ವಾರ್ತಾ ಇಲಾಖೆಯ ಮಾಜಿ ಅಧಿಕಾರಿ,ಬಿಎಸ್ ವೈ ಅತ್ಯಾಪ್ತ ಭೃಂಗೀಶ್ ಸಿಎಂಗೆ ನೂತನ ಮಾಧ್ಯಮ, ಸಲಹೆಗಾರ..!

0

ಬೆಂಗಳೂರು:ಮಹಾದೇವ್ ಪ್ರಕಾಶ್ ರಾಜಿನಾಮೆಯಿಂದ ತೆರವಾಗಿರುವ ಸಿಎಂ ಮಾಧ್ಯಮ ಸಲಹೆಗಾರರ ಹುದ್ದೆಗೆ ಭೃಂಗೀಶ್ ಹೆಸರು ಅಂತಿಮವಾಗಿದೆ ಎನ್ನಲಾಗಿದೆ. ಈಗಾಗಲೇ ಸಾಕಷ್ಟು ಜವಾಬ್ದಾರಿಯುತ ಹುದ್ದೆಗಳಲ್ಲಿ ಕೆಲಸ ಮಾಡಿರುವ ಅನುಭವಿ ಭೃಂಗೀಶ್  ನೇಮಕಕ್ಕೆ ಮುಖ್ಯಮಂತ್ರಿ  ಯಡಿಯೂರಪ್ಪ‌ ಆಸಕ್ತರಾಗಿದ್ದಾರೆಂದು ತಿಳಿದುಬಂದಿದ್ದು,ನೇಮಕಾತಿ ಆದೇಶ  ಅಧಿಕೃತವಾಗಿ ಹೊರಬೀಳಬೇಕಷ್ಟೇ. ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರಾಗಿ ಕೆಲಸ ಮಾಡಿ ನಿವೃತ್ತರಾಗಿರುವ ಭೃಂಗೀಶ್ ಈ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ರವರ ಕಾರ್ಯಾವಧಿಯಲ್ಲಿ ಮಾಧ್ಯಮ ಸಲಹೆಗಾರರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ ಇದೇ ಮಾನದಂಡವನ್ನು ಇಟ್ಟುಕೊಂಡು ಯಡಿಯೂರಪ್ಪ ಭಂಗೇಶ್ವರ ನೇಮಕಾತಿಯ ಬಗ್ಗೆ ಆಸಕ್ತಿ ವಹಿಸಿ ಈ ಕುರಿತು ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.

ಮಾಧ್ಯಮ ಸಲಹೆಗಾರರ ಹುದ್ದೆಯನ್ನು ಮಿಸ್ಯೂಸ್ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ ಮಹದೇವ ಪ್ರಕಾಶ್ ಅವರನ್ನು ಹುದ್ದೆಯಿಂದ ನಿಲುಗಡೆಗೊಳಿಸಲಾಗಿದೆ ನಿಲುಗಡೆಗೊಳಿಸಲಾಗಿದೆ ತೆರವಾಗಿರುವ ಮಾಧ್ಯಮ ಸಲಹೆಗಾರರ ಹುದ್ದೆಗೆ ಭೃಂಗೀಶ್ ಅವರ ನೇಮಕಾತಿ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ತಿಳಿಸಿದೆ.ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಭೃಂಗೀಶ್ ಅವರ  ಹೆಸರು, ಮಹಾದೇವ್ ಪ್ರಕಾಶ್ ಅವರು ನೇಮಕಗೊಳ್ಳುವ ಸಂದರ್ಭದಲ್ಲಿಯೇ ಕೇಳಿಬಂದಿತ್ತು, ಆದರೆ ಜಾತಿ ಲಾಭಿಯನ್ನು ಮುಂದಿಟ್ಟುಕೊಂಡು ಮಹಾದೇವ್ ಪ್ರಕಾಶ್ ಆ ಹುದ್ದೆಯನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಎನ್ನಲಾಗಿದೆ.

ಮಹಾದೇವ ಪ್ರಕಾಶ್ ಓರ್ವ ಪತ್ರಕರ್ತರಾಗಿ ಯಶಸ್ವಿಯಾಗಿದ್ದರೂ, ಸಹ ಭೃಂಗೀಶ್ ಯಡಿಯೂರಪ್ಪರವರ‌ ನಾಡಿಮಿಡಿತ ಅರಿತು ಕೆಲಸ ಮಾಡುವ ಚಾಕಚಕ್ಯತೆ ಹೊಂದಿದ್ದರು ಎನ್ನುವ ಮಾತುಗಳಿವೆ. ಈಗ ಭೃಂಗೀಶ್ನೇಮಕಾತಿಯಿಂದಾಗಿ, ಯಡಿಯೂರಪ್ಪರವರ ಕೆಲಸಗಳು ಅನಾಯಾಸವಾಗಿ  ಎನ್ನುವ ಮಾತುಗಳು ಕೇಳಿಬರುತ್ತಿವೆ.ಮಹಾದೇವ ಪ್ರಕಾಶ್ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇನ್ನೂ ಸಾಕಷ್ಟು ಮಂದಿ ಟವಲ್ ಹಾಕಿದ್ದರು ಎನ್ನುವ ಮಾತುಗಳಿವೆ ಅದರಲ್ಲಿ ಹಾಲಿ ಹಾಗೂ ಮಾಜಿ ಪತ್ರಕರ್ತರು ಕೂಡ ಇದ್ದರೆ ಎನ್ನುವ ಮಾತುಗಳು ಇವೆ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ರವರ ಮೂಲಕ ಆ ಒಂದು  ಸ್ಥಾನವನ್ನು ಪಡೆದುಕೊಳ್ಳಲು ಸಾಕಷ್ಟು ಲಾಭಿಯನ್ನು ನಡೆಸಿದರ ಬಗ್ಗೆಯೂ ವರದಿಗಳಿವೆ.

  ಆದರೆ ಪತ್ರಕರ್ತರ ಸಹವಾಸವೇ ಸಾಕೆನ್ನುವ ನಿರ್ಧಾರಕ್ಕೆ ಬಂದಿರುವ ವಿಜಯೇಂದ್ರ, ಈ ಹಿಂದೆ ತಮ್ಮ ತಂದೆಯ ಜತೆ ಕೆಲಸ ಮಾಡಿರುವ ಅನುಭವಿ ಭೃಂಗೀಶ್ ಅವರನ್ನೇ ಅಂತಿಮವಾಗಿ ಮಾಧ್ಯಮ ಸಲಹೆಗಾರರನ್ನಾಗಿ ನೇಮಿಸಿಕೊಳ್ಳುವ ಬಗ್ಗೆ ನಿಲುವು ತಳೆದಿದ್ದು ಈ ವಿಷಯದಲ್ಲಿ ತಂದೆಯವರೂ ಒಪ್ಪಿಗೆ ಸೂಚಿಸುವಂತೆ ಮಾಡಿದ್ದಾರೆನ್ನಲಾಗಿದೆ.ಇದೆಲ್ಲದರ ಜೊತೆಗೆ ಆರೆಸ್ಸೆಸ್ ನ ಕಟ್ಟರ್ ಬೆಂಬಲಿಗ ಹಾಗೂ  ಪತ್ರಿಕಾ ಸಂಪಾದಕರೂ ಆಗಿ ಕೆಲಸ ಮಾಡಿದ್ದ ಶಾಂತಾರಾಮ್ ಅವರ ಹೆಸರು ಕೂಡ ಮಾಧ್ಯಮ ಸಲಹೆಗಾರರ ಪಟ್ಟಿಯಲ್ಲಿ ಕೇಳಿಬಂದಿತ್ತು ಆದರೆ ಅಂತಿಮವಾಗಿ ಭೃಂಗೀಶ್ಅವರ ಹೆಸರನ್ನೇ ಅಂತಿಮಗೊಳಿಸಲಾಗಿದ್ದು ನೇಮಕಾತಿಯ ಆದೇಶ ಮುಖ್ಯಮಂತ್ರಿಗಳ ಕಚೇರಿಯಿಂದ ಅಧಿಕೃತವಾಗಿ ಹೊರಬೀಳಬೇಕಿದೆಯಷ್ಟೆ..   

Spread the love
Leave A Reply

Your email address will not be published.

Flash News