ಖಡಕ್ ಕಾಪ್ ಮಂಜುನಾಥ್ ಅಂಡ್ ಟೀಮ್ ನ “ಆಪರೇಷನ್ ರಾಬರ್” ಸಕ್ಸೆಸ್.. ವಿಶ್ವಾಸದ್ರೋಹಿ ಅಡುಗೆಭಟ್ಟ ಹೌರಾದಲ್ಲಿ ಅರೆಸ್ಟ್

0
ಖಡಕ್ ಕಾಪ್ ಮಂಜುನಾಥ್
ಖಡಕ್ ಕಾಪ್ ಮಂಜುನಾಥ್
ವಂಚಕ ಕೈಲಾಸ್
ವಂಚಕ ಕೈಲಾಸ್

ಬೆಂಗಳೂರು:ಇದು ಇತ್ತೀಚಿನ ದಿನಗಳಲ್ಲಿ ದಾಖಲಾರ್ಹವಾಗುವಂಥ ಕೇಸ್..ಕಳ್ಳನನ್ನು ದೂರದ ರಾಜ್ಯದವರೆಗೂ ಫಾಲೋ ಮಾಡಿ,ಆತನನ್ನು ಆತ ಹೊತ್ತೊಯ್ದಿದ್ದ ಮಾಲಿನ ಸಮೇತ ವಾಪಸ್ ತಂದಿರುವ ಜೆಪಿನಗರ ಪೊಲೀಸ್ ಕಾರ್ಯಕ್ಕೆ ಅಧಿಕಾರಿಗಳಿಂದಷ್ಟೆ ಅಲ್ಲ ಸಾರ್ವಜನಿಕವಾಗಿಯೂ ಪ್ರಶಂಸೆ ವ್ಯಕ್ತವಾಗ್ತಿದೆ.ಅಂದ್ಹಾಗೆ ಈ ಟೋಟಲ್ ಆಪರೇಷನ್ ನ ರೂವಾರಿ ಜೆಪಿ ನಗರ ಠಾಣೆಯ ಇನ್ಸ್ ಪೆಕ್ಟರ್ ಮಂಜುನಾಥ್ ಅವರ ಸಮಯಪ್ರಜ್ಞೆ ಹಾಗೂ ಕೌಶಲ್ಯದ ಕಾರ್ಯಾಚರಣೆಯೂ ಗಮನ ಸೆಳೆದಿದೆ.

ಜೆಪಿ ನಗರದ ರಾಜೇಶ್ ಬಾಬು  ಎನ್ನುವವರ ಮನೆಯಲ್ಲಿ ಕಳೆದ  ವರ್ಷಗಳಿಂದ ಪಶ್ಚಿಮ ಬಂಗಾಳ  ಮೂಲದ ಕೈಲಾಸ್ ಎಂಬಾತ ಕೆಲಸಕ್ಕಿದ್ದ.ಆರಂಭದಲ್ಲಿ ನಂಬಿಕಸ್ಥನಂತೆ ವರ್ತಿಸಿದ್ದ ಕೈಲಾಸ್ ಆ ವಿನಮ್ರತೆಯನ್ನೇ ಬಂಡವಾಳ ಮಾಡಿಕೊಂಡಿದ್ದ.ಪ್ರಾಮಾಣಿಕರೇ ಸಿಗದಂಥ ಇವತ್ತಿನ ಕಾಲದಲ್ಲಿ ಕೈಲಾಸ್ ನ ಸ್ವಾಮಿನಿಷ್ಠೆಗೆ ರಾಜೇಶ್ ಮಾರು ಹೋಗಿಬಿಟ್ರು.ಅವರು ತಾನು ಯಾಮಾರ್ತಿದ್ದೇನೆನ್ನುವುದು ಮರೆತೋಗುವಷ್ಟರ ಮಟ್ಟಿಗೆ ಅವರನ್ನು ನಂಬಿಸಿಬಿಟ್ಟಿದ್ದ ಈ ಹಲಾಲ್ ಕೋರ ಕೈಲಾಸ್.

ಎಲ್ಲೇ ಹೋದರೂ ಇಡೀ ಮನೆಯನ್ನು ಅವನ ನಂಬಿಕೆ  ಮೇಲೆ ಬಿಟ್ಟುಹೋಗುತ್ತಿದ್ದರು ರಾಜೇಶ್.ಮನೆ ಮಾಲೀಕ ತನ್ನನ್ನು ನಂಬಿರುವುದನ್ನು ಬಂಡವಾಳ ಮಾಡ್ಕೊಂಡ ಕೈಲಾಸ್ ಒಂದು ಸೂಕ್ತ ಸನ್ನಿವೇಶಕ್ಕಾಗಿ ಕಾಯುತ್ತಿದ್ದ ಅಷ್ಟೆ.ಅವನು ನಿರೀಕ್ಷಿಸುತ್ತಿದ್ದ ಆ ಕಾಲವೂ ಬಂದ್ ಬಿಡ್ತು.ಈ ಹರಾಮಿ ಅದಕ್ಕಾಗಿ ಮಾಡಿದ್ದೇನು ಗೊತ್ತಾ..?ಕೋವಿಡ್19 ಕೊರೋನಾ ವೈರಸ್ ಸೋಂಕು ತಗುಲಿದ್ದರಿಂದ ಅಡುಗೆ ಭಟ್ಟನನ್ನು ನಂಬಿ ರಾಜೇಶ್ ಬಾಬು ಕುಟುಂಬ ಮನೆಯ ಉಸಾಬರಿಯನ್ನು ಬಿಟ್ಟು ತಮ್ಮ ಆರೋಗ್ಯ, ಆರೈಕೆ ಕಡೆ ಗಮನ ನೀಡಿದ್ದರು.ಆದರೆ ಈ ಸನ್ನಿವೇಶವನ್ನೇ ದುರುಪಯೋಗಪಡಿಸಿಕೊಂಡ ಕೈಲಾಸ್, ಉಂಡ ಮನೆಯ ತಿಜೋರಿ ಕದ್ದು ಎಸ್ಕೇಪ್ ಆಗಿದ್ದಾನೆ.

ಆದರೆ ದುರಾಸೆಯಿಂದ ಎತ್ಕೊಂಡು ಪಶ್ಚಿಮ ಬಂಗಾಳದ ಟ್ರೈನನ್ನೇರಿದ ಆತನ ಕಾಲ್ ರೆಕಾರ್ಡನ್ನು ಪತ್ತೆ ಹಚ್ಚಿದ ಸೈಬರ್ ಕ್ರೈಂ ಸ್ಪೆಷಲಿಸ್ಟ್ ಇನ್ಸ್ ಪೆಕ್ಟರ್  ಮಂಜುನಾಥ್ ತಂಡದೊಂದಿಗೆ ಪಶ್ಚಿಮ ಬಂಗಾಳಕ್ಕೆ ಹೊರಟಿದೆ.ಆತನ ಪ್ರತಿಯೊಂದು ನಡೆಯನ್ನು ಕಾಲ್ ನ್ನು ಆಧರಿಸಿ ಆತ ಎಲ್ಲೆಲ್ಲಿ ಹೋದ್ನೋ ಅಲ್ಲೆಲ್ಲಾ ಹಿಂಬಾಲಿಸಿದೆ.ಆತನಿಗು ತನ್ನನ್ನು ಯಾರೋ ಫಾಲೋ ಮಾಡುತ್ತಿರಬಹುದೆನ್ನುವ ಅನುಮಾನ ಬಂದಿದೆ.ಹಾಗಾಗಿ ಆತ ಕೂಡ ತನ್ನ ಖತರ್ನಾಕ್ ತಲೆಗೆ ಕೆಲಸ ಕೊಟ್ಟಿದ್ದಾನೆ.

1 ಕೋಟಿ 30 ಲಕ್ಷದಷ್ಟು ಹಣ-ಒಡವೆ ಹೊತ್ತೊಯ್ದು ಅದನ್ನು ತನ್ನೊಂದಿಗೆ ಇಟ್ಟುಕೊಂಡು ಅಡ್ಡಾಡಿದ ಆತನಿಗೆ ತಿಜೋರಿಯ ಲಾಕ್ ಓಪನ್ ಮಾಡ್ಲಿಕ್ಕಾಗಿಲ್ಲ.ಏಕೆಂದ್ರೆ ಡಿಜಿಟಲ್ ಲಾಕ್ ನ್ನೊಳಗೊಂಡಿರುವ ತಿಜೋರಿಯ ಪಾಸ್ ವರ್ಡ್ ರಾಜೇಶ್ ಬಾಬು ಅವರಿಗೆ ಮಾತ್ರ ಗೊತ್ತಿತ್ತು.ಇದೊಂದೇ ಸಮಾಧಾನದಿಂದ ರಾಜೇಶ್ ನೆಮ್ಮದಿಯಿಂದಿದ್ದರು. ಡಿಜಿಟಲ್ ಲಾಕ್ ಉಳ್ಳ ತಿಜೋರಿಯನ್ನು ತೆರೆಯಲಾಗದೆ ಮಾಲು ಸಮೇತ ಮೈಸೂರಿಗೆ ತೆರಳಿ ಅಲ್ಲಿ ಲಾಡ್ಜೊಂದರಲ್ಲಿ ಎರಡು ದಿನ ತಂಗಿ ಡಿಜಿಟಲ್ ಲಾಕರ್ ತೆರೆಯಲಾರದೆ ವಿಫಲನಾದ. ತನ್ನ ಸ್ವಂತ ಊರು ಪಶ್ಚಿಮ ಬಂಗಾಲದ ಹೌರಾ ರೇಲ್ವೆನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಸುತ್ತುವರೆದ ಖಾಕಿ ಪಡೆ  ಹೆಡೆಮುರಿ ಕಟ್ಟಿ ಹೊತ್ತುತಂದಿದೆ.

ನಂಬಿಕೆಗೆ ಕನ್ನ ಹಾಕಿ ದ್ರೋಹ ಬಗೆದ ಕೈಲಾಸದಾಸ ಇದೀಗ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯಬೇಕಿದೆ. ಜೆ.ಪಿ.ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹೆಚ್.ಪಿ.ಮಂಜುನಾಥ್ ಹಾಗೂ ಅವರ ತಂಡದ ಕಾರ್ಯಾಚರೆಣೆಗೆ   ಆಯುಕ್ತ ಕಮಲ್ ಪಂತ್ ಹಾಗೂ ಸೌಮೇಂದು ಮುಖರ್ಜಿ  ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಹಿಂದೆ ಅಂದ್ರೆ ಸೋನಿಯಾ ನಾರಂಗ್ ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದಾಗ ಸೈಬರ್ ಕ್ರೈಂ ವಿಭಾಗದ ಉಸ್ತುವಾರಿಯನ್ನು ಮಂಜುನಾಥ್ ಅವರಿಗೆ ವಹಿಸಿದ್ದರು.ತಮಗೆ ಕೊಟ್ಟ ಹೊಣೆಗಾರಿಕೆಯನ್ನು ಶೃದ್ಧೆಯಿಂದ ನಿರ್ವಹಿಸಿದ್ದ ಮಂಜುನಾಥ್ ದಕ್ಷಿಣ ವಿಭಾಗದಲ್ಲಿ ನಡೆದ ಅದೆಷ್ಟೋ ಅತ್ಯಂತ ಜಠಿಲ ಹಾಗೂ ಸಂಕೀರ್ಣ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದರು.ಈ ಕಾರಣಕ್ಕೆ  ಮೇಲಾಧಿಕಾರಿಗಳಿಂದಲೂ ಪ್ರಶಂಸೆ ಪಡೆದಿದ್ದರು.

ಇದೀಗ ಕಾನೂನು ಸುವ್ಯವಸ್ಥೆಯ ಠಾಣಾಧಿಕಾರಿಯಾಗಿ ಠಾಣೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಕೆಲಸ ಮಾಡುತ್ತಿರುವ ಮಂಜುನಾಥ್, ಇನ್ನೊಂದಷ್ಟು ಪ್ರಕರಣಗಳ ತನಿಖೆ ನಡೆಸಿ, ಇಲಾಖೆಗೆ ಗೌರವ ತರುವುದಷ್ಟೇ ಅಲ್ಲ,  ಸಾರ್ವಜನಿಕರಿಗೂ ನೆಮ್ಮದಿ ತಂದಿದ್ದಾರೆ.ಇಂತದ್ದೊಂದು ಆಪರೇಷನನ್ನು ಸಕ್ಸೆಸ್ ಫುಲ್ ಆಗಿ ಮಾಡಿದ ಮಂಜುನಾಥ್ ಅವರಿಗೆ ಕನ್ನಡಫ್ಲಾಶ್ ನ್ಯೂಸ್ ಕೂಡ ಅಭಿನಂದನೆ ಹಾಗೂ ಆಲ್ ದಿ ಬೆಸ್ಟ್ ಹೇಳುತ್ತದೆ.. 

Spread the love
Leave A Reply

Your email address will not be published.

Flash News