ಮುಖ್ಯಮಂತ್ರಿ ಬಿಎಸ್ ವೈ ಸ್ವಜನಪಕ್ಷಪಾತ VS 49 ಕೆಎಎಸ್ ಬಂಡಾಯ..!! ವಿಶ್ವನಾಥ್ ಹಿರೇಮಠ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಕೆಎಎಸ್..?!

0
49 ಕೆಎಎಸ್ ಗಳ ಬಂಡಾಯಕ್ಕೆ ಸಿಲುಕಿರುವ ಕೆಎಎಸ್ ವಿಶ್ವನಾಥ್ ಹಿರೇಮಠ್
49 ಕೆಎಎಸ್ ಗಳ ಬಂಡಾಯಕ್ಕೆ ಸಿಲು ಕಿರುವ  ವಿಶ್ವನಾಥ್ ಹಿರೇಮಠ್

ಬೆಂಗಳೂರು:ನಿಯಮಗಳು ಸರ್ಕಾರಿ ನಿಯಮಗಳಾಗಿಯೇ ಉಳಿಯಬೇಕು..ಎಲ್ಲರಿಗೂ ಒಂದೇ ರೀತಿ ಅನ್ವಯವಾಗಬೇಕು.. ಸ್ವಜನಪಕ್ಷಪಾತಕ್ಕೆ ದುರ್ಬಳಕೆಯಾಗಬಾರದು ಎನ್ನುತ್ವೆ ನಿಯಮಗಳು.ಆದ್ರೆ ಓರ್ವ ಕೆಎಎಸ್ ವಿರುದ್ಧ ಇತರೆ ಕೆಎಎಸ್ ಗಳು ಬಂಡಾಯ ಎದ್ದಿರುವ ಸಧ್ಯದ ಪರಿಸ್ಥಿತಿ ಸರ್ಕಾರದ ಮಟ್ಟದಲ್ಲಿ ಸಂಚಲನವನ್ನೇ ಮೂಡಿಸಿದೆ.

ಅಂದ್ಹಾಗೆ ಇವರೆಲ್ಲಾ ಬಂಡಾಯ ಎದ್ದಿರುವುದು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪ್ರೀತಿಪಾತ್ರ ಹಾಗೂ ಅವರ ಆದೇಶದಿಂದ್ಲೇ ಭಡ್ತಿ ಪಡೆದ ಆರೋಪಕ್ಕೆ ತುತ್ತಾದ ಕೆಎಎಸ್ ವಿಶ್ವನಾಥ್ ಹಿರೇಮಠ್ ವಿರುದ್ಧ ಎನ್ನುವುದು ಗಮನಾರ್ಹ.

ಯೆಸ್..ಸರ್ಕಾರದ ವಿರುದ್ಧವೇ ತೊಡೆತಟ್ಟುವ ನಿರ್ದಾರಕ್ಕೆ ಕೆಎಎಸ್ ಗಳು ಬಂದಿರುವು ದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲಿರಬೇಕು ಎನ್ಸುತ್ತೆ.ಅದು ಕೂಡ ಓರ್ವ ಮುಖ್ಯಮಂತ್ರಿ ಮಾಡಿದ ಆದೇಶದ ಮೇಲೆ ನಡೆದ ಭಡ್ತಿ ವಿರುದ್ಧ ಎನ್ನೋದು ಮತ್ತಷ್ಟು ಕುತೂಹಲಕಾರಿ.ವಿಶ್ವನಾಥ್ ಹಿರೇಮಠ್ ಎನ್ನುವ ಕೆಎಎಸ್ ಅಧಿಕಾರಿ ತನ್ನ ರಾಜಕೀ ಯ ಕಾರ್ಯದರ್ಶಿಯಾಗಿದ್ದರು ಎನ್ನುವ ಒಂದೇ ಕಾರಣ ಹೆಚ್ಚಿನ ಕಾಳಜಿ ಹಾಗೂ ಮಮಕಾರದಿಂದ ಮುಖ್ಯಮಂತ್ರಿ ಯಡಿಯೂರಪ್ಪ ನಿಯಮ ಉಲ್ಲಂಘಿಸಿದ್ದರೆನ್ನುವುದು ಬಂಡಾಯ ಎದ್ದು ಕಾನೂನು ಚೌಕಟ್ಟಿನಲ್ಲಿ ಹೋರಾಟ ನಡೆಸ್ಲಿಕ್ಕೆ ಮುಂದಾಗಿರುವ 49 ಕೆಎಎಸ್ ಗಳ ಆರೋಪ.

ಸುಪ್ರಿಂಕೋರ್ಟ್,ಹೈಕೋರ್ಟ್ ಹಾಗೂ ಕೆಎಟಿ ಆದೇಶಗಳನ್ನು ಧಿಕ್ಕರಿಸಿ ಮುಖ್ಯಮಂತ್ರಿ ಯಡಿಯೂರಪ್ಪ,  ಯಾರದೇ ಸಲಹೆ ಪಡೆಯದೆ,ಸಂಬಂಧಿಸಿದವರೊಂದಿಗೆ ಚರ್ಚಿಸದೇ ಏಕಾಏಕಿ ಲಾಕ್ ಡೌನ್ ಸಂದರ್ಭದಲ್ಲಿ ವಿಶ್ವನಾಥ್ ಹಿರೇಮಠ್ ಅವರಿಗೆ ಗ್ರೂಪ್-ಎ(ಕೆಎಎಸ್ ಕಿರಿಯಶ್ರೇಣಿ) ಭಡ್ತಿ ನೀಡಿತ್ತು.ಇದು 1998,1999 ಹಾಗೂ 2004 ರಲ್ಲಿ ನಡೆದ ಕೆಎಎಸ್ ಅಧಿಕಾರಿಗಳ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ   ನೀಡಿದ್ದ ಆದೇಶದ ಸ್ಪಷ್ಟ ಉಲ್ಲಂಘನೆ.ಈ ಕಾರಣಕ್ಕೆ  ಸರ್ಕಾರ ನ್ಯಾಯಾಂಗ ನಿಂದನೆಗೂ ಗುರಿಯಾಗಿತ್ತು.

ವಿಶ್ವನಾಥ್ ಹಿರೇಮಠ್ ಸೇರಿದಂತೆ 5 ಕೆಎಎಸ್ ಗಳನ್ನು ಮಾರ್ಚ್ 2009 ರಲ್ಲಿ ಶಾಖಾಧಿಕಾರಿ ಹುದ್ದೆಗಳಿಗೆ ನಿಯೋಜಿಸಿ ಆದೇಶ ಹೊರಡಿಸಲಾಗಿತ್ತು.ಇದನ್ನು ಪ್ರಶ್ನಿಸಿ ಇವರೆಲ್ಲಾ ಸೇರಿ ಕೆಎಟಿಯಲ್ಲಿ ಅರ್ಜಿ ಸಲ್ಲಿಸಿದ್ದರು.ಇದಕ್ಕೆ ಪೂರಕವಾಗಿ 2017 ರಲ್ಲಿ ತೀರ್ಪು ಕೂಡ ನೀಡಿತ್ತು.ಕೆಎಟಿ ಪೀಠದಲ್ಲಿ ವಿಚಾರಣೆ ನಡೆಯುತ್ತಿರುವಾಗ್ಲೇ ಕೆಎಟಿ ಆಡಳಿತಾತ್ಮಕ ಸದಸ್ಯರೊಬ್ಬರು ಈ ಬಗ್ಗೆ ಆಕ್ಷೇಪಣೆ ಎತ್ತಿದ್ದರು.ಇವರು ರಜೆ ಮೇಲೆ ತೆರಳಿದ ಸಂದರ್ಭವನ್ನೇ ನೋಡಿಕೊಂಡು ನ್ಯಾಯಾಂಗ ಸದಸ್ಯರೊಬ್ಬರು ವಿಶ್ವನಾಥ್ ಹಿರೇಮಠ್ ಅವರಿಗೆ ಗ್ರೂಪ್-ಎ ಹುದ್ದೆ ನೀಡುವಂತೆ ಆದೇಶಿಸಿ ಅಚ್ಚರಿ ಮೂಡಿಸಿದ್ದರು. ಆದರೆ ದುರಂತವೆಂದರೆ ಇದೆಲ್ಲಾ ಸರ್ಕಾರಿ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆಯುತ್ತಿದೆ ಎಂದು ಗೊತ್ತಿದ್ರೂ ಸರ್ಕಾರದ ಮುಖ್ಯ ಕಾರ್ಯದರ್ಶಿಯೂ ಧ್ವನಿ ಎತ್ತಿರಲಿಲ್ಲ.

ಇದೆಲ್ಲದರ ನಡುವೆಯೇ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ವಿಶ್ವನಾಥ್ ಹಿರೇಮಠ್ ಅವರು ಕೆಎಟಿಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸ್ತಾರೆ.ಈ ಅರ್ಜಿಯ ವಿಚಾರಣೆ ಇನ್ನು ಬಾಕಿ ಇರುವಾಗ್ಲೇ ಸರ್ಕಾರ ಹಿರೇಮಠ್ ಅವರಿಗೆ ಗ್ರೂಪ್-ಎ ಹುದ್ದೆಯನ್ನು ನೀಡಿ ತೀವ್ರ ವಿವಾದಕ್ಕೆ ಸಿಲುಕಿತ್ತು.ಇದೆಲ್ಲವೂ ಯಡಿಯೂರಪ್ಪ ಅವರ ಆದೇಶ-ಸೂಚನೆ ಮೇರೆಗೇ ನಡೆದಿತ್ತೆನ್ನುವ ಮಾತುಗಳಿವೆ.

ಗ್ರೂಪ್ಎ ಹುದ್ದೆಯನ್ನು ವಿಶ್ವನಾಥ್ ಹಿರೇಮಠ್ ಅವರಿಗೆ ನೀಡಿದ್ದಷ್ಟೇ ಅಲ್ಲ,2004 ನವೆಂಬರ್ 4ರ ನೇಮಕಾತಿ ಅಧಿಸೂಚನೆ ಅನ್ವಯವೇ ಎಲ್ಲಾ ರೀತಿಯ ಸೌಲಭ್ಯ-ಸವಲತ್ತು-ಭತ್ಯೆಗಳನ್ನೆಲ್ಲಾ ನೀಡಿತ್ತು.ಅಷ್ಟೇ ಅಲ್ಲ,ವಿಶ್ವನಾಥ್ ಹಿರೇಮಠ್ ಅವರ ವಿಚಾರದಲ್ಲಿ  1998,1999 ಹಾಗೂ 2004ರ ಸಾಲಿನಲ್ಲಿ 60 ಕೆಎಎಸ್ ಸಹಾಯಕ ಆಯುಕ್ತರ ಹುದ್ದೆಗಳ ಲಭ್ಯತೆ ಇದ್ದರೂ  ಸರ್ಕಾರ  ರೋಸ್ಟರ್ ಪದ್ಧತಿ ಅನುಸರಿಸಿರಲಿಲ್ಲ ಎನ್ನುವ ಮಾತುಗಳಿವೆ.

ವಿಶ್ವನಾಥ್ ಹಿರೇಮಠ್ ಎನ್ನುವ ಅಧಿಕಾರಿಗೋಸ್ಕರ ಎಲ್ಲಾ ನಿಯಮಗಳನ್ನು ಉಲ್ಲಂ ಘಿಸಿದ ಸರ್ಕಾರ ಹಾಗೂ ಸಿಎಂ ಯಡಿಯೂರಪ್ಪ ವಿರುದ್ಧ ಅರ್ಹತೆಯಿದ್ದರೂ ಗ್ರೇಡ್ ನಿಂದ ವಂಚಿತವಾದ  ಕೆಎಎಸ್ ಗಳು ನಿಗಿನಿಗಿ ಕೆಂಡವಾಗಿದ್ದರು.ಇಷ್ಟು ದಿನ ತುಟಿ ಕಚ್ಚಿ ಸಹಿಸಿಕೊಂಡಿದ್ದ  ಮುಖ್ಯಮಂತ್ರಿಗಳ ಸ್ವಜನ ಪಕ್ಷಪಾತ-ಸ್ವಾರ್ಥ ಹಿತಾಸಕ್ತಿ ವಿರುದ್ಧದ  ಆಕ್ರೋಶ-ಅಸಮಾಧಾನವನ್ನು ಅಂತಿಮವಾಗಿ ಹೊರಹಾಕಿದ್ದಾರೆ.

ಅಂದ್ಹಾಗೆ ಸಿಎಂ ವಿರುದ್ಧ ತೊಡೆತಟ್ಟಿರುವ 49 ಕೆಎಎಸ್ ಗಳ ಪಟ್ಟಿಯಲ್ಲಿ ಸರ್ಕಾರದಲ್ಲಿ ಹಾಲಿ ಸಚಿವರಾಗಿರುವವರ ಆಪ್ತ ಕಾರ್ಯದರ್ಶಿಗಳು ಕೂಡ ಸೇರಿದ್ದಾರೆ.ಹಾಗೆಯೇ ಸರ್ಕಾರದ ವಿವಿಧ  ಇಲಾಖೆಗಳಲ್ಲಿ ಆಯ ಕಟ್ಟಿನ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಕೆಎಎಸ್ ಗಳು ಸೇರಿರುವುದು ವಿಶೇಷ.ಕೆಎಎಸ್ ಗಳ  ಈ ಬಂಡಾಯ ಕೇವಲ ಸರ್ಕಾರಕ್ಕೆ ಮುಜುಗರತಂದಿರುವುದಷ್ಟೇ ಅಲ್ಲ,ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪರನ್ನು ಕಾನೂನು ಬಿಕ್ಕಟ್ಟಿಗೂ ಈಡು ಮಾಡಿರುವುದು ವಿಪರ್ಯಾಸ. 

 

Spread the love
Leave A Reply

Your email address will not be published.

Flash News