ಇವತ್ತು ಮರಾಠಿಗರು “ಬೆಳಗಾಂ” ನಮ್ಮದೆನ್ನುತ್ತಿದ್ದಾರೆ,ಸುಮ್ಮನಿದ್ದರೆ, ಇತರೆ ಗಡಿಭಾಗಗಳನ್ನೂ ಅನ್ಯಭಾಷಿಗರು ನಮ್ಮದೆಂದು ರಚ್ಚೆ ಹಿಡಿಬೋದಲ್ವಾ..?

0

ಬೆಂಗಳೂರು:ಮರಾಠ ನಿಗಮ ರಚನೆಯ ವಿರುದ್ಧ ಕಿಡಿಕಾರುವ ಸರದಿ ಈಗ ಕನ್ನಡದ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನದು.ಬೆಳಗಾವಿ ಸೇರಿದಂತೆ ರಾಜ್ಯದ ಒಂದಷ್ಟು ಗಡಿ ಭಾಗಗಳನ್ನು ಮಹಾ ರಾಷ್ಟ್ರಕ್ಕೆ ಸೇರಿಸಬೇಕೆನ್ನುವ ಆಲೋಚನೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ನೀಡಿರುವ ಹೇಳಿಕೆ ಅತಿರೇಕದ್ದು ಹಾಗೂ ಮತಿಗೇಡಿತನದ ಪರಮಾವದಿ ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ್ ಕಿಡಿಕಾರಿದ್ದಾರೆ.

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರು ನೀಡುತ್ತಿರುವ ಹೇಳಿಕೆ, ಈಗಾಗಲೇ, ನಿಗಿನಿಗಿ ಕೆಂಡ ವಾಗಿರುವ ಕರ್ನಾಟಕದ ಸ್ವಾಭಿಮಾನಿಗರನ್ನು ಮತ್ತಷ್ಟು ಕೆರಳುವಂತೆ ಮಾಡಿದೆ.  ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿಸಿಎಂ ಅಜಿತ್ ಪವಾರ್ ಅಂಥವರು ಈ ರೀತಿಯ ಹೇಳಿಕೆ ಕೊಡುವುದರಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಗಲಿದೆ. ಪದೇ ಪದೇ ಕಾಲು ಕೆರೆದು ಕರ್ನಾಟಕದ ಜೊತೆ ಜಗಳ ತೆಗೆಯುತ್ತಿರುವ ಮಹಾರಾಷ್ಟ್ರ ದ ಆಡಳಿತ ವ್ಯವಸ್ಥೆಯ ವಿರುದ್ಧ ಕನ್ನಡಿಗರು ಸಂಘಟಿತರಾಗಬೇಕು, ತಮ್ಮ ಸ್ವಹಿತಾಸಕ್ತಿ ಮರೆತು ಒಗ್ಗೂಡಬೇಕೆಂದು ಬಳಿಗಾರ್ ಮನವಿ ಮಾಡಿದ್ದಾರೆ. + Add New Category

ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾದ ಸಾಹಿತ್ಯಪರಿಷತ್ ,ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಕೊಟ್ಟಿರುವ ಹೇಳಿಕೆಯನ್ನು ಉಗ್ರವಾಗಿ ಖಂಡಿಸುತ್ತದೆ. ಕನ್ನಡಪರ ಹೋರಾಟಗಳು ಸೇರಿದಂತೆ ನಾಡಿನ ಜಲ ಭಾಷೆಗೆ ಸಂಬಂಧಿಸಿದ ಯಾವುದೇ ವಿಷಯಗಳಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಎತ್ತಿಹಿಡಿಯಲು ಸದಾ ಬದ್ಧವಾಗಿದೆ ಎಂದು ಮನು ಬಳಿಗಾರ್ ಹೇಳಿದ್ದಾರೆ.ನಮ್ಮದು ಒಕ್ಕೂಟ ವ್ಯವಸ್ಥೆ ಒಪ್ಪಿಕೊಳ್ಳೋಣ, ಒಂದಷ್ಟು ಭಾಷಾ ಹಾಗೂ ಗಡಿಸಮಸ್ಯೆ ಬೆಳಗಾಂ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿರುವುದು ನಿಜ. ಇದನ್ನು ಸಾಮರಸ್ಯದಿಂದ ಬಗೆಹರಿಸಿಕೊಳ್ಳುವ ಕೆಲಸವನ್ನು ಎರಡೂ ರಾಜ್ಯಗಳು ಮಾಡಬೇಕು. ಅದನ್ನು ಬಿಟ್ಟು ಮರಾಠಿಗರು ಬೆಳಗಾವಿ ನಮ್ಮದೇ ಎನ್ನುವ ರೀತಿಯಲ್ಲಿ ಸಣ್ಣ ಮಕ್ಕಳಂತೆ ರಚ್ಚೆ ಹಿಡಿಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಕನ್ನಡಿಗರು ವಿಶಾಲ ಹೃದಯದವರು, ಸಹಿಷ್ಣುತಾಭಾವ ಅವರ ರಕ್ತದಲ್ಲಿ ಕರಗತವಾಗಿದೆ ಎನ್ನುವ ಅಂಶವನ್ನೆ ಮರಾಠಿಗರು ನಮ್ಮ ದೌರ್ಬಲ್ಯವೆಂದು ತಿಳಿದುಕೊಳ್ಳಬಾರದು. ಕನ್ನಡಪರ ಸಂಘಟನೆಗಳು ಇಂತಹ ಸಂದರ್ಭದಲ್ಲಿ ಒಗ್ಗೂಡದಿದ್ದರೆ, ಇವತ್ತು ಮರಾಠಿಗರು ಬೆಳಗಾಂ ನಮ್ಮದು ಎನ್ನುತ್ತಾರೆ, ಮುಂದಿನ ದಿನಗಳಲ್ಲಿ ಅನ್ಯ ಭಾಷಿಕರು ಕರ್ನಾಟಕದ ಗಡಿ ಭಾಗಗಳು ನಮ್ಮದೆನ್ನುವ ವಾದ ಮಂಡಿಸುವ ಆತಂಕವಿದೆ ಎಂದಿದ್ದಾರೆ.

ಬೆಳಗಾಂವ ಭಾಗದಲ್ಲಿ ಕೊಂಚ ಮಟ್ಟಿಗೆ ಭಾಷಾ ಸಮಸ್ಯೆ ಇದ್ದರೂ, ಕೂಡ ಕನ್ನಡಿಗರು ಹಾಗೂ ಮರಾಠಿಗರು ಅಣ್ಣತಮ್ಮಂದಿರಂತೆ ಬದುಕುತ್ತಿದ್ದಾರೆ. ಇಂಥದರ ನಡುವೆ ಮರಾಠಿ ಅಭಿವದ್ಧಿ ಪ್ರಾಧಿಕಾರ ಮಾಡುವಂಥ ಸಿಎಂರವರ ಹೇಳಿಕೆಯೂ ಕೂಡ ಎಲ್ಲೋ ಒಂದೆಡೆ ಸಮಸ್ಯೆಗೆ ಒಂದಿಷ್ಟು ತುಪ್ಪ ಸುರಿದಂತಾಗುತ್ತದೆ. ಆದರೆ ಇದೇ ಸಂದರ್ಭವನ್ನು ಮಹಾರಾಷ್ಟ್ರ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಎಷ್ಟು ಸರಿ ಅಜಿತ್ ಪವಾರ್ ಅವರು ತಮ್ಮ ನಿಲುವನ್ನು ಬದಲಿಸಬೇಕೆಂದು ಬಳಿಗಾರ್ ಪ್ರತಿಪಾದಿಸಿದ್ದಾರೆ.

Spread the love
Leave A Reply

Your email address will not be published.

Flash News