ಸಾರಿಗೆ ನೌಕರರ ಪಾಲಿಗೆ ಕತ್ತಲಾದ ದೀಪಾವಳಿ: ಸಂಬಳಕ್ಕಾಗಿ #ಕತ್ತಲಲ್ಲಿ ಸಾರಿಗೆ ನೌಕರರು ವಿನೂತನ ರೀತಿಯ ಟ್ವಿಟ್ಟರ್ ಸಮರ..

0

ಬೆಂಗಳೂರು:ಸಾರಿಗೆ ನೌಕರರು ಅದ್ಯಾವ ಜನ್ಮದ ಪಾಪ ಮಾಡಿದ್ದಾರೋ ಗೊತ್ತಿಲ್ಲ..ಎಲ್ಲಾ ಸರ್ಕಾರಿ ಇಲಾಖೆಗಳ ನೌಕರರಿಗೆ ನಿಯಮಿತವಾಗಿ ಸಂಬಳವಾದ್ರೂ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ಮಾತ್ರ ಸಂಬಳವೇ ಆಗೊಲ್ಲ.ಎಲ್ಲರೂ ಹಬ್ಬವನ್ನು ತಮ್ ತಮ್ ಮನೆಗಳಲ್ಲಿ ಕುಟುಂಬ ಹಾಗೂ ಬಂಧುಬಾಂಧವರ ಜೊತೆ ಆಚರಿಸುತ್ತಿದ್ದರೆ ಈ ನೌಕರರ ಕುಟುಂಬಗಳು ಅದನ್ನೆಲ್ಲಾ ಕಣ್ಣಾರೆ ಕಂಡು ಹೊಟ್ಟೆ ಉರಿದುಕೊಳ್ಳುವಂತಾಗುತ್ತಿದೆ. ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ದೀಪಾವಳಿ ಹಬ್ಬವನ್ನೇ ತೆಗೆದುಕೊಳ್ಳಿ,ಅಕ್ಟೋಬರ್ ತಿಂಗಳ ಸಂಬಳವೇ ಇನ್ನೂ ಕೈ ಸೇರಿಲ್ಲದಿರುವುದರಿಂದ ಹಬ್ಬವನ್ನು ಆಚರಿಸದ ಸ್ಥಿತಿ ನಿರ್ಮಾಣವಾಗಿದೆ.ಇದರ ಬಗ್ಗೆ ತೀವ್ರ ಅಸಹನೆ ಹಾಗೂ ಬೇಸರ ವ್ಯಕ್ತಪಡಿಸಿರುವ ಸಾರಿಗೆ ನೌಕರರು ತಮ್ಮ ನೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ.ನಮ್ಮ ಸುತ್ತಮುತ್ತಲ ಮನೆಗಳವ್ರು ದೀಪ ಹಚ್ಚಿ ಅವರವರ ಮನೆಗಳಲ್ಲಿ ಸಂಭ್ರಮ ಆಚರಿಸುತ್ತಿದ್ದರೆ ಮನೆಗಳಲ್ಲೇ ಕುಳಿತು ನೋವುಣ್ಣಬೇಕಾದ ಕರ್ಮ ನಮಗೇನ್ ಬಂದಿದೆ.ನಮ್ಮ ನೋವೇಕೆ ನಮ್ಮ ಮೇಲಾಧಿಕಾರಿಗಳಿಗೆ ಅರ್ಥವಾಗುವುದಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

ನಾಡಿನ ಸಮಸ್ತೆ ಜನರಿಗೆ ದೀಪಾವಳಿ ದೀಪಗಳ ಹಬ್ಬವಾದ್ರೆ ನಮಗೆ ಮಾತ್ರ ಕತ್ತಲ ಹಬ್ಬ.ನವೆಂಬರ್ 15 ಆದ್ರೂ ಅಕ್ಟೋಬರ್ ತಿಂಗಳ ಸಂಬಳವನ್ನೇ ನೀಡಿಲ್ಲ.ನೌಕರರು ಬರಿಗೈಯ್ಯಲ್ಲಿ ಕೂರುವಂತಾಗಿದೆ.ನಮ್ಮ ಕುಟುಂಬ ಹಾಗೂ ಮಕ್ಕಳು ಅಕ್ಕಪಕ್ಕದ ಮನೆಯವರ ಹಬ್ಬಗಳನ್ನು ನೋಡಿ ದುಃಖಪಡುವಂತಾಗ್ತಿದೆ.ಇತರೆ ಇಲಾಖೆಗಳ ನೌಕರರಿಗೆ ಹೋಲಿಸಿದ್ರೆ ನಮಗೆ ಸಿಗುವ ಸಂಬಳವೇ ಕಡ್ಮೆ.ಆ ಸಂಬಳವೂ ಸರಿಯಾಗಿ ಬರುತ್ತಿಲ್ಲ.ನಮ್ಮ ಜೀವನಗಳು ನಡೆಯುತ್ತಿಲ್ಲ.ಈ ಎಲ್ಲಾ ಕಾರಣಗಳಿಂದ್ಲೇ ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಎಂದು ಬೇಡಿಕೊಳ್ಳು ತ್ತಿದ್ದೇವೆ. ಆದರೂ ಸರ್ಕಾರ ನಮ್ಮ ಅಳಲನ್ನು ಕೇಳುತ್ತಿಲ್ಲ ಎಂದು ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಕೊರೊನಾ ಸಮಯದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದೇವೆ.ಆದ್ರೂ ನಮ್ಮ ಕಷ್ಟಗಳು ಯಾರಿಗೂ ಅರ್ಥವಾಗುತ್ತಿಲ್ಲ.ಕೊರೊನಾ ಆರಂಭವಾದ ದಿನದಿಂದ್ಲೂ ಅಂದ್ರೆ ಕಳೆದ 6-7 ತಿಂಗಳಿಂದಲೂ ನಾವು ಸಂಬಳವನ್ನು ಕಷ್ಟಪಟ್ಟು ಪಡೆಯುವಂತಾಗಿದೆ.ಇಂದು ನಾಳೆ ಎನ್ನುತ್ತಲೇ ದಿನ ದೂಡಲಾಗುತ್ತಿದೆ.ಪರಿಸ್ತಿತಿ ಹೀಗೆಯೇ ಆದರೆ ಮುಂದಿನ ದಿನಗಳಲ್ಲಿ ನೌಕರರ ಪರಿಸ್ತಿತಿ ಏನಾಗಬಹುದೋ ಎನ್ನುವ ಆತಂಕ ಕಾಡುತ್ತಿದೆ ಎಂದು ನೋವು ವ್ಯಕ್ತಪಡಿಸಿದ್ದಾರೆ.

ಈ ಹಿನ್ನಲೆಯಲ್ಲಿ ತಮ್ಮ ನೋವು-ಸಂಕಟ ವ್ಯಕ್ತಪಡಿಸಲು ಸಾರಿಗೆ ನೌಕರರು ಸಾಮಾಜಿಕ ಜಾಲತಾಣಗಳಲ್ಲಿ ವಿನೂತನ ರೀತಿಯ ಹೋರಾಟಕ್ಕೆ ಮುಂದಾಗಿದ್ದಾರೆ.ಮುಖ್ಯಮಂತ್ರಿಗಳು ಹಾಗೂ ಸಾರಿಗೆ ನೌಕರರಿಗೆ ಟ್ವಿಟರ್ ಮೂಲಕ ತಮ್ಮ ಸಂಕಟ-ನೋವನ್ನು ತೋಡಿಕೊಳ್ಳುವ ನಿರ್ದಾರಕ್ಕೆ ಬಂದಿದ್ದಾರೆ.@CMOFKARNATAKA @LAXMANSAVADI ಟ್ವಟರ್ ಖಾತೆಗಳಿಗೆ #ಕತ್ತಲಲ್ಲಿ ಸಾರಿಗೆ ನೌಕರರು ಎನ್ನುವ ಘೋಷವಾಕ್ಯ ಕಳುಹಿಸಿಕೊಡುವಂತೆ ಈ ವಿನೂತನ ಅಭಿಯಾನದ ಉಸ್ತುವಾರಿ ಹೊತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮೂಲಭೂತ ಹಕ್ಕುಗಳ ವೇದಿಕೆ ಪ್ರಧಾನ ಕಾರ್ಯದರ್ಶಿ ತಿಪ್ಪೇಶ್ವರ ಅಣಜಿ ಎಲ್ಲಾ ನೌಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.   

Spread the love
Leave A Reply

Your email address will not be published.

Flash News