ಫೋಟೋ ಶೂಟ್ ಹಠಕ್ಕೆ ಬಿದ್ದು ಪ್ರಾಣ ಕಳಕೊಂಡ ಯುವ ಜೋಡಿ-ಹಸೆಗೆ ಮುನ್ನವೇ ಮಸಣ ಸೇರಿದ ಜೀವಗಳು..

0

ಮೈಸೂರು:ಒಂದ್ ಕ್ಷಣ ಆ ಜೋಡಿ ಅಂತದ್ದೊಂದು ದುಸ್ಸಾಸಹಕ್ಕೆ ಕೈ ಹಾಕದೇ ಇದ್ದಿದ್ದರೆ ಅವರಿಬ್ಬರು ಇನ್ನೆರೆಡು ತಿಂಗಳಲ್ಲೇ ಸತಿಪತಿಗಳಾಗಿ ಹಸೆಯನ್ನೇರುತ್ತಿದ್ದರೇನೋ..ಆದರೆ ಸಾವು ಅವರ ಹಣೆಬರಹದಲ್ಲಿ ಬರೆದಿದ್ರಿಂದ ಅದರಿಂದ ತಪ್ಪಿಸಿಕೊಳ್ಳೊಕ್ಕೆ ಆಗಲೇ ಇಲ್ಲ. ಇವರ  ಸಾವಿಗೆ ಇಡೀ ಮೈಸೂರೇ ಮರುಗಿದೆ.

ಎಲ್ಲರ ಕೈಗೂ ಮೊಬೈಲ್‌ ಅದರಲ್ಲೂ ಸ್ಮಾರ್ಟ್‌ ಫೋನ್‌ ಬಂದ ನಂತರ  ಕ್ಷುಲ್ಲಕ ಕಾರಣಕ್ಕೂ ಜನರು ಪ್ರಾಣ ಕಳೆದುಕೊಳ್ಳುವಂತ ಘಟನೆಗಳು ನಿತ್ಯವೈ ನಡೆಯುತ್ತಿವೆ. ಜನರು ಫೋನ್‌ ಬಳಸುವಾಗ  , ಫೋಟೋ ವೀಡಿಯೋ ಮಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸಿದ್ದರೂ ಸಾಕು ಅಮೂಲ್ಯ ಜೀವಗಳು ಉಳಿಯುತ್ತವೆ. ಆಧರೆ ಜನರು ಪ್ರಾಣವನ್ನೂ ಲೆಕ್ಕಿಸದೆ  ಫೋನ್‌ ಬಳಸುತಿದ್ದು  ದುರಂತ ಸಾವಿಗೀಡಾಗುತಿದ್ದಾರೆ.

ಎಲ್ಲ ಸರಿಯಾಗಿದ್ದಿದ್ದರೆ  ಆ ಯುವ ಜೋಡಿಗಳು ಮುಂದಿನ ತಾರೀಖು 22  ರಂದು ಮೈಸೂರಿನಲ್ಲಿ ಹಸೆ ಮಣೆ ಏರಬೇಕಿತ್ತು. ಆದರೆ ವಿಧಿ ಲಿಖಿತವೇ ಬೇರೆಯಾಗಿದ್ದು  ಇಬ್ಬರೂ  ಫೋಟೋ ಶೂಟಿಂಗ್‌ ಪೂರ್ಣಗೊಳ್ಳುವ ಮುನ್ನವೇ ಜಲಸಮಾದಿ ಆಗಿದ್ದಾರೆ, ಇಂದು ಮೃತಪಟ್ಟವರನ್ನು  ಮೈಸೂರು  ಜಿಲ್ಲೆ ಕ್ಯಾತಮಾರನಹಳ್ಳಿಯ ಶಶಿಕಲಾ (20) ಮತ್ತು ಚಂದ್ರು (28)  ಎಂದು ಗುರುತಿಸಲಾಗಿದೆ.  ವಧು-ವರರು ಇಂದು ಪ್ರಿ  ವೆಂಡ್ಡಿಂಗ್ ಶೂಟ್ ಗೆ ತೆರಳಿದ ವೇಳೆ ಕಾವೇರಿ ನದಿಯಲ್ಲಿ ತೆಪ್ಪ ಮುಳುಗಿ   ಸಾವನ್ನಪ್ಪಿದ್ದಾರೆ. . 

ಇಂದು   ಫೋಟೋ ಶೂಟ್‌ ಗಾಗಿ ತಲಕಾಡಿಗೆ ತೆರಳಿದ್ದರು. ತೆಪ್ಪದಲ್ಲಿ ಹೋಗಿ ಶೂಟ್ ಮಾಡುತ್ತಿದ್ದ ವೇಳೆ ವೇಗದ ಹರಿವಿಗೆ ಸಿಲುಕಿದ ತೆಪ್ಪ ಮುಳುಗಿದೆ. ಇದರಿಂದ ತೆಪ್ಪದೊಳಗಿದ್ದ  ಚಂದ್ರ ಮತ್ತು ಶಶಿಕಲಾ ನೀರು ಪಾಲಾಗಿದ್ದಾರೆ. ಆದರೆ ತೆಪ್ಪ  ನಡೆಸುತ್ತಿದ್ದವನು ಈಜಿ ಪಾರಾಗಿದ್ದಾನೆ. ಸ್ಥಳದಲ್ಲಿ ವಧೂ ವರರ ಕುಟುಂಬದವರ ರೋದನ ಮುಗಿಲು ಮುಟ್ಟಿತ್ತು.  ತಲಕಾಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಈಜು ತಜ್ಞರ ಸಹಾಯದಿಂದ ಇಬ್ಬರ ಶವವನ್ನು ಮೇಲೆತ್ತಿದ್ದಾರೆ. ತಲಕಾಡು ಪೋಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು  ತನಿಖೆ ನಡೆಯುತ್ತಿದೆ. 

Spread the love
Leave A Reply

Your email address will not be published.

Flash News