ಬ್ರೇಕಿಂಗ್ ನ್ಯೂಸ್…. ಶೀಘ್ರವೇ.. ಕನ್ನಡಕ್ಕೆ ಮತ್ತೊಂದು ಚಾನೆಲ್ ಪಾದಾರ್ಪಣೆ..ಆ ಚಾನಲ್ ಯಾವುದು.. ಅದನ್ನು ಆರಂಭಿಸುವವರು ಯಾರು ಗೊತ್ತೆ..?

0

ಬೆಂಗಳೂರು: ಎಲ್ಲವೂ ಅಂದುಕೊಂಡಂತೆಯೇ ನಡುದ್ರೆ,ಇನ್ನು 11 ತಿಂಗಳೊಳಗೆ  ಕನ್ನಡ ಸುದ್ದಿ ಮಾದ್ಯಮಕ್ಕೆ ಮತ್ತೊಂದು ಚಾನಲ್  ಲೋಕಾರ್ಪಣೆಯಾಗಲಿದೆ.ಅದು ಯಾವ ಚಾನಲ್ ಆ ಚಾನೆಲ್ ನ ಮಾಲೀಕರ್ಯಾರು.. ಆ ಚಾನೆಲ್ ನ ಆರಂಭದ ಉದ್ದೇಶವೇನು..ಇದೆಲ್ಲದರ  ಕಂಪ್ಲೀಟ್ ಡೀಟೈಲ್ ಇಲ್ಲಿದೆ.

ಕನ್ನಡ ಸುದ್ದಿ ಮಾಧ್ಯಮದಲ್ಲಿ ಈಗಾಗಲೇ ಹಲವಾರು ಚಾನಲ್ ಗಳು ತಮ್ಮದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿವೆ. ಈಗಿರುವ ಚಾನೆಲ್ ಗಳ ಜೊತೆಗೇನೆ, ಮತ್ತೊಂದು ಚಾನೆಲ್   ಸೇರ್ಪಡೆಯಾಗಲಿದೆ ಎನ್ನುವ ಸುದ್ದಿ ಹೊರ ಬಿದ್ದಿದೆ ಅಂದಹಾಗೆ ಈ ಚಾನಲ್ ನ ಆರಂಭಿಸುತ್ತಿರುವವರು ಯಾರು ಗೊತ್ತೆ.. ಅವರೇ ಅರ್ನಾಬ್ ಗೋಸ್ವಾಮಿ.

ಹೌದು ಅರ್ನಾಬ್ ಗೋಸ್ವಾಮಿ ಈಗಾಗಲೇ ಅಂತಹದೊಂದು ಘೋಷಣೆ ಮಾಡಿದ್ದಾರೆ. ರಿಪಬ್ಲಿಕ್ ಚಾನೆಲ್ ಅನ್ನು ಆರಂಭಿಸಿ, ಅದರಲ್ಲಿ ಸಾಕಷ್ಟು  ಯಶಸ್ಸನ್ನು ಪಡೆದು, ವರ್ಷ ಕಳೆಯುವುದರೊಳಗೆ ಮತ್ತೊಂದು ಚಾನಲ್ ನ ಆರಂಭಿಸಿದ ಹೆಗ್ಗಳಿಕೆ ಅರ್ನಬ್ ಗೋಸ್ವಾಮಿದು. ಅವರೇ ಕರ್ನಾಟಕವೂ ಸೇರಿದಂತೆ ದೇಶದ ಹಲವೆಡೆ ಪ್ರಾದೇಶಿಕ ಚಾನೆಲ್ ಗಳನ್ನು ಆರಂಭಿಸುವ ಬಗ್ಗೆ ಸುಳಿವು ನೀಡಿದ್ದಾರೆ.

ರಿಪಬ್ಲಿಕ್ ಟಿವಿ ದೇಶಾದ್ಯಂತ ತನ್ನದೇ ಆದ ರೀತಿಯ ಸುದ್ದಿ ಪ್ರಸಾರ ಹಾಗೂ ಇಂಪ್ಯಾಕ್ಟ್ ಗಳಿಂದ ಕ್ರಾಂತಿಯನ್ನು ಸೃಷ್ಟಿಸಿದೆ. ಸದ್ಯದ ಮಟ್ಟಿಗೆ ಯಾವುದಾದರೂ ಒಬ್ಬ ಪತ್ರಕರ್ತ ನಿರ್ಭೀಡೆಯಿಂದ ನಿರ್ಭೀತವಾಗಿ ಸಮಾಜದ ಅಂಕುಡೊಂಕುಗಳನ್ನು ನೇರವಾಗಿ ಟೀಕಿಸುತ್ತಿದ್ದಾರೆ ಎಂದರೆ ಅದು ಅರ್ನಬ್ ಗೋಸ್ವಾಮಿ ಎನ್ನುವ ಮಾತು ನಿರ್ವಿವಾದ.

ರಿಪಬ್ಲಿಕ್ ಟಿವಿ,ಬಿಜೆಪಿಯ ಮುಖವಾಣಿಯಂತೆ ಕೆಲಸ ಮಾಡುತ್ತಿದೆ ಎನ್ನುವ ಆರೋಪವಿದೆ.ಅದು ಒಂದು ಹಂತದಲ್ಲಿ ಸತ್ಯವೂ ಕೂಡ. ಆದರೆ ಕೆಲವೊಂದು ವಿಷಯಗಳಲ್ಲಿ ನ್ಯಾಯ ಸಮ್ಮತ ಹಾಗೂ ನಿರ್ಭೀತವಾಗಿ ರಿಪಬ್ಲಿಕ್ ಟಿವಿ ಮಾಡುವ ಕೆಲಸ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಕಡಿಮೆ  ಸಮಯದಲ್ಲಿ ಅತಿ ಹೆಚ್ಚು ಜನರನ್ನು ಸೆಳೆದ ಹೆಗ್ಗಳಿಕೆ ಕೂಡ ರಿಪಬ್ಲಿಕ್ ಟಿವಿದು.

ದೇಶದ ಆ ದೇಶದ ಆಡಳಿತ ವ್ಯವಸ್ಥೆಯನ್ನು ಟೀಕಿಸುವುದರಲ್ಲಿ ಎತ್ತಿದ ಕೈ ಎನ್ನುವಂತಿರುವ ಅರ್ನಾಬ್ ಗೋಸ್ವಾಮಿ, ಇತ್ತೀಚೆಗೆ TRP  ಟ್ಯಾಂಪರಿಂಗ್ ಪ್ರಕರಣದಲ್ಲಿ ಜೈಲು ಕೂಡ ಸೇರಿ ಬಂದಿದ್ದರು ಜಾಮೀನಿನ ಮೇಲೆ ಬಿಡುಗಡೆಯಾದ ಸಂದರ್ಭದಲ್ಲಿ ತುಂಬಾ ಆಕ್ರೋಶಭರಿತರಾಗಿ, ಭಾವಪರವಶರಾಗಿ ಹೊಸ ಚಾನೆಲ್ ಆರಂಭಿಸುವ ಈ ವಿದ್ಯಮಾನವನ್ನು ಹಂಚಿಕೊಂಡಿದ್ದಾರೆ.

 ಮಹಾರಾಷ್ಟ್ರ ಸರ್ಕಾರದ ಮೇಲೆ ನಿಗಿನಿಗಿ ಕೆಂಡ ವಾಗಿರುವ ಅರ್ನಾಬ್ ಗೋಸ್ವಾಮಿ ತಾವು  ಬಿಡುಗಡೆಯಾಗಿ ಬಂದ ನಂತರದಲ್ಲಿ, ತಮ್ಮ ಹೋರಾಟವನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ. ಈ ಹೋರಾಟ ಕ್ರಾಂತಿಯ ಆಯಾಮ ಪಡೆದುಕೊಳ್ಳಲಿದೆ. “ನೀವು ನಮ್ಮನ್ನು ಬಂಧಿಸಿ ಜೈಲಿಗಟ್ಟಿ ರಬಹುದು, ಆದರೆ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಧ್ವನಿಯನ್ನಲ್ಲ” ಎಂದೂ ಅವರು ಅಬ್ಬರಿಸಿದ್ದಾರೆ.

 “ಜೈಲಿಗೆ ಹೋಗಿ ಬಂದ ನಂತರ ನಾನು ಮತ್ತಷ್ಟು ಗಟ್ಟಿಯಾಗಿದ್ದೇನೆ ನನ್ನ ಧ್ವನಿ ಮತ್ತಷ್ಟು ಪ್ರಖರವಾಗಲಿದೆ ನನ್ನ ದನಿಯನ್ನು ಯಾರೂ ಅಡಗಿಸಲು ಸಾಧ್ಯವಿಲ್ಲ ನನ್ನ ಮಾಧ್ಯಮದ ಮೂಲಕ ವ್ಯವಸ್ಥೆಯ ವಿರುದ್ಧದ ಹೋರಾಟ ಹೀಗೆಯೇ ಮುಂದುವರಿಯಲಿದೆ ಎಂದು ಹೇಳಿದ ಅರ್ನಾಬ್ ಇದೇ ಸಂದರ್ಭದಲ್ಲಿ ದೇಶಾದ್ಯಂತ ಕನ್ನಡವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ತಮ್ಮ ಪ್ರಾದೇಶಿಕ ಚಾನಲ್ ಆರಂಭಿಸುವ ಘೋಷಣೆಯನ್ನು ಮಾಡಿದ್ದಾರೆ.

ಅರ್ನಬ್ ಗೋಸ್ವಾಮಿತಮ್ಮ ಘೋಷಣೆಯಂತೇ ಕನ್ನಡವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಪ್ರಾದೇಶಿಕ ಚಾನೆಲ್ ಅನ್ನು ಆರಂಭಿಸಿದ್ದೆ ಆದರೆ ಸಾಕಷ್ಟು ಉದ್ಯೋಗವಕಾಶಗಳು ಕೂಡ ಸೃಷ್ಟಿಯಾಗಲಿದೆ ಎನ್ನುವುದು ಸಮಾಧಾನದ ಸಂಗತಿ.

ಆದರೆ ಪ್ರಶ್ನೆ ಇರುವುದು ಅರ್ನಾಬ್ ಈ ರೀತಿಯಾದ ಘೋಷಣೆ ಮಾಡುವ ಹಿಂದೆ ಕೇವಲ ಭಾವಪರವಶತೆಯ ಸಂಗತಿ ಅಡಗಿತ್ತೋ ಅಥವಾ ನಿಜಕ್ಕೂ ಚಾನೆಲ್ ಮಾಡಬೇಕೆನ್ನುವ ಅಭಿಲಾಷೆಯಿತ್ತು ಗೊತ್ತಾಗುತ್ತಿಲ್ಲ. ಏನೇ ಆಗಲಿ ಅವರ ಚಾನೆಲ್ ನಿಷ್ಪಕ್ಷಪಾತವಾಗಿ ಕೆಲಸ ಮಾಡಲಿದೆಯೋ   ಅಥವಾ ಬಿಜೆಪಿ ಮುಖವಾಣಿಯಾಗಿ ಕಾರ್ಯನಿರ್ವಹಿಸಲಿದೆಯೋ  ಎನ್ನುವ ಗೊಂದಲ ಇದ್ದೇ ಇದೆ. 

Spread the love
Leave A Reply

Your email address will not be published.

Flash News