ಸಮೀಕ್ಷೆಯಲ್ಲಿ ಶಿರಾ-ರಾರಾ ನಗರ ಬಿಜೆಪಿ ಪಾಲು-! :ಮುನಿ ಮೂರನೇ ಬಾರಿ ಶಾಸಕ-ಶಿರಾದಲ್ಲಿ ವರ್ಕೌಟ್ ಆಗಿದ್ಯಂತೆ ವಿಜಯೇಂದ್ರ ರಣತಂತ್ರ..!

0

ಬೆಂಗಳೂರು:ಸಮೀಕ್ಷೆಗಳಲ್ಲಿ ಮಂಚೂಣಿಯಲ್ಲಿರುವ ಸಿ-ವೋಟರ್ ಆರ್ ಆರ್ ನಗರ ಹಾಗೂ ಶಿರಾದಲ್ಲಿ ನಡೆಸಿದ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ.ಅಚ್ಚರಿಯ ಫಲಿತಾಂಶ ಎಂದೇ ಭಾವಿಸಿದ್ದ ಜನರಿಗೆ ನಿರೀಕ್ಷಿತ ಫಲಿತಾಂಶವೇ ಹೊರಬೀಳೋದು ಎನ್ನುವ ರೀತಿಯಲ್ಲಿ ಸಮೀಕ್ಷೆ ಹೊರಬಂದಿದೆ.ತೀವ್ರ ಕುತೂಹಲ ಕೆರೆಳಿಸಿದ್ದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಡಿಮೆ ಮತದಾನವಾದ್ರೂ ಜನ ಬಿಜೆಪಿಗೇನೆ ಮತ ಚಲಾಯಿಸಿ ಮುನಿರತ್ನ ಅವರನ್ನು ಹರಸಿ ಹಾರೈಸಿದ್ದಾರೆ.3ನೇ ಬಾರಿ ಶಾಸಕರಾಗುವ ಅವಕಾಶ ಕಲ್ಪಿಸಿದ್ದಾರೆನ್ನುವುದು ತಿಳಿದುಬಂದಿದೆ.ಇನ್ನು  ತುಮಕೂರು ಜಿಲ್ಲೆ ಶಿರಾದಲ್ಲಿ ಬಿಜೆಪಿ ವಿಜಯೇಂದ್ರ ಅವರ ರಾಜಕೀಯ ಲೆಕ್ಕಾಚಾರ-ರಣತಂತ್ರದಂತೆ ಎಲ್ಲವೂ ಕೈಗೂಡಿದ್ದು ಬಿಜೆಪಿ ಅಲ್ಲಿ ಖಾತೆ ತೆರೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಸಿ-ವೋಟರ್ ಸಮೀಕ್ಷೆ ಪ್ರಕಾರ ಆರ್ ಆರ್ ನಗರದಲ್ಲಿ ಶೇಕಡಾ 37.8 ರಷ್ಟು ಮತಗಳನ್ನು ಮುನಿರತ್ನ ಪಡೆಯಲಿದ್ದಾ ರಂತೆ.ಒಕ್ಕಲಿಗರೇ ನಿರ್ಣಾಯಕವಾಗಿರುವ ಕ್ಷೇತ್ರದಲ್ಲಿ ಜಾತಿ ಫ್ಯಾಕ್ಟರ್ ವರ್ಕೌಟ್ ಆಗಿಲ್ಲ ಎನ್ನುವುದು ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲೇ ತಿಳಿದುಬಂದಿದೆ.ಡಿಕೆ ರವಿ ಅವರ ಪತ್ನಿ ಎನ್ನುವ ಅನುಕಂಪದ ಜತೆಗೆ ಡಿಕೆ ಬ್ರದರ್ಸ್ ಗಳು ಪ್ರತಿಷ್ಟೆ ಪಣಕ್ಕಿಟ್ಟು  ನಡೆಸಿದ ಪ್ರಚಾರವೂ ಪ್ರಯೋಜನ್ಕ್ಕೆ ಬಂದಿಲ್ಲ.ಹಾಗೆಯೇ ಮುನಿರತ್ನ ಗೆಲುವಿಗೆ ಬ್ರೇಕ್ ಹಾಕ್ಲಿಕ್ಕೆ ಸಾಧ್ಯವಾಗಿಲ್ಲ ಎನ್ನುವುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.ಕಾಂಗ್ರೆಸ್ ನ ಕುಸುಮಾ ಬಿಜೆಪಿಯ ಮುನಿರತ್ನಗೆ ಒಳ್ಳೆಯ ಫೈಟನ್ನೇ ನೀಡಿದ್ದಾರೆ.ಅವರಿಗೆ  ಶೇಕಡಾ 31.1 ರಷ್ಟು ಮತಗಳು ದೊರೆತಿವೆ.ಜೆಡಿಎಸ್ ನ ಕೃಷ್ಣಮೂರ್ತಿಗೆ ಶೇ.14 ರಷ್ಟು ಮತ ಪಡೆಯೊಕ್ಕೆ ಮಾತ್ರ ಸಾಧ್ಯವಾಗಿದೆ ಎಂದು  ತಿಳಿದುಬಂದಿದೆ.ಕಣದಲ್ಲಿದ್ದ ಇತರೆ ಅಭ್ಯರ್ಥಿಗಳೇ ಶೇ.17 ರಷ್ಟು ಮತ ಪಡೆದಿದ್ದಾರಂತೆ.

ಇನ್ನು ಶಿರಾ ಬೈ ಎಲೆಕ್ಷನ್ ಗೆ ಸಂಬಂಧಿಸಿದಂತೆ ಬಿಜೆಪಿಯ ರಾಜೇಶ್ ಗೌಡ ಅವರ ಕೊರಳಿಗೆ ಮತದಾರ ವಿಜಯದ ಮಾಲೆ ತೊಡಿಸಿದ್ದಾನೆ.ಅವರಿಗೆ ಶೇಕಡಾ 36.6  ರಷ್ಟು ಮತಗಳು ಬಂದಿವೆ ಎನ್ನಲಾಗಿದೆ.ಹಾಗೆಯೇ ಬಿಜೆಪಿಗೆ ತೀವ್ರ ಪೈಪೋಟಿ ನೀಡಿರುವ ಮಾಜಿ ಸಚಿವ ಕೈ ಅಭ್ಯರ್ಥಿ ಟಿ.ಬಿ ಜಯಚಂದ್ರ ಶೇಕಡಾ 32.5 ರಷ್ಟು ಮತ ಪಡೆದಿದ್ದಾರೆ.ಇನ್ನು ಜೆಡಿಎಸ್ ನ ಅಮ್ಮಾಜಮ್ಮ ಶೇ.17.4 ರಷ್ಟು ಮತ ಪಡೆದಿದ್ದಾರೆ.ಹಾಗೆಯೇ ಕಣದಲ್ಲುಳಿದಿರುವ ಇತರರಿಗೆ ಶೇಕಡಾ 13.5 ರಷ್ಟು ಮತ ಪಡೆಯಲು ಸಾಧ್ಯವಾಗಿದೆಯಂತೆ.

ಆರ್ ಆರ್ ನಗರದಲ್ಲಿ ಬಿಜೆಪಿಯ ಮುನಿರತ್ನ ಗೆಲ್ಲುವ ಮೂಲಕ ಮೂರನೇ ಬಾರಿ ಶಾಸಕರಾಗುವ ಅವಕಾಶ ದೊರೆಯಲಿದೆಯಂತೆ, ಇನ್ನು ಶಿರಾದಲ್ಲಿ ವಿಜಯೇಂದ್ರ ಫಾರ್ಮೂಲ ವರ್ಕೌಟ್ ಆಗಲಿದೆಯಂದೆ.

ಹಾಗೇನಾದ್ರೂ ಆಗಿದಿದ್ದರೆ ಡಾ.ರಾಜೇಶ್ ಗೌಡ ಅವರ ಕಾರ್ಯವೈಖರಿ ಮೇಲೆ ಶಿರಾ ಬಿಜೆಪಿಯ ಭದ್ರಕೋಟೆಯಾಗುವ ಭವಿಷ್ಯ ನಿರ್ಧರಿತವಾಗಲಿದೆ.ಒಟ್ಟಿನಲ್ಲಿ ಎರಡೂ ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕ್ಕೊಂಡು ಬೈ ಎಲೆಕ್ಷನ್ ಗಳಲ್ಲಿನ ಗೆಲುವಿನ ಅಭಿಯಾನ ಮುಂದುವರೆಸಿದಂತಾಗಲಿದೆ ಎನ್ನುವುದು ಸಿ ವೋಟರ್ ಸಮೀಕ್ಷೆಯ ಒಟ್ಟಾರೆ ತಿರುಳು.

Spread the love
Leave A Reply

Your email address will not be published.

Flash News