“ಮಗು”ವಾಗಿ “ಮೇಘನಾ” ಮಡಿಲು ಸೇರಿ “ಸರ್ಜಾ” ಕುಟುಂಬದ ನಗುವಿನ ಆಸ್ತಿಯಾದ “ಚಿರು”

0

ಕನ್ನಡ ಚಿತ್ರರಂಗ ಕಂಡ ಅಪರೂಪದ ಜೋಡಿ ಚಿರಂಜೀವಿ ಸರ್ಜಾ-ಮೇಘನಾರಾಜ್‌ರದು. ಇಡೀ ನಾಡಿಗೆ ಅಂತರ್‌ಜಾತಿ, ಧರ್ಮ, ಪ್ರೀತಿ, ಭಾವೈಕ್ಯತೆ, ಸೌಹಾರ್ದತೆಗೆ ಮಾದರಿಯಾಗಿತ್ತು. ದುರಾದೃಷ್ಟವಶಾತ್ ವಿಧಿಯ ದೃಷ್ಟಿ ತಾಗಿ ಚಿರಂಜೀವಿ ಸರ್ಜಾ ನಿಧನರಾದಾಗ ನಾಡ ಜನತೆ ಇನ್ನಿಲ್ಲದಂತೆ ಮರುಗಿತ್ತು.

ಇಂದು ರಾಜ್ಯ ಕಂಡ ಅಪರೂಪದ ಪ್ರಸಂಗ. ಇಡೀ ರಾಜ್ಯವೇ ಕುತೂಹಲದಿಂದ ಕಾಯುತ್ತಿದ್ದ ಗಳಿಗೆಯೂ ಹೌದು. ಅಂತಹ ಅಮೃತಗಳಿಗೆ ಜನತೆಗೆ ಸಂತೋಷ ತಂದಿತು ಕೂಡಾ. ನಟಿ ಮೇಘನಾರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದು, ನಾಡಿನ ಜನತೆ ಮತ್ತು ಕುಟಂಬಸ್ಥರು ಬಹಳ ದಿನಗಳ ನಂತರ ಖುಷಿಯಲ್ಲಿದ್ದಾರೆ. ಈ ಸಂಭ್ರಮವನ್ನು ನೋಡಲು ಚಿರು ಜತೆಗಿಲ್ಲವಲ್ಲಾ ಎಂಬ ನೋವು ಸಹ ಕಾಡಿದರೂ, ಇದು ತಮ್ಮ ಕುಟುಂಬದಲ್ಲಿ ನಡೆದ ಘಟನೆಯೇನೋ ಎಂಬಷ್ಟರಮಟ್ಟಿಗೆ ಜನತೆ ಕೂಡ ಸ್ಪಂದಿಸುತ್ತಿದ್ದಾರೆ.

ಹೆರಿಗೆಯಾದ ನಂತರ, ಮೊದಲು ಮಗುವನ್ನು ಚಿರು ಫೋಟೋ ಹತ್ರ ಇಟ್ಟು ಆಮೇಲೆ ಮೇಘನಾ ಮುತ್ತಿಟ್ಟಿದ್ದು ಎಂತಹವರನ್ನೂ ಭಾವುಕರನ್ನಾಗಿಸಿ ಕಣ್ಣಾಲಿ ತುಂಬುವಂತೆ ಮಾಡಿತು. ಇಷ್ಟರಮಧ್ಯೆ ನನ್ನ ಮಗಳ ಮುಂದೆ ನಾನು ಅಳುತ್ತಾ ಕುಳಿತರೆ ನಾಳೆ ಅವಳ ಜೀವನ ಯಾರು ನೋಡ್ತಾರೆ.. ಅವಳ ಭವಿಷ್ಯ ಏನಾಗ್ಬೇಕು..? ತುಂಬಾ ಕಷ್ಟ ಆಗ್ತಿತ್ತು ಈಗ ನನ್ನ ಅಳಿಯಾನೆ ಬಂದಿದ್ದಾನೆ… ಎಂದರು ಅಜ್ಜಿ ಪ್ರಮೀಳಾ ಜೋಷಾಯ್.

ನಾವು ಬಹಳ ಕುಗ್ಗೋಗಿದ್ವಿ, ನಮಗೆ ಧೈರ್ಯ ಕೊಟ್ಟೋಳೆ ನನ್ನ ಮಗಳು, ಸಾವು ನಿಶ್ಚಿತ ಆದರೆ ಸಾವು ಯಾರು ಬಯಸೋದಿಲ್ಲ… ಆಗಬಹುದಾದದ್ದು ನೂರಾದರೆ ಆಗುವುದು ಒಂದು.. ಈ ನಾಲ್ಕು ತಿಂಗಳು ವರ್ಷಗಳ ತರ ಆಗೋಗಿತ್ತು ನನಗೆ, ರಾತ್ರಿ ಏತಕ್ಕೆ ಬರುತ್ತೆ ಅನ್ಕೋತಿದ್ದೆ… ಅಂದರು ತಾತ ಸುಂದರ್‌ರಾಜ್. ಮಗುವನ್ನು ಮೊದಲ ಬಾರಿಗೆ ಎತ್ತಿಕೊಂಡು ಎದೆಗಾನಿಸಿಕೊಂಡ ಚಿಕ್ಕಪ್ಪ ಧ್ರುವ ಅಕ್ಷರಶಃ ಭಾವುಕರಾಗಿದ್ದರು. ಅಲ್ಲದೆ, ಮಗುವನ್ನು ಅಣ್ಣನ ಬೃಹತ್ ಭಾವಚಿತ್ರದ ಮುಂದೆ ಹಿಡಿದು ಭಾವುಕರಾದರು. ಅಭಿಮಾನಿಗಳು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

“ಮಗು”ವಾಗಿ “ಮೇಘನಾ” ಮಡಿಲು ಸೇರಿ “ಸರ್ಜಾ” ಕುಟುಂಬದ ನಗುವಿನ ಆಸ್ತಿಯಾದ “ಚಿರು”

Spread the love
Leave A Reply

Your email address will not be published.

Flash News