ಡಾ,ಸುಧಾ-KAS, ಅಧಿಕಾರ ದುರ್ಬಳಕೆ-ಬಡ್ಡಿದಂಧೆ-ರಿಯಲ್ ಎಸ್ಟೇಟ್ ಮಾಫಿಯಾ-ಕೋಟಿ ಕೋಟಿ ಅಕ್ರಮ ಸಂಪತ್ತು..

0

ಬೆಂಗಳೂರು:ಮನೆ ಬಾಗಿಲ ಕಾಲಿಂಗ್ ಬೆಲ್ ಒತ್ತಿದ ಸದ್ದಿಗೆ ನಿದ್ದೆಯ ಮಂಪರಿನಿಂದ ಆಗ ತಾನೇ ಎದ್ದುಬಂದ ಕೆಎಎಸ್ ಅಧಿಕಾರಿ ಡಾ.ಸು ಧಾ ಕ್ಷಣ ಬೆಚ್ಚಿಬಿದ್ದಿದ್ದಾರೆ. ಬಂದವರು ತಮ್ಮನ್ನು ಎಸಿಬಿ ಟೀಮ್ ಎಂದು ಪರಿಚಯಿಸಿಕೊಳ್ಳುತ್ತಿದ್ದಂತೆ ಬೆಳಗಿನ ಚಳಿಯಲ್ಲೇ ಬೆವರಲಾರಂಭಿಸಿದ್ದಾರೆ.ಯೆಸ್..ಇದು ಎಸಿಬಿ ರೇಡ್ ನ ಖದರ್. ಮನೆಯನ್ನೆಲ್ಲಾ ತಡಕಾಡಿ ಗುಡ್ಡೆ ಹಾಕಿ ಲೆಕ್ಕ ಹಾಕಿದ ಎಸಿಬಿನೇ ಅಕ್ರಮ ಆಸ್ತಿಗೆ ಕಕ್ಕಾಬಿಕ್ಕಿಯಾಗಿದೆ.

ಹಾಸನ ಮೂಲದ ಕೆಎಎಸ್ ಅಧಿಕಾರಿ ಡಾ,ಸುಧಾ ಸಧ್ಯ ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ಎಂಡಿ.ಹಿಂದೆ ಕೆಲಸ ಮಾಡಿದ ಬಿಡಿಎ ನಲ್ಲಿ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಮಾಡಿದ್ದಾರೆನ್ನುವ ಆರೋಪ ಅವರ ಮೇಲಿತ್ತು.

ಉಪ ಕಾರ್ಯದರ್ಶಿಯಾಗಿದ್ದಾಗ ಹಲವು ಲೇ ಔಟ್ ಗಳಿಗೆ ಸಂಬಂಧಿಸಿದಂತೆ ಬಲ್ಕ್ ಅಲಾಟ್ಮೆಂಟ್ ನಲ್ಲೂ ಕೋಟ್ಯಾಂತರ ಹಣ ಲೂಟಿ ಮಾಡಿದ್ದಾರೆನ್ನುವ ಆಪಾದನೆ ಹೊತ್ತಿದ್ರು.ಅಷ್ಟೇ ಅಲ್ಲ,ಭೂಸ್ವಾಧೀನಾಧಿಕಾರಿಯಾಗಿದ್ದಾಗ ಭೂ ಮಾಲೀಕರು ಹಾಗೂ ಬಿಡಿಎ ನಡುವೆ ದಲ್ಲಾಳಿಗಳನ್ನು ನೇಮಿಸಿಕೊಂಡು ಕಮಿಷನ್ ಹೊಡೆದ ಗುರುತರ ಆರೋಪಕ್ಕೆ ಸುಧಾ ತುತ್ತಾಗಿದ್ರು.

ರಿಯಲ್ ಎಸ್ಟೇಟ್,ಸಿನೆಮಾ ನಿರ್ಮಾಣ,ಬಡ್ಡಿದಂಧೆಯಲ್ಲಿ ತೊಡಗಿಸಿಕೊಂಡಿರುವ ಪತಿ ಸ್ಟ್ರೋಯಿನಿ ಜೋಸೆಫ್ ಪಯಾಸ್ ಅವರಿಗೆ ಬಿಡಿಎ ಅಕ್ರಮಗಳಿಂದ ಬರುತ್ತಿದ್ದ ಕಿಕ್ ಬ್ಯಾಕ್-ಕಮಿಷನ್ ಹಣವನ್ನು ತೊಡಗಿಸುತ್ತಿದ್ದರೆನ್ನುವ ಮಾತುಗಳಿವೆ.ತನ್ನನ್ನು ಬ್ಯುಸಿನೆಸ್ ಮೆನ್ ಎಂದು ಹೇಳಿಕೊಳ್ತಿದ್ರೂ ಯಾವುದೇ ಕೇಮೇ ಮಾಡದೆ ಹೆಂಡತಿ ಕಮಿಷನ್ ಹಣವನ್ನೇ ಬಡ್ಡಿ ಹಾಗು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಬಿಟ್ಟು ಹಣ ದುಪ್ಪಟ್ಟು ಮಾಡಿಕೊಂಡಿರುವ ಆರೋಪ ಸುಧಾ ಅವರ ಪತಿ ಮೇಲಿದೆ.

ಬಿಡಿಎ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಕೇಳಲು ಹೋದ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಜೊತೆ ದರ್ಪ ದಿಂದ ವರ್ತಿಸಿದ್ದೇ ಬಹುಷಃ ಸುಧಾಗೆ ಮುಳುವಾಯ್ತಾ ಗೊತ್ತಿಲ್ಲ.ಯಾವಾಗ ಕೇಳಿದ ಮಾಹಿತಿ ನಿರಾಕರಿಸಿದ್ರೋ ಅಂದೇ ಸುಧಾ ಅವರ ಪ್ರತಿಯೊಂದು ಬೆಳವಣಿಗೆ-ಆಗುಹೋಗಗಳ ಮೇಲೆ ಕಣ್ಣಿಟ್ಟ ಅಬ್ರಹಾಂ ಎಲ್ಲಾ ಮಾಹಿತಿಯನ್ನು ಕ್ರೋಢೀಕರಿಸಿ ದ್ರು.ಈ ವೇಳೆ ಅವರಿಗೆ ಸಿಕ್ಕ ಸ್ಪೋಟಕ ಮಾಹಿತಿಗಳನ್ನೇ ಆಧರಿಸಿ ಅಬ್ರಹಾಂ ಲೋಕಾಯುಕ್ತಕ್ಕೆ ದೂರು ಕೊಡ್ತಾರೆ.

ಭ್ರಷ್ಟಾಚಾರ ಪ್ರತಿಬಂಧ ಅಧಿನಿಯಮ, 1988, ಪ್ರಿವೆಂಶನ್ ಆಫ್ ಮನಿ ಲಾಂಡ್ರಿಗ್ ಅಧಿನಿಯಮ, 2002 ಮತ್ತು ಭಾರತೀಯ ದಂಡ ಸಂಹಿತೆ, 1860 ರಂತೆ ಅಪರಾಧವನ್ನೆಸಗಿರು ವುದಾಗಿ ದಾಖಲಿಸಿದ್ದ ಖಾಸಗೀ ಮೊಕದ್ದಮೆಯನ್ನು   ಲೋಕಾಯುಕ್ತ ನ್ಯಾಯಾಲಯ  ದಿನಾಂಕ 20-08-2020 ರಂದು ವಿಚಾರಣೆಗೆ ಅಂಗೀಕರಿಸಿ  ಆರೋಪಿಗಳ ವಿರುದ್ಧ FIR ದಾಖಲಿಸಿ ತನಿಖೆ ನಡೆಸಿ 17-10-2020 ರ ಒಳಗೆ ಅಂತಿಮ ವರದಿಯನ್ನು ಸಲ್ಲಿಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸೂಚಿಸಿತ್ತು. 

ಸುಧಾ ಮೇಲಿರುವ ಆರೋಪ: ಡಾ||ಸುಧಾ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ  ದಲ್ಲಿ ಸಹಾಯಕ ಆಯುಕ್ತೆ ಮತ್ತು ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಂತಹ ಸಮಯದಲ್ಲಿ, ತನ್ನ ಉಸ್ತುವಾರಿಗೆ ಬರುವ ವಿಶ್ವೇಶ್ವರಯ್ಯ ಲೇಔಟ್, ನಾಡಪ್ರಭು ಕೆಂಪೇಗೌಡ ಲೇಔಟ್, ಜ್ಞಾನಭಾರತಿ ಲೇಔಟ್ ಮತ್ತು ಹೆಚ್.ಆರ್.ಬಿ.ಆರ್ ಲೇಔಟ್ ಹಾಗೂ ಇತರೇ ಲೇಔಟ್ ಗಳಲ್ಲಿ ಭೂಸ್ವಾಧಿನಕ್ಕೊಳಪಟ್ಟಿರುವ ಭೂ ಮಾಲೀಕರಿಗೆ, ಭೂಪರಿಹಾರವನ್ನು ನಿಗದಿಮಾಡುವ ಅಧಿಕಾರವನ್ನು ಹೊಂದಿದ್ದರು.

ಹೀಗೆ ಭೂಪರಿಹಾರಕ್ಕಾಗಿ ಅರ್ಜಿಸಲ್ಲಿಸಿದ ಜಮೀನಿನ ಮಾಲೀಕರನ್ನು ಸಂಪರ್ಕಿಸಿ, ಅವರಿಂದ   ಡಾ||ಸುಧಾ ಅಕ್ರಮವಾಗಿ ಲಂಚ ಪಡೆಯುತ್ತಿದ್ದರು.ಅದಕ್ಕಾಗಿ ತನ್ನ ಪತಿ ಸ್ಟ್ರೋಯಿನಿ ಜೋಸೆಫ್ ಪಯಾಸ್ 8 ರಿಂದ 10 ಜನ ಖಾಸಗೀ ದಲ್ಲಾಳಿ ನೇಮಿಸಿಕೊಂಡು,   ಭೂಪರಿಹಾರಕ್ಕಾಗಿ ಅರ್ಜಿಸ ಲ್ಲಿಸಿದ ಜಮೀನಿನ ಮಾಲೀಕರನ್ನು ಸಂಪರ್ಕಿಸಿ, ಪ್ರತಿ ಎಕರೆಗೆ ಸುಮಾರು 5 ಲಕ್ಷ ರೂಪಾಯಿಗಳಂತೆ ಕಾನೂನುಬಾಹಿರವಾಗಿ ಲಂಚವನ್ನು ತೆಗೆದುಕೊಂಡು, ಹೀಗೆ ಅಕ್ರಮವಾಗಿ ಸಂಪಾದಿಸುತ್ತಿದ್ದರೆನ್ನಲಾಗಿದೆ.

ಡಾ ಸುಧಾ ಹಿನ್ನಲೆ:ಅಂದ್ಹಾಗೆ  06-06-2007 ರಿಂದ ಸರ್ಕಾರಿ ನೌಕರರಾಗಿ ನೇಮಕಗೋಂಡ ಡಾ||ಸುಧಾರವರ ಸಂಬಳವು ಖಾಸಗೀ ದೂರು  ಸಲ್ಲಿಕೆಯಾಗೋವರೆಗೂ, ಒಟ್ಟು ಸುಮಾರು ರೂ.1,55,37,600/- ಆಗುತ್ತದೆ. ಆದರೆ ಇವರ ಹೆಸರಿನಲ್ಲಿರುವ ಆಸ್ತಿಗಳ ದಾಖಲಾತಿಗಳಲ್ಲಿ ತೋರಿಸಿ ಕೊಂಡಿರುವಂತೆ ಆಸ್ತಿ ಮೌಲ್ಯವೇ ರೂ.1,83,24,456/- .

ಆದರೆ ಸದರಿ ಆಸ್ತಿಗಳ ಖರೀದಿ ಸಂದರ್ಭದಲ್ಲಿ ಖರೀದಿ ಪತ್ರದಲ್ಲಿ ತೋರಿಸದೇ ಇರುವ ಮೌಲ್ಯವೇ 9,31,10,544/- ಆಗಿರುತ್ತದೆ ಎಂದು ಅಬ್ರಹಾಂ ದೂರಿನಲ್ಲಿ ವಿವರಿಸಿದ್ದರು.ಅಷ್ಟೇ ಅಲ್ಲ,ಮಾನ್ಯ ಲೋಕಾಯುಕ್ತ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲಾತಿಗಳ ಪ್ರಕಾರ ಡಾ||ಸುಧಾರವರು ಅಕ್ರಮ ಬಡ್ಡಿದಂಧೆಯಲ್ಲಿ ತೊಡಗಿದ್ದು ಅದರಿಂದ ಸಂಗ್ರಹಿಸಿದ  ಹಣದ ಒಟ್ಟು ಮೌಲ್ಯವೇ, 1,44,50,000 ಎಂದು ವಿವರಿಸಿದ್ದರು.

ಹೀಗೆ ಒಟ್ಟಿನಲ್ಲಿ ಸುಧಾ ಮನೆಯಲ್ಲಿ ನಡೆದ ಎಸಿಬಿ ರೇಡ್ ವೇಳೆ ಅಪಾರ ಪ್ರಮಾಣದ ಹಣ-ಚಿನ್ನಾಭರಣ ಹಾಗೂ ದಾಖಲೆಗಳು ಸಿಕ್ಕಿರುವುದು ಅವರು ಅಕ್ರಮ ಆಸ್ತಿ ಸಂಪಾದನೆ ಮಾಡಿರೋದನ್ನು ಮೇಲ್ನೋಟಕ್ಕೆ ಸಾರಿ ಹೇಳುತ್ತೆ.. ಶೀಘ್ರವೇ ದಾಳಿಯ ಕರಾರುವಾಕ್  ಬಹಿರಂಗವಾಗಲಿದೆ.   

Spread the love
Leave A Reply

Your email address will not be published.

Flash News