MLC ಗೆದ್ದಾಯ್ತು..ಈಗ ಸಚಿವ ಸ್ಥಾನದ ಮೇಲೆ ಪುಟ್ಟಣ್ಣ ಕಣ್ಣು..ಎಚ್ಡಿಕೆಗೆ ಸೆಡ್ಡು ಹೊಡೆಯಲು ಪುಟ್ಟಣ್ಣ ಬೆನ್ನಿಗೆ ನಿಂತ ಬಿಜೆಪಿ ಲೀಡರ್ಸ್..

0

ಬೆಂಗಳೂರು:ಅಪ್ಪ ಮಕ್ಕಳ ಜೆಡಿಎಸ್ ಪಕ್ಷದಲ್ಲಿ ತಮಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಬಿಜೆಪಿಗೆ ಜಂಪ್ ಆಗಿ ಗೆದ್ದ ನೂತನ ಎಮ್ಮೆಲ್ಸಿ ಪುಟ್ಟಣ್ಣ ಇದೀಗ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.ಬಿಜೆಪಿ ಸೇರ್ಪಡೆ ವೇಳೆಯೇ ಯಡಿಯೂರಪ್ಪ ನೀಡಿದ್ದ ಸಚಿವ ಸ್ಥಾನದ ಭರವಸೆಯನ್ನು ಪುಟ್ಟಣ್ಣ ನೆಚ್ಚಿಕೊಂಡಿದ್ದಾರೆ.ತಮ್ಮನ್ನು ಮಂತ್ರಿ ಮಾಡಿದ್ರೆ ರಾಮನಗರ ಭಾಗದಲ್ಲಿ ಬಿಜೆಪಿ ಸಂಘಟಿಸುವುದು ಅನುಕೂಲವಾಗುತ್ತೆನ್ನುವ ಅಭಿಪ್ರಾಯವನ್ನು ಪುಟ್ಟಣ್ಣ ವ್ಯಕ್ತಪಡಿಸಿದ್ದಾರೆ ಎನ್ನಲಾಗ್ತಿದೆ.  ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪುಟ್ಟಣ್ಣ ಗೆಲುವು ಸಾಧಿಸಿದ ಬೆನ್ನಲ್ಲೇ ಅವರಿಗೆ ಸಚಿವ ಸ್ಥಾನ ಕೊಡಬೇಕೆನ್ನುವ ಮಾತು ಕೇಳಿಬರಲಾರಂಭಿಸಿದೆ..

ಅಂದ್ಹಾಗೆ ಚನ್ನಪಟ್ಟಣ ತಾಲೂಕಿನ ಕಾಡಂಕನಹಳ್ಳಿ ಗ್ರಾಮ ಪುಟ್ಟಣ್ಣ ಅವರ ಹುಟ್ಟೂರು.ಅದು ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಗ್ರಾಮ. ಈ ಹಿನ್ನೆಲೆಯಲ್ಲಿ ಪಕ್ಷವನ್ನು ಬಲಪಡಿಸಲು ಹಾಗೂ  ರಾಮನಗರ ಜಿಲ್ಲೆಗೆ ಶಕ್ತಿ ತುಂಬುವ ದೃಷ್ಟಿಯಿಂದ ಈ ಆಲೋಚನೆ ಮಾಡುವುದು ಒಳಿತೆನ್ನುವುದು ಪುಟ್ಟಣ್ಣ ಬೆಂಬಲಿಗರ ಮಾತು.ಅಲ್ಲದೇ ಪುಟ್ಟಣ್ಣ ಬಗ್ಗೆ  ಸಿಎಂ ಯಡಿಯೂರಪ್ಪ ಕೂಡ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ.ಈ ವಿಶ್ವಾಸದಿಂದಲೇ ಪುಟ್ಟಣ್ಣ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಿಎಂ ಭಾಗಿಯಾಗಿದ್ದರು.

ಸತತ 4 ನೇ ಬಾರಿಗೆ MLC ಆಗಿ ಪುಟ್ಟಣ್ಣ ಆಯ್ಕೆಯಾಗಿರುವುದು  ಶಿಕ್ಷಕರ ಹಾಗೂ ಕುಟುಂಬಸ್ಥರ ಮತಗಳನ್ನ ಸೆಳೆಯುವ ದೃಷ್ಟಿಯಿಂದ ಪಕ್ಷಕ್ಕೆ ಮುಂದೆ ಅನುಕೂಲ ವಾಗಲಿದೆ ಎನ್ನುವ ಸಂದೇಶ ಕೂಡ ರವಾನೆಯಾಗಿದೆ.ಅಲ್ಲದೇ ಉಪಸಭಾಪತಿಯಾಗಿಯೂ  ಪುಟ್ಟಣ್ಣಕಾರ್ಯನಿರ್ವಹಿಸಿರುವ ಅನುಭವ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಒಳ್ಳೆಯ ವರ್ಚಸ್ಸು ರಾಮನಗರ ಜಿಲ್ಲೆಯಲ್ಲಿ ಪಕ್ಷ ಸಂಘಟಿಸಲು ಅನುಕೂಲವಾಗಲಿದೆ.

ಬೆಂಗಳೂರು, ಹಳೇ ಮೈಸೂರು ಭಾಗ, ಹಾಗೂ ರಾಜ್ಯದಲ್ಲಿ ಶಿಕ್ಷಕರ ಮತ ಸೆಳೆಯುವ ಬಗ್ಗೆ ಪಕ್ಷ  ಮಾಸ್ಟರ್ ಪ್ಲ್ಯಾನ್ ಮಾಡಿದ್ದು,ಪುಟ್ಟಣ್ಣರಿಗೆ ಸಚಿವ ಸ್ಥಾನ ಕೊಟ್ಟರೆ, ಶಿಕ್ಷಕರ ಪ್ರತಿನಿಧಿಗೆ ಸ್ಥಾನ ಕೊಟ್ಟೆವು ಎಂಬ ಹೆಗ್ಗಳಿಕೆ ಸರ್ಕಾರಕ್ಕು ಸಲ್ಲುತ್ತದೆ. ಇದೆಲ್ಲಾ ಬಿಜೆಪಿ ಗೆ ಇದು ಪ್ಲಸ್ ಆಗಲಿದೆ ಎಂಬ ಲೆಕ್ಕಾಚಾರ ಪುಟ್ಟಣ್ಣ ಬೆಂಬಲಿಗರದು.ಸಿಎಂ ಹೆಚ್ಡಿಕೆ ಗೆ ಪುಟ್ಟಣ್ಣ ಬದ್ಧವೈರಿ.ಹೆಚ್ಡಿಕೆ ವಿರುದ್ಧ ಪುಟ್ಟಣ್ಣ ಗೆ ಸ್ಥಾನ ಕೊಟ್ಟು ಪಕ್ಷಕ್ಕೆ ಬಲತುಂಬುವ ತಂತ್ರಗಾರಿಕೆಗೆ ಆರ್.ಅಶೋಕ್, ಸಿ.ಟಿ.ರವಿ, ವಿ.ಸೋಮಣ್ಣ ಸೇರಿ ಹಲವರು ಬೆಂಬಲ  ನೀಡಿದ್ದಾರೆನ್ನಲಾಗಿದೆ.ಶಿಕ್ಷಕರ ಜೊತೆಗೆ ಒಳ್ಳೆಯ ಬಾಂಧವ್ಯ ಹಾಗೂ ಬಿಗಿ ಹಿಡಿತ ಹೊಂದಿರುವ ಪುಟ್ಟಣ್ಣ ಅವರಿಗೆ ಸಚಿವ ಸ್ಥಾನ ಕೊಡುವುದರಿಂದ ಎಲ್ಲಾ ರೀತಿಯಲ್ಲೂ ಪಕ್ಷಕ್ಕೆ ಅನುಕೂಲವಾಗಲಿದೆ ಎನ್ನುವ ಸಂದೇಶವನ್ನು ಈಗಾಗ್ಲೇ ವರಿಷ್ಠರ ಗಮನಕ್ಕೆ ತರಲಾಗಿದೆ. 

Spread the love
Leave A Reply

Your email address will not be published.

Flash News