ಶಂಕರಪ್ಪನೂ ಅಲ್ಲ..ಖುಷ್ಬೂಗು ಇಲ್ಲ..ಅಣ್ಣಾಮಲೈ-ಸುರಾನಾ ಅಲ್ವೇ ಅಲ್ಲ.. RSS ಕರಪತ್ರ ಮುದ್ರಿಸೋ ಪ್ರಿಂಟಿಂಗ್ ಪ್ರೆಸ್ ಮಾಲೀಕ ನಾರಾಯಣ್ ಗೆ ಒಲಿದು ಬಂದ ರಾಜ್ಯಸಭೆ ಅದೃಷ್ಟ

0
ಡಾ. ಕೆ. ನಾರಾಯಣ್
ಡಾ. ಕೆ. ನಾರಾಯಣ್
ರಾಜ್ಯಸಭೆಗೆ ಆಯ್ಕೆಯಾದ ಕೆಲವೇ ಅವಧಿಯಲ್ಲಿ ಸಾವನ್ನಪ್ಪಿದ್ದ ಅಶೋಕ್ ಗಸ್ತಿ
ರಾಜ್ಯಸಭೆಗೆ ಆಯ್ಕೆಯಾದ ಕೆಲವೇ ಅವಧಿಯಲ್ಲಿ ಸಾವನ್ನಪ್ಪಿದ್ದ ಅಶೋಕ್ ಗಸ್ತಿ

ಬೆಂಗಳೂರು: ಆರ್‌ಎಸ್‌ಎಸ್ ಹಾಗೂ ಕೇಂದ್ರ ಹೈಕಮಾಂಡ್ ತೆಗೆದುಕೊಂಡಿರುವ ಅಚ್ಚರಿಯ ನಿರ್ಧಾರವಿದು. ಪಕ್ಷದ ಕರಪತ್ರಗಳನ್ನು ಪ್ರಕಟಿಸಿ, ಪಕ್ಷ ನಿಷ್ಠೆ ಮೆರೆದಿದ್ದ ದೇವಾಂಗ ಸಮುದಾಯದ ಡಾ. ಕೆ. ನಾರಾಯಣ್‌ರನ್ನು ಆಯ್ಕೆ ಮಾಡುವ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ ಹೈಕಮಾಂಡ್.

ಅಶೋಕ್ ಗಸ್ತಿ ಅಕಾಲಿಕ ಮರಣದಿಂದ ತೆರವಾಗಿದ್ದ ಏಕೈಕ ರಾಜ್ಯಸಭಾ ಸ್ಥಾನಕ್ಕೆ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್, ನಿರ್ಮಲ್ ಕುಮಾರ್ ಸುರಾನಾರನ್ನು ಯಡಿಯೂರಪ್ಪ ಎನ್. ಶಂಕರಪ್ಪರನ್ನು ಉತ್ತರ ಕರ್ನಾಟಕದ ಪ್ರಭಾವಿ ಬಿಜೆಪಿ ನಾಯಕರು, ಅನುಕಂಪದ ಆಧಾರದ ಮೇಲೆ ಅಶೋಕ್ ಗಸ್ತಿ ಪತ್ನಿ ಸುಮಾ ಗಸ್ತಿಯ ಆಯ್ಕೆ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿತ್ತು.

ಇದರ ಜೊತೆಗೆ ತಮಿಳುನಾಡು ರಾಜಕೀಯ ಲೆಕ್ಕಾಚಾರದಿಂದ ಇತ್ತೀಚೆಗೆ ಸೇರ್ಪಡೆಯಾದ ಸಿನಿಮಾ ನಟಿ ಖುಷ್ಬೂ ಹಾಗೂ ಪೊಲೀಸ್ ಇಲಾಖೆಗೆ ಸೆಲ್ಯೂಟ್ ಹೊಡೆದು ಬಿಜೆಪಿಗೆ ಸೇರ್ಪಡೆಯಾಗ ಐಪಿಎಸ್ ಅಣ್ಣಾಮಲೈಗೆ ಅವಕಾಶ ಸಿಕ್ಕಿ ತಮಿಳುನಾಡು ರಾಜಕೀಯಕ್ಕೆ ಬಳಸಿಕೊಳ್ಳಬಹುದು ಎಂಬ ವರ್ತಮಾನವಿತ್ತು.

ಆದರೆ ಇದೀಗ ಆ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ರಾಜ್ಯ ವರಿಷ್ಠರ ಆಯ್ಕೆ ಪಟ್ಟಿಯನ್ನು ತಿಪ್ಪೆಗೆಸೆದು ಹೈಕಮಾಂಡ್ ಪಕ್ಷದ ಕರಪತ್ರದಿಂದ ಹಿಡಿದು ಸಂಘಟನೆವರೆಗೆ ಗುರ್ತಿಸಿಕೊಂಡಿದ್ದ ಡಾ. ಕೆ. ನಾರಾಯಣ್‌ರನ್ನು ಆಯ್ಕೆ ಮಾಡುವ ಮೂಲಕ ಕರಾವಳಿ ಭಾಗವನ್ನು ಮೆಚ್ಚಿಸುವಂತೆಯೂ ಪಕ್ಷ ನಿಷ್ಠರನ್ನು ಗುರ್ತಿಸುವಂತೆಯೂ ಹಾಗೂ ತಮಿಳುನಾಡು ಮೂಲದವರಾದ ಕಾರಣ ಇವರ ಆಯ್ಕೆ ಮುಖಾಂತರ ತಮಿಳುನಾಡಿನಲ್ಲಿ ರಾಜಕೀಯದಲ್ಲಿ ಬಳಸಿಕೊಳ್ಳುವ ದೂರದೃಷ್ಟಿಯಿಂದ ಈ ಲೆಕ್ಕಾಚಾರ ವರ್ಕ್‌ಔಟ್ ಮಾಡಲಾಗುತ್ತಿದೆಯಾ?

ಒಟ್ಟಿನಲ್ಲಿ ರಾಜ್ಯ ವರಿಷ್ಠರ ಪ್ರಭಾವ ಕುಗ್ಗುವ ಬೆನ್ನಲ್ಲೇ ಯಡಿಯೂರಪ್ಪನವರಿಗೆ ಹೈಕಮಾಂಡ್‌ನಿಂದ ಬುಲಾವ್ ಬಂದಿದೆ.  ಇಲ್ಲಿ ಸಚಿವ ಸಂಪುಟದ ಆಯ್ಕೆ ಪಟ್ಟಿ ಹಾಗೂ ರಾಜ್ಯಸಭೆಯ ಲೆಕ್ಕಾಚಾರದ ಬಗ್ಗೆ ಬಹುಮುಖ್ಯ ಚರ್ಚೆಗಳಾಗುವ ಸಾಧ್ಯತೆಗಳಿವೆ.

Spread the love
Leave A Reply

Your email address will not be published.

Flash News