ಅಧಿಕಾರಿಗಳು ತಪ್ಪು ಮಾಡಿದ್ರೆ “ಮಾಫಿ”ನಾ..ಸಣ್ಣವರು ದುಡುಕಿದ್ರೆ “ಅಪರಾಧ”ನಾ…?ಇದ್ಯಾವ ನ್ಯಾಯ.. ನೊಂದ ಸಾರಿಗೆ ನೌಕರರಿಂದ ಶೀಘ್ರವೇ ಮುಖ್ಯಮಂತ್ರಿಗಳಿಗೆ ಕಣ್ಣೀರಿನ ಪತ್ರ..?!

0

ಬೆಂಗಳೂರು:ಇದು ನಿಜಕ್ಕೂ ಅನ್ಯಾಯದ ಪರಮಾವಧಿ ಕಣ್ರಿ..ನ್ಯಾಯ ಎನ್ನೋದು ಎಲ್ಲರಿಗೂ ಒಂದೇ ರೀತಿಯಾಗಿ ಸಲ್ಲಿಕೆಯಾಗ್ಬೇಕು..ದೊಡ್ಡವರಿಗೊಂದು,ಸಣ್ಣವರಿಗೊಂದು ಎನ್ನುವಂತಾದ್ರೆ ಸಾಮಾಜಿಕ ನ್ಯಾಯಕ್ಕೆ ಏನ್ ಬೆಲೆ ಬಂದಂತಾಯಿತು..

ಆದ್ರೆ ದುಃಖದಾಯಕ ಹಾಗೂ ನಾಚಿಕೆಗೇಡಿನ ವಿಷಯ ಏನ್ ಗೊತ್ತಾ..ಸಾರಿಗೆ ನಿಗಮಗಳಲ್ಲಿಇದರ ಪಾಲನೆಯೇ ಆಗುತ್ತಿಲ್ಲ.ಕೆಳ ಹಂತದ ಸಿಬ್ಬಂದಿ ಗೊತ್ತಿದ್ದೋ.. ಗೊತ್ತಿಲ್ಲದೆಯೋ ಮಾಡುವ ಸಣ್ಣ ತಪ್ಪುಗಳನ್ನೇ ಮಹಾದ್ರೋಹ ಎನ್ನುವಂತೆ ಬಿಂಬಿಸಿ ಅವರಿಗೆ ಕಳ್ಳೆಪುರಿಯಂತೆ ಅಮಾನತ್ತಿನ ಆದೇಶವನ್ನು ನೀಡಲಾಗ್ತಿದೆ..

ಅದೇ ಅಧಿಕಾರಿಗಳ ಮೇಲೆ ದಂಡಿ..ದಂಡಿ ಆಪಾದನೆಗಳಿದ್ದರೂ ಅವರನ್ನು ಉಪ್ಪರಿಗೆಯಲ್ಲಿ ಕೂರಿಸಿ ಕೆಳ ಹಂತದ ಸಿಬ್ಬಂದಿ ಮೇಲೆ ದೌರ್ಜನ್ಯ-ಕ್ರೌರ್ಯ ನಡೆಸೊಕ್ಕೆ ಅವಕಾಶ ಮಾಡಿಕೊಡಲಾಗ್ತಿದೆ.ಇಷ್ಟೆಲ್ಲಾ ನಡೆಯುತ್ತಿದ್ದರೂ ತನಗೂ ಇಲಾಖೆಗೂ ಸಂಬಂಧವೇ ಇಲ್ಲದಂತೆ ಕೂತಿರುವ “ಯಜಮಾನ” ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಕಾರಣಕ್ಕೆ ಸಾರಿಗೆ ನೌಕರರು ತಬ್ಬಲಿಗಳಾಗಿದ್ದಾರೆ.ಹಾಗಾಗಿಯೇ ತಮ್ಮ ಅಳಲನ್ನು ನಾಡ ದೊರೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರ ಗಮನಕ್ಕೆ ತರಲು ಚಿಂತನೆ ನಡೆಸಿದ್ದಾರೆನ್ನುವ ಸಂಗತಿ “ಕನ್ನಡ ಫ್ಲಾಶ್ ನ್ಯೂಸ್” ಗೆ ಲಭಿಸಿದೆ.

ಹೌದು…ಸಾರಿಗೆ ನೌಕರರ ಅಳಲು-ನೋವು-ಬವಣೆಗಳನ್ನು ತೀರಾ ಹತ್ತಿರದಿಂದ ನೋಡುತ್ತಾ,ಆ ಸಂಬಂಧ ವರದಿಗಳನ್ನೂ ಮಾಡುತ್ತಾ ಬಂದಿರುವ ಕನ್ನಡ ಫ್ಲಾಶ್ ನ್ಯೂಸ್ ಗೆ ಸಿಕ್ಕಿರುವ ಖಚಿತ ವರ್ತಮಾನದ ಮೇರೆಗೆ ಸಾರಿಗೆ ನೌಕರರು ಕರ್ತವ್ಯದ ಸ್ಥಳ ಹಾಗೂ ಸಮಯದಲ್ಲಿ ಆಗುತ್ತಿರುವ ಅನ್ಯಾಯವನ್ನು ತಡೆಯಲಾಗದೆ ಇದೀಗ ಸಿಎಂ ಅವರ ಗಮನಕ್ಕೆ ವಿಷಯವನ್ನು ತರೊಕ್ಕೆ ನಿರ್ದರಿಸಿದ್ದಾರಂತೆ. ಕೊರೊನಾದಂಥ ಸಂಕಷ್ಟದ ಸಮಯದಲ್ಲೂ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ತಮ್ಮನ್ನು ಕ್ಷುಲ್ಲಕ ಕಾರಣಗಳಿಗಾಗಿ ಟಾರ್ಗೆಟ್ ಮಾಡಿ ಅಮಾನತುಪಡಿಸಲಾಗ್ತಿದೆ.

ದಿನಕ್ಕೊಂದು ಎನ್ನುವಂತೆ ಮಾಡುತ್ತಿರುವ ನಿಯಮ-ಹೊರಡಿಸುತ್ತಿರುವ ಆದೇಶಗಳ ಒಳಮರ್ಮವನ್ನು ಗಮನಿಸಿದ್ರೆ  ತಮ್ಮನ್ನು ಅಮಾನತುಪಡಿಸಲಿಕ್ಕೆಂದೇ ಅವನ್ನೆಲ್ಲಾ ಮಾಡಲಾಗ್ತಿದೆಯೇ ಎನ್ನುವ ಅನುಮಾನ-ನೋವು ಕಾಡ್ತಿದೆ.ಜೀವನ ನಡೆಸೋದೇ ದುಸ್ತರವಾಗಿರುವ ಕೊರೊನಾ ಸಮಯದಲ್ಲಿ ಮೇಲಾಧಿಕಾರಿಗಳು ಹೀಗೆಲ್ಲಾ ಮಾಡಿದ್ರೆ ನೌಕರ ಸಿಬ್ಬಂದಿ ಏನ್ ಮಾಡ್ಬೇಕು..ಎಲ್ಲಿಗೆ ಹೋಗ್ಬೇಕು..ಅರ್ಧ ಸಂಬಳದಲ್ಲಿ ಜೀವನ ನಡೆಸೋದು ಹೇಗೆ ಎಂಬ ಪ್ರಶ್ನೆಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲು ಚಿಂತಿಸಿರುವ ಮನವಿಯಲ್ಲಿ ಉಲ್ಲೇಖಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬಿಎಂಟಿಸಿಯಲ್ಲಿ ಡ್ರೈವರ್ಸ್-ಕಂಡಕ್ಟರ್ಸ್ ಗೆ ಅಮಾನತ್ತೆನ್ನುವುದು ಕಾಮನ್..ಕೆಲವು ಸಕಾರಣಳಿಗೆ ಆಗುತ್ವೆ ಎನ್ನೋದು ಎಷ್ಟು ಸತ್ಯವೋ, ಕ್ಷುಲ್ಲಕ ಕಾರಣಗಳಿಗೆ ಎಸ್ ಪಿ ಮಾಡುವುದು ಕೂಡ ಅಷ್ಟೇ  ನಿಜ. ಕೊರೊನಾ ಪೂರ್ವದಲ್ಲಿ ಆಗುತ್ತಿದ್ದ ಅಮಾನತುಗಳಿಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ,ಆದ್ರೆ ಕೊರೊನಾ ಸಂದರ್ಭದಲ್ಲಿಇದೆಲ್ಲಾ ನಡೆಯುತ್ತಿರುವುದೇ ನೌಕರರನ್ನು ಕೆಂಡಾಮಂಡಲಗೊಳಿಸಿದೆ.ಬೆಂಗಳೂರಿನಂಥ ಸಿಟಿಯಲ್ಲಿ ಜೀವನ ನಡೆಸಲಿಕ್ಕೆ ಆಗೊಲ್ಲ ಎನ್ನುವ ಕಾರ ಣಕ್ಕೇನೆ ಅದೆಷ್ಟೋ ನೌಕರರು ಬೆಂಗಳೂರನ್ನೇ ತೊರೆದು ತಮ್ಮ ಸ್ವಗ್ರಾಮಗಳತ್ತ ಗುಳೆ ಹೋಗುತ್ತಿರುವ ವರ್ತಮಾನಗಳಿವೆ.ಇದೆಲ್ಲಾ ಮೇಲಾಧಿಕಾರಿಗಳಿಗೆ ಗೊತ್ತಿಲ್ಲ ಎಂದೇನಲ್ಲ

..ಡ್ರೈವರ್ಸ್-ಕಂಡಕ್ಟರ್ಸ್ ಗಳೆಂದ್ರೆ ತುಚ್ಛವಾಗಿ ಕಾಣುವ ಅವರ ಮನಸ್ಥಿತಿಗಳಿಂದ್ಲೇ ನೌಕರರು ಕೊರೊನಾ ಸಮಯದದಲ್ಲಿ ಅನುಭವಿಸುತ್ತಿರುವ ಬವಣೆಗಳು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.ನಮ್ಮ ಬೆವರು-ಪರಿಶ್ರಮದಿಂದಲೇ ನಿಗಮ ನಡೆಯುತ್ತಿದೆ ಎನ್ನೋದನ್ನೇ ನಮ್ಮನ್ನಾಳುವವರು ಮರೆತಿದ್ದಾರೆ ಸಾರ್ ಎಂದು ಕೊರೊನಾ ಸನ್ನಿವೇಶದಲ್ಲಿ ಕ್ಷುಲ್ಲಕ ಕಾರಣಕ್ಕೆ ಅಮಾನತುಗೊಂಡ ಉತ್ತರ ಕರ್ನಾಟಕ ಮೂಲದ ನೌಕರನೊಬ್ಬ ಹೇಳುವಾಗ ಆಡಳಿತ ಮಂಡಳಿಗಳು ಇಷ್ಟು ಅಮಾನವೀಯವಾದ್ವಾ ಎಂದೆನಿಸ್ತದೆ.

ಕೊರೊನಾ ಸನ್ನಿವೇಶದಲ್ಲಿ ವಾರಿಯರ್ಸ್ ಗಳಂತೆ ಕೆಲಸ ಮಾಡುವ  ಯಾವುದೇ ನೌಕರರನ್ನು ಕೆಲಸದಿಂದ ತೆಗೆಯಬಾರದೆನ್ನುವ ಆದೇಶ ಖುದ್ದು ಸರ್ಕಾರದಿಂದಲೇ ರವಾನೆಯಾಗಿದೆ ಎನ್ನುವ ಮಾತುಗಳಿವೆ.ಆದ್ರೆ ಸಾರಿಗೆ ನಿಗಮಗಳ ನೌಕರರ ವಿಷಯದಲ್ಲಿ ಇದರ ಪಾಲನೆಯೇ ಆಗುತ್ತಿಲ್ಲ ಎನ್ನಲಾಗಿದೆ.ಸಸ್ಪೆಂಡ್ ಮಾಡಲಿಕ್ಕೆಂದೇ ಹೊಂಚಾಕಿ ಕೂತಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರಂತೆ.ಬಸ್ ಗಳನ್ನು ಏರಿದ್ರೆ ,ಡ್ರೈವರ್-ಕಂಡಕ್ಟರ್ ಅನ್ನು ಬಲಿ ತೆಗೆದುಕೊಂಡೇ ತನಿಖಾಧಿಕಾರಿಗಳು ಕೆಳಗಿಳಿಯೋದು ಮಾಮೂಲಾಗಿದೆಯಂತೆ.

ಸಸ್ಪೆಂಡ್ ಮಾಡಲು ರೀಸನ್ ಗಳೇ ಇರೋ್ದಿಲ್ಲವಂತೆ.ಏನೂ ಸಿಗ್ಲಿಲ್ಲ ಎಂದ್ರೂ ಕೊನೇ ಪ್ರಯತ್ನವಾಗಿ ತನಿಖಾಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ರು ಎನ್ನುವ ಕಾರಣವನ್ನು ಅವ್ರೇ ಹುಟ್ಟಾಕಿ ಸಸ್ಪೆಂಡ್ ಆದೇಶವನ್ನು ಕೊಡ್ತಾರೆಂದ್ರೆ ಸಾರಿಗೆ ನಿಗಮಗಳ ವ್ಯವಸ್ಥೆಯಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆ ಬದುಕಿದೆಯೋ,ಹಿಟ್ಲರ್ ನ ಸರ್ವಾಧಿಕಾರಿ ಧೋರಣೆ ವಿಜೃಂಭಿಸುತ್ತಿದೆಯೋ ಎನ್ನುವ ಅನುಮಾನ ಕಾಡುತ್ತಿದೆ ಎನ್ನುವ ಅಳಲನ್ನು ಸಿಎಂಗೆ ಬರೆಯುವ ಪತ್ರದಲ್ಲಿ ಉಲ್ಲೇಖಿಸಲಿದ್ದಾರೆ ಎಂದು ತಿಳಿದು ಬಂದಿದೆ.

 ಹೋಗ್ಲಿ ಸಸ್ಪೆಂಡ್ ನಿಯಮಗಳು ನಿಗಮದಲ್ಲಿ ಪಾರದರ್ಶಕವಾಗಿ,ನಿಷ್ಪಕ್ಷಪಾತವಾಗಿ,ಸಾಮಾಜಿಕ ನ್ಯಾಯದ ರೂಪದಲ್ಲಿ ಸರಿಸಮಾನಾಗಿ ಪಾಲನೆಯಾಗುತ್ತಿದೆಯೇ ಎನ್ನೋದನ್ನು ನೋಡಿದ್ರೆ,ಕೆಳ ಹಂತದ ಸಿಬ್ಬಂದಿ ಇರೋದು ಜೀತಕ್ಕೆ,ಮೇಲಾಧಿಕಾರಿಗಳು ಇರೋದು ದರ್ಬಾರ್ ನಡೆಸಲಿಕ್ಕೆ ಎನ್ನುವಂತಾಗಿದೆ.ಹಾಗೇನಾದ್ರೂ ಆ ನಿಯಮ ಸರಿಯಾಗಿ ಪಾಲನೆ ಆಗಿದಿದ್ದರೆ ಇವತ್ತು ಅದೆಷ್ಟು ಡಿಪೋ ಮ್ಯಾನೇಜರ್ಸ್ ಗಳು ನೇರವಾಗಿ ಜೈಲಿಗೇನೇ ಹೋಗ್ಬೇಕಿತ್ತು.ಡಿಪೋಗಳ ಮಟ್ಟದಲ್ಲೇ ಬಿಡಿಭಾಗಗಳ ತಯಾರಿ,ಡೀಸೆಲ್ ಲೆಕ್ಕದಲ್ಲಿ ವಂಚನೆ,ಡ್ಯೂಟಿ ಕೊಡುವ ವಿಚಾರದಲ್ಲಿ ಲಂಚ, ಲಾಭದಾಯಕ ಹುದ್ದೆಗಳಲ್ಲಿ ಅಕ್ರಮ,ಆಯಕಟ್ಟಿನ ಸ್ಥಳಗಳಲ್ಲೇ ನಿಯಮಬಾಹೀರವಾಗಿ ಗೂಟಾ ಹೊಡ್ಕಂಡಿರುವಂಥ ಸಾಕಷ್ಟು ಆರೋಪಗಳು ಅಧಿಕಾರಿಗಳ ಮೇಲಿದೆ.

ನಿರ್ಭಯ) ಯೋಜನೆಯಲ್ಲಿ ಮಂಜೂರಾದ ಅನುದಾನದಲ್ಲಿ ದುರ್ಬಳಕೆ ಆಗಿರುವುದರಲ್ಲಿ ಅಧಿಕಾರಿಗಳ ಪಾತ್ರದ ಬಗ್ಗೆ ಶಂಕೆ ವ್ಯಕ್ತಪಡಿಸಿ ಸಲ್ಲಿಸಿದ ದೂರಿನ ಬಗ್ಗೆ ಈವರೆಗೂ ಕ್ರಮ ಕೈಗೊಳ್ಳುವ ಕೆಲಸವೇ ನಡೆದಿಲ್ಲ
ನಿರ್ಭಯ ಯೋಜನೆಯಲ್ಲಿ ಮಂಜೂರಾದ ಅನುದಾನದಲ್ಲಿ ದುರ್ಬಳಕೆ ಆಗಿರುವುದರಲ್ಲಿ ಅಧಿಕಾರಿಗಳ ಪಾತ್ರದ ಬಗ್ಗೆ ಶಂಕೆ ವ್ಯಕ್ತಪಡಿಸಿ ಸಲ್ಲಿಸಿದ ದೂರಿನ ಬಗ್ಗೆ ಕ್ರಮ ಕೈಗೊಳ್ಳುವ ಕೆಲಸವೇ ನಡೆದಿಲ್ಲ
ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಎಲ್ಲವೂ ಸರಿಯಾಗಿ ಪಾಲನೆ ಆಗಿದಿದ್ದರೆ ಇವತ್ತು ದಂಡಿ ದಂಡಿಯಾಗಿ ಅಧಿಕಾರಿಗಳು ಸಸ್ಪೆಂಡ್ ಆಗ್ಬೇಕಿತ್ತು.
ಸಾಮಾಜಿಕ ನ್ಯಾಯದ ಪರಿಕಲ್ಪನೆ ಯಲ್ಲಿ ಎಲ್ಲವೂ ಸರಿಯಾಗಿ ಪಾಲನೆ ಆಗಿದಿದ್ದರೆ ಇವತ್ತು ದಂಡಿ ದಂಡಿಯಾಗಿ ಅಧಿಕಾರಿಗಳು ಸಸ್ಪೆಂಡ್ ಆಗ್ಬೇಕಿತ್ತು.

ಆದ್ರೆ ಅವರೆಲ್ಲರ ವಿರುದ್ಧ ಏನ್ ಕ್ರಮ ಕೈಗೊಳ್ಳಲಾಗಿದೆ… ಖಂಡಿತಾ ಇಲ್ಲ,ಕೆಲವು ಅಧಿಕಾರಿಗಳ ವಿರುದ್ದ ಎಂತೆಂಥಾ ಆರೋಪಗಳಿವೆ ಎಂದ್ರೆ ಅವರು ಮಾಡಿದ ತಪ್ಪಿಗೆ ಜೀವನ ಪರ್ಯಂತ ಜೈಲಿನಲ್ಲಿರಬೇಕಿತ್ತು(ಉದಾಹರಣೆಗೆ,NIRBHAYA-(ನಿರ್ಭಯ) ಯೋಜನೆಯಲ್ಲಿ ಮಂಜೂರಾದ ಅನುದಾನದಲ್ಲಿ ದುರ್ಬಳಕೆ ಆಗಿರುವುದರಲ್ಲಿ ಅಧಿಕಾರಿಗಳ ಪಾತ್ರದ ಬಗ್ಗೆ ಶಂಕೆ ವ್ಯಕ್ತಪಡಿಸಿ ಸಲ್ಲಿಸಿದ ದೂರಿನ ಬಗ್ಗೆ ಈವರೆಗೂ ಕ್ರಮ ಕೈಗೊಳ್ಳುವ ಕೆಲಸವೇ ನಡೆದಿಲ್ಲ)  .ಆದ್ರೆ ಅವರೆಲ್ಲಾ ಇವತ್ತು ಮೇಲಿನ ಹಂತದವರನ್ನು ಒಳಗಾಕಿಕೊಂಡು ತಮ್ಮನ್ನು ತಾವು ಸುರಕ್ಷಿತಗೊಳಿಸಿಕೊಂಡು ದರ್ಬಾರ್ ಮಾಡುತ್ತಿದ್ದಾರೆ.ಕೆಳ ಹಂತದ ಸಿಬ್ಬಂದಿಯ ಮೇಲೆ ದರ್ಪ-ದೌರ್ಜನ್ಯ ನಡೆಸುತ್ತಿದ್ದಾರೆ ಎನ್ನುವುದು ಸಾರಿಗೆ ಯೂನಿಯನ್ಸ್ ಗಳ ಆರೋಪ.

ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಎಲ್ಲವೂ ಸರಿಯಾಗಿ ಪಾಲನೆ ಆಗಿದಿದ್ದರೆ ಇವತ್ತು ದಂಡಿ ದಂಡಿಯಾಗಿ ಅಧಿಕಾರಿಗಳು ಸಸ್ಪೆಂಡ್ ಆಗ್ಬೇಕಿತ್ತು.ಆದ್ರೆ ಹಾಗೆ ಆಗುತ್ತಲೇ ಇಲ್ಲ.ಶಿಕ್ಷೆ ಎನ್ನುವುದು ಕೇವಲ ಕೆಳ ಹಂತದ ಸಿಬ್ಬಂದಿಗೆ ಅನ್ವಯವಾಗುತ್ತಿದೆ.ದೊಡ್ಡವರಿಗೆ ಅವೆಲ್ಲಾ ಅಪ್ಲೈ ಆಗುತ್ತಲೇ ಇಲ್ಲ..ಎನ್ನುವುದು ಸಿಎಂಗೆ ಬರೆಯಲು ಚಿಂತಿಸಿರುವ ಪತ್ರದಲ್ಲಿ ಅಡಕವಾಗಲಿದೆ ಎನ್ನಲಾಗುತ್ತಿದೆ.

ಕೊರೊನಾ ಸನ್ನಿವೇಶದಲ್ಲಿ ನೆಮ್ಮದಿಯಿಂದ ಕೆಲಸ ಮಾಡೊಕ್ಕೆ ಅವಕಾಶ ಮಾಡಿ ಕೊಡಿ, ಅಮಾನತ್ತೆ ನ್ನುವ ಪದವನ್ನು(ಎಲ್ಲಾ ಸನ್ನಿವೇಶದಲ್ಲೂ ಅಲ್ಲ..) ಕೊರೊನಾ ಸಂಕಷ್ಟ ಮುಗಿಯುವವರೆಗೂ ನೌಕರರ ಮೇಲೆ ಪ್ರಯೋಗಿಸಬೇಡಿ ಎಂದು ಸಿಎಂಗೆ ಬರೆಯುವ ಪತ್ರದಲ್ಲಿ ಮನವಿ ಮಾಡಿಕೊಳ್ಳಲಿದ್ದಾರೆನ್ನಲಾಗಿದೆ.ಈ ಮೂಲಕ ಅಮಾನತ್ತುಗೊಂಡು ಬೆಂಗಳೂರಿನಲ್ಲಿರಲಿಕ್ಕಾಗದೆ ತಮ್ಮ ಸ್ವಗ್ರಾಮಗಳತ್ತ ತೆರಳುತ್ತಿರುವ ನೌಕರರು ಹಾಗೂ ಅವರ ಕುಟುಂಬಗಳ ಸಾಮೂಹಿಕ ಗುಳೆಗೆ ಬ್ರೇಕ್ ಹಾಕಿಸಿ ಎನ್ನೋ ಅಳಲನ್ನು ಪತ್ರದಲ್ಲಿ ತೋಡಿಕೊಳ್ಳಲಿದ್ದಾರಂತೆ.

ಸಾರಿಗೆ ಇಲಾಖೆ ಎನ್ನುವ ಮನೆಯ ಯಜಮಾನನಾಗಿ ಲಕ್ಷ್ಮಣ ಸವದಿ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದಿದ್ದರೆ ಇವತ್ತು ಮಕ್ಕಳ ಸ್ಥಾನದಲ್ಲಿರುವ ಸಾರಿಗೆ ನೌಕರರು ಹಾಗೂ ಅವರ ಪ್ರಾತಿನಿಧಿಕ ಸಂಸ್ಥೆಯಾಗಿರೋ ನೌಕರರ ಯೂನಿಯನ್ಸ್ ನಾಡ ದೊರೆ ಮುಖ್ಯಮಂತ್ರಿಗೆ ಪತ್ರ ಬರೆಯುವ ಚಿಂತನೆ ನಡೆಸಬೇಕಾಗಿ ಬರುತ್ತಿರಲಿಲ್ಲವೇನೋ..

ಸಚಿವರು ತೋರದ ಔದಾರ್ಯವನ್ನು ಸಾರಿಗೆ ನೌಕರರ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತೋರಿಸುತ್ತಾರಾ..?ಸಾರಿಗೆ ನೌಕರರ ಬವಣೆಗಳಿಗೆ ಫುಲ್ ಸ್ಟಾಪ್ ಅಲ್ಲದಿದ್ದರೂ ತಾತ್ಕಾಲಿಕ ಬ್ರೇಕ್ ಆದ್ರೂ ಸಿಗುತ್ತಾ..?ಕೊರೊನಾ ಸಂಕಷ್ಟ ತೀರೋವರೆಗೂ ನೌಕರರಿಗೆ ಅಮಾನತ್ತು ಎನ್ನುವ ಪದದಿಂದ ಮುಕ್ತಿ ಸಿಗುತ್ತಾ..? ಅವರ ಕುಟುಂಬಗಳನ್ನು ಸಾಮೂಹಿಕ ಗುಳೆಯಿಂದ  ತಪ್ಪಿಸುವ ಕೆಲಸ ನಡೆಯುತ್ತಾ..? ಕಾದುನೋಡಬೇಕಿದೆ. 

Spread the love
Leave A Reply

Your email address will not be published.

Flash News