ಎಲ್ಲಾ ಮುಗಿದೇಹೋಯ್ತು ಎಂದು ಕೈಚೆಲ್ಲಿದ್ದ  ಗುರುಸಾರ್ವಭೌಮ ಸೊಸೈಟಿ ಠೇವಣಿದಾರರಿಗೆ ದೀಪಾವಳಿ ಗಿಫ್ಟ್.. 16 ಕೋಟಿ ಮೌಲ್ಯದ ಸ್ವತ್ತುಗಳು ಹರಾಜಿಗೆ ಸರ್ಕಾರ  ನಿರ್ಧಾರ

0

ಬೆಂಗಳೂರು:ಇದು,ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ನಿಂದ ವಂಚನೆಗೊಳಗಾಗಿ ಬಹುತೇಕ  ಬೀದಿಗೆ ಬಿದ್ದಿದ್ದ ಠೇವಣಿದಾರರಿಗೆ ನಿಜಕ್ಕೂ ಸಮಾಧಾನ   ತರುವಂಥ  ಸಂತಸದ ಸುದ್ದಿ.ಇನ್ನೇನು ಎಲ್ಲಾ ಮುಗಿದೇ ಹೋಯ್ತು ಎಂದು ಕೊರಗುತ್ತಾ ಕುಳಿತಿದ್ದ ಠೇವಣಿದಾರರ ಹಿತ ಕಾಯೊಕ್ಕೆ ಇದೀಗ ಸರ್ಕಾರವೇ ಮುಂದಾಗಿದ್ದು ದೀಪಾವಳಿ ಗಿಫ್ಟ್ ಎನ್ನುವಂತೆ ಅವರಿಗೆ ನ್ಯಾಯಯುತವಾಗಿ ಬರಬೇಕಿರುವುದನ್ನು ತಲುಪಿಸುವ ಕೆಲಸಕ್ಕೆ ಕೈ ಹಾಕಿದೆ.

ಯೆಸ್…ಗುರುಸಾರ್ವಭೌಮ ಸೊಸೈಟಿಯಿಂದ ಲಕ್ಷಾಂತರ ಹಣವನ್ನು ಕಳೆದುಕೊಂಡಿದ್ದ ಠೇವಣಿದಾರರ ಹಿತವನ್ನು ಕಾಯಲು ರಾಜ್ಯ ಸರಕಾರ ಈಗ ಮುಂದಾಗಿದೆ. ಇದರ ಮೊದಲ ಪ್ರಯತ್ನ ಎನ್ನುವಂತೆ ಸರ್ಕಾರದ ಸಚಿವಾಲಯ, ಗುರುಸಾರ್ವಭೌಮ ಸೊಸೈಟಿಗೆ ಸೇರಿದ ಒಂದಷ್ಟು ಸ್ವತ್ತುಗಳನ್ನು ಹರಾಜು ಹಾಕಿ ಅದರಿಂದ ಬರುವ ಹಣದಿಂದ ಠೇವಣಿದಾರರ ಹಣವನ್ನು ಹಿಂದಿರುಗಿಸುವ ನಿರ್ಧಾರಕ್ಕೆ ಬಂದಿದೆಯಂತೆ.

ಬೆಂಗಳೂರಿನ ಶಂಕರಪುರದಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಗುರುಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಾವಿರಾರು ಠೇವಣಿದಾರರಿಗೆ ಕೋಟ್ಯಂತರ ಹಣವನ್ನು ಮುಂಡಾ ಮೋಚ್ಚಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಸೊಸೈಟಿಯನ್ನು ನಂಬಿ ಹಣ ಹೂಡಿದ ಠೇವಣಿ  ದಾರರು ನಷ್ಟದ ನೆವವೊಡ್ಡಿಇದ್ದಕ್ಕಿದ್ದಂತೆ ಸೊಸೈಟಿಯ ಬಾಗಿಲನ್ನು ಮುಚ್ಚಿತ್ತು ಆಡಳಿತ ಮಂಡಳಿ.ಇದರಿಂದ  ಇದನ್ನೇ ನಂಬಿ ಲಕ್ಷಾಂತರ ಹಣ ಹೂಡಿಕೆ ಮಾಡಿದ್ದ  ಸಾವಿರಾರು ಠೇವಣಿದಾರರು ಬೀದಿಗೆ ಬೀಳುವಂತಾಯಿತು.

ಸೊಸೈಟಿ ಮುಂದೆ ವಾರದವರೆಗೆ ನಡೆದ ಪ್ರತಿಭಟನೆಗಳನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ,ಸಮಸ್ಯೆಯನ್ನು  ಜಿಲ್ಲಾಡಳಿತದ ಸುಪರ್ದಿಗೆ ವಹಿಸಿತ್ತಲ್ಲದೇ, ಠೇವಣಿದಾರರ ಹಿತವನ್ನು ಕಾಯಲು ಅಗತ್ಯ ವಿರುವ ಕ್ರಮಗಳತ್ತ ಗಮನ ಹರಿಸುವಂತೆ ಸೂಚಿಸಿತ್ತು.ಸರ್ಕಾರದ ಅಣತಿ ಮೇರೆಗೆ  ಇದೀಗ   ಕಂದಾಯ ಇಲಾಖೆಯ ವಿಶೇಷ ಕೋಶ ಸೊಸೈಟಿಗೆ ಸೇರಿದ ಸ್ವತ್ತುಗಳನ್ನು ಹರಾಜು ಹಾಕಲು ಮುಂದಾಗಿದೆ.

ಗುರು ಸಾರ್ವಭೌಮ ಸೊಸೈಟಿ ಎಲ್ಲೆಲ್ಲಿ ಆಸ್ತಿಗಳನ್ನು ಖರೀದಿಸಿತ್ತು ಎನ್ನುವುದರ ಸಮಗ್ರ ಮಾಹಿತಿಯನ್ನು ಕ್ರೋಡೀಕರಿಸಿರುವ ಕಂದಾಯ ಇಲಾಖೆಯ ವಿಶೇಷ  ಕೋಶ ಕೆಲವು ಸ್ವತ್ತುಗಳನ್ನು ಗೊತ್ತು ಮಾಡಿದೆ.ಇನ್ನೊಂದು ವಿಶೇಷ ಎಂದರೆ ಈಗ ಪತ್ತೆ ಮಾಡಿರುವ ಸೊಸೈಟಿಯ ಆಸ್ತಿಗಳೆಲ್ಲ ಬಹುತೇಕ ತಮಿಳುನಾಡು ರಾಜ್ಯದ ವಿವಿಧ ಭಾಗಗಳಲ್ಲಿದ್ದು ಅವುಗಳ ಆಸ್ತಿ ಮೌಲ್ಯವೇ  ಅದೆಷ್ಟೋ ಕೋಟಿಗಳಷ್ಟಿವೆ.

ತಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆಯ ಪೆನ್ನಾಗರಂ ತಾಲ್ಲೂಕಿನ ಶೀಘ್ರವೇ ಶಿಗ್ರಾರಲಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಇರುವ ಜಮೀನಿನ ಮೌಲ್ಯ ಇವತ್ತಿನ ಮಾರುಕಟ್ಟೆಯ 1ಕೋಟಿ 48ಲಕ್ಷದ 50  ಸಾವಿರದಷ್ಟಿದೆ .ಅದೇ ಧರ್ಮಪುರಿ ಜಿಲ್ಲೆಯ ವಿವಿಧ ಸರ್ವೇ ನಂಬರ್ ಗಳಲ್ಲಿ ಗುರುಸಾರ್ವಭೌಮ ಸೊಸೈಟಿ ಖರೀದಿಸಿರುವ ಆಸ್ತಿಗಳ ಮೌಲ್ಯವನ್ನು ನೋಡುತ್ತಾ ಹೋದರೆ,ಒಂದು ಆಸ್ತಿ ಮೌಲ್ಯ 6, 60,30,500 ರೂ, ಮತ್ತೊಂದು ಆಸ್ತಿ 7,90,10,000 ರು  ಹಾಗೆಯೇ ಮತ್ತೊಂದು ಆಸ್ತಿ ಮೌಲ್ಯ69,37,500 ರಷ್ಟಿದೆ.ಮತ್ತೊಂದು ಆಸ್ತಿ ಮೌಲ್ಯ 15 ಲಕ್ಷದಷ್ಟಿದೆ.

 ಕೇವಲ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪೆನ್ನಾಗರಂ ತಾಲ್ಲೂಕಿನ ಶಿಗ್ರಾರಲಹಳ್ಳಿ  ಗ್ರಾಮದ ವ್ಯಾಪ್ತಿಗೆ ಬರುವ ವಿವಿಧ ಸರ್ವೇ ನಂಬರ್ ಗಳಲ್ಲಿ ಸೊಸೈಟಿ ಖರೀದಿ ಖರೀದಿಸಿಟ್ಟಿರುವ ಒಟ್ಟು 5 ಆಸ್ತಿಗಳನ್ನು  ವಿಶೇಷ ಕೋಶ  16,92,37,500 ರೂಗೆ ಹರಾಜಿಗಿಟ್ಟಿದೆ.ಅಂದ್ಹಾಗೆ  ಇದು ಕೇವಲ ತಮಿಳುನಾಡಿನ ಧರ್ಮಪುರಿ ಜಿಲ್ಲೆಯೊಂದರಲ್ಲೇ  ಸೊಸೈಟಿ ಖರೀದಿಸಿದ್ದ ಜಮೀನಿನ ಮೌಲ್ಯ. ಇನ್ನೂ ಬೇರೆ ಬೇರೆ ಕಡೆ ಅದು ಖರೀದಿಸುತ್ತಿರುವ ಆಸ್ತಿಯ ಮೌಲ್ಯ ಅದೆಷ್ಟು ಕೋಟಿಗಳಷ್ಟಾಗಲಿದೆ.ಮೊದಲ ಹಂತದಲ್ಲಿ ಹರಾಜಿನಿಂದ ಬರುವ ಹಣದಲ್ಲಿ ಒಂದಷ್ಟು ಠೇವಣಿದಾರರಿಗೆ ಹಣ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಸರ್ಕಾರದ ಬೆಳವಣಿಗೆ ಎಲ್ಲೋ ಒಂದೆಡೆ ಎಲ್ಲಾ ಮುಗಿದೋಯ್ತು ಎಂದು ಕೈಚೆಲ್ಲಿ ಕೂತಿದ್ದ ಠೇವಣಿದಾರರ ಮನಸ್ಸಿಗೆ ನೆಮ್ಮದಿ ನಿರಾಳ  ಮೂಡಿಸಿರೋದಂತು ಸತ್ಯ

Spread the love
Leave A Reply

Your email address will not be published.

Flash News