ಡ್ರಗ್ಗಿಣಿ ರಾಗಿಣಿ,ಸಂಜನಾರನ್ನು ಜೈಲ್ ನಲ್ಲಿ ಭೇಟಿಯಾದವರೆಷ್ಟು ಗೊತ್ತಾ..?RTI ನಲ್ಲಿ ಬಹಿರಂಗವಾಯ್ತು ಆ ಇಂಟರೆಸ್ಟಿಂಗ್ ವಿಷ್ಯ…

0

ಬೆಂಗಳೂರು:ಡ್ರಗ್ಸ್ ಜಾಲದಲ್ಲಿ ಸಿಕ್ಕಾಕೊಂಡು ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಮುದ್ದೆ ಮುರಿಯುತ್ತಿರುವ ಡ್ರಗ್ಗಿಣಿ ಅಲಿಯಾಸ್ ರಾಗಿಣಿ ದ್ವಿವೇದಿ ಹಾಗೂ  ಸಂಜನಾ ಗರ್ಲಾನಿ ಅವರನ್ನು ಈವರೆಗೂ ಎಷ್ಟ್ ಜನ ಮೀಟ್ ಮಾಡಿರ್ಬೋದು..ಸಮಾಧಾನ ಮಾಡಿ ಧೈರ್ಯ ಹೇಳಿರಬಹುದು..ಅದರಲ್ಲಿ ಎಷ್ಟು ಮಂದಿ ಚಿತ್ರರಂಗದವರು..ಇನ್ನೆಷ್ಟು ಮಂದಿ ರಾಜಕೀಯ ಹಾಗೂ ಇತರೆ ಕ್ಷೇತ್ರಗಳಿಗೆ ಸಂಬಂಧಿಸಿದವರು ಎನ್ನುವ ಕುತೂಹಲ ಸಹಜವಾಗೇ ಇದ್ದೇ ಇದೆ.ಆ ಕುತೂಹಲವನ್ನು ಕನ್ನಡ ಫ್ಲಾಶ್ ನ್ಯೂಸ್ ದಾಖಲೆ ಸಮೇತ ಬಯಲು ಮಾಡ್ತಿದೆ. ರಾಗಿಣಿ ಹಾಗೂ ಸಂಜನಾ ಅವರನ್ನು ಜೈಲಿನಲ್ಲಿ ಯಾರೊಬ್ಬರೂ ಭೇಟಿ ಮಾಡಿಲ್ವಂತೆ..ಇನ್ ಫ್ಯಾಕ್ಟ್ ಭೇಟಿ ಮಾಡ್ಲಿಕ್ಕೆ ಅವಕಾಶ ಕೊಟ್ಟಿಲ್ವಂತೆ..ಕೇಳೊಕ್ಕೆ ಆಶ್ಚರ್ಯ ಎನಿಸ್ಬೋದಲ್ವಾ..ಆದ್ರೂ ಇದು ಸತ್ಯ..ಈ ಸಂಗತಿ ಮಾಹಿತಿ ಹಕ್ಕು ದಾಖಲೆಗಳಲ್ಲಿ ಬಯಲಾಗಿದೆ.

ಜೈಲಿನಲ್ಲಿ ಎಂತದ್ದೇ ನಟೋರಿಯಸ್ ಕ್ರಿಮಿನಲ್ ಇದ್ರೂ ಅಂಥವರನ್ನು ಭೇಟಿ ಮಾಡುವ ಅವಕಾಶವನ್ನು ಕಲ್ಪಿಸಲಾಗುತ್ತೆ.ಅದರಲ್ಲೂ ಜೈಲಿನಲ್ಲಿರೋರು ಸೆಲೆಬ್ರಿಟಿಗಳೋ….ಪೊಲಿಟಿಷಿಯನ್ಸೋ ಆದ್ರಂತು ಮುಗಿತು ಬಿಡಿ..ನೂರಾರು ಜನ ಭೇಟಿ ಮಾಡಿ ಸಮಾಧಾನ ಹೇಳುವ,ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿಯೇ ಇರುತ್ತಾರೆ.ಆದ್ರೆ ರಾಗಿಣಿ ಹಾಗು ಸಂಜನಾ ವಿಷಯದಲ್ಲಿ ಹಾಗೆ ಆಗಿಯೇ ಇಲ್ವಂತೆ.ಇಂತದ್ದೊಂದು ಆಶ್ಚರ್ಯಕರ ಮಾಹಿತಿಯನ್ನು ಈ ಬಗ್ಗೆ ಪರಪ್ಪನ ಅಗ್ರಹಾರ ಜೈಲು ಅಧೀಕ್ಷಕರಿಗೆ ಮಾಹಿತಿ ಕೇಳಿ ಅರ್ಜಿ ಹಾಕಿದ್ದ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ನರಸಿಂಹಮೂರ್ತಿ ಅವರಿಗೆ ನೀಡಲಾಗಿದೆ.ಈ ಮಾಹಿತಿಯ ಪ್ರತಿಗಳು EXCLUSIVE ಆಗಿ ಕನ್ನಡ ಫ್ಲಾಶ್ ನ್ಯೂಸ್ ಗೆ ಲಭಿಸಿದೆ.

ಅಂದ್ಹಾಗೆ ಮೊದಲು ಜೈಲು ಪಾಲಾದ ರಾಗಿಣಿಯನ್ನು 12-10-2020 ರವರೆಗೆ ಅಂದ್ರೆ (ನರಸಿಂಹಮೂರ್ತಿ ಅವರು ಕೇಳಿದ ದಿನಾಂಕಕ್ಕೆ ಅನ್ವಯವಾಗುವಂತೆ) ಎಷ್ಟು ದಿನ ಜನ ಭೇಟಿ ಮಾಡಿದ್ದಾರೆ..ಎಷ್ಟು ಜನರಿಗೆ ಅವಕಾಶ ನೀಡಲಾಗಿದೆ ಎನ್ನುವ ಅರ್ಜಿಗೆ ರಾಗಿಣಿ ದ್ವಿವೇದಿ D/O ಕರ್ನಲ್  ರಾಕೇಶ್ ಕುಮಾರ್, ಖೈದಿ ನಂಬರ್ 6604 ಅವರನ್ನು ಭೇಟಿಯಾಗೊಕ್ಕೆ ಯಾರೊಬ್ಬರಿಗೂ ಅವಕಾಶ ಮಾಡಿಕೊಟ್ಟಿರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.ಇದಕ್ಕೆ ಕೊವಿಡ್-19 ಕಾರಣ ಎಂಬ ವಿವರಣೆಯನ್ನು ಜೈಲ್ ನ ಸಾರ್ವಜನಿಕ ಮಾಹಿತಿ ಅಧಿಕಾರಿ ಲತಾ ನೀಡಿದ್ದಾರೆ.

ಇನ್ನು ಸಂಜನಾ ಅವರಿಗೆ ಯಾರನ್ನಾದ್ರೂ ಭೇಟಿ ಮಾಡಲು ಅವಕಾಶ ನೀಡಲಾಗಿದೆ ಎಂದು ಮತ್ತೊಂದು ಅರ್ಜಿಯನ್ನು ನರಸಿಂಹಮೂರ್ತಿ ಸಲ್ಲಿಸಿದ್ದರು. ಜೈಲಿನಲ್ಲಿ ಖೈದಿ ನಂಬರ್ 6733 ಆಗಿರುವ  ಸಂಜನಾ ಗರ್ಲಾನಿ D/O ಮನೋಹರ್ ಗರ್ಲಾನೆ  ಅವರಿಗೂ 12-10-2020ರ ದಿನಾಂಕಕ್ಕೆ ಅನ್ವಯವಾಗುವಂತೆ ಯಾರೊಬ್ಬರನ್ನೂ ಭೇಟಿ ಮಾಡಲಿಕ್ಕೆ ಅವಕಾಶ ನೀಡಿಲ್ಲ..ಇದಕ್ಕೂ ಕೊವಿಡ್-19 ಕಾರಣ ಎಂದು ಜೈಲು ಅಧೀಕ್ಷಕರ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಜೈಲ್ ಅಧೀಕ್ಷಕರು ಕೊಟ್ಟ ಮಾಹಿತಿ ಜೈಲಿನಲ್ಲಿ ಸಂಜನಾ ಹಾಗೂ ರಾಗಿಣಿಯನ್ನು ಸಾಕಷ್ಟು ಜನ ಭೇಟಿ ಮಾಡಿರಬಹುದಾದ ಪ್ರಶ್ನೆಗೆ ತೆರೆ ಎಳೆದಿದೆ.

Spread the love
Leave A Reply

Your email address will not be published.

Flash News