಲ.. ಅಷ್ಟೊಂದ್ ವಿಚಿತ್ರ  ಕುತೂಹಲ  ನಮ್ ಮಾದ್ಯಮಗಳಿಗೆ ಇದೆ. ಮದುವೆ-ಮುಂಜಿ-ಅರತಕ್ಷತೆ..ಹೀಗೆ ಒಂದನ್ನೂ ಬಿಡದೆ ಟೆಲಿಕಾಸ್ಟ್ ಮಾಡುವ ಮಾದ್ಯಮಗಳು ಸಾರ್ವಜನಿಕವಾಗಿಯೂ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಲೇ ಬಂದಿದೆ.ಟಿಆರ್ ಪಿ ಕಾರಣಕ್ಕೆ ಇಷ್ಟೆಲ್ಲಾ ಮಾಡೋದು ಅನಿವಾರ್ಯ ಎನ್ನೋದು ಬೇರೆ ಮಾತು ಬಿಡಿ..ಇದೀಗ ಮಾದ್ಯಮಗಳಿಗೆ ಸಿಕ್ಕಿರುವ ಸುದ್ದಿಯ ಸರಕೇ ಚಿರುಪತ್ನಿ ಮೇಘನಾರಾಜ್ ಅವರು ಹಡೆಯಲಿರುವ ಮಗು. ಅದು ಗಂಡೋ..ಹೆಣ್ಣೋ..ಅವಳಿಜವಳಿನೋ..ಹೀಗೆ ಕುತೂಹಲದ ಸುತ್ತಾ ಸಾಕಷ್ಟು ಸುದ್ದಿಗಳು ಪ್ರಸಾರವಾಗುತ್ತಲೇ ಇವೆ.

ಚಿರು-ಮೇಘನಾ ದಂಪತಿಯನ್ನು ಅತ್ಯಂತ ಸಂತೋಷವಾಗಿಟ್ಟಿದ್ದೇ ಅವರ ಮಗು..ಈ ವಿಷಯದಲ್ಲಿ ಮೇಘನಾಗಿಂತ ಹೆಚ್ಚು ಸಂಭ್ರಮಿಸಿದ್ದೇ ಚಿರು.ಅದನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡು ಸಂಭ್ರಮಿಸಿದ್ದರು.ಈ ಹಿನ್ನಲೆಯಲ್ಲಿ ತನ್ನ ಪತ್ನಿಗೂ ಸಪ್ರೈಸ್ ಗಳ ಮೇಲೆ ಸಪ್ರೈಸ್  ಎನ್ನುವಷ್ಟು ಗಿಫ್ಟ್ ನೀಡುತ್ತಲೇ ಬಂದಿದ್ದನ್ನು ಮಾದ್ಯಮಗಳು ಕೂಡ ವರದಿ ಮಾಡಿದ್ದುಂಟು.ಆದ್ರೆ ತನ್ನ ಮಗುವನ್ನು ನೋಡುವ ಮೊದಲೇ ಚಿರು ಕಣ್ಮುಚ್ಚಿಕೊಂಡ್ರು.ಇದು ಮೇಘನಾ ಹಾಗೂ ಕುಟುಂಬಕ್ಕೆ ಬರಸಿಡಿಲಂತೆ ಎರಗಿತು.ಚಿರು ಇರುವಿಕೆಯನ್ನು ತನ್ನ ಒಡಲಲ್ಲಿರುವ ಮಗುವಿನ ಮೂಲಕ ಕಂಡುಕೊಂಡ ಮೇಘನಾ ನೋವನ್ನು ಕಡಿಮೆ ಮಾಡಿಕೊಂಡ್ರು.ಮೊನ್ನೆ ಮೊನ್ನೆ ತಾನೇ ಸೀಮಂತವನ್ನು ಮಾಡಿಕೊಂಡ್ರು.

ಇದೀಗ ಮೇಘನಾ ಹಾಗು ಕುಟುಂಬ ಅತ್ಯಂತ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಆ ದಿವ್ಯಗಳಿಗೆ ಬಂದೇ ಬಿಟ್ಟಿದೆ.ಸರ್ಜಾ ಕುಟುಂಬಕ್ಕೆ ಆಗಮಿಸಲಿರುವ ಅತಿಥಿಗೆ ಕನವರಿಕೆ ಶುರುವಾಗಿದೆ.ಯಾವ್ ಕ್ಷಣದಲ್ಲಿ ಬೇಕಾದ್ರೂ ಮೇಘನಾ ತನ್ನ ಮಗುವಿಗೆ ಜನ್ಮ ನೀಡಬಹುದಾಗಿದೆ.ಗಂಡು ಮಗುವಾದ್ರೆ ಚಿರುನೇ ಹುಟ್ಟಿ ಬಂದಿರಬಹುದೆನ್ನುವ ಮಹಾಸಮಾಧಾನ  ಕುಟುಂಬಕ್ಕೆ.ಅದನ್ನು ಬಿಟ್ಟು ಹೆಣ್ಣಾದ್ರೂ ಅದೇ ಸಂಭ್ರಮ..ಚಿತ್ರನಟ ಜಗ್ಗೇಶ್ ಹಾಗೂ ಅನೇಕ ಹಿತೈಷಿಗಳು ನುಡಿದಿರುವ ಅವಳಿ ಮಕ್ಕಳ ಭವಿಷ್ಯವೇ ಸತ್ಯವಾದ್ರೆ ಡಬಲ್ ಧಮಾಕ..ಫಲಿತಾಂಶ ಏನೇ ಬಂದ್ರೂ ಸರ್ಜಾ ಕುಟುಂಬ ಸಂತೋಷದ ಅಲೆಯಲ್ಲಿ ತೇಲೋದಂತೂ ಸತ್ಯ.

ಇದೆಲ್ಲಾ ಸರಿ..ಸರ್ಜಾ ಕುಟುಂಬಕ್ಕಿಂತ ಹೆಚ್ಚಿನ ಕುತೂಹಲ ಇರೋದು ನಮ್ಮ ಮಾದ್ಯಮಗಳಿಗೆ Ofcource ಚಿರು ಅವರೇ ಗಂಡುಮಗುವಾಗಿ ಕುಟುಂಬವನ್ನು ಸೇರಿಕೊಳ್ಳುತ್ತಾರೋ ಎನ್ನುವ ಲೆಕ್ಕಾಚಾರಗಳು ಚಿತ್ರಪ್ರೇಮಿಗಳಲ್ಲಿ ಇರೋದ್ರಿಂದ   ಸಧ್ಯದ ಮಟ್ಟಿಗೆ ಅದೊಂದು ಸೆನ್ಸೇಷನಲ್ ಸುದ್ದಿಯೂ ಹೌದು. ಆದರೆ ಅವರಿಗೆ ಯಾವ್ ಕ್ಷಣದಲ್ಲಿ ಮಗು ಆಗಬಹುದು..ಹೇಗೆ ಆಗಬಹುದು.. ಯಾವ್ ಮಗು ಹುಟ್ಟಬಹುದು..ಅದರ ರಾಶಿ-ನಕ್ಷತ್ರ ಏನಾಗಬಹುದು..ಅವರಿಗೆ ಹೆಣ್ಣು ಮಗುವಾದ್ರೆ ಹೇಗೆ…ಅವಳಿ ಮಕ್ಕಳಾದ್ರೆ ಹೇಗಿರುತ್ತೆ..ಆ ಮಗುವಿನಿಂದ ಮೇಘನಾ ಹಾಗೂ ಕುಟುಂಬದ ಭವಿಷ್ಯ ಹೇಗಾಗಬಹುದು..ಹೀಗೆಲ್ಲಾ ಅದನ್ನೇ ಧಾರಾವಾಹಿಯಾಗಿ ಜಗ್ಗಾಡುವುದು..ಅದಕ್ಕಾಗಿ ಜ್ಯೋತಿಷಿಗಳು-ಸಂಖ್ಯಾಶಾಸ್ತ್ರರನ್ನು ಕೇಳುವ ಪುಂಗಿದಾಸನ ಕಥೆಗೆ ಮೀಡಿಯಾಗಳು ಮೊರೆ ಹೋಗುವ ಆತಂಕವಿದೆ.ಹೀಗೊಂದು ಆತಂಕ ಪಡೊಕ್ಕೆ ಕಾರಣಗಳೂ ಇವೆ.ಯಾವುದೋ ನಟ-ನಟಿಯರ ಮದುವೆ-ರಿಸೆಪ್ಷನ್ ಗಳಾದ್ರೆ ಅವ್ರ ಫಸ್ಟ್ ನೈಟ್ ಒಂದನ್ನು ಬಿಟ್ಟು ಉಳಿದೆಲ್ಲವನ್ನೂ ಎಳೆಎಳೆಯಾಗಿ ತೋರಿಸುತ್ತಾ ಬಂದಿವೆ ಮಾದ್ಯಮಗಳು.ಮೇಘನಾ ಜನ್ಮ ನೀಡುವ ಮಗುವಿನ ವಿಚಾರದಲ್ಲಿಯೂ ಹೀಗಾದ್ರೆ ಹೇಗೆ ಎನ್ನುವುದು ಎಲ್ಲರ ಆತಂಕ.

ನೋಡಿ ನಮ್ಮ ಜ್ಯೋತಿಷಿಗಳು ಹಾಗೂ ಸಂಖ್ಯಾಶಾಸ್ತ್ರಜ್ಞರಲ್ಲೇ  ಎಂಥಾ ವಿರೋದಾಭಾಸದ  ಹೇಳಿಕೆಗಳಿವೆ ಎಂದ್ರೆ ಕೆಲವರು ಮೇಘನಾ ರಾಶಿ-ಜನ್ಮ ನಕ್ಷತ್ರವನ್ನು ಚಿರು ರಾಶಿ-ನಕ್ಷತ್ರದೊಂದಿಗೆ ಹೋಲಿಸಿ ಚಿರು ಸತ್ತ ದಿನವೇ ಮದ್ವೆಯಾಗಿದ್ದೇ ಸರಿಯಲ್ಲ..ಮೇಘನಾರನ್ನು ಮದುವೆಯಾಗದಿದ್ರೆ ಚಿರು ಬದುಕುಳಿಯುತ್ತಿದ್ದರೇನೋ ಎಂದು ಹೇಳಿ ಸರ್ಜಾ ಕುಟುಂಬಕ್ಕೆ ನೋವಿತ್ತಿದ್ದರು ಕೆಲ ಸಂಖ್ಯಾಶಾಸ್ತ್ರಜ್ಞರು.ಹಾಗಲ್ಲವೇ ಅಲ್ಲ ಎಂದು ಕೆಲವರು ಹೇಳಿದ್ದರು.ಅದೇ ರೀತಿಯ ಭವಿಷ್ಯವನ್ನು ಮೇಘನಾ ಜನ್ಮ ನೀಡಲಿರುವ ಮಗುವಿನ ವಿಚಾರದಲ್ಲೂ ನುಡಿಯಲಾರಂಭಿಸಿದ್ದಾರೆ.

ಕೆಲವರ ಪ್ರಕಾರ ಮೇಘನಾ ಜನ್ಮನೀಡುವುದೇ ಗಂಡು ಮಗುವಿಗೆ….ಈ ಮೂಲಕ ಚಿರು, ಮತ್ತೆ ಮಗುವಿನ ರೂಪದಲ್ಲಿ ಕುಟುಂಬ ಸೇರಿಕೊಳ್ಳಲಿದ್ದಾರೆ.ಮೇಘನಾ ಮಡಿಲಲ್ಲಿ ನಗುತ್ತಾರೆ ಎಂದು ಕರಾರ್ ವಕ್ಕಾಗಿ ಹೇಳುತ್ತಿದ್ದಾರೆ.ಆದರೆ  ಇನ್ನು ಕೆಲವರು ಸಾಧ್ಯವೇ ಇಲ್ಲ,ಮೇಘನಾ ಜನ್ಮ ಕೊಡುವುದೇ ಸ್ತ್ರೀರತ್ನಕ್ಕೆ ಎನ್ನುತ್ತಾರೆ.ಇನ್ನು ಕೆಲವರು ಅವಳಿ ಮಕ್ಕಳೇ ಮೇಘನಾಗೆ ಆಗುವುದು ಎಂದಿದ್ದಾರೆ. ಮೇಘನಾ ಹಾಗೂ ಸರ್ಜಾ ಕುಟುಂಬವೇ ಈ ಭವಿಷ್ಯವಾಣಿಗಳಿಂದ ಫುಲ್ ಕನ್ಪ್ಯೂಸ್ ಆಗೋಗಿದೆ.,

ಮೇಘನಾ ಅಂತಿಮವಾಗಿ ಮಗು ಯಾವುದೇ ಆಗಲಿ,ಸಂತೋಷ ಅದು ನನ್ನ ಹಾಗೂ ಚಿರು ಪ್ರೀತಿಯ ಸಂಕೇತ..ಚಿರು ಕೂಡ ಇದನ್ನೇ ಬಯಸಿದ್ದರು ಎಂದಷ್ಟೇ ಹೇಳಿದ್ದಾರೆ.ಇಂಥಾ ಸೂಕ್ಷ್ಮವಾದ ಸಂದರ್ಭದಲ್ಲಿ ಮಗುವಿನ ಲಿಂಗ ಹಾಗೂ ಅದರ ಭವಿಷ್ಯದ ಬಗ್ಗೆ ಹೇಳೋ ಅವಶ್ಯಕತೆ ನಿಜಕ್ಕೂ ಇದೆಯೇ..ಮಾದ್ಯಮಗಳಿಗೆ ಇದನ್ನು ಬಿಂಬಿಸುವಷ್ಟು ಟಿಆರ್ ಪಿಯ ಅನಿವಾರ್ಯತೆ ಇದೆಯೇ.. ಏಕೆಂದ್ರೆ ಅವರು ಹೇಳುವ ಭವಿಷ್ಯ ಹಾಗೂ ಮಾದ್ಯಮಗಳು ಅತಿರಂಜನಿಯವಾಗಿ ಬಿತ್ತರಿಸುವ ಸುದ್ದಿಗಳು ಮೇಘನಾ ಪ್ರಸವದ ಮೇಲೇನಾದ್ರೂ ಪರಿಣಾಮ ಬೀರಿದ್ರೆ (ದೇವರ ದಯೆಯಿಂದ ಎಲ್ಲವೂ ಸುಖಾಂತವಾಗಲಿ) ಅದಕ್ಕೆ ಯಾರು ಹೊಣೆ..ಇದನ್ನು  ನಿಜಕ್ಕೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ..

ಮಗು ಹೆಣ್ಣಾಗಲಿ,ಗಂಡಾಗಲಿ ಅಥವಾ ಜಗ್ಗೇಶ ಆಶಿಸಿದಂತೆಯೇ ಅವಳಿಜವಳಿಯಾಗಲಿ ಒಂದು ಮುದ್ದಾದ ಮಗು ಸರ್ಜಾ ಕುಟುಂಬವನ್ನು ಸೇರಿಕೊಳ್ಳಲಿ..ಸದಾ ಹಸನ್ಮುಖಿಯಾಗಿದ್ದ ಚಿರು ಬಿಟ್ಟೋದ ನಗುವನ್ನು ಮತ್ತೆ ಆ ಕಂದಮ್ಮ ಮರುಕಳಿಸಿಕೊಡುವಂತಾಗಲಿ…ಆ ನೋವನ್ನೆಲ್ಲಾ ಮೇಘನಾ ಮತ್ತೆ ಮರೆಯುವಂತಾಗಲಿ..ಇದೇ ಕನ್ನಡ ಫ್ಲಾಶ್ ನ್ಯೂಸ್ ನ ಹಾರೈಕೆ ಹಾಗೂ ಅರಿಕೆ.. 

Spread the love
Leave A Reply

Your email address will not be published.

Flash News