“ಮರಮಕಲ್” ಬೆನ್ನಲ್ಲೇ “ಮಹಾದೇವ್ ಪ್ರಕಾಶ್” ಹುದ್ದೆ ಕಳಕೊಳ್ಳೊಕ್ಕೆ ಅಸಲಿ ಕಾರಣವೇನು ಗೊತ್ತಾ..? ಹುದ್ದೆಯ ದುರ್ಬಳಕೆ..! ಸಿಎಂ ಹೆಸ್ರನ್ನು ಅಡವಿಟ್ಟುಕೊಂಡು ನಡೆಸಿದ ಲಾಭಿನಾ..?

0

ಬೆಂಗಳೂರು:ಮಹಾದೇವ್ ಪ್ರಕಾಶ್ ಮುಖ್ಯಮಂತ್ರಿಗಳ ಮಾದ್ಯಮ ಸಲಹೆಗಾರ ಹುದ್ದೆಗೆ ರಾಜಿನಾಮೆ ನೀಡೊಕ್ಕೆ ಕಾರಣ ಏನು..? ಅವರೇ ಹೇಳಿಕೊಂಡಿರುವಂತೆ ವೈಯುಕ್ತಿಕ ಕಾರಣಗಳಿಗೆ ರಾಜಿನಾಮೆ ನೀಡುವ ವ್ಯಕ್ತಿಯಂತೂ ಅವರಲ್ಲ..ಅಂಥಾ ಸಂದಿಗ್ಧ ಪರಿಸ್ಥಿತಿಯಲ್ಲೂ ಅವರಿ ಲ್ಲ..ಹಾಗಾದ್ರೆ ಅವರನ್ನು ರಾಜಿನಾಮೆಗೆ ದೂಡಿದಂಥ ಆ ಮಹಾನ್ ಕಾರಣವಾದ್ರೂ ಏನು..? ಎನ್ನುವ ಪ್ರಶ್ನೆಗೆ ಸಾಕಷ್ಟು ರೀತಿಯ ಊಹೆ-ತರ್ಕ-ವಿಶ್ಲೇಷಣೆ-ವ್ಯಾಖ್ಯಾನಗಳು ವ್ಯಕ್ತವಾಗುತ್ತಿರುವುದಂತೂ ಸುಳ್ಳಲ್ಲ.

ಮಹಾದೇವ್ ಪ್ರಕಾಶ್ ಒಬ್ಬ ಅನುಭವಿ-ಮೇಧಾವಿ-ವಿಚಾರಗಳನ್ನು ತಿಳಿದುಕೊಂಡ ಪ್ರಾಜ್ಞ..ಎಲ್ಲಾ  ಇರಬಹುದು ಅದರಲ್ಲಿ ಯಾವುದೇ ಅನುಮಾನ ಬೇಡ..ಪತ್ರಿಕೋಮ್ಯದ ಯಾರ ಆಕ್ಷೇಪವು ಇದಕ್ಕಿಲ್ಲ.ಆದ್ರೆ ತನ್ನ ವೃತ್ತಿಯನ್ನು ಅಡವಿಟ್ಟುಕೊಂಡು ಅವರು ಮಾದ್ಯಮ ಕಾರ್ಯದರ್ಶಿಯಂಥ ಸ್ಥಾನ ಪಡೆದು ಕೊಂಡ್ರಲ್ಲ..ಆ ರೀತಿ ಬಗ್ಗೆ ಆಕ್ಷೇಪ,ಅಸಮಾಧಾನವಿದೆ ಎನ್ನುತ್ತಾರೆ ಮಹಾದೇವ್ ಪ್ರಕಾಶ್ ಸಮಕಾಲೀನ ಪತ್ರಕರ್ತರೊಬ್ಬರು.

ಕೈ-ಜೆಡಿಎಸ್ ಮೈತ್ರಿ ಸರ್ಕಾರದ ಆಡಳಿತ ಹದಗೆಟ್ಟಿದ್ದಾಗ ಯಡಿಯೂರಪ್ಪ ಹಾಗೂ ಬಿಜೆಪಿ ಪಕ್ಷವನ್ನು ಹೊಗಳಿ ಅಟ್ಟಕ್ಕೇರಿಸಿದ ಭಟ್ಟಂಗಿತನದಿಂದ್ಲೇ ಅವರು ಯಡಿಯೂರಪ್ಪರಿಗೆ ಹತ್ತಿರವಾದ್ರು.(ಅದಕ್ಕು ಮುನ್ನ ಯಡಿಯೂರಪ್ಪರೊಂದಿಗೆ ಸಂಪರ್ಕದಲ್ಲಿದ್ದರೂ ಅದು ಅತ್ಯಂತ ಆತ್ಮೀಯ ಹಾಗೂ ನಿಕಟವಾಗದ್ದಾಗಿರಲಿಲ್ಲ ಎನ್ನುವುದು ಪತ್ರಿಕೋದ್ಯಮದ ಅಂಬೋಣ).ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂಗೆ ಮಾದ್ಯಮ ಸಲಹೆಗಾರನ ಹುದ್ದೆಗೆ ಮಹಾದೇವ್ ಪ್ರಕಾಶ್ ಅವರನ್ನು ಪರಿಗಣಿಸಲಾಗುತ್ತದೆ ಎಂದ್ರೆ ಅದರ ಹಿಂದೆ ನಡೆದಿರುವ ಲಾಭಿ ಕಡ್ಮೆಯೇನಿಲ್ಲ ಎನ್ನುವ ಮಾತುಗಳನ್ನಾಡುತ್ತಿವೆ ಪ್ರೆಸ್ ಕ್ಲಬ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘಗಳು.

ಲಾಭಿನೋ..ಜಾತಿ ಪ್ರಭಾವ ಬಳಸಿಯೋ ಮಹಾದೇವ್ ಪ್ರಕಾಶ್ ಸಿಎಂ ಮನೆಯ ಅಂಗಳ ಪ್ರವೇಶಿಸಿದರೆನ್ನುವುದರಲ್ಲಿ ಅನುಮಾನವೇ ಬೇಡ..ಆದ್ರೆ ಹಾಗೆ ಜವಾಬ್ದಾರಿಯುತ ಹುದ್ದೆಯೊಂದನ್ನು ಅಲಂಕರಿಸಿದ ಮೇಲೆ ಅವರು ನಡೆದುಕೊಳ್ಳಬೇಕಿದ್ದ ರೀತಿ ಇದೆಯೆಲ್ಲಾ ಅದರಲ್ಲೇ ಮಹಾದೇವ್ ಪ್ರಕಾಶ್ ಸರ್ ಎಡವಿದ್ರಾ ಎನಿಸುತ್ತದೆ ಎನ್ನುತ್ತಾರೆ ಸಿಎಂ ಮನೆಯಲ್ಲಿ ಅವರೊಂದಿಗೆ ಒಡನಾಡಿದ ಕಿರಿಯ ಪತ್ರಕರ್ತನೋರ್ವ.

ಸಿಎಂ ಮನೆಯನ್ನು ಮಹಾದೇವ್ ಪ್ರಕಾಶ್ ಅವರು ಟ್ರಾನ್ಸ್ ಫರ್ಸ್,ನಿಯೋಜನೆ-ಪ್ರಶಸ್ತಿ ಲಾಭಿ, ಅಧಿಕಾರಿಗಳ ಮೇಲೆ ಒತ್ತಡ ಹೇರೊ ಅಡ್ಡೆಯನ್ನಾಗಿ ಮಾಡಿಕೊಂಡ್ ಬಿಟ್ರು.ಅವರ ಪರಿಮಿತಿಯಲ್ಲಿ ಕೆಲಸ ಮಾಡಿದಿದ್ದರೆ ಸಮಸ್ಯೆ ಬರುತ್ತಿರಲಿಲ್ಲ.ಆದ್ರೆ ಸಿಎಂ ನಮ್ಮೋರು..ನಮ್ಮ ಜಾತಿಯವ್ರು..ಏನ್ ಮಾಡಿದ್ರೂ ನಡೆದೋಗುತ್ತೆ ಎನ್ನುವ ಅತಿಯಾದ ಆತ್ಮವಿಶ್ವಾಸದಿಂದ ಅವರು ಮಾಡಿದ ಕೆಲಸ..ತೆಗೆದುಕೊಂಡ ನಿರ್ದಾರಗಳೇ ಅವರನ್ನು ರಾಜೀನಾಮೆ ನೀಡುವಂತೆ ಮಾಡಿದ್ವು ಎನ್ನುತ್ತಾರೆ ಸಚಿವರೊಬ್ಬರಿಗೆ ಮಾದ್ಯಮ ಸಲಹೆಗಾರರಾಗಿರುವ ಪತ್ರಕರ್ತ.

ಮಹಾದೇವ್ ಪ್ರಕಾಶ್ ಪಕ್ಕಾ ಅವಕಾಶವಾದಿನಾ..? ಮೈತ್ರಿ ಸರ್ಕಾರವಿದ್ದಾಗ ಸಿಎಂ ಕುಮಾರಸ್ವಾಮಿ ಜೊತೆ ಆತ್ಮೀಯವಾಗಿದ್ದ ಮಹಾದೇವ್ ಪ್ರಕಾಶ್.
ಮಹಾದೇವ್ ಪ್ರಕಾಶ್ ಪಕ್ಕಾ ಅವಕಾಶವಾದಿನಾ..? ಮೈತ್ರಿ ಸರ್ಕಾರವಿದ್ದಾಗ ಸಿಎಂ ಕುಮಾರಸ್ವಾಮಿ ಜೊತೆ ಆತ್ಮೀಯವಾಗಿದ್ದ ಮಹಾದೇವ್ ಪ್ರಕಾಶ್.

ಸಿಎಂ ಮಾದ್ಯಮ ಸಲಹೆಗಾರರಾದವರಿಗೆ ಎಷ್ಟೇ ಸ್ವಾತಂತ್ರ್ಯವಿದ್ದರೂ,ಅದಕ್ಕೂ ಒಂದು ಚೌಕಟ್ಟಿರುತ್ತದೆ. ಹಿಂದೆ ಈ ಹುದ್ದೆಯಲ್ಲಿದ್ದವರು ಆ ಚೌಕಟ್ಟಿನಲ್ಲೇ ಇದ್ದುಕೊಂಡು ಅಧಿಕಾರ ಚಲಾಯಿಸುತ್ತಿದ್ದರು.ಅದರ ಗೌರವಕ್ಕೆ ಧಕ್ಕೆ ತಂದಿರಲಿಲ್ಲ.ಆದ್ರೆ ಮಹಾದೇವ್ ಪ್ರಕಾಶ್ ಆ ಎಲ್ಲಾಮಿತಿಗಳನ್ನು ದಾಟಿ ಬಿಟ್ಟರಾ..?ಸಿಎಂ ಜತೆಗಿನ ಸಖ್ಯವನ್ನೇ ಮಿಸ್ಯೂಸ್ ಮಾಡಿಕೊಂಡ್ ಬಿಟ್ರಾ…ಅದು ಸಿಎಂ ಗಮನಕ್ಕೂ ಹೋಗಿ ಅದಕ್ಕಾಗಿ ಅವರಿಂದ ತೀವ್ರ ತರಾಟೆಗೂ ಒಳಗಾದ್ರಾ ಗೊತ್ತಾಗ್ತಿಲ್ಲ.

ಓರ್ವ ಮಾದ್ಯಮ ಸಲಹೆಗಾರ ಸಿಎಂ ಜೊತೆಗಿದ್ದಾಕ್ಷಣ ಏನ್ ಬೇಕಾದ್ರೂ ಮಾಡಬಹುದೆನ್ನುವ ವಿಶ್ವಾಸವಿದ್ದರೆ ಅದು ಕೇವಲ ಭ್ರಮೆ..ಹುದ್ದೆಯ ಇತಿಮಿತಿ ಹಾಗು ಗೌರವಕ್ಕೆ ಧಕ್ಕೆ ತರೋ ದುಸ್ಸಾಹಸಕ್ಕೆ ಕೈ ಹಾಕಿದ್ರೆ ಏನಾಗುತ್ತೆ ಎನ್ನುವುದಕ್ಕೆ ಮಹಾದೇವ್ ಪ್ರಕಾಶ್ ದುರಂತ ಉದಾಹರಣೆ ಎಂದೂ ವಿಶ್ಲೇಷಿಸುವವರಿದ್ದಾರೆ.ಸಿಎಂ ಕೊಟ್ಟ ಸಲಿಗೆ-ಅವಕಾಶವನ್ನೇ ತನಗಿಷ್ಟ ಬಂದಂತೆ ಉಪಯೋಗಿಸಲು ಮುಂದಾದ್ರೆ ಏನಾಗುತ್ತೆನ್ನುವುದಕ್ಕೂ ಮಹಾದೇವ್ ಪ್ರಕಾಶ್ ಪ್ರಕರಣ ಉದಾಹರಣೆ ಆಗಬಹುದೇನೋ..

ಇದೆಲ್ಲಾ ಸರಿ..ಮಹಾದೇವ್ ಪ್ರಕಾಶ್ ವಿರುದ್ಧ ಇತ್ತೀಚೆಗೆ ಕೇಳಿಬಂದ ಸಾಕಷ್ಟು ದೂರುಗಳು ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ವು.ಸ್ವತಃ ಸಿಎಂ ಯಡಿಯೂರಪ್ಪ ಅವರೇ ಮುಜುಗರಕ್ಕೊಳಗಾಗಿದ್ರು.ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ತಯಾರಿಸಿದ್ದರಲ್ಲಿ ನಡೆಸಿದ ಹಸ್ತಕ್ಷೇಪ-ಸ್ವಜನಪಕ್ಷಪಾತ,ನಿಗಮ ಮಂಡಳಿಗಳ ಸದಸ್ಯರ ನೇಮಕದಲ್ಲಿ ಮೂಗು ತೂರಿಸಿದ್ದು,ವಿವಿಧ ಸರ್ಕಾರಿ ಯೋಜನೆಗಳ ವಿಷಯದಲ್ಲಿ ಹುದ್ದೆಯ ದುರ್ಬಳಕೆ,ತಮ್ಮ ಶಿಫಾರಸ್ಸಿನ ಪತ್ರವನ್ನು ಕಳ್ಳೆಪುರಿಯಂತೆ ಹಂಚಿದ್ದರ ಬಗ್ಗೆ ಸರ್ಕಾರದ ಅನೇಕ ಸಚಿವರಿಂದ್ಲೂ ಸಿಎಂಗೆ ದೂರು ಸಲ್ಲಿಕೆಯಾಗಿತ್ತೆನ್ನಲಾಗಿದೆ.

ಅಷ್ಟೇ ಅಲ್ಲ,ಹಿರಿಯ ಐಎಎಸ್,ಕೆಎಎಸ್ ಅಧಿಕಾರಿಗಳನ್ನು ತಮಗಿಷ್ಷಬಂದಂತೆ ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದರೆನ್ನುವುದು ಕೂಡ ಮಹಾದೇವ್ ಪ್ರಕಾಶ್ ವಿರುದ್ಧದ ಗಂಭೀರ ಆರೋಪ. ಅದೆಲ್ಲವನ್ನೂ ಮೀರಿ ಸಿಎಂ ಮಾದ್ಯಮ ಸಲಹೆಗಾರ ಎನ್ನುವ ಹುದ್ದೆಯನ್ನು ಹಣ ಮಾಡ್ಲಿಕ್ಕೆ ಮಿಸ್ಯೂಸ್ ಮಾಡಿಕೊಂಡ್ರು.ಇದೆಲ್ಲಾ ಸಿಎಂ ಗಮನಕ್ಕೆ ಬಂದಿಯೇ ಸುಧಾರಿಸಿಕೊಳ್ಳಿ..ಇಲ್ಲಾಂದ್ರೆ ನನಗೆ ಮುಜುರವಾಗುತ್ತೆ…ಹೀಗೆಯೇ ಮುಂದುವರುದ್ರೆ ಅಸಹಾಯಕನಾಗಿ ತೆಗೆದುಕೊಳ್ಳಬೇಕಾದ ನಿರ್ಣಯಕ್ಕೆ ತಾವ್ ಬದ್ಧರಾಗಿರಬೇಕಾಗಿರುತ್ತೆ ಎಂದು ಸಿಎಂ ಅವರಿಂದ್ಲೂ ಹೇಳಿಸಿಕೊಂಡಿದ್ದುಂಟು ಎನ್ನುತ್ತಾರೆ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಹಿತಿ ಇರುವ ಸಿಎಂ ಕಚೇರಿಯ ಮಾದ್ಯಮ ವಿಭಾಗದಲ್ಲಿರುವ ಸಿಬ್ಬಂದಿ.

ಸಿಎಂ ಅವರ ಎಚ್ಚರಿಕೆಯನ್ನು ಕಡೆಗಣಿಸಿ ಮಹಾದೇವ್ ಪ್ರಕಾಶ್ ಸಾಕಷ್ಟು ತಪ್ಪುಗಳನ್ನು ಮಾಡಿದ್ರಾ..? ಇದು ಬಿಎಸ್ ವೈ ಪುತ್ರ ವಿಜಯೇಂದ್ರ ಗಮನಕ್ಕೂ ಬಂದು ಅವರನ್ನು ತರಾಟೆಗೆ ತೆಗೆದುಕೊಂಡ್ರಾ..? ಅವರೇ ಮಹಾದೇವ್ ಪ್ರಕಾಶ್ ಅವರು ರಾಜಿನಾಮೆ ಕೊಡುವಂತೆ ಮಾಡಿದ್ರಾ…?ಎನ್ನುವ ಪ್ರಶ್ನೆಗಳು ಕೂಡ ಮೂಡಿವೆ.ಆದ್ರೆ ಒಂದಂತೂ ಸತ್ಯ,ರಾಜಿನಾಮೆ ಸ್ವಯಂಪ್ರೇರಿತವಾಗಿ ಮಹಾದೇವ್ ಪ್ರಕಾಶ್ ತೆಗೆದುಕೊಂಡ ನಿರ್ದಾರವಂತೂ ಅಲ್ವೇ ಅಲ್ಲ..ಅಂಥಾ ಉದಾರ ಮನೋಸ್ಥಿತಿಯ ವ್ಯಕ್ತಿಯೂ ಅವರಲ್ಲ..ಏನೋ ಯಡವಟ್ ಮಾಡಿಕೊಂಡಿದ್ರಿಂದ ಮುಖ್ಯಮಂತ್ರಿ ಕಚೇರಿಯಿಂದ ತೆಗೆದಾಕುವ ಮುನ್ನ ಮುಜುಗರ ಹಾಗೂ ಅವಮಾನದಿಂದ ತಪ್ಪಿಸಿಕೊಳ್ಳಲು ಮಹಾದೇವ್ ಪ್ರಕಾಶ್ ಅವರೇ ಕಂಡುಕೊಂಡ ಉಪಾಯದ ಮಾರ್ಗ ಎಂದೇ ರಾಜಿನಾಮೆ ಪ್ರಹಸನವನ್ನು ವಿಶ್ಲೇಷಿಸಲಾಗುತ್ತಿದೆ.

ಅದೇನೇ ಇರಲಿ,ಅಸಲಿಗೆ ನಡೆದಿದ್ದು ಏನು ಎನ್ನುವುದನ್ನು “ವಿನಯಪೂರ್ವಕ”ವಾಗಿ ರಾಜಿನಾಮೆ ನೀಡಿರುವ ಮಹಾದೇವ್ ಪ್ರಕಾಶ್ ಮತ್ತು ಅವರನ್ನು ರಾಜಿನಾಮೆ ಕೊಡುವಂತೆ ಮಜ್ಬೂರ್ ಮಾಡಿದ ಸಿಎಂ ವ್ಯಾಪ್ತಿಯಲ್ಲಿರುವವರೇ ಹೇಳಬೇಕು..ಅದೇನೇ ಆಗಲಿ,ರಾಜಕೀಯ ಸಲಹೆಗಾರ ಹುದ್ದೆಯಿಂದ ಮರಮಕಲ್ ಎನ್ನುವ ಪತ್ರಕರ್ತ ಸಿಎಂ ಮನೆಯಿಂದ ಹೊರಬಿದ್ದ ಬೆನ್ನಲ್ಲೇ, ಮಹಾದೇವ್ ಪ್ರಕಾಶ್ ರಾಜಿನಾಮೆ ನೀಡಿರುವುದು ದುರಂತವೇ ಸರಿ..ಇಬ್ಬರೂ ಪತ್ರಕರ್ತರೇ..

ಆದ್ರೆ ದುರಂತ ಹಾಗೂ ವಿಪರ್ಯಾಸ ಹಾಗೂ ನಾಚಿಕೆಗೇಡಿನ ಸಂಗತಿ ಎಂದ್ರೆ ದೊಡ್ಡ ಹುದ್ದೆಗಳಿಗಾಗಿ ನೈತಿಕತೆಯನ್ನೇ ಅಡವಿಟ್ಟುಕೊಂಡು ಝೀ ಹುಜೂರ್ ಸಂಸ್ಕ್ರತಿ ಬೆಳೆಸಿಕೊಂಡವರು ಎನ್ನೋದು ಮಾದ್ಯಮ ಕ್ಷೇತ್ರದ ಬಹುತೇಕ ಮಂದಿಯ ಅಭಿಪ್ರಾಯ..ನೈಜವಾಗಿ ನಡೆದಿದ್ದು ಏನು ಎನ್ನುವುದನ್ನು ಮಹಾದೇವ್ ಪ್ರಕಾಶ್ ಅವರೇ ಸ್ಪಷ್ಟಪಡಿಸುವವರೆಗೂ ಈ ಎಲ್ಲಾ ವಿಶ್ಲೇಷಣೆ-ವ್ಯಾಖ್ಯಾನಗಳು ಇದ್ದಿದ್ದೇ ಬಿಡಿ..

Spread the love
Leave A Reply

Your email address will not be published.

Flash News