ಸಿಎಂ ಮನೆಯಿಂದ “ರಾಜಕೀಯ ಕಾರ್ಯದರ್ಶಿ” ಮರಮಕಲ್ ಔಟ್.. ಹಿರಿಯ ಪತ್ರಕರ್ತನನ್ನು ನಿಕೃಷ್ಟವಾಗಿ ಹೊರದಬ್ಬಿದ್ದರ ಹಿಂದಿದೆಯಾ  ಕುಟುಂಬದ  ಮಸಲತ್ತು?

0

ಅಂದುಕೊಂಡಂತೆಯೇ ಆಗಿದೆ..ಅಲ್ಲದೇ ಇದು ನಿರೀಕ್ಷಿತವು ಕೂಡ…ಎನ್ನಲಾಗ್ತಿದೆ. ತತ್ವಸಿದ್ದಾಂತದ ಪತ್ರಿಕರ್ತ ಎನಿಸಿಕೊಂಡಿದ್ದಾತ  ಯಾರದೋ ಮರ್ಜಿಗೆ ಅದನ್ನೆಲ್ಲಾ ಗಂಟುಮೂಟೆ ಕಟ್ಟಿ ಬಿಸಾಡಿ ಹೋದ್ರೆ ಆಗೋದೇ ಹೀಗೆ.. ಎನ್ನೋದಕ್ಕೆ ತುಂಬಾ ನಿಕೃಷ್ಟ ರೀತಿಯಲ್ಲಿ, ಸ್ಥಾನಮಾನ ಕಳ್ಕಂಡು  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆ ಹಾಗೂ ಮನಸಿನಿಂದ  ಹೊರಬಿದ್ದಿರುವ ಎಂ.ಬಿ.ಮರಮ ಕಲ್ ವಿಪರ್ಯಾಸಕರ ಉದಾಹರಣೆ ಎನ್ನಬಹುದೇನೋ..

ಹೌದು..ಅನೇಕ ದಿನಗಳಿಂದ ಸುಳಿದಾಡುತ್ತಿದ್ದ ಸುದ್ದಿ ನಿಜವಾಗಿದೆ.ಹಿರಿಯ ಪತ್ರಕರ್ತ, ಬಿ.ಎಸ್ ಯಡಿಯೂರಪ್ಪ ಅವರ ರಾಜಕೀಯ ಸಲಹೆಗಾರ,ಅತ್ಯಾಪ್ತ ,ಹೃದಯಕ್ಕೆ ತೀರಾ ಹತ್ತಿರವಾಗಿದ್ದ,ಯಡಿಯೂರಪ್ಪ ಅವರ ಅಂತರಂಗವನ್ನು ಅರಿತ ಬೆರಳೆಣಿಕೆ ಯವರಲ್ಲಿ ಅಗ್ರಮಾನ್ಯರಾಗಿದ್ದ ಮರಮಕಲ್ ಅವರನ್ನು ಎಲ್ಲಾ ಹುದ್ದೆಗಳಿಂದ  ಮುಕ್ತಗೊಳಿಸಲಾಗಿದೆ.ಮುಖ್ಯಮಂತ್ರಿಗಳ ಕಚೇರಿ ಈ ಹೇಳಿಕೆಯನ್ನು ದೃಢಪಡಿಸಿದೆ ಕೂಡ.ಈ ವಿಷಯದಲ್ಲಿ ಯಡಿಯೂರಪ್ಪ ಮರುಪರಿಶೀಲಿಸುವ,ಪರಾಮರ್ಷಿಸಲೂ ಆಗದಂಥ ಅಸಹಾಯಕ ಸ್ಥಿತಿಯಲ್ಲಿದ್ದಾರೆ ಎಂದ್ರೆ ಇದರ ಹಿಂದೆ ಕೈ ಆಡಿಸಿರುವವರ ತಾಕತ್ತು ಏನನ್ನೋದನ್ನು ಊಹೆ ಮಾಡಿಕೊಳ್ಳಬಹುದು.

ಟೈಮ್ಸ್ ಆಫ್ ಇಂಡಿಯಾದಂಥ ಪತ್ರಿಕೆ ಸೇರಿದಂತೆ ತಮ್ಮ ವೃತ್ತಿಜೀವನದಲ್ಲಿ ಯಾವತ್ತೂ ಕೈ ಕೊಳಕು ಮಾಡಿಕೊಂಡವರಲ್ಲ ಮರಮಕಲ್.ಇದರೊಂದಿಗೆ ಯಡಿಯೂರಪ್ಪರ ರಾಜಕೀಯ ಜೀವನದ ಏಳುಬೀಳುಗಳ ಸಂದರ್ಭದಲ್ಲಿ ವೈಯುಕ್ತಿಕವಾಗಿಯೂ ಅವರಿಗೆ ಸ್ಪಂದಿಸಿ ಹತ್ತಿರವಾದವ್ರು.ಆ ಕಾರಣಕ್ಕೆ  ಯಡಿಯೂರಪ್ಪ ತುಂಬಾ ಇಷ್ಟಪ ಟ್ಟು,ಅವರ ಜ್ಞಾನ ಹಾಗೂ ಅನುಭವದ ಜೇಷ್ಠತೆಯನ್ನು ಪರಿಗಣಿಸಿ ರಾಜಕೀಯ  ಸಲಹೆಗಾರ ಸ್ಥಾನ ನೀಡಿದ್ದರು.ಅವರಿಗೆ ಕ್ಯಾಬಿನೆಟ್ ಸ್ಥಾನ ಕಲ್ಪಿಸಿದ್ದರು. ಇದಕ್ಕೆ ಪ್ರತಿಯಾದ ನಿಷ್ಠೆ ಹಾಗು ಪ್ರಾಮಾಣಿಕತೆಯನ್ನು ಕೂಡ ಪ್ರದರ್ಶಿಸಿದ್ದರು ಮರಮಕಲ್.

ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು..ತೂಗಿ ಅಳೆದು ಮರಮಕಲ್ ನೀಡುತ್ತಿದ್ದ ಸಲಹೆಯನ್ನು ಪಡೆಯುತ್ತಿದ್ದರು ಯಡಿಯೂರಪ್ಪ.ಅದು ಅನುಷ್ಠಾನಕ್ಕೂ ಬರುವಂತೆ ಮಾಡುತ್ತಿದ್ದರು.ಅದರಲ್ಲಿ ಬಹುತೇಕ ಯಡಿಯೂರಪ್ಪ ಅವರಿಗೆ ಅನುಕೂಲ ಮಾಡಿಕೊಟ್ಟಂತವೇ ಆಗಿದ್ದವು.ಆದ್ರೆ  ಕುಟುಂಬದ ಹಸ್ತಕ್ಷೇಪ ಶುರುವಾದಾಗ ಅದರಿಂದ ದೂರ ಇರುವ ಸಲಹೆ ಕೊಟ್ಟಿದ್ದರು. ಕಳೆದ ಅವಧಿಯಲ್ಲಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡು ಜೈಲು ಸೇರೊಕ್ಕೆ ಕಾರಣವಾಗಿದ್ದು ಇದೇ ಕುಟುಂಬವಾ ಗಿದ್ದರಿಂದ  ಇಂತದ್ದೊಂದು ಸಲಹೆಯನ್ನು ಮರಮಕಲ್ ಕೊಟ್ಟಿರಬಹುದು..ಇದು ಯಡಿಯೂರಪ್ಪ ಅವರಿಗೂ ಸರಿ ಎನ್ನಿಸಿದೆ.ಇದೇ ವಿಷಯವನ್ನು  ಮಕ್ಕಳಾದ ವಿಜಯೇಂದ್ರ,ರಾಘವೇಂದ್ರ ಹಾಗೂ ಹೆಣ್ಮಕ್ಕಳ ಮುಂದೆ ಹೇಳಿದ್ದೇ ಬಂತು ನೋಡಿ,ಅವತ್ತಿನಿಂದ್ಲೇ  ಅಪ್ಪನಿಂದ ಮಕ್ಕಳನ್ನು ದೂರ ಮಾಡುವ ಪ್ರಯತ್ನ ಮಾಡುತ್ತಿದ್ದೀರಾ ಎಂದು ನೇರವಾಗೇ ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ.ಇದನ್ನು ಮರಮಕಲ್ ಒಪ್ಪಿಕೊಂಡಿದ್ದಾರೆ ಕೂಡ..ಆ ಕ್ಷಣದಿಂದ್ಲೇ ಮರಮಕಲ್ ಅವರಿಗೆ ಖೆಡ್ಡಾ ತೋಡುವ ಪ್ರೋಗ್ರಾಮ್ ನ್ನು ಇಡೀ ಕುಟುಂಬ ಶುರುವಿಟ್ಟುಕೊಂಡಿದ್ದಾರೆನ್ನ ಲಾಗಿದೆ. ಇದರ ಬ್ಲ್ಯೂ ಪ್ರಿಂಟ್ ರೆಡಿಮಾಡಿದ್ದು ವಿಜಯೇಂದ್ರ ಎನ್ನೋದು ವಿಧಾನಸೌಧ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಆರೋಪ.

ಮರಮಕಲ್ ಅವರಿಗೆ ಈ  ಸೂಕ್ಷ್ಮ ಗೊತ್ತಾಗಿದೆ.ಆದ್ರೆ ತನಗೆ ಕೊಟ್ಟ ಜವಾಬ್ದಾರಿ ನಿರ್ವ ಹಿಸಿ ಸ್ವಾಮಿನಿಷ್ಠೆ ತೋರಬೇಕಾಗಿದ್ದುದು ತನ್ನ ಕರ್ತವ್ಯ ಎಂದುಕೊಂಡು ತನ್ನ ಕೆಲಸವನ್ನು ಮುಂದುವರೆಸಿದ್ದಾರೆ.ಕುಟುಂಬದ ಹಸ್ತಕ್ಷೇಪವನ್ನೂ ನೇರವಾಗೇ ವಿರೋ ಧಿಸಿದ್ದಾರೆ.ಆರಂಭದಲ್ಲಿದ್ದ ಯಡಿಯೂರಪ್ಪ ನಿಲುವು ಕೂಡ ಅದ್ಹೇಕೋ ಮಕ್ಕಳ ಕಡೆ ವಾಲಿದೆ.ಅವರು ಕೂಡ ಮರಮಕಲ್ ಅವರನ್ನು ಈ ವಿಷಯದಲ್ಲಿ ಎಚ್ಚರಿಸಿದ್ದರೆನ್ನುವುದು ರಾಜಕೀಯ ಮೂಲಗಳ ಮಾತು.

ಯಡಿಯೂರಪ್ಪ ಹಾಗೆ ಹೇಳಿದ ಮೇಲೂ ಮರಮಕಲ್ ತಮ್ಮ ಸ್ವಭಾವ ಬದಲಿಸಿ ಕೊಂಡಿಲ್ಲ.ಇದರಿಂದ ಕೆಂಡಾಮಂಡಲವಾದ ಸಿಎಂ ಕುಟುಂಬ ಮರಮಕಲ್ ಹುದ್ದೆಯ ಲ್ಲಿದ್ದರೆ ತಾನೇ ಆಕ್ಷೇಪ-ಹಸ್ತಕ್ಷೇಪ.. ಅಧಿಕಾರವನ್ನೇ ಕಸಿದುಕೊಂಡ್ರೆ…ಎಂದು ಆಲೋ ಚಿಸಿ ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಂಡಿಯೇ ಅಪ್ಪನಿಂದ್ಲೂ ಸಹಿ ಮಾಡಿಸಿಯೇ ಅವರನ್ನು ರಾಜಕೀಯ ಸಲಹೆಗಾರ ಹುದ್ದೆಯಿಂದ ತೆಗೆದಾಕುವ ನಿರ್ಧಾರಕ್ಕೆ ಬಂದು ಇದೇ 13 ರಂದು ಅದನ್ನು ಅಧೀಕೃತಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.ಮರಮಕಲ್ ಓರ್ವ ಪತ್ರಕರ್ತರೂ ಆಗಿರೋದ್ರಿಂದ ಮಾದ್ಯಮಗಳು ಇದನ್ನು ಪ್ರಶ್ನಿಸಬಹುದೆನ್ನುವ ಜಾಣ್ಮೆಯಿಂದ  ವಿಜಯೇಂದ್ರ ನೇತೃತ್ವದ ಕುಟುಂಬ ಮರಮಕಲ್ ವಿರುದ್ಧ ಒಂದಷ್ಟು ಅಂಶಗಳನ್ನೊಳಗೊಂಡ ಆರೋಪ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಂಡಿದೆಯಂತೆ .

ಇಷ್ಟೆಲ್ಲಾ ಆದ್ರೂ ಮರಮಕಲ್ ತಮ್ಮನ್ನು ಹುದ್ದೆಯಿಂದ ಬಿಡುಗಡೆ ಮಾಡಿರುವುದರ ಬಗ್ಗೆ ಬೇಸರ-ಆಕ್ರೋಶ ವ್ಯಕ್ತಪಡಿಸಿಲ್ಲ.ನನಗೆ ಕೊಟ್ಟ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ ಅಷ್ಟೇ..ಆದ್ರೆ ಯಡಿಯೂರಪ್ಪ ಅವರನ್ನು ಅವರ ಕುಟುಂಬದ ಅತಿಯಾದ ಹಸ್ತಕ್ಷೇಪದಿಂದ ಬಿಡುಗಡಗೊಳಿಸಿ ಅದರಿಂದ ಆಗಬಹುದಾದ ತೊಂದರೆಗಳಿಂದ ಬಚಾವು ಮಾಡುವುದಷ್ಟೇ ನನ್ನ  ಉದ್ದೇಶವಾಗಿತ್ತು.ಆದ್ರೆ ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳದೆ ನನ್ನನ್ನು ಟಾರ್ಗೆಟ್ ಮಾಡಿ ಹೊರದಬ್ಬಲಾಯ್ತು.ಅದೇ ಬೇಸರ.ಆದ್ರೆ ಒಂದಂತೂ ಸತ್ಯ , ಅಧಿಕಾರ-ಆಡಳಿತಾತ್ಮಕ  ವಿಚಾರಗಳಲ್ಲಿ ಕುಟುಂಬವನ್ನು ಯಡಿಯೂರಪ್ಪ ದೂರ ಇಡದಿದ್ದರೆ ಸಂಕಷ್ಟ ತಂದುಕೊಳ್ಳವುದಂತೂ ಕಷ್ಟ ಎನ್ನುವ ನೋವನ್ನು ಮರಮಕಲ್ ಆತ್ಮೀಯರ ಬಳಿ ಹೇಳಿಕೊಂಡಿದ್ದಾರಂತೆ.

ಒಟ್ಟಿನಲ್ಲಿ ಕುಟುಂಬದವರು ತೋಡಿದ ಖೆಡ್ಡಾಕ್ಕೆ ಮರಮಕಲ್ ಬಿದ್ದು ಅಧಿಕಾರ ಕಳೆದುಕೊಂಡಿದ್ದಾರೆ.ಅಧಿಕಾರದ ಅಮಲಿನಲ್ಲಿದ್ದಂತಿರುವ ಮುಖ್ಯಮಂತ್ರಿ ಯಡಿಯೂರಪ್ಪ ತನ್ನ ದಶಕಗಳ ಒಡನಾಡಿ ಹಾಗೂ ಆತ್ಮೀಯ ಸ್ನೇಹಿತನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.ಅಸಹಾಯಕರಾಗಿ ಆ ಪತ್ರಕ್ಕೆ ಸಹಿ ಹಾಕಿದ್ದಾರೆ.ಪತ್ರವನ್ನು ಪಡೆದು ಸಿಎಂ ಮನೆಯಿಂದ ಹೊರಬಿದ್ದಿರುವ ಪತ್ರಕರ್ತ ಮರಮಕಲ್ ಅವರ ಸ್ಥಿತಿ ನಿಜಕ್ಕೂ ಬೇಸರ ತರಿಸುತ್ತದೆ.ಒಬ್ಬ ಪತ್ರಕರ್ತರಾಗಿಯೇ ಮರಮಕಲ್ ಉಳಿದಿದ್ರೆ ಇಂಥಾ ಅವಮಾನ ಎದುರಿಸುವ ಸ್ಥಿತಿ ಬರುತ್ತಿತ್ತಾ..?

ಇದು ಕೇವಲ ಮರಮಕಲ್ ಅವರ ಸ್ಥಿತಿ ಮಾತ್ರವಲ್ಲ,ತಮ್ಮ ಬದ್ಧತೆ ಹಾಗೂ ಸ್ವಂತಿಕೆಯನ್ನೇ ಅಡವಿಟ್ಟುಕೊಂಡು  ಕೆಲಸ ಮಾಡುತ್ತಿರುವ  ಅದೆಷ್ಟೋ ಪತ್ರಕರ್ತರ ತೊಳಲಾಟ-ತಳಮಳ-ಜಿಗುಪ್ಸೆಗಳು ಹೀಗೆಯೇ ಇರುತ್ವೆ..ಲೋಗೋ..ಪೆನ್ ಕೈಲಿದ್ದಾಗ ರಾಜಕಾರಣಿ ಗಳನ್ನು ತರೇವಾರಿ ರೀತಿಯಲ್ಲಿ ಇಕ್ಕಟ್ಟಿಗೆ ಸಿಲುಕಿಸಿರುತ್ತಾರೆ..ಈಗ ಅದೇ ಪತ್ರಕರ್ತರು ಮಂತ್ರಿಮಹೋದಯರ ಹಿಂದೆ ಸುತ್ತುವ ಅನ್ಯಾಯ,ಅಕ್ರಮಗಳಾದ್ರೂ ಅದನ್ನು ಪ್ರಶ್ನಿಸಲಾಗದೆ ಮೌನವಾಗಿದ್ದೇ ತಿಂಗಳ ಸಂಬಳಕ್ಕಾಗಿ ಸಹಿಸಿಕೊಳ್ಳುವ ಅಸಹಾಯಕತೆಗೆ ಸಿಲುಕಿಬಿಡ್ತಾರೆ.. ಎಂಥಾ ವಿಪರ್ಯಾಸ ಅಲ್ವಾ.. 

Spread the love
Leave A Reply

Your email address will not be published.

Flash News