ಸೊಸೆ ಕುಸುಮಾ ವಿರುದ್ಧ ಗುಡುಗಿದ್ದ ಡಿಕೆ ರವಿ ತಾಯಿ ಗೌರಮ್ಮ ಯೂಟರ್ಸ್-ಸೊಸೆಗೆ ವೋಟ್ ನೀಡಿ ಎಂದು ಮನವಿ-ಗೌರಮ್ಮ ನಡೆ ಬಗ್ಗೆ ಶಂಕೆ

0

ಬೆಂಗಳೂರು:ತನ್ನ ಮಗನ ಹೆಸರನ್ನು ಬಳಸಿಕೊಂಡು ಮತ ಯಾಚಿಸಿದ್ರೆ ಪರಿಣಾಮ ನೆಟ್ಟಗಿರೊಲ್ಲ..ಸುಟ್ಟು ಹಾಕಿಬಿಡ್ತೀನಿ ಎಂದು ಅಬ್ಬರಿಸಿದ್ದ ಐಎಎಸ್ ಅಧಿಕಾರಿ ಡಿ.ಕೆ ರವಿ ತಾಯಿ ಗೌರಮ್ಮ ಉಲ್ಟಾ ಹೊಡೆದಿದ್ದಾರೆ.ಡಿಕೆ ರವಿ ಹೆಸರನ್ನು ಬಳಸಿಕೊಳ್ಳದೆ ಹೋದಡೆಯಲ್ಲೆಲ್ಲಾ ಪಕ್ಷದ ಹೆಸರನ್ನೇ ಬಳಸಿಕೊಂಡು ಅವರಿವರಿಂದ ನಿಂದನೆ ಮಾತನ್ನು ಕೇಳುತ್ತಿದ್ದ ಸೊಸೆ ಕುಸುಮಾಳ ಪರಿಸ್ಥಿತಿಯನ್ನು ಕಂಡು ಗೌರಮ್ಮ ಮನಸು ಬದಲಿಸಿದ್ದಾರೆ.

ತನ್ನ ಸೊಸೆ ಕಣ್ಣೀರು ಹಾಕೋದು ನನ್ನಿಂದ ನೋಡಲಿಕ್ಕೆ ಆಗುತ್ತಿಲ್ಲ.ಆಕೆಗೆ ಮತ ನೀಡಿ ಗೆಲ್ಲಿಸಿ,ಆಕೆಯೊಂದಿಗೆ ಸದಾ ನಾನಿರುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಆದ್ರೆ ಮೊನ್ನೆವರೆಗೂ ಸೊಸೆಯನ್ನು ಕಂಡ್ರೆ ಕೆಂಡಾಮಂಡಲವಾಗಿದ್ದ ಅತ್ತೆ ಗೌರಮ್ಮ ದಿಢೀರ್ ಇಷ್ಟೊಂದು ಸಾಫ್ಟ್ ಆಗಿರೋದು ಸಾರ್ವಜನಿಕವಾಗಿ ಅನುಮಾನ ಮೂಡಿಸಿದೆ.

ಸೊಸೆ ಕುಸುಮಾ ವಿರುದ್ಧ ಗುಡುಗಿದ್ದ ಡಿಕೆ ರವಿ ತಾಯಿ ಗೌರಮ್ಮ ಯೂಟರ್ಸ್-ಸೊಸೆಗೆ ವೋಟ್ ನೀಡಿ ಎಂದು ಮನವಿ-ಗೌರಮ್ಮ ನಡೆ ಬಗ್ಗೆ ಶಂಕೆ…

Spread the love
Leave A Reply

Your email address will not be published.

Flash News