ಟ್ರೈನ್ ನಿಂದ ಬಿದ್ದು ಸಾವನ್ನಪ್ಪಿದ ಶಿವಮೊಗ್ಗದ ಸಿಎ ವಿದ್ಯಾರ್ಥಿನಿ ಸಹನಾಳದ್ದು ಆಕಸ್ಮಿಕ ಸಾವೋ…ಸೂಸೈಡೋ..ಅಥವಾ ಕೊಲೆನೋ.?!

0

ಬೆಂಗಳೂರು:ಅದು, ಆಕಸ್ಮಿಕ ಸಾವೋ.. ಅವಘಡವೋ.. ಆತ್ಮಹತ್ಯೆಯೋ..ಕೊಲೆಯೋ..ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ ಆ ಸುಂದರಿ ಯುವತಿಯ ಮರಣ. ಚಲಿಸುತ್ತಿದ್ದ ಟ್ರೈನ್ ನಿಂದ ಜಾರಿ ಬಿದ್ದು ಸಾವನ್ನಪ್ಪಿದ ಯುವತಿಯ ಸಾವಿನ ಹಿನ್ನಲೆ ಕೆದಕುವಲ್ಲಿ ರೈಲ್ವೆ ಹಾಗೂ ಶಿವಮೊಗ್ಗದ ಕೋಟೆ ಠಾಣೆ ಪೊಲೀಸರು ತಲೆಗೆ ಹುಳ ಬಿಟ್ಕೊಂಡಿದ್ದಾರೆ.ಆದ್ರೆ ಯುವತಿಯ ತಂದೆ ಮಾಹಿತಿ ಕೇಳೊಕ್ಕೆ ಹೋಗೋ ಮಾದ್ಯಮಗಳಿಗೆ ನೀರಿಳಿಸಿ ಕಳುಹಿಸುತ್ತಿದ್ದಾರಂತೆ.

ಶಿವಮೊಗ್ಗದ ತುಂಗಾ ನದಿಯಲ್ಲಿ ಚಲಿಸುವ ಟ್ರೈನ್ ನಿಂದ ಬಿದ್ದು ಸಾವನ್ನಪ್ಪಿದ ಯುವತಿಯೇನೋ ಶವವಾಗಿ ಪತ್ತೆಯಾಗಿದ್ದಾಳೆ. ಸುಂದರ ಮುಖದ ಆ ಯುವತಿಯನ್ನು ಸಹನಾ ಎಂದು ಗುರುತಿಸಲಾಗಿದೆ.ನೋಡಿದ್ರೆ ಹೊಟ್ಟೆ ಉರಿಯುವಷ್ಟು ಲಕ್ಷಣವಾಗಿರುವ ಸಹನಾ ಆದ್ರೆ ಟ್ರೈನ್ ನಿಂದ ಬಿದ್ದು ಸಾವನ್ನಪ್ಪೊಕ್ಕೆ ಕಾರಣವೇನು ಎನ್ನುವುದು ಈಗ ಚರ್ಚೆಯ ವಿಷಯವಾಗಿ ಪರಿಣಮಿಸಿದೆ.ಆಕೆಯ ಸಾವಿನ ಕಾರಣವನ್ನು ಗೌಪ್ಯಗೊಳಿಸುವ ಪ್ರಯತ್ನ ನಡೆಯುತ್ತಿರುವುದು ಮತ್ತಷ್ಟು ಅನುಮಾನ ದಟ್ಟಗೊಳಿಸಿದೆ.

ನವೆಂಬರ್ 12 ರಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಜನಶತಾಬ್ಧಿ ರೈಲು ಇನ್ನೇನು ನಿಲ್ದಾಣ ಮುಟ್ಟೊಕ್ಕೆ ಕೆಲ ನಿಮಿಷಗಳಿರುವಾಗ್ಲೇ ಶಿವಮೊಗ್ಗದ ತುಂಗಾನದಿ ಸೇತುವೆ ಮೇಲಿಂದ ಸಹನಾ ಅಚನಕ್ಕಾಗಿ ಬಿದ್ದಿದ್ದಳು.ಈ ಸಂಬಂಧ ಆಕೆಯ ತಂದೆ ಬಸವರಾಜ್ ರೈಲ್ವೆ ಪೊಲೀಸ್ ನಿಲ್ದಾಣದಲ್ಲಿ ಮಿಸ್ಸಿಂಗ್ ಕೇಸ್ ಲಾಡ್ಜ್ ಮಾಡಿದ್ದರು.

ನದಿಯಲ್ಲಿ ಬಿದ್ದ ಸಹನಾ ಮೂಲತಃ ಶಿವಮೊಗ್ಗದ ಗಾಡಿಕೊಪ್ಪದ ನಿವಾಸಿ.ತುಂಬಾ ಪ್ರತಿಭಾನ್ವಿತೆ.ಬೆಂಗಳೂರಿನಲ್ಲಿ  ಸಿಎ ವ್ಯಾಸಾಂಗ ಮಾಡುತ್ತಿದ್ದಳು.ಇದೇ 22 ರಂದು ಎಕ್ಸಾಂ ಬೇರೆ ಇತ್ತು.ಇದಕ್ಕಾಗಿ ಶಿವಮೊಗ್ಗಕ್ಕೆ ತನ್ನ ತಾಯಿ ಜೊತೆ ಟ್ರೈನ್ ನಲ್ಲಿ ಬರುತ್ತಿದ್ದಳು.ಇದರ ಜೊತೆಗೆ ದೀಪಾವಳಿ ಹಬ್ಬವೂ ಕೂಡ ಊರಿಗೆ ಆಗಮಿಸಲು ಕಾರಣವಾಗಿತ್ತು.

ಟ್ರೈನ್ ನಲ್ಲಿ ತಾಯಿ ಜೊತೆ ಬರುವಾಗ ಫೋನ್ ನ್ನು ಹಿಡಿದು ವಾಷ್ ರೂಂಗೆ ಹೋಗಿದ್ದಾಳೆ.ಮೊಬೈಲ್ ಮಾತನಾಡುತ್ತಲೇ ಹೊರಬಂದು ಬಾಗಿಲ ಬಳಿ ನಿಂತಿದ್ದಾಗ ದುರ್ಘಟನೆ ಸಂಭವಿಸಿದೆ.ಈ ದೃಶ್ಯವನ್ನು ಕಂಡವರು ಯಾರೂ ಇಲ್ಲ.ಆದರೆ ಪೊಲೀಸ್ ರ ಪ್ರಕಾರ ಮಗುವೊಂದು ಸಹನಾ ಟ್ರೈನ್ ನಿಂದ ಹಾರಿದಳೆನ್ನುವ ಹೇಳಿಕೆ ಕೊಟ್ಟಿದೆ ಎನ್ನುತ್ತಿದ್ದಾರೆ.

ಆದ್ರೆ ಪ್ರಶ್ನೆ ಇರುವುದು..ಮನೆಗೆ ತಲುಪೊಕ್ಕೆ ಕೆಲ ಕ್ಷಣಗಳ ಮುನ್ನ ಇಂತದ್ದೊಂದು ಘಟನೆ ನಡೆಯೊಕ್ಕೆ ಕಾರಣವೇನು ಎನ್ನುವುದು.ಮೊಬೈಲ್ ನಲ್ಲಿ ಮಾತನಾಡುವಾಗ ಅಚನಕ್ಕಾಗಿ ಮೊಬೈಲ್ ಕೈ ಜಾರಿತೋ ಅದಕ್ಕೆ ಕೈ ಹಾಕಲು ಹೋಗಿ ಆಕೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ಲಾ ಎನ್ನೋದು.

ಅಥವಾ ಆಕೆ ಬೇಕಂತಲೇ ಟ್ರೈನ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ್ಲಾ..ಹಾಗೆಯೇ ಆಗಿದೆ ಎನ್ನೋದಾದ್ರೆ ಅಂತದ್ದೊಂದು ದುರಂತದ ನಿರ್ಣಯ ಕೈಗೊಳ್ಳೊಕ್ಕೆ ಕಾರಣವೇನು..ಆ ಕಾರಣ ವೈಯುಕ್ತಿಕವೋ..ವೃತ್ತಿದೋ ಅಥವಾ ಬೇರೆ ಇನ್ನ್ಯಾವುದಾಗಿರಬಹುದಾ..ಇದೆಲ್ಲವನ್ನು ಮೀರಿ ಉದ್ಭವವಾಗಿರುವ ಪ್ರಶ್ನೆ ಎಂದ್ರೆ ಆಕೆಯನ್ನು ಯಾರಾದ್ರೂ ಟ್ರೈನ್ ನಿಂದ ದಬ್ಬಿ ಕೊಲೆ ಮಾಡಿದ್ರಾ..ಹೀಗೆ ಹತ್ತಲವು ಪ್ರಶ್ನೆಗಳ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ. ಈ ಸಾವಿಗೆ ಬೆಂಗಳೂರಿನ ಲಿಂಕ್ ಏನಾದ್ರೂ ಇರಬಹುದಾ ಎನ್ನುವ ಶಂಕೆ ಕೂಡ ಸೃಷ್ಟಿಯಾಗಿದೆ.

ಪ್ರತಿಭಾನ್ವಿತೆಯಾಗಿದ್ದ ಮಗಳು ನವೆಂಬರ್ 22 ರ ಎಕ್ಸಾಂ  ಮುಗಿಸಿದ್ದೇಯಾದ್ರೆ ಆಕೆ ದುಡಿಮೆಯ ಮೂಲವಾಗುತ್ತಿದ್ದಳು ಎನ್ನೋದು ಶಾಕ್ ಗೆ ತುತ್ತಾಗಿರುವ ತಂದೆ ಬಸವರಾಜ್ ಅಳಲು,ಸಾವಿಗೆ ಬೇರೆ ಏನಾದ್ರೂ ಕಾರಣಗಳಿದ್ವಾ ಎನ್ನುವುದರ ಬಗ್ಗೆ ಬಸವರಾಜ್ ಯಾವುದೇ ಮಾಹಿತಿ ನೀಡುತ್ತಿಲ್ಲ.

ಅಗ್ನಿಶಾಮಕ ದಳದ ಡಿಎಫ್ಒ ಅಶೋಕ್ ಕುಮಾರ್ ನೇತೃತ್ವದಲ್ಲಿ ಠಾಣಾಧಿಕಾರಿ ಪ್ರವೀಣ್ ಕುಮಾರ್ ಹಾಗೂ ಸಿಬ್ಬಂದಿ  ಮತ್ತು ಕೋಟೆಪೊಲೀಸರ ಕಾರ್ಯಾಚರಣೆಯಲ್ಲಿ ನಡೆದ ಶೋಧ ವೇಳೆ ಸಹನಾ ಶವ ಪತ್ತೆಯಾಗಿದೆ. ಪ್ರಕರಣ ರೈಲ್ವೆ ಇಲಾಖೆ ವ್ಯಾಪ್ತಿಗೊಳಪಟ್ಟರೂ ಶವ ಸಚಿವ ಕೆ.ಎಸ್ ಈಶ್ವರಪ್ಪ ಅವರ ಮನೆಯ ಬಳಿ ಸಿಕ್ಕಿರುವುದರಿಂದ ಪ್ರಕರಣ ದಾಖಲಿಸಿಕೊಂಡಿರುವ ಕೋಟೆ ಠಾಣೆ ಪೊಲೀಸರು ತನಿಖೆ ಶುರುಮಾಡಿದ್ದಾರೆ. 

Spread the love
Leave A Reply

Your email address will not be published.

Flash News